ಆಧಾರ್ ಆಧಾರಿತ ಪಿಂಗರ್‌ಪ್ರಿಂಟ್ ದೃಢೀಕರಣ ಹಾಗೂ ವಂಚನೆಗಳನ್ನು ವೇಗವಾಗಿ ಪತ್ತೆ ಹಚ್ಚಲು ಹೊಸ ಸುರಕ್ಷತಾ ತಂತ್ರಜ್ಞಾನ ವ್ಯವಸ್ಥೆಯನ್ನು ಪರಿಚಯಿಸಿರುವುದಾಗಿ ಭಾರತೀಯ ವಿಶಿಷ್ಠ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ)ವು ಸೋಮವಾರ ತಿಳಿಸಿದೆ. ಯುಐಡಿಎಐ ಪ್ರಕಾರ, ಕೃತಕ ಬುದ್ಧಿಮತ್ತೆ (ಎಐ) ಮತ್ತು ಯಂತ್ರ ಕಲಿಕೆ (ಎಂಎಲ್) ಆಧಾರಿತ ಈ ಸುರಕ್ಷತಾ ತಂತ್ರಜ್ಞಾನ ವ್ಯವಸ್ಥೆಯಡಿ ಸೆರೆಹಿಡಿಯಲಾದ ಪಿಂಗರ್‌ಪ್ರಿಂಟ್‌ನ ಲೈವ್‌ನೆಸ್ ಪರಿಶೀಲಿಸಲು ಬೆರಳಿನ ಸೂಕ್ಷ್ಮ ಮತ್ತು ಪಿಂಗರ್ ಇಮೇಜ್‌ನ್ನು ಬಳಸಲಾಗುತ್ತದೆ.
ಪಿಂಗರ್‌ಪ್ರಿಂಟ್ ಆಧಾರಿತ ಆಧಾರ್ ದೃಢೀಕರಣಕ್ಕೆ ಹೊಸ ಸುರಕ್ಷತಾ ವ್ಯವಸ್ಥೆಯು ಹೆಚ್ಚು ದೃಢತೆಯನ್ನು ನೀಡಿರುವುದಾಗಿ ಹೇಳಿರುವ ಯುಐಡಿಎಐ ಇದು ಆಧಾರ್ ದೃಢೀಕರಣ ವ್ಯವಹಾರಗಳನ್ನು ಮತ್ತಷ್ಟು ಸದೃಢ ಹಾಗೂ ಸುರಕ್ಷಿತಗೊಳಿಸುವುದಾಗಿ ತಿಳಿಸಿದೆ. "ಹೊಸ ಎರಡು ಹಂತದ ದೃಢೀಕರಣ ಪ್ರಕ್ರಿಯೆಯು ಫಿಂಗರ್ ಪ್ರಿಂಟ್‌ನ ನೈಜತೆಯನ್ನು(ಲೈವ್‌ನೆಸ್) ಆಡ್ ಒನ್ ಚೆಕ್ಸ್ ಮೂಲಕ ಮೌಲ್ಯೀಕರಣಗೊಳಿಸುತ್ತದೆ. ಇದರಿಂದ ನಕಲಿ ಅಥವಾ ವಂಚಿಸುವ ಪ್ರಯತ್ನಗಳಿಗೆ ಕಡಿವಾಣ ಬೀಳುತ್ತದೆ" ಎಂದು ಯುಐಡಿಎಐ ಹೇಳಿಕೆಯಲ್ಲಿ ತಿಳಿಸಿದೆ.

ಯುಐಡಿಎಐನ ಈ ಹೊಸ ವ್ಯವಸ್ಥೆಯು ಬ್ಯಾಂಕಿಂಗ್, ಹಣಕಾಸು, ಟೆಲಿಕಾಂ ಹಾಗೂ ಸರ್ಕಾರಿ ವಲಯಗಳಲ್ಲಿ ಹೆಚ್ಚಿನ ಉಪಯೋಗವಾಗಬಹುದೆಂದು ನಿರೀಕ್ಷಿಸಲಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯನ್ನು ಹೆಚ್ಚು ಬಲಪಡಿಸುವ ಜತೆಗೆ ವಂಚನೆ ಪ್ರಕರಣಗಳನ್ನು ತಡೆಗಟ್ಟುತ್ತವೆ. ಇದರಿಂದ ಜನಸಾಮಾನ್ಯರಿಗೂ ಹೆಚ್ಚಿನ ಅನುಕೂಲವಾಗಲಿದೆ.
"ಈ ಹೊಸ ಸುರಕ್ಷತಾ ಕ್ರಮಗಳನ್ನು ಒಳಗೊಂಡಿರುವ ಆಧಾರತ್ ಆಧಾರಿತ ಪಿಂಟರ್ ಪ್ರಿಂಟ್ ದೃಢೀಕರಣ ವ್ಯವಸ್ಥೆಯು ಈಗ ಪೂರ್ಣ ಪ್ರಮಾಣದಲ್ಲಿ ಚಾಲನೆ ಪಡೆದುಕೊಂಡಿದೆ. ಯುಐಡಿಎಐ ತನ್ನ ಪಾಲುದಾರರು ಹಾಗೂ ಬಳಕೆದಾರ ಏಜೆನ್ಸಿಗಳ ಜತೆ ಕೈಜೋಡಿಸಿ ಹಲವು ತಿಂಗಳು ಚರ್ಚೆ ನಡೆಸಿದ ಬಳಿಕ ಈ ಹೊಸ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿರುವುದಾಗಿ" ಭಾರತೀಯ ವಿಶಿಷ್ಠ ಗುರುತಿನ ಚೀಟಿ ಪ್ರಾಧಿಕಾರ ಹೇಳಿದೆ.
ತನ್ನ ಕೇಂದ್ರ ಕಚೇರಿ ಹಾಗೂ ಎಲ್ಲ ವಲಯ ಕಚೇರಿಗಳು ಆಧಾರ್ ದೃಢೀಕರಣಕ್ಕೆ ಸಂಬಂಧಪಟ್ಟ ಎಲ್ಲ ಬಳಕೆದಾರರ ಏಜೆನ್ಸಿಗಳ ಸಂಪರ್ಕದಲ್ಲಿದ್ದು, ಹೊಸ ಸುರಕ್ಷಿತ ದೃಢೀಕರಣ ವ್ಯವಸ್ಥೆಗೆ ಆದಷ್ಟು ಬೇಗ ಬದಲಾಯಿಸಿಕೊಳ್ಳುವುದಕ್ಕೆ ಬೇಕಾಗಿರುವ ಎಲ್ಲ ರೀತಿಯ ನೆರವನ್ನು ಒದಗಿಸುತ್ತಿದೆ. ಆ ಮೂಲಕ ಹೊಸ ವ್ಯವಸ್ಥೆಗೆ ಇನ್ನೂ ವರ್ಗಾವಣೆಗೊಳ್ಳದ ಏಜೆನ್ಸಿಗಳತ್ತ ಗಮನಹರಿಸಿರುವುದಾಗಿ ಯುಐಡಿಎಐ ತಿಳಿಸಿದೆ.
ಆಧಾರ್ ಆದಾರಿತ ದೃಢೀಕರಣ ವಹಿವಾಟು ಅಳವಡಿಕೆಯು ಹೆಚ್ಚು ಪ್ರಚಲಿತದಲ್ಲಿದೆ. ಏಕೆಂದರೆ, ಹಲವು ಕಲ್ಯಾಣ ಯೋಜನೆಗಳ ಪ್ರಯೋಜನಗಳು ಹಾಗೂ ಸೇವೆಗಳನ್ನು ಪಡೆಯುವಲ್ಲಿ ಇದು ಅನುಕೂಲಕರ ವ್ಯವಸ್ಥೆಯಾಗಿ ಮಾರ್ಪಟ್ಟಿದೆ. "2022ರ ಡಿಸೆಂಬರ್ ಅಂತ್ಯದ ವೇಳೆಗೆ ಆಧಾರ್ ಆಧಾರಿತ ಒಟ್ಟು ವ್ಯವಹಾರಗಳು 88.29 ಶತಕೋಟಿ ದಾಟಿದೆ ಹಾಗೂ ಪ್ರತಿದಿನ ಸರಾಸರಿ 70 ಮಿಲಿಯನ್ ವಹಿವಾಟುಗಳನ್ನು ನಡೆಸುತ್ತಿದೆ. ಆ ಪೈಕಿ ಹೆಚ್ಚಿನ ವಹಿವಾಟುಗಳು ಪಿಂಗರ್‌ಪ್ರಿಂಟ್ ಆಧಾರಿತ ದೃಢೀಕರಣಗಳಾಗಿದ್ದು, ದೈನಂದಿನ ಜೀವನದಲ್ಲಿ ಇದು ಎಷ್ಟೊಂದು ಬಳಕೆ ಹಾಗೂ ಉಪಯುಕ್ತ ಎಂಬುದನ್ನು ಇದು ತೋರಿಸುತ್ತದೆ" ಎಂದು ಯುಐಡಿಎಐ ಅಭಿಪ್ರಾಯಪಟ್ಟಿದೆ.


Click it and Unblock the Notifications