ಬೆಂಗಳೂರು, ಸೆಪ್ಟೆಂಬರ್ 30: ಯಶಸ್ಸು ಎಂಬುದು ಕಾಪಿ ಅಂಡ್ ಪೇಸ್ಟ್ ಕೆಲಸವಲ್ಲ. ಇದು ಕಠಿಣ ಪರಿಶ್ರಮ ಮತ್ತು ಅಚಲವಾದ ಆತ್ಮ ವಿಶ್ವಾಸದಿಂದ ಅನನ್ಯ ಮಾರ್ಗದ ಪ್ರತಿಫಲವಾಗಿರುತ್ತದೆ. ಅಂತಹ ಮಾಗದಲ್ಲಿ ಯಶ ಕಂಡವರು ಬಲ್ವಂತ್ ಪರೇಖ್ ಅವರು.
ಭಾರತದ ಫೆವಿಕಾಲ್ ಮ್ಯಾನ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಬಲ್ವಂತ್ ಪರೇಖ್ ಅವರು ತಮ್ಮ ಜೀವನಾವಧಿಯಲ್ಲಿ ಸಾಕಷ್ಟು ಕಡು ಕಷ್ಟಗಳನ್ನು ಜಯಿಸಿದರು. ಅಲ್ಲದೆ ವ್ಯಾಪಾರ ಜಗತ್ತಿನಲ್ಲಿ ತಮ್ಮದೇ ಹೆಸರನ್ನು ಬರೆದುಕೊಂಡರು.

ಬಲವಂತರಾಯ್ ಕಲ್ಯಾಣಜಿ ಪರೇಖ್ ಅವರು ಗುಜರಾತ್‌ನ ಸಣ್ಣ ಪಟ್ಟಣವಾದ ಮಹುವಾವದರು. ಅವರು ವ್ಯವಹಾರದಲ್ಲಿ ಸ್ವಾಭಾವಿಕ ಒಲವನ್ನು ಹೊಂದಿದ್ದರೂ, ಕುಟುಂಬದ ಒತ್ತಡಗಳಿಂದ ಅವರನ್ನು ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆಯಲು ಮುಂಬೈಗೆ ಬರಬೇಕಾಯಿತು.
ಕಾನೂನು ಅಧ್ಯಯನ ಮಾಡುತ್ತಿರುವಾಗ ಕ್ವಿಟ್ ಇಂಡಿಯಾ ಚಳವಳಿಯ ಸಮಯದಲ್ಲಿ ಮಹಾತ್ಮ ಗಾಂಧಿಯವರ ಪ್ರಭಾವದಿಂದ ಭಾರತವು ಮುಳುಗಿತ್ತು. ಪರೇಖ್ ಅವರು ಅನೇಕರಂತೆ ಅವರು ತಮ್ಮ ಶಿಕ್ಷಣವನ್ನು ತಾತ್ಕಾಲಿಕವಾಗಿ ಬದಿಗಿಟ್ಟು ಭಾರತದ ಸ್ವಾತಂತ್ರ್ಯಕ್ಕಾಗಿ ಸೇರಿಕೊಂಡರು. ವಿವಿಧ ಸಾಮಾಜಿಕ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ನಂತರ ಅವರು ತಮ್ಮ ಪದವಿಯನ್ನು ಪೂರ್ಣಗೊಳಿಸಲು ಮುಂಬೈಗೆ ಮರಳಿದರು.
ಹಲವು ವರ್ಷಗಳ ಪರಿಶ್ರಮದ ಬಳಿಕ ಅವರು ಜರ್ಮನಿಗೆ ಪ್ರಯಾಣಿಸಲು ಅವಕಾಶವನ್ನು ಪಡೆದರು. ಅಲ್ಲಿ ಅವರು ಮೌಲ್ಯಯುತವಾದ ವ್ಯವಹಾರದ ವಿವಿಧ ಮಜಲುಗಳನ್ನು ಅರಿತುಕೊಂಡರು. 1954 ರಲ್ಲಿ, ಅವರು ಮುಂಬೈನಲ್ಲಿ ಪರೇಖ್ ಡೈಕೆಮ್ ಇಂಡಸ್ಟ್ರೀಸ್‌ಗೆ ಸೇರಿದರು, ಅಲ್ಲಿ ಅವರು ಮತ್ತು ಅವರ ಸಹೋದರ ಸುಶೀಲ್ ಪರೇಖ್ ಜವಳಿ ಮುದ್ರಣಕ್ಕಾಗಿ ಪಿಗ್ಮೆಂಟ್ ಎಮಲ್ಷನ್‌ಗಳನ್ನು ತಯಾರಿಸಲು ತೊಡಗಿದರು.
1959 ರಲ್ಲಿ ಪಿಡಿಲೈಟ್ ಅನ್ನು ಭಾರತದಲ್ಲಿ ಸ್ಥಾಪಿಸಲಾಯಿತು. ಇದು ಗಮ್‌ನಂತಹ ವಸ್ತಗಳನ್ನು ತಯಾರಿಸುತ್ತಿತ್ತು. ಈ ಫೆವಿಕಾಲ್‌ನ ಪರಿಚಯವು ಗಮ್ ಉದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡಿತು. ಇದು ದೇಶಾದ್ಯಂತ ಬಡಗಿಗಳಿಗೆ ಮೂಲ ವಸ್ತುವಾಗಿ ಮಾರ್ಪಟ್ಟಿತು. ಒಂದೇ ಒಂದು ಸಣ್ಣ ಅಂಗಡಿಯಿಂದ ಪ್ರಾರಂಭಿಸಿ ಫೆವಿಕಲ್ ಮಾರುಕಟ್ಟೆಯಲ್ಲಿ ಅವರು ಪ್ರಾಬಲ್ಯ ಸಾಧಿಸಿದರು. ಪಿಡಿಲೈಟ್ ಇಂಡಸ್ಟ್ರೀಸ್ ಪ್ರಸ್ತುತ ಮಾರುಕಟ್ಟೆ ಬಂಡವಾಳ ಸುಮಾರು ರೂ. 1.24 ಟ್ರಿಲಿಯನ್ ಎಂದು ಅಂದಾಜಿಸಲಾಗಿದೆ.
ಬಲ್ವಂತ್ ಪರೇಖ್ ಅವರ ಜೀವನವು ಕಠೀಣ ಪರಿಶ್ರಮ, ವ್ಯವಹಾರ ಕೌಶಲತೆಗೆ ಸಾಕ್ಷಿಯಾಗಿದೆ, ಯಶಸ್ಸು ನಿಮ್ಮ ಮಾರ್ಗವನ್ನು ರಚಿಸುತ್ತದೆ. ಬದಲಾಗಿ ಬೇರೆಯವರ ಹೆಜ್ಜೆಗಳನ್ನು ಅನುಸರಿಸುವುದಿಲ್ಲ ಎಂದು ಸಾಬೀತುಪಡಿಸುತ್ತದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications