ಪ್ರಸ್ತುತ ಪ್ರಮುಖ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಕೂಡಾ ಒಂದಾಗಿದೆ. ಆಧಾರ್ ಕಾರ್ಡ್ 12 ಡಿಜಿಟ್‌ನ ವಿಶಿಷ್ಟ ಗುರುತಿನ ಅಂಕಿಯನ್ನು ಹೊಂದಿರುವ ಕಾರ್ಡ್ ಆಗಿದೆ. ಆಧಾರ್ ಸಂಖ್ಯೆಯು ಭಾರತದ ನಿವಾಸಿಗಳಿಗೆ ಅವರ ಬಯೋಮೆಟ್ರಿಕ್ ಮತ್ತು ಡೇಟಾದ ಆಧಾರದ ಮೇಲೆ ಸರ್ಕಾರವು ನೀಡುವ 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ.
ಆಧಾರ್ ಕಾರ್ಡ್ ವಿವಿಧ ಉದ್ದೇಶಗಳಿಗಾಗಿ ಗುರುತಿನ ಮತ್ತು ವಿಳಾಸದ ಪುರಾವೆಯಾಗಿ ಬಳಕೆ ಮಾಡಲಾಗುತ್ತದೆ. ಉದಾಹರಣೆಗೆ ಬ್ಯಾಂಕ್ ಖಾತೆಯನ್ನು ತೆರೆಯುವುದು, ಪಾಸ್‌ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸುವುದು, ಮೊಬೈಲ್ ಸಂಪರ್ಕವನ್ನು ಪಡೆಯುವುದು ಮತ್ತು ಸರ್ಕಾರದ ಸಬ್ಸಿಡಿಗಳು ಮತ್ತು ಕಲ್ಯಾಣ ಪ್ರಯೋಜನಗಳನ್ನು ಪಡೆಯುವಾಗ ನಾವು ಆಧಾರ್ ಕಾರ್ಡ್ ಅನ್ನು ಹೊಂದಿರಬೇಕಾಗುತ್ತದೆ.
ಆಧಾರ್ ಕಾರ್ಡ್ ವಿಳಾಸ ಬದಲಾವಣೆ ಮಾಡುವುದು ಹೇಗೆ?
ಹೌದು, ನೀವು ಆಧಾರ್ ಕಾರ್ಡ್‌ನಲ್ಲಿ ವಿಳಾಸವನ್ನು ಬದಲಾವಣೆ ಮಾಡಬಹುದಾಗಿದೆ. ಆದರೆ ನೀವು ಆಧಾರ್ ಕಾರ್ಡ್‌ನಲ್ಲಿ ವಿಳಾಸವನ್ನು ಅಪ್‌ಡೇಟ್ ಮಾಡಲು ಮಿತಿ ಇದೆಯೇ ಎಂಬುವುದು ನಿಮ್ಮ ಪ್ರಶ್ನೆಯಾಗಿರಬಹುದು. ಆ ಪ್ರಶ್ನೆ ನಿಮ್ಮಲ್ಲಿ ಇದ್ದರೆ ಅದಕ್ಕೆ ಯಾವುದೇ ಮಿತಿ ಇಲ್ಲ. ನೀವು ಎಷ್ಟು ಸಲ ಬೇಕಾದರೂ ಆಧಾರ್ ಕಾರ್ಡ್‌ನಲ್ಲಿ ವಿಳಾಸವನ್ನು ಅಪ್‌ಡೇಟ್ ಮಾಡಬಹುದಾಗಿದೆ. ಆದರೆ ನೀವು ವಿಳಾಸ ಅಪ್‌ಡೇಟ್ ಮಾಡುವಾಗ ತೀರಾ ಅಗತ್ಯವೇ ಎಂದು ನೋಡಿಕೊಳ್ಳಿ.
ಆಧಾರ್‌ನಲ್ಲಿ ಯಾವುದೆಲ್ಲ ಅಪ್‌ಡೇಟ್ ಮಾಡಿಕೊಳ್ಳಬಹುದು: ಹೆಸರು, ವಿಳಾಸ, ಜನನ ಪ್ರಮಾಣಪತ್ರ/ವಯಸ್ಸು, ಲಿಂಗ, ಮೊಬೈಲ್ ನಂಬರ್, ಇಮೇಲ್ ವಿಳಾಸ, ವಿವಾಹಿತರೆ/ಅಲ್ಲವೇ ಅಪ್‌ಡೇಟ್ ಮಾಡಿಕೊಳ್ಳಬಹುದು. ಐರೀಸ್, ಫಿಂಗರ್‌ಪ್ರಿಂಟ್ಸ್, ಛಾಯಾಚಿತ್ರ ಕೂಡಾ ಬೇಕಾಗುತ್ತದೆ.

ನಿಮ್ಮ ಜನನ ದಿನಾಂಕ ಅಪ್‌ಡೇಟ್ ಮಾಡಬಹುದೇ?
ಹೌದು. ನೀವು ನಿಮ್ಮ ಜನನ ದಿನಾಂಕವನ್ನು ಒಂದು ಬಾರಿ ಮಾತ್ರ ಅಪ್‌ಡೇಟ್ ಮಾಡುವ ಅವಕಾಶವಿದೆ. ತೀರಾ ಅಸಾಧಾರಣ ಸಂದರ್ಭದಲ್ಲಿ ಮಾತ್ರ ಜನನ ದಿನಾಂಕ ಬದಲಾವಣೆ ಮಾಡುವ ಅವಕಾಶ ನೀಡಲಾಗುತ್ತದೆ. ಕೆಲವೇ ಕೆಲವು ಪ್ರಕರಣಗಳಲ್ಲಿ ಜನನ ದಿನಾಂಕ ಅಪ್‌ಡೇಟ್ ಮಾಡುವ ಅವಕಾಶ ನೀಡಲಾಗುತ್ತದೆ. ಹೀಗೆ ಆಧಾರ್ ಕಾರ್ಡ್‌ನಲ್ಲಿ ಜನನ ದಿನಾಂಕ ಅಪ್‌ಡೇಟ್ ಮಾಡಬೇಕಾದರೆ ನೀವು ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ.
ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಮನವಿ ಸಲ್ಲಿಸಬೇಕು. ನಂತರ ವಿನಾಯಿತಿ ಅಡಿಯಲ್ಲಿ ನವೀಕರಣಕ್ಕೆ ಅವಕಾಶಕ್ಕಾಗಿ ಯುಐಡಿಎಐನ ಸಂಬಂಧಪಟ್ಟ ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಬಹುದು. ಅಧಿಕೃತ ಅಧಿಕಾರಿಗಳು ಸರಿಯಾಗಿ ಪರಿಶೀಲನೆ ನಡೆಸಿದ ನಂತರ ವಿನಂತಿಯನ್ನು ಅನುಮೋದಿಸಲಾಗುತ್ತದೆ/ ತಿರಸ್ಕರಿಸಲಾಗುತ್ತದೆ. ನಿಮ್ಮ ಹೆಸರನ್ನು ಹೊಂದಿರುವ ಮಾನ್ಯವಾದ ಜನ್ಮ ದಿನಾಂಕ (DoB) ಪುರಾವೆಯೊಂದಿಗೆ ನಿಮ್ಮ ಆಧಾರ್‌ನಲ್ಲಿ ನೀವು ಜನ್ಮ ದಿನಾಂಕವನ್ನು (DoB) ನವೀಕರಿಸಬಹುದು.
ಆಧಾರ್ ಕಾರ್ಡ್‌ನಲ್ಲಿ ವಿಳಾಸ ಅಪ್‌ಡೇಟ್ ಮಾಡುವುದು ಹೇಗೆ?
ನೀವು ಆಧಾರ್‌ನಲ್ಲಿ ನಿಮ್ಮ ವಿಳಾಸವನ್ನು ನವೀಕರಿಸಲು, ಯುಐಡಿಎಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಆಧಾರ್ ಸೇವಾ ಕೇಂದ್ರ (ASK) ಅಥವಾ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬಹುದು. ಆಧಾರ್‌ನಲ್ಲಿ ನಿಮ್ಮ ವಿಳಾಸವನ್ನು ನವೀಕರಿಸಲು ವಿಳಾಸದ ದಾಖಲೆಯ ಮಾನ್ಯವಾದ ಪುರಾವೆಯನ್ನು ನೀವು ಸಲ್ಲಿಸಬೇಕಾಗುತ್ತದೆ. ನವೀಕರಣ ಪ್ರಕ್ರಿಯೆಗೆ ಕೊಂಚ ದಿನಗಳು ಬೇಕಾಗುತ್ತದೆ. ಆಧಾರ್‌ನಲ್ಲಿ ವಿಳಾಸ ಅಪ್‌ಡೇಟ್ ಮಾಡಿಕೊಳ್ಳುವುದು ಮುಖ್ಯವಾಗಿದೆ. ವಿಳಾಸ ಪುರಾವೆಯಾಗಿ ಇದನ್ನೇ ಬಳಸಲಾಗುವ ಕಾರಣದಿಂದಾಗಿ ಅಪ್‌ಡೇಟ್ ಮಾಡುವುದು ಅಗತ್ಯವಾಗಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications