ದಸರಾ ಹಾಗು ದೀಪಾವಳಿ ಹಬ್ಬದ ಸೀಸನ್ ಗಳಲ್ಲಿ ಪ್ರಮುಖ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ವಿವಿಧ ಯೋಜನೆಗಳನ್ನು ಘೋಷಿಸುವುದು ಸಾಮಾನ್ಯ. ಇದೀಗ ಟೆಲಿಕಾಂ ಕಂಪನಿಗಳ ಸರದಿ..
ದಸರಾ ಹಾಗು ದೀಪಾವಳಿ ಹಬ್ಬದ ಸೀಸನ್ ಗಳಲ್ಲಿ ಪ್ರಮುಖ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ವಿವಿಧ ಯೋಜನೆಗಳನ್ನು ಘೋಷಿಸುವುದು ಸಾಮಾನ್ಯ. ಇದೀಗ ಟೆಲಿಕಾಂ ಕಂಪನಿಗಳ ಸರದಿ.. ಈಗಾಗಲೇ ಏರ್ಟೆಲ್, ವೋಡಾಫೋನ್ ಕಂಪನಿಗಳು ಆಫರ್ ಗಳನ್ನು ಘೋಷಿಸಿದ್ದು, ಇದೀಗ ಜಿಯೋ ತನ್ನ ಗ್ರಾಹಕರಿಗೆ ದೀಪಾವಳಿ ಆಫರ್ ಘೋಷಣೆ ಮಾಡಿದೆ.
ಜಿಯೋಫೋನ್ ರೂ. 699
ದೀಪಾವಳಿ ಹಬ್ಬದ ಕೊಡುಗೆಯ ಭಾಗವಾಗಿ ಜಿಯೋ ರೂ. ೬೯೯ ಕ್ಕೆ ಜಿಯೋಪೋನ್ ನೀಡುತ್ತಿದೆ. ಕಳೆದ ತಿಂಗಳು ದೀಪಾವಳಿ ಭಾಗವಾಗಿ ಲಿಮಿಟೆಡ್ ಟೈಮ್ ದೀಪಾವಳಿ ಪೆಸ್ಟಿವ್ ಆಫರ್ ಅಡಿಯಲ್ಲಿ ರೂ. 699ಕ್ಕೆ ಜಿಯೋಪೋನ್ ನೀಡುವುದಾಗಿ ಸಂಸ್ಥೆ ಘೋಷಿಸಿತ್ತು. ಈ ಆಫರ್ ಇನ್ನೂ ಮಾನ್ಯತೆ ಹೊಂದಿದ್ದು, 4g ಸ್ಮಾರ್ಟ್ ಫೀಚರ್ ಫೋನ್ ಅನ್ನು ವಿಶೇಷ ವ್ಯಕ್ತಿಗೆ ಉಡುಗೊರೆಯಾಗಿ ನೀಡುತ್ತಿದೆ.
'ಜಿಯೋ ಫೋನ್ ದೀಪಾವಳಿ 2019 ಆಫರ್' ಭಾಗವಾಗಿರುವ ರಿಲಯನ್ಸ್ ಜಿಯೋ ವಿವಿಧ ಯೋಜನೆಗಳನ್ನು ಯೋಜನೆಗಳನ್ನು ಸಹ ನೀಡುತ್ತದೆ.
ರೂ. 808 ಪ್ಲಾನ್
ಟೆಲಿಕಾಂ ಆಪರೇಟರ್ ಈ ಪ್ರಸ್ತಾಪದಡಿಯಲ್ಲಿ ನಾಲ್ಕು ಬಂಡಲ್ ಯೋಜನೆಗಳನ್ನು ನೀಡುತ್ತಿದ್ದು, ಇದರ ಬೆಲೆ ರೂ. 808, ರೂ. 1,006, ರೂ. 1,501 ಮತ್ತು ರೂ. 1,996 ಆಗಿರುತ್ತದೆ.
ಈ ಬಂಡಲ್ ಯೋಜನೆಯಡಿ ರೂ. 808 ಪ್ಲಾನ್ ಗೆ ಗ್ರಾಹಕರು ಜಿಯೋಫೋನ್ ಜೊತೆಗೆ ಒಂದು ತಿಂಗಳ ರೀಚಾರ್ಜ್ ಪ್ಯಾಕ್ ಮತ್ತು ರೂ. 10 ಐಯುಸಿ ಯೋಜನೆ ಪಡೆಯುತ್ತಾರೆ.
ರೂ. 1,006 ಪ್ಲಾನ್
ಬಂಡಲ್ ಯೋಜನೆಯಡಿಯ ಈ ಆಫರ್ ಮೂಲಕ ರೂ. 1,006ಕ್ಕೆ ಗ್ರಾಹಕರು ಜಿಯೋಫೋನ್ ಜೊತೆಗೆ ಮೂರು ತಿಂಗಳ ರೀಚಾರ್ಜ್ ಪ್ಯಾಕ್ ಮತ್ತು ರೂ. 10 ಐಯುಸಿ ಯೋಜನೆ ಒದಗಿಸುತ್ತಿದೆ.
ರೂ. 1,501 ಯೋಜನೆ
ರೂ. 1,501 ರ ಬಂಡಲ್ ಯೋಜನೆಯಡಿ, ಗ್ರಾಹಕರು ಜಿಯೋಫೋನ್ ಜೊತೆಗೆ ಎಂಟು ತಿಂಗಳ ರೀಚಾರ್ಜ್ ಪ್ಯಾಕ್ ಮತ್ತು ರೂ. 10 ಐಯುಸಿ ಯೋಜನೆ ಪಡೆಯಲಿದ್ದಾರೆ.
ರೂ. 1,996 ಯೋಜನೆ
ಜಿಯೋ ಘೋಷಿಸಿರುವ ಈ ರೂ. 1,996 ಯೋಜನೆಯಡಿಯಲ್ಲಿ, ಗ್ರಾಹಕರು ಜಿಯೋಫೋನ್ ಜೊತೆಗೆ ಹದಿಮೂರು ತಿಂಗಳ ರೀಚಾರ್ಜ್ ಪ್ಯಾಕ್ ಮತ್ತು ರೂ. 10 ಐಯುಸಿ ಯೋಜನೆ ಸೌಲಭ್ಯ ಪಡೆಯುತ್ತಾರೆ. ರೀಚಾರ್ಜ್ ಯೋಜನೆಗಳೊಂದಿಗೆ ಜಿಯೋಫೋನ್ ಅನ್ನು ಉಡುಗೊರೆಯಾಗಿ ನೀಡಲು, ಬಳಕೆದಾರರು ರಿಲಯನ್ಸ್ ಜಿಯೋ ಅವರ ವೆಬ್‌ಸೈಟ್‌ಗೆ ಭೇಟಿ ನೀಡಿ 'ಗಿಫ್ಟ್ ಜಿಯೋಫೋನ್' ಟ್ಯಾಬ್‌ಗೆ ನ್ಯಾವಿಗೇಟ್ ಮಾಡಬೇಕಾಗುತ್ತದೆ.
ಜಿಯೋಫೊನ್ ಗಿಫ್ಟ್ ಮಾಡೋದು ಹೇಗೆ?
ಜಿಯೋಫೋನ್ ಉಡುಗೊರೆಯಾಗಿ ನೀಡಲು ರಿಲಯನ್ಸ್ ಜಿಯೋ ವೆಬ್ಸೈಟ್‌ಗೆ ಬೇಟಿ ನೀಡಿ. (https://www.jio.com/gift-jiophone) ಇಲ್ಲಿರುವ Gift Now (ಗಿಫ್ಟ್ ನೌ) ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಿ ಮತ್ತು ನಂತರ ನೀವು ಜಿಯೋಫೋನ್ ಅನ್ನು ಉಡುಗೊರೆಯಾಗಿ ನೀಡಲು ಬಯಸುವ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಮುಂದೆ, ಜಿಯೋಫೋನ್‌ನೊಂದಿಗೆ ಹಲವಾರು ಯೋಜನೆಯನ್ನು ಆಯ್ಕೆ ಮಾಡಲು ಮತ್ತು ಉಡುಗೊರೆ ವೋಚರ್ ಕಳುಹಿಸಲು ಆನ್‌ಲೈನ್‌ನಲ್ಲಿ ಪಾವತಿಸಲು ಕೇಳಲಾಗುತ್ತದೆ. ಉಡುಗೊರೆ ವೋಚರ್ ರಿಸೀವರ್‌ನಿಂದ ಭಾರತದ ಯಾವುದೇ ರಿಲಯನ್ಸ್ ಜಿಯೋ ಅಂಗಡಿಯಲ್ಲಿ ಪಡೆದುಕೊಳ್ಳಬಹುದು.


Click it and Unblock the Notifications