gold: ಆಭರಣಕ್ಕಿಂತ ಉತ್ತಮ ಬಂಗಾರದಂತಹ ಹೂಡಿಕೆ ಇಲ್ಲಿದೆ!

ಬೆಂಗಳೂರು, ಜುಲೈ 7: ಹೂಡಿಕೆಗೆ ಹಲವಾರು ಮಾರ್ಗಗಳಿವೆ. ಅದರಲ್ಲಿ ಚಿನ್ನದ ಮೇಲೆ ಹೂಡಿಕೆಯೂ ಒಂದು ಜನಪ್ರಿಯ ಮಾರ್ಗ. ಆದರೆ ಚಿನ್ನದ ಮೇಲೆ ಹೂಡಿಕೆ ಮಾಡುವ ಮುನ್ನ ಹಲವಾರು ಸಂಗತಿಗಳನ್ನು ಗಮನಿಸಿಕೊಳ್ಳಬೇಕಾಗುತ್ತದೆ. ಚಿನ್ನದ ದರ ನಿರಂತರ ಏರಿಕೆಯಲ್ಲಿಯೇ ಇರುವುದರಿಂದ ದೊಡ್ಡ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡುವುದು ಹಲವರಿಗೆ ಅಸಾಧ್ಯವಾಗಬಹುದು. ಆದರೆ ಚಿನ್ನದ ಮೇಲೆ ಹೂಡಿಕೆಯನ್ನು ಮಾಡಬೇಕು ಕಡಿಮೆ ಹಣವನ್ನು ಇನಿಯೋಗಿಸಬೇಕು ಎನ್ನುವವರಿಗೆ ಒಂದು ಆಯ್ಕೆ ಇದೆ. ಗೋಲ್ಡ್ ಇಟಿಎಫ್ ಎನ್ನುವ ಪರ್ಯಾಯ ಉತ್ತಮ ಹೂಡಿಕೆ ಆಯ್ಕೆಇದೆ.

ಹಾಗಾದರೆ, ಗೋಲ್ಡ್ ಇಟಿಎಫ್ ಎಂದರೇನು? ಚಿನ್ನದ ಆಭರಣಗಳ ಬದಲಿಗೆ ಇಟಿಎಫ್ ಗಳಲ್ಲಿ ಹೂಡಿಕೆ ಹೇಗೆ ಉತ್ತಮ, ಮೊದಲಾದವುಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕು. ಚಿನ್ನದ ಇಟಿಎಫ್ ಅಥವಾ ಗೋಲ್ಡ್ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ ಗಳು, ಕಮಾಡಿಟಿ ಆಧಾರಿತ ಮ್ಯೂಚುಯಲ್ ಫಂಡ್. ಇದು ಚಿನ್ನದಲ್ಲಿ ಹೂಡಿಕೆ ಮಾಡುತ್ತದೆ. ಈ ಎಕ್ಸ್ ಚೇಂಜ್ - ಟ್ರೇಡೆಡ್ ಫಂಡ್ ಗಳು ಷೇರುಗಳಂತೆ ಕಾರ್ಯನಿರ್ವಹಿಸುತ್ತದೆ.

gold: ಆಭರಣಕ್ಕಿಂತ ಉತ್ತಮ ಬಂಗಾರದಂತಹ ಹೂಡಿಕೆ ಇಲ್ಲಿದೆ!

ಅವುಗಳನ್ನು ಬಿಎಸ್ಇ, ಎನ್ ಎಸ್ ಇ ಯಂತಹ ವಿನಿಮಯ ಕೇಂದ್ರಗಳ ಮೂಲಕ ಖರೀದಿಸಬಹುದಾಗಿದೆ ಅಥವಾ ಮಾರಾಟ ಕೂಡ ಮಾಡಬಹುದಾಗಿದೆ. ಗೋಲ್ಡ್ ಇಟಿಎಫ್ ನಿಮ್ಮ ಡಿಮ್ಯಾಟ್ ಖಾತೆಗೆ ಡಿಮ್ಯಟಿರಿಯಲೈಸ್ಟ್ ರೂಪದಲ್ಲಿ ಕ್ರೆಡಿಟ್ ಆಗುತ್ತವೆ. ನೀವು ಭೌತಿಕವಾಗಿ ಚಿನ್ನವನ್ನ ಖರೀದಿ ಮಾಡುವ ಅಗತ್ಯ ಇರುವುದಿಲ್ಲ. ಆದಾಗ್ಯೂ, ಅದರ ಬೆಲೆ ಯು ಮಾರುಕಟ್ಟೆ ಬೆಲೆಯನ್ನ ಆಧರಿಸಿರುತ್ತದೆ.

ಒಬ್ಬ ವ್ಯಕ್ತಿ ಕೇವಲ ಒಂದು ಯೂನಿಟ್ ಗೋಲ್ಡ್ ಇಟಿಎಫ್ ಕೂಡ ಖರೀದಿಸಬಹುದು. ಇದು ಶೇಕಡ 99.5 ರಷ್ಟು ಶುದ್ಧತೆಯ ಒಂದು ಗ್ರಾಂ ಚಿನ್ನಕ್ಕೆ ಸಮ. ಇದರ ಇನ್ನೊಂದು ಉತ್ತಮ ಅಂಶ ಏನೆಂದರೆ ಚಿನ್ನದ ಆಭರಣಗಳಂತೆ ಇದರ ಸುರಕ್ಷತೆಯ ಬಗ್ಗೆ ಯೋಚಿಸುವ ಅಗತ್ಯ ಇಲ್ಲ. ಕಳ್ಳತನದ ಅಪಾಯ ಇರಲ್ಲ. ಜೊತೆಗೆ ಶುದ್ಧತೆಯ ಚಿಂತೆ ಕೂಡ ಇರಲ್ಲ. ಆಭರಣದ ಹೊರತಾಗಿ ಚಿನ್ನದಲ್ಲಿ ಹೂಡಿಕೆ ಮಾಡುವುದಕ್ಕೆ ಯಾರು ಬಯಸುತ್ತಾರೋ ಅಂತಹವರಿಗೆ ಗೋಲ್ಡ್ ಇಟಿಎಫ್ ಗಳು ಪರ್ಯಾಯ ಆಯ್ಕೆ. ಅಲ್ಲದೆ ಸಾವರಿನ್ ಗೋಲ್ಡ್ ಬಾಂಡ್ ರೀತಿಯಲ್ಲಿ ಇದರಲ್ಲಿ ಯಾವುದೇ ಲಾಕ್ ಇನ್ ಪೀರಿಯಡ್ ಇರಲ್ಲ.

ಯಾವುದೇ ಸ್ಕೀಂನಲ್ಲಿ ಹೂಡಿಕೆ ಮಾಡೋದಕ್ಕೂ ಮೊದಲು, ಅದರ ಪಾಸ್ಟ್ ಟ್ರ್ಯಾಕ್ ರೆಕಾರ್ಡ್ ನೋಡೋದು ಒಳ್ಳೆಯದು. ಪ್ರಮುಖ ಗೋಲ್ಡ್ ಇಟಿಎಫ್ ಸ್ಕೀಂ ಗಳು ಕಳೆದ ಐದು ವರ್ಷಗಳಲ್ಲಿ ಸರಾಸರಿ ಶೇಕಡ 16.73 ರಷ್ಟು ರಿಟರ್ನ್ಸ್ ಕೊಟ್ಟಿವೆ. ಕಳೆದ ಒಂದು ವರ್ಷದಲ್ಲಿ ರಿಟರ್ನ್ ಶೇಕಡ 17.73 ರಷ್ಟಿದ್ದು, ಕಳೆದ ಮೂರು ವರ್ಷಗಳ ಸರಾಸರಿ ವಾರ್ಷಿಕ ರಿಟರ್ನ್ಸ್ ಶೇಕಡ 13.59 ರಷ್ಟಿತ್ತು ಎನ್ನುವುದನ್ನು ನಾವು ಗಮನಿಸಿಕೊಳ್ಳಬೇಕು.
ಹಾಗಿದ್ದರೆ ಎಷ್ಟು ಪ್ರಮಾಣದ ಹೂಡಿಕೆಯನ್ನು ಚಿನ್ನದ ಇಟಿಎಫ್ ಗೆ ಮೀಸಲಿಡಬೇಕು. , ನಿಮ್ಮ ಪೋರ್ಟ್ ಫೋಲಿಯೋ ಕೂಡ ವೈವಿಧ್ಯಮಯವಾಗಿರಬೇಕು. ನೀವು ಬೇರೆ ಬೇರೆ ಅಸೆಟ್ ಕ್ಲಾಸ್ ಗಳಲ್ಲಿ ಹೂಡಿಕೆ ಮಾಡಬೇಕು. ಈಕ್ವಿಟಿ, ಗೋಲ್ಡ್, ಡೆಟ್ ಹೀಗೆ ಡೈವರ್ಸಿಫೈ ಮಾಡಿದ್ರೆ, ಇದು ನಿಮ್ಮ ರಿಸ್ಕ್ ಕಡಿಮೆ ಮಾಡುತ್ತದೆ.

ನಿಮ್ಮ ಪೋರ್ಟ್ ಫೋಲಿಯೋದ ಶೇಕಡ 10 ರಿಂದ 15 ರಷ್ಟು ಚಿನ್ನ ಇರಲಿ ಅನ್ನೋದು ಹಣಕಾಸು ತಜ್ಞರ ಸಲಹೆ. ಚಿನ್ನ ಯಾವಾಗಲೂ ಉತ್ತಮ ರಿಟರ್ನ್ಸ್ ಕೊಡುತ್ತದೆ ಅಂತೇನೂ ಇಲ್ಲ. ಪ್ರತಿ ಹೂಡಿಕೆ ತರಹ, ಚಿನ್ನದ ದರಕ್ಕೂ ಒಂದು ಸೈಕಲ್ ಇರುತ್ತದೆ. ಸಾಮಾನ್ಯವಾಗಿ, ಯುದ್ಧ ಅಥವಾ ಇನ್ಯಾವುದೇ ಸಂರ್ಘಗಳಂತಹ ಜಾಗತಿಕ ಅನಿಶ್ಚಿತತೆ ಇದ್ದಾಗ, ಚಿನ್ನದ ಬೆಲೆ ಏರಿಕೆಯಾಗುತ್ತದೆ. ದೀರ್ಘಾವಧಿಯಲ್ಲಿ ಚಿನ್ನ ಉತ್ತಮ ರಿಟರ್ನ್ಸ್ ಕೊಡಬಲ್ಲದು. ಚಿನ್ನದಲ್ಲಿ ಹೂಡಿಕೆಗೆ ಗೋಲ್ಡ್ ಇಟಿಎಫ್ ಉತ್ತಮ ಆಯ್ಕೆ ಎಂದೇ ಹೇಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+