ಭಾರತೀಯ ವಿಶಿಷ್ಠ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ)ವು ಬಳಕೆದಾರರ ನೋಂದಣಿ ಸ್ಟೇಟಸ್, ಆಧಾರ್ ಕಾರ್ಡ್ ಸ್ಟೇಟಸ್ ಅಪ್‌ಡೇಟ್, ನೋಂದಣಿ ಸೆಂಟರ್‌ಗಳ ವಿಳಾಸ/ಸ್ಥಳ ಮಾಹಿತಿಯನ್ನು ಒದಗಿಸಲು ನೆರವಾಗುವುದಕ್ಕೆ ಎಐ/ಎಂಎಲ್ ಆಧಾರಿತ "ಆಧಾರ್ ಮಿತ್ರ" ಎಂಬ ಹೊಸ ಚಾಟ್‌ಬಾಟ್ ಅನ್ನು ಪ್ರಾರಂಭಿಸಿದೆ.
ಇದರ ಹೊರತಾಗಿ ಈ "ಆಧಾರ್ ಮಿತ್ರ"ವು ಬಳಕೆದಾರರಿಗೆ ತಮ್ಮ ದೂರುಗಳನ್ನು ದಾಖಲಿಸಿಕೊಳ್ಳುವುದರ ಜತೆಗೆ ಅದರ ಸ್ಟೇಟಸ್ ತಿಳಿದುಕೊಳ್ಳುವುದಕ್ಕೂ ನೆರವಾಗಲಿದೆ. ಈ ವ್ಯವಸ್ಥೆಯು ವಿಶೇಷವಾದ ಕ್ಯೂಆರ್ ಕೋಡ್ ಹೊಂದಿದ್ದು, ಇದು ಗ್ರಾಹಕರನ್ನು ಚಾಟ್‌ಬಾಟ್‌ಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಒದಗಿಸುವುದಕ್ಕೆ "ಆಧಾರ್ ಮಿತ್ರ" ಚಾಟ್‌ಬಾಟ್‌ಗೆ ಕನೆಕ್ಟ್ ಮಾಡುತ್ತದೆ ಎಂದು ಯುಐಡಿಎಐ ತಿಳಿಸಿದೆ.
ಈ ಚಾಟ್‌ಬಾಟ್ ಬಳಕೆದಾರರಿಗೆ ಆಧಾರ್‌ಗೆ ಸಂಬಂಧಿಸಿದಂತೆ ಇತ್ತೀಚಿನ ಅಪ್‌ಡೇಟ್ ಮಾಹಿತಿ, ಕುಂದು-ಕೊರತೆ ಸೇರಿದಂತೆ ಎಲ್ಲ ರೀತಿಯ ಮಾಹಿತಿ ಪಡೆದುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ ಎಂದು ಯುಐಡಿಎಐ ಟ್ವೀಟ್ ಮೂಲಕ ತಿಳಿಸಿದೆ.

ಇದು ಯುಐಡಿಎಐ ತನ್ನ ಕೇಂದ್ರ ಕಚೇರಿಯಿಂದ ಹಿಡಿದು ವಲಯ ಕಚೇರಿ, ತಾಂತ್ರಿಕ ಸೆಂಟರ್‌ಗಳು ಹಾಗೂ ಸಕ್ರಿಯ ಸಂಪರ್ಕ ಕೇಂದ್ರ ಪಾಲುದಾರರವರೆಗೆ ಅತ್ಯಂತ ಪರಿಣಾಮಕಾರಿ ಕುಂದು-ಕೊರತೆ ನಿವಾರಣಾ ವ್ಯವಸ್ಥೆಯಾಗಿದೆ ಎಂದು ಹೇಳಿದೆ.
ಎಲೆಕ್ಟ್ರಾನಿಕ್ & ಐಟಿ ಸಚಿವಾಲಯದ ಹೇಳಿಕೆ ಪ್ರಕಾರ, "ಯುಐಡಿಎಐ ನಾಗರಿಕರಿಗೆ ಸುಲಭವಾಗಿ ಜೀವನ ನಡೆಸಲು ಹಾಗೂ ವ್ಯವಹಾರಗಳನ್ನು ಮಾಡುವುದಕ್ಕೆ ನೆರವಾಗಲಿದೆ. ಜತೆಗೆ ಆಧಾರ್ ಹೊಂದಿರುವವರ ಅನುಭವವನ್ನು ಸತತವಾಗಿ ಉತ್ತಮಪಡಿಸುವುದಕ್ಕೆ ಪ್ರಯತ್ನಿಸುತ್ತಿದೆ.
ಈಗ "ಆಧಾರ್ ಮಿತ್ರ"ದ ಸಹಾಯದಿಂದ ಬಳಕೆದಾರರು ಆಧಾರ್ ಪಿವಿಸಿ ಸ್ಥಿತಿಯನ್ನು ಟ್ರ್ಯಾಕ್ ಮಾಡುವುದು, ಕುಂದುಕೊರತೆಗಳ ನೋಂದಣಿ ಮತ್ತು ಟ್ರ್ಯಾಕಿಂಗ್, ನೋಂದಣಿ ಕೇಂದ್ರಗಳಿರುವ ಸ್ಥಳಗಳ ಬಗ್ಗೆ ಮಾಹಿತಿ ಪಡೆಯಬಹುದು.


Click it and Unblock the Notifications