ಆಧಾರ್ ಕಾರ್ಡ್ ವಿಶ್ವದ ಅತಿದೊಡ್ಡ ಬಯೋಮೆಟ್ರಿಕ್ ಐಡಿ ವ್ಯವಸ್ಥೆಯಾಗಿದೆ. ಭಾರತದಲ್ಲಿ ಆಧಾರ್ ಕಾರ್ಡ್ ಅತೀ ಮುಖ್ಯವಾದ ದಾಖಲೆಗಳಲ್ಲಿ ಒಂದಾಗಿದೆ. ನಾವು ಎಲ್ಲ ಹಣಕಾಸು ಕಾರ್ಯಕ್ಕೂ, ಇತರೆ ಕಾರ್ಯಗಳಿಗೂ ಆಧಾರ್ ಕಾರ್ಡ್ ಅನ್ನು ನೀಡಬೇಕಾಗುತ್ತದೆ. ಆದರೆ ಅದು ಸುರಕ್ಷಿತವಾಗಿರುವುದು ಅತೀ ಮುಖ್ಯ.
ವಿಶ್ವಬ್ಯಾಂಕ್ ಮುಖ್ಯ ಅರ್ಥಶಾಸ್ತ್ರಜ್ಞ ಪಾಲ್ ರೋಮರ್ ಅವರು ವಿಶ್ವದ ಅತ್ಯಂತ ಅತ್ಯಾಧುನಿಕ ಐಡಿ ಪ್ರೋಗ್ರಾಂ ಎಂದು ಉಲ್ಲೇಖಿಸಿದ್ದಾರೆ. ಆಧಾರ್ ಕಾರ್ಡ್ ಭಾರತೀಯರ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು. 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಬೇರೆ ಬೇರೆ ರೀತಿಯ ಪ್ರಕ್ರಿಯೆಗೆ ಬಳಕೆ ಮಾಡಲಾಗುತ್ತದೆ.

ನಿಮ್ಮ ಆಧಾರ್ ಅನ್ನು ಒದಗಿಸುವ ಮೂಲಕ ನೀವು ಹಲವಾರು ಸೇವೆಗಳನ್ನು ಪಡೆಯಬಹುದು. ಆದರೆ ನಿಮ್ಮ ಆಧಾರ್ ಅನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಯು ಕೂಡಾ ಇದೆ. ನಿಮ್ಮ ಆಧಾರ್ ಸಂಖ್ಯೆಯನ್ನು ಹೊಂದಿರುವ ದುಷ್ಕರ್ಮಿಗಳು ಅದನ್ನು ದುರ್ಬಳಕೆ ಮಾಡಬಹುದು. ಅದಕ್ಕಾಗಿ ನೀವು ಎಚ್ಚರವಾಗಿರುವುದು ಅತೀ ಮುಖ್ಯ.
ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಉತ್ತಮ ಮಾರ್ಗವೆಂದರೆ ನಿಮ್ಮ ಆಧಾರ್ ಕಾರ್ಡ್ ಬಳಕೆಯ ಇತಿಹಾಸವನ್ನು ಪರಿಶೀಲಿಸುವುದು ಆಗಿದೆ. ಯುಐಡಿಎಐ ನಿಮ್ಮ ಆಧಾರ್ ಕಾರ್ಡ್‌ನ ಇತಿಹಾಸವನ್ನು ಪರಿಶೀಲಿಸುವ ಸೌಲಭ್ಯವನ್ನು ನೀಡುತ್ತದೆ. ನಿಮ್ಮ ಆಧಾರ್ ಅನ್ನು ಬಳಸಿರುವ ಸೇವೆಗಳು ಮತ್ತು ಪ್ಲಾಟ್‌ಫಾರ್ಮ್‌ಗಳ ವಿವರವಾದ ದಾಖಲೆಯನ್ನು ನಿಮಗೆ ನೀಡುತ್ತದೆ.
ನೀವು ಈ ಆಧಾರ್ ಕಾರ್ಡ್ ಹಿಸ್ಟರಿಯನ್ನು ಚೆಕ್ ಮಾಡುವ ಮೂಲಕ ನಿಮ್ಮ ಆಧಾರ್ ಕಾರ್ಡ್ ಅನ್ನು ಯಾವುದೇ ಅನಧಿಕೃತ ಬಳಕೆಯಾಗಿದೆಯೇ ಎಂದು ಪರಿಶೀಲನೆ ಮಾಡಬಹುದಾಗಿದೆ. ಆಧಾರ್ ಕಾರ್ಡ್ ಅನ್ನು ಯಾವೆಲ್ಲ ದಾಖಲೆಗಳೊಂದಿಗೆ ಲಿಂಕ್ ಮಾಡಲಾಗಿದೆ ಎಂಬುದನ್ನು ಸಹ ಖಚಿತಪಡಿಸಿಕೊಳ್ಳಬಹುದು.
ನಿಮ್ಮ ಆಧಾರ್ ಇತಿಹಾಸವನ್ನು ಹೀಗೆ ಪರಿಶೀಲಿಸಿ
ಹಂತ 1: ಮೊದಲನೆಯದಾಗಿ, ಆಧಾರ್ ಕಾರ್ಡ್‌ನ ಅಧಿಕೃತ ವೆಬ್‌ಸೈಟ್ uidai.gov.in ಗೆ ಭೇಟಿ ನೀಡಿ.
ಹಂತ 2: ಇಲ್ಲಿ My Aadhaar ಆಯ್ಕೆಯನ್ನು ಆರಿಸಿ.
ಹಂತ 3: ಆಧಾರ್ ಸೇವೆಗಳ ಆಯ್ಕೆಯ ಕೆಳಗೆ, ಆಧಾರ್ ದೃಢೀಕರಣ ಇತಿಹಾಸ ನಿಮಗೆ ಲಭ್ಯವಾಗುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
ಹಂತ 4: ಈಗ ಹೊಸ ವಿಂಡೋ ತೆರೆಯುತ್ತದೆ. ನಿಮ್ಮ 12-ಅಂಕಿಯ ಯುಐಡಿ ಸಂಖ್ಯೆಯನ್ನು ನೀವು ಇಲ್ಲಿ ನಮೂದಿಸಿ.
ಹಂತ 5: ಭದ್ರತಾ ಕೋಡ್ ಅನ್ನು ನಮೂದಿಸಿ ಮತ್ತು ಒಟಿಪಿ ಅನ್ನು ಕಳುಹಿಸಿ ಕ್ಲಿಕ್ ಮಾಡಿ.
ಹಂತ 6: ಈಗ ನೀವು ನಿಮ್ಮ ಆಧಾರ್ ಕಾರ್ಡ್‌ನ ಇತಿಹಾಸವನ್ನು ಡೌನ್‌ಲೋಡ್ ಮಾಡಬಹುದು.
ಹಿಸ್ಟರಿಯನ್ನು ಕೂಲಂಕಷವಾಗಿ ಪರಿಶೀಲಿಸಿ. ನೀವು ಯಾವುದೇ ಅಸಮರ್ಪಕ ಮಾಹಿತಿಯನ್ನು ಕಂಡರೆ ತಕ್ಷಣವೇ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ. ನಿಮ್ಮ ಆಧಾರ್‌ನ ದುರ್ಬಳಕೆ ಅಥವಾ ಆಧಾರ್ ಕಾರ್ಡ್ ಅಸಹಜ ಬಳಕೆ ಕಂಡು ಬಂದರೆ, ನಿಮಗೆ ಅನುಮಾನವಾದರೆ ಟೋಲ್-ಫ್ರೀ ಸಂಖ್ಯೆ 1947 ಅಥವಾ ಇಮೇಲ್ ಮೂಲಕ [email protected] ನಲ್ಲಿ ಸಾಧ್ಯವಾದಷ್ಟು ಶೀಘ್ರವೇ ಯುಐಡಿಎಐ ಅನ್ನು ಸಂಪರ್ಕಿಸಿ.


Click it and Unblock the Notifications