ಜನರು ಹೆಚ್ಚಾಗಿ ಹೂಡಿಕೆ ಮಾಡುವ ಅಮೂಲ್ಯವಾದ ವಸ್ತುವೆಂದರೆ ಚಿನ್ನ. ಚಿನ್ನದ ಮೇಲೆ ಮಾಡಿದ ಹೂಡಿಕೆ ಎಂದಿಗೂ ಸುರಕ್ಷಿತ ಹಾಗೂ ಅಧಿಕ ಲಾಭಯುತ ಎಂಬುವುದೇ ಜನರು ಅಧಿಕವಾಗಿ ಚಿನ್ನವನ್ನು ಖರೀದಿ ಮಾಡಲು ಕಾರಣವಾಗಿದೆ. ಅದರಲ್ಲೂ ಮುಖ್ಯವಾಗಿ ಈ ಹಬ್ಬದ ಸೀಸನ್‌ಗಳಲ್ಲಿ ಹೆಚ್ಚಾಗಿ ಚಿನ್ನ ಖರೀದಿ ಮಾಡಲಾಗುತ್ತದೆ. ಅದಕ್ಕೆ ಮುಖ್ಯ ಕಾರಣ ಹಬ್ಬದ ಸೀಸನ್‌ನಲ್ಲಿ ನೀಡಲಾಗುವ ಆಫರ್ ಹಾಗೂ ಅಕ್ಷಯ ತೃತೀಯವಾಗಿದೆ.
ಹಬ್ಬದ ಸೀಸನ್‌ನಲ್ಲಿ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಚಿನ್ನಕ್ಕೆ ಅಧಿಕ ಮೌಲ್ಯವನ್ನು ನೀಡಲಾಗುತ್ತದೆ. ವಿಶ್ವದಲ್ಲಿ ಬೇರೆ ಬೇರೆ ದೇಶಗಳಲ್ಲಿ ಹಳದಿ ಲೋಹಕ್ಕೆ ಅದರದ್ದೆ ಆದ ಮೌಲ್ಯವಿದೆ. ಯಾವುದೇ ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿ ಮಾಡುವುದು ಮನೆಯಲ್ಲಿ ಸಮೃದ್ಧಿ ತರುತ್ತದೆ ಎಂಬ ನಂಬಿಕೆಯಾಗಿದೆ. ಹಾಗೆಯೇ ಸಾಮಾನ್ಯವಾಗಿಯೇ ಹಬ್ಬದ ಸೀಸನ್‌ನ್ಲಲಿ ಚಿನ್ನದ ಬೇಡಿಕೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತದೆ.

ಹಬ್ಬದ ಸೀಸನ್‌ನಲ್ಲಿ ಪ್ರಮುಖವಾಗಿ ಅಕ್ಷಯ ತೃತೀಯ ದಿನದಂದು ಚಿನ್ನದ ದರವು ಏರಿಳಿತವಾಗುತ್ತದೆ. ಪ್ರಮುಖವಾಗಿ ಹಬ್ಬ ಮತ್ತು ವಿವಾಹವದ ಸೀಸನ್ ಬಂದಾಗ, ಜನರು ಅದೃಷ್ಟ, ಸಂಪತ್ತು ವೃದ್ಧಿ ಪ್ರತೀಕವಾಗಿ ಚಿನ್ನವನ್ನು ಖರೀದಿ ಮಾಡುತ್ತಾರೆ. ಚಿನ್ನದ ಬೇಡಿಕೆ ಹೆಚ್ಚಾದಂತೆ ಚಿನ್ನದ ದರವು ಕೂಡಾ ಏರಿಕೆಯಾಗುತ್ತಿದೆ. ಅಷ್ಟಕ್ಕೂ ಈ ದರ ಏರಿಕೆ ಭಾರತದಲ್ಲಿ ಮಾತ್ರವಲ್ಲ ವಿಶ್ವದ ಹಲವಾರು ದೇಶಗಳಲ್ಲಿ ನಡೆಯುತ್ತದೆ. ಚಿನ್ನವು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.
ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುವ ಬೇಡಿಕೆ
ಸಾಮಾನ್ಯವಾಗಿ ನಾವು ಜಾಗತಿಕ ಚಿನ್ನದ ಮಾರುಕಟ್ಟೆಯನ್ನು ನೋಡಿದಾಗ ಸರಬರಾಜು ಹಾಗೂ ಬೇಡಿಕೆಯು ಪ್ರಮುಖವಾಗಿ ಚಿನ್ನದ ಬೆಲೆಯ ಮೇಲೆ ಪ್ರಭಾವ ಉಂಟು ಮಾಡುತ್ತದೆ. ಚಿನ್ನದ ಬೆಲೆ ಏರಿಕೆ, ಇಳಿಕೆಗೆ ಜಾಗತಿಕವಾಗಿ ನಡೆಯುವ ಎಲ್ಲ ಅಂಶಗಳು ಕೂಡಾ ಪ್ರಭಾವ ಬೀರುತ್ತದೆ. ಬಡ್ಡಿದರ ಬದಲಾವಣೆ, ಸಾಮಾಜಿಕ ರಾಜಕೀಯ ಬೆಳವಣಿಗೆಗಳು, ಆರ್ಥಿಕ ಸ್ಥಿತಿಯು ಚಿನ್ನದ ಬೆಲೆಯ ಮೇಲೆ ಪರಣಾಮ ಉಂಟು ಮಾಡುತ್ತದೆ.
ಅನಿರೀಕ್ಷಿತವಾಗಿ ಚಿನ್ನದ ಬೇಡಿಕೆ ಹೆಚ್ಚಾದಾಗ ಅಥವಾ ಚಿನ್ನದ ಸರಬರಾಜಿನಲ್ಲಿ ವ್ಯತ್ಯಯವಾದಾಗ ಚಿನ್ನದ ಬೆಲೆಯು ಏರಿಕೆಯಾಗುತ್ತದೆ. ಇನ್ನು ರಜಾ ಸೀಸನ್ ಕೂಡಾ ಹೂಡಿಕೆದಾರರು ಮತ್ತು ಟ್ರೇಡರ್‌ಗಳ ಮೇಲೆ ಪ್ರಭಾವ ಬೀರುತ್ತದೆ. ಚಿನ್ನದ ಮಾರುಕಟ್ಟೆಯ ಮೇಲೆ ಹೂಡಿಕೆದಾರರು ಮಾಡುವ ಹೂಡಿಕೆಯ ಮೇಲೆ ಎಂದಿಗೂ ಕೂಡಾ ಚಿನ್ನದ ಬೆಲೆಯು ಪ್ರಭಾವ ಬೀರುತ್ತದೆ.
ಈ ರಜಾ ಸೀಸನ್ ಅಥವಾ ಹಬ್ಬದ ಸೀಸನ್‌ನಲ್ಲಿ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾದಾಗ ಸಾಮಾನ್ಯವಾಗಿ ಹೂಡಿಕೆದಾರರು ತಮ್ಮ ಚಿನ್ನವನ್ನು ಮಾರಾಟ ಮಾಡುತ್ತಾರೆ. ಇನ್ನು ಚಿನ್ನದ ದರದ ಮೇಲೆ ಹೇಗೆ ಜಾಗತಿಕ, ಆರ್ಥಿಕ ಸ್ಥಿತಿಗಳು ಪ್ರಭಾವ ಉಂಟು ಮಾಡುತ್ತದೆಯೋ ಹಾಗೆಯೇ ಚಿನ್ನದ ದರದ ಮೇಲೆ ಹೂಡಿಕೆದಾರರ ನಿರ್ಧಾರಗಳು ಪರಿಣಾಮ ಬೀರುತ್ತದೆ.
ಅಕ್ಷಯ ತೃತೀಯ ದಿನವೇ ಚಿನ್ನ ಖರೀದಿ ಮಾಡುವುದೇಕೆ?
ಪ್ರಮುಖವಾಗಿ ಧಾರ್ಮಿಕ ನಂಬಿಕೆಯಿಂದಾಗಿ ಅಕ್ಷಯ ತೃತೀಯ ದಿನ ಚಿನ್ನವನ್ನು ಖರೀದಿ ಮಾಡಲಾಗುತ್ತದೆ. ಹಿಂದೂ ಪುರಾಣ ಹಾಗೂ ಸಂಸ್ಕೃತಿ ಪ್ರಕಾರ ಚಿನ್ನ ಅತೀ ಪವಿತ್ರವಾದ ಲೋಹವಾಗಿದೆ. ಅಕ್ಷಯ ತೃತೀಯ ದಿನ ಚಿನ್ನವನ್ನು ಖರೀದಿ ಮಾಡಿದರೆ ದೇವಿ ಲಕ್ಷ್ಮೀಯ ಕೃಪಕಟಾಕ್ಷ ನಮ್ಮಲ್ಲಿ ಇರಲಿದೆ ಎಂಬ ನಂಬಿಕೆಯಿದೆ. ಸಾಂಪ್ರದಾಯಿಕವಾಗಿ ಶ್ರೀಮಂತಿಕೆ ಹಾಗೂ ಯಶಸ್ವಿಯ ಪ್ರತೀಕವೇ ಮೌಲ್ಯಯುತ ಲೋಹವಾದ ಚಿನ್ನವಾಗಿದೆ.


Click it and Unblock the Notifications