ಅದಾನಿ ಗ್ರೂಪ್ ದೇಶದಲ್ಲೇ ಎರಡನೇ ಅತೀ ದೊಡ್ಡ ಸಂಸ್ಥೆಯಾಗಿದೆ. ಹಾಗೆಯೇ ಇದರ ಮುಖ್ಯಸ್ಥ ಗೌತಮ್ ಅದಾನಿ ವಿಶ್ವದಲ್ಲಿ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಆದರೆ ಅದಾನಿ ಗ್ರೂಪ್ ವಿರುದ್ಧ ಭಾರೀ ದೊಡ್ಡ ವಂಚನೆಯ ಆರೋಪ ಕೇಳಿಬಂದಿದೆ. ಹಿಂಡನ್‌ಬರ್ಗ್ ವರದಿ ಈ ಆರೋಪವನ್ನು ಮಾಡಿದೆ.
ಅಮೆರಿಕಾ ಮೂಲದ ಶಾರ್ಟ್ ಸೆಲ್ಲರ್ ಸಂಸ್ಥೆಯಾದ ಹಿಂಡನ್‌ಬರ್ಗ್ ಸಂಶೋಧನಾ ವರದಿಯು ಅದಾನಿ ಗ್ರೂಪ್ ವಂಚನೆ ಮಾಡಿದೆ ಮತ್ತು ಮಾರುಕಟ್ಟೆಯಲ್ಲಿಯೂ ವಂಚನೆ ಮಾಡಿದೆ ಎಂದು ಆರೋಪ ಮಾಡಿದೆ. ಈ ಆರೋಪವನ್ನು ನಿರ್ವಹಣೆ ಮಾಡಲು ಗೌತಮ್ ಅದಾನಿ ಅತೀ ದುಬಾರಿ ಕಾನೂನು ಸಂಸ್ಥೆಯನ್ನು ನೇಮಿಸಿದೆ.
ಈ ಬಗ್ಗೆ ಹಲವಾರು ಸಂಸ್ಥೆಗಳು ವರದಿ ಮಾಡಿದೆ. ಅದಾನಿ ಗ್ರೂಪ್ ಈ ದುಬಾರಿ ಕಾನೂನು ಸಂಸ್ಥೆಯಾದ ವಾಚ್‌ಟೆಲ್ ಅನ್ನು ನೇಮಿಸಿದೆ.ಕ್ರಿಲ್ ಅಮರ್‌ಚಂದ್ ಮಂಗಳದಾಸ್ ಸಂಸ್ಥೆಯು ವಾಚ್‌ಟೆಲ್ ಅನ್ನು ಸಂಪರ್ಕ ಮಾಡಿದೆ. ವರದಿ ಪ್ರಕಾರ ಗೌತಮ್ ಅದಾನಿಯ ಹಿರಿಯ ಪತ್ರ ಕ್ರಿಲ್ ಶ್ರಾಪ್ಸ್ ಪುತ್ರಿಯನ್ನು ವಿವಾಹವಾಗಿದ್ದಾರೆ. ಗೌತಮ್ ಅದಾನಿ ನೇಮಿಸಿದ ಕಾನೂನು ಸಂಸ್ಥೆ ವಾಚ್‌ಟೆಲ್ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ಸಂಸ್ಥೆಯ ಬಗ್ಗೆ ಮಾಹಿತಿ
ಸಣ್ಣ ಸಂಸ್ಥೆಯಾದ ನ್ಯೂಯಾರ್ಕ್ ಅಟ್ಟಾರ್ನೀಸ್ ವಾಚ್‌ಟೆಲ್ ಲಿಪ್‌ಟಾನ್ ಅನ್ನು 1965ರಲ್ಲಿ ಆರಂಭಿಸಿದೆ. ಮಾಜಿ ಎನ್‌ವೈಯು ಕ್ಲಾಸ್‌ಮೇಟ್‌ಗಳಾದ ಹೆರ್ಬ್ ವಾಚ್‌ಟೆಲ್, ಮಾರ್ಟಿನ್ ಲಿಪ್ಟಾನ್, ಲಿನಾರ್ಡ್ ರೋಸೆನ್, ಜಾರ್ಜ್ ಕಾಟ್ಜ್ ಈ ಸಂಸ್ಥೆಯನ್ನು ಸ್ಥಾಪಿಸಿದೆ. ಸಂಸ್ಥೆಯು ಕಾನೂನು ಸವಾಲುಗಳನ್ನು ನಿರ್ವಹಣೆ ಮಾಡುವಲ್ಲಿ ಹೆಸರುವಾಸಿಯಾಗಿದೆ. ವಾಚ್‌ಟೆಲ್ ಪ್ರಕಾರ ಈ ಸಂಸ್ಥೆಯು ಹಲವಾರು ಹೈ ಪ್ರೋಫೈಲ್ ಪ್ರಕರಣಗಳನ್ನು ನಿರ್ವಹಣೆ ಮಾಡಿದೆ. 9/11 ದಾಳಿ ಮತ್ತು ಯುಎಸ್ ಆರ್ಥಿಕ ಕುಸಿತವನ್ನು ನಿರ್ವಹಣೆ ಮಾಡಿದೆ ಎಂದು ತಿಳಿಸಿದೆ.
ಯಾವೆಲ್ಲ ಕಾನೂನು ನಿರ್ವಹಣೆ ಮಾಡಿದೆ?
ಈ ಸಂಸ್ಥೆಯು ನಿಗದಿತ ವಿಚಾರದಲ್ಲಿ ತಜ್ಞರಾಗಿದ್ದಾರೆ. ಕಾರ್ಪೋರೇಟ್ ಮತ್ತು ಸೆಕ್ಯೂರಿಟೀಸ್ ಕಾನೂನು, ವಿಲೀನ ಮತ್ತು ಸ್ವಾಧೀನ, ಹೂಡಿಕೆ, ಟೇಕ್ ಓವರ್ ಮತ್ತು ಟೇಕ್‌ಓವರ್ ಡಿಫೆನ್ಸ್, ಷೇರುದಾರರು ಮೊದಲಾದವುಗಳನ್ನು ನಿರ್ವಹಣೆ ಮಾಡುತ್ತದೆ. ಇದು ಕಾನೂನು ಮತ್ತು ವ್ಯವಹಾರದ ಮೇಲೆ ಮಹತ್ವದ ಪ್ರಭಾವ ಬೀರಿದ ಬೆಳವಣಿಗೆಗಳ ಅಭಿವೃದ್ಧಿಯ ಇತಿಹಾಸವನ್ನು ಹೊಂದಿದೆ. ಕಂಪನಿಯ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ವಾಚ್‌ಟೆಲ್ ಕಾನೂನು ಸಂಸ್ಥೆಯಲ್ಲಿ 500 ರಿಂದ 1,000 ಜನರು ಕೆಲಸ ಮಾಡುತ್ತಾರೆ.
ಎಲಾನ್ ಮಸ್ಕ್-ಟ್ವಿಟ್ಟರ್ ಡೀಲ್ ನಿರ್ವಹಿಸಿದ ಸಂಸ್ಥೆ
ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿ ಮಾಡುವುದಾಗಿ ಹೇಳಿದ್ದರು. ಆದರೆ ಬಳಿಕ ಹಿಂಜರಿದಿದ್ದರು, ಈ ಸಂದರ್ಭದಲ್ಲಿ ಈ 44 ಬಿಲಿಯನ್ ಡೀಲ್ ಅನ್ನು ನಡೆಸಲು ಟ್ವಿಟ್ಟರ್ ಸಂಸ್ಥೆಯು ವಾಚ್‌ಟೆಲ್ ಸಂಸ್ಥೆಯನ್ನು ನೇಮಿಸಿದೆ. ಎಲಾನ್ ಮಸ್ಕ್ ವಿರುದ್ಧ ದೂರು ದಾಖಲು ಮಾಡಿಸಿ ಈ ಡೀಲ್ ನಡೆಯುವಂತೆ ಮಾಡಿದ್ದಾರೆ. ಅದಕ್ಕೂ ಮುನ್ನ ವಾಚ್‌ಟೆಲ್ ಎಲಾನ್ ಮಸ್ಕ್‌ನ ಒಂದು ಪ್ರಕರಣದಲ್ಲಿ ಮಸ್ಕ್‌ನ ಸಂಸ್ಥೆಯಾದ ಟೆಸ್ಲಾ ಪರವಾಗಿ ನಿಂತಿತ್ತು. ಆದರೆ 2019ರಲ್ಲಿ ಈ ಪ್ರಕರಣವನ್ನು ವಾಚ್‌ಟೆಲ್ ಕೈಬಿಟ್ಟಿದೆ.
ಸಂಸ್ಥೆಗೆ ಲಭಿಸಿದ ಪ್ರಶಸ್ತಿಗಳು
ಲಿಂಗ ಸಮಾನತೆ ಮತ್ತು ಕುಟುಂಬ ಸ್ನೇಹತ್ವ ವರದಿಯ ಅಡಿಯಲ್ಲಿ ಯೇಲ್ ಲಾ ವುಮೆನ್ಸ್ ಟಾಪ್ ಫರ್ಮ್ಸ್ ಟಾಪ್ ಫರ್ಮ್ ಪ್ರಶಸ್ತಿ ಮತ್ತು ತರಬೇತಿ ಮತ್ತು ಮಾರ್ಗದರ್ಶನ ವಿಭಾಗದಲ್ಲಿ ವಾಚ್‌ಟೆಲ್‌ಗೆ ಪ್ರಶಸ್ತಿ ನೀಡಿದೆ. ಈ ಸಂಸ್ಥೆಯು 2020 ರಲ್ಲಿ ಉನ್ನತ ಸಂಸ್ಥೆಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ. ಇದು 2018 ರಲ್ಲಿ ನಾಯಕತ್ವ ಮತ್ತು ಪ್ರಚಾರ ವರ್ಗದಲ್ಲಿ ಪ್ರಶಸ್ತಿಯನ್ನು ಗಳಿಸಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications