For Quick Alerts
ALLOW NOTIFICATIONS  
For Daily Alerts

ಪರ್ಸನಲ್ ಲೋನ್ ಗಿಂತಲೂ ಕಡಿಮೆ ಬಡ್ಡಿಗೆ ಸಿಗುವ 6 ಸಾಲಗಳಿವು

|

ಸಾಲಗಳ ಪೈಕಿಯೇ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲದ ಬಡ್ಡಿ ದರ ಸ್ವಲ್ಪ ದುಬಾರಿ. ಅದರಲ್ಲೂ ಇತರ ಸಾಲಗಳಿಗೆ ಹೋಲಿಕೆ ಮಾಡಿದರೆ ಅದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಪರ್ಸನಲ್ ಲೋನ್ ಅಂದರೆ ಅದು ಅಡಮಾನ ಸಾಲವಲ್ಲ. ಆದ್ದರಿಂದ ಬಡ್ಡಿದರ ಜಾಸ್ತಿ ಇದ್ದೇ ಇರುತ್ತದೆ. ಆ ಕಾರಣಕ್ಕೆ ಯಾರಾದರೂ ಸಾಲ ಪಡೆಯುವಾಗ ಪರ್ಸನಲ್ ಲೋನ್ ಕೊನೆಯ ಆಯ್ಕೆ ಆಗಿರುತ್ತದೆ.

 

ಬೇರೆ ಯಾವ ದಾರಿಯೂ ಇಲ್ಲ. ಸಾಲ ಅನಿವಾರ್ಯ ಅಂತಾದಾಗ ಬೇರೆ ಏನನ್ನೂ ಗಣನೆಗೆ ತೆಗೆದುಕೊಳ್ಳದೆ ಪರ್ಸನಲ್ ಲೋನ್ ತೆಗೆದುಕೊಳ್ಳ ಬೇಕಾಗುತ್ತದೆ. ಆದರೆ ಅದರ ಬದಲಿಗೆ ಬೇರೆ ಹಾಗೂ ಕಡಿಮೆ ಬಡ್ಡಿಗೆ ಸಿಗುವ ಸಾಲದ ಬಗ್ಗೆ ಯೋಚನೆ ಮಾಡಿದ್ದೀರಾ? ಇಲ್ಲಿ ಕೆಲವು ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಅನಿವಾರ್ಯವಾಗಿ ಸಾಲ ಮಾಡಬೇಕಾಗಿ ಬಂದಾಗ ಪರ್ಸನಲ್ ಲೋನ್ ಬದಲಿಗೆ ಇವುಗಳನ್ನು ಗಣನೆಗೆ ತೆಗೆದುಕೊಳ್ಳಬಹುದು.

ಚಿನ್ನದ ಮೇಲಿನ ಸಾಲ

ಚಿನ್ನದ ಮೇಲಿನ ಸಾಲ

ಚಿನ್ನವನ್ನು ಅಡಮಾನ ಇಟ್ಟು ಸಾಲ ಪಡೆಯುವುದು ಅತ್ಯುತ್ತಮ ಹಾಗೂ ಮೊದಲ ಆಯ್ಕೆ. ಬಹಳ ಮಂದಿ ಚಿನ್ನಾಭರಣಗಳನ್ನು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿರುತ್ತಾರೆ. ಅಥವಾ ಆಭರಣಗಳನ್ನು ಧರಿಸಿದರೂ ಅಪರೂಪದ ಸಂದರ್ಭದಲ್ಲಿ ಮಾತ್ರ. ಪರ್ಸನಲ್ ಲೋನ್ ಮೇಲೆ ಹದಿಮೂರರಿಂದ ಆರಂಭವಾಗಿ ಹದಿನೈದು, ಇಪ್ಪತ್ನಾಲ್ಕು ಪರ್ಸೆಂಟ್ ತನಕ ಬಡ್ಡಿ ಹಾಕಲಾಗುತ್ತದೆ. ಅದಕ್ಕೆ ಹೋಲಿಸಿದರೆ ಹನ್ನೆರಡು ಪರ್ಸೆಂಟ್ ಬಡ್ಡಿ ಹಾಕುವ ಚಿನ್ನದ ಸಾಲವೇ ಅತ್ಯುತ್ತಮ. ಈ ವಿಚಾರಕ್ಕೆ ಬಂದಾಗ, ರಾಷ್ಟ್ರೀಕೃತ ಬ್ಯಾಂಕ್ ಗಳು ಹಾಗೂ ಕೆಲವು ಮುಖ್ಯ ಖಾಸಗಿ ಬ್ಯಾಂಕ್ ಗಳಲ್ಲಿ ಬಡ್ಡಿ ದರವನ್ನು ಒಂದಕ್ಕೆ ಎರಡು ಬಾರಿ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಬಹುದು. ಇನ್ನು ಕೃಷಿಕರಾಗಿ, ಅವರ ಹೆಸರಿನಲ್ಲಿ ಪಹಣಿ ಇದ್ದಲ್ಲಿ ವಾರ್ಷಿಕ ಬಡ್ಡಿ ದರ ಇನ್ನಷ್ಟು ಕಡಿಮೆ ಆಗುವ ಸಾಧ್ಯತೆ ಇರುತ್ತದೆ. ಸಾಲ ಪಡೆಯುವ ಪ್ರಕ್ರಿಯೆಗೆ ಬಹಳ ಸಮಯ ಕೂಡ ಬೇಕಾಗಿಲ್ಲ. ಆ ಕೂಡಲೇ ನಗದು ಸಿಗುತ್ತದೆ ಅಥವಾ ಖಾತೆಗೆ ಜಮೆ ಆಗುತ್ತದೆ. ಪರ್ಸನಲ್ ಲೋನ್ ವಿಚಾರಕ್ಕೆ ಬಂದರೆ, ಅರ್ಜಿ ಹಾಕಿದ ದಿನವೇ ಸಾಲ ಸಿಗುವುದು ಅಸಾಧ್ಯ. ಜತೆಗೆ ಚಿನ್ನದ ಮೇಲೆ ಸಾಲ ಪಡೆಯುವುದಕ್ಕೆ ಪ್ರೊಸೆಸಿಂಗ್ ಶುಲ್ಕದ ದೊಡ್ಡ ಹೊರೆ ಇರುವುದಿಲ್ಲ.

ಫಿಕ್ಸೆಡ್ ಡೆಪಾಸಿಟ್ ಮೇಲೆ ಸಾಲ
 

ಫಿಕ್ಸೆಡ್ ಡೆಪಾಸಿಟ್ ಮೇಲೆ ಸಾಲ

ಒಂದು ವೇಳೆ ನಿಮ್ಮದೇ ಫಿಕ್ಸೆಡ್ ಡೆಪಾಸಿಟ್ ಇದ್ದಲ್ಲಿ ಅದರ ಮೇಲೆ ಸಾಲ ಪಡೆಯುವುದು ಅತ್ಯುತ್ತಮ ಮಾರ್ಗಗಳಲ್ಲಿ ಒಂದು. ಸಾಮಾನ್ಯವಾಗಿ ಎಷ್ಟು ಡೆಪಾಸಿಟ್ ಇರುತ್ತದೋ ಅದರ ಶೇಕಡಾ ಎಂಬತ್ತರಷ್ಟು ಮೊತ್ತವನ್ನು ಸಾಲವಾಗಿ ನೀಡಲಾಗುತ್ತದೆ. ಉದಾಹರಣೆಗೆ, ಒಂದು ಲಕ್ಷ ಎಫ್. ಡಿ. ಇದ್ದರೆ ಎಂಬತ್ತು ಸಾವಿರ ತನಕ ಸಾಲ ದೊರೆಯುತ್ತದೆ. ಇನ್ನು ಬಡ್ಡಿ ದರವು ನಿಮಗೆ ಎಫ್. ಡಿ. ಮೇಲೆ ನಿಗದಿಯಾದ ಬಡ್ಡಿಗಿಂತ ಒಂದು ಅಥವಾ ಎರಡು ಪರ್ಸೆಂಟ್ ಹೆಚ್ಚು ವಿಧಿಸಲಾಗುತ್ತದೆ. ನಿಮಗೆ ಎಫ್. ಡಿ. ಮೇಲೆ ಏಳು ಪರ್ಸೆಂಟ್ ಬಡ್ಡಿ ದೊರೆಯುತ್ತಿದ್ದರೆ, ನೀವು ಪಡೆಯುವ ಸಾಲಕ್ಕೆ ಎಂಟು ಅಥವಾ ಒಂಬತ್ತು ಪರ್ಸೆಂಟ್ ಬಡ್ಡಿ ಹಾಕಲಾಗುತ್ತದೆ. ನಿಮ್ಮ ಬಳಿ ಎಫ್. ಡಿ. ಇದ್ದಲ್ಲಿ ಈ ಆಯ್ಕೆಯನ್ನು ಖಂಡಿತಾ ಪರಿಗಣಿಸಬಹುದು.

ಆಸ್ತಿ ಅಡಮಾನ ಮಾಡಿ ಸಾಲ

ಆಸ್ತಿ ಅಡಮಾನ ಮಾಡಿ ಸಾಲ

ಸ್ಥಿರಾಸ್ತಿ ಅಡಮಾನ ಮಾಡಿ ಸಾಲ ಪಡೆಯುವುದರ ಬಡ್ಡಿ ದರವು ಪರ್ಸನಲ್ ಲೋನ್ ಗಿಂತ ಕಡಿಮೆ ಇರುತ್ತದೆ. ಏಕೆಂದರೆ ಆಸ್ತಿಯನ್ನು ಅಡಮಾನ ಮಾಡಲಾಗಿರುತ್ತದೆ. ಆ ಕಾರಣಕ್ಕೆ ಯಾವುದೇ ಬ್ಯಾಂಕ್ ಗೆ ಸಾಲ ನೀಡುವುದರಲ್ಲಿ ಅಪಾಯ ಇರುವುದಿಲ್ಲ. ಆದರೆ ಒಂದು ವಿಷಯ ನೆನಪಿರಬೇಕು: ಒಂದು ವೇಳೆ ಹಣ ಮರುಪಾವತಿ ಆಗದಿದ್ದರೆ ಆಸ್ತಿಯೇ ಅಪಾಯದಲ್ಲಿ ಸಿಲುಕುತ್ತದೆ. ಯಾವ ಬ್ಯಾಂಕ್ ನಲ್ಲಿ ಸಾಲ ಪಡೆಯಬೇಕು ಅಂತಿದ್ದೀರೋ ಅಲ್ಲಿಗೆ ಭೇಟಿ ನೀಡಿ, ಪ್ರೊಸೆಸಿಂಗ್ ಶುಲ್ಕ ಮತ್ತಿತರ ನಿಯಮಗಳ ಮಾಹಿತಿಯನ್ನು ಪಡೆದು, ಮುಂದುವರಿಯಬೇಕು. ಆದರೆ ಬಡ್ಡಿ ದರವು ವೈಯಕ್ತಿಕ ಸಾಲಕ್ಕಿಂತ ಕಡಿಮೆ ಇರುತ್ತದೆ.

ಷೇರು ಅಡಮಾನ ಮಾಡಿ ಸಾಲ ಪಡೆಯಬಹುದು

ಷೇರು ಅಡಮಾನ ಮಾಡಿ ಸಾಲ ಪಡೆಯಬಹುದು

ಷೇರು ಅಥವಾ ಮ್ಯೂಚುವಲ್ ಫಂಡ್ ಇದ್ದಲ್ಲಿ, ಅವುಗಳನ್ನು ಅಡವಿಟ್ಟು ಸಾಲ ಪಡೆಯಬಹುದು. ಆದರೆ ಬ್ಯಾಂಕ್ ಗಳು ಕೆಲವೇ ಕಂಪೆನಿಗಳ ಷೇರುಗಳ ಮೇಲೆ ಮಾತ್ರ ಸಾಲ ನೀಡುತ್ತವೆ. ಆದ್ದರಿಂದ ಎ ಗ್ರೂಪ್ ನಲ್ಲಿ ಇರುವ ಷೇರುಗಳಿಗೆ ಸಾಲ ನೀಡುತ್ತವೆ. ಈ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿಗೆ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕು.

ಪ್ರಾವಿಡೆಂಟ್ ಫಂಡ್ (ಪಿಎಫ್) ಮೇಲೆ ಸಾಲ

ಪ್ರಾವಿಡೆಂಟ್ ಫಂಡ್ (ಪಿಎಫ್) ಮೇಲೆ ಸಾಲ

ನಿಮ್ಮ ಪ್ರಾವಿಡೆಂಟ್ ಫಂಡ್ ಮೇಲೆ ಕೂಡ ಸಾಲ ದೊರೆಯುತ್ತದೆ. ಆದರೆ ಇದಕ್ಕೆ ದೀರ್ಘವಾದ ಪ್ರಕ್ರಿಯೆ ಇದೆ. ನಿಮಗೆ ಯಾವುದೇ ತುರ್ತಿಲ್ಲ ಹಾಗೂ ಕಾಯುವುದಕ್ಕೆ ಸಿದ್ಧರಿದ್ದೀರಿ ಅಂದರೆ ಈ ಆಯ್ಕೆಯನ್ನು ಪರಿಗಣಿಸಬಹುದು. ನಿಮ್ಮದೇ ಪ್ರಾವಿಡೆಂಟ್ ಫಂಡ್ ಮೇಲೆ ಸಾಲವನ್ನು ಪಡೆಯಬಹುದು. ಎಲ್ಲ ಆಯ್ಕೆಗಳನ್ನೂ ಅಳೆದು- ತೂಗಿ ನೋಡಿದಾಗ ಚಿನ್ನದ ಮೇಲೆ ಸಾಲ ಪಡೆಯುವ ಪ್ರಕ್ರಿಯೆಯೂ ಸುಲಭ ಹಾಗೂ ಬಡ್ಡಿ ದರವೂ ಕಡಿಮೆ.

ಕ್ರೆಡಿಟ್ ಕಾರ್ಡ್

ಕ್ರೆಡಿಟ್ ಕಾರ್ಡ್

ಈ ಆಯ್ಕೆಯನ್ನು ನೋಡಿ ಬಹಳ ಅಚ್ಚರಿ ಎನಿಸಬಹುದು. ಆದರೆ ಕ್ರೆಡಿಟ್ ಕಾರ್ಡ್ ಆಫರ್ ಗಳನ್ನು ಗಮನಿಸುತ್ತಿರುವವರಿಗೆ ಈ ಬಗ್ಗೆ ಗೊತ್ತಿರುತ್ತದೆ. ಗ್ರಾಹಕರ ಕ್ರೆಡಿಟ್ ಸ್ಕೋರ್, ಬಳಕೆ ಪ್ರಮಾಣ ಇವೆಲ್ಲವನ್ನೂ ಗಮನಿಸಿ, ಆಯಾ ಕ್ರೆಡಿಟ್ ಕಾರ್ಡ್ ವಿತರಿಸುವ ಬ್ಯಾಂಕ್ ಗಳಿಂದಲೇ ಆಕರ್ಷಕ ಬಡ್ಡಿದರದಲ್ಲಿ ಸಾಲ ಒದಗಿಸಲಾಗುತ್ತದೆ. ಆದರೆ ಅದು ಸಮಯದಿಂದ ಸಮಯಕ್ಕೆ ಹಾಗೂ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಆಫರ್ ಇದ್ದಾಗ ಮಾತ್ರ ಸಿಗುತ್ತದೆ.

English summary

6 Better Alternative Loan Options To Personal Loans

Personal loans normally higher interest rate loan type. Here is the 6 alternative option to personal loan.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X