ಹಿಂದೂ ಕ್ಯಾಲೆಂಡರ್‌ನಲ್ಲಿ ಹಲವಾರು ಪವಿತ್ರ ದಿನಗಳಲ್ಲಿ ಅಕ್ಷಯ ತೃತೀಯ ಕೂಡಾ ಒಂದಾಗಿದೆ. ಅಕ್ಷಯ ತೃತೀಯವನ್ನು ಅಖಾ ತೀಜ್ ಎಂದು ಕೂಡಾ ಕರೆಯಲಾಗುತ್ತದೆ. ಹಿಂದೂಗಳ ಅತೀ ಪವಿತ್ರ ದಿನವಾದ ಅಕ್ಷಯ ತೃತೀಯ ಸಾಮಾನ್ಯವಾಗಗಿ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಬರುತ್ತದೆ. ಅಕ್ಷಯ ತೃತೀಯ ದಿನ ನಾವು ಯಾವುದೇ ಹೂಡಿಕೆಯನ್ನು ಮಾಡಿದರೆ ಅಥವಾ ಖರೀದಿಯನ್ನು ಮಾಡಿದರೆ, ಅದು ನಮ್ಮ ಸಂಪತ್ತು ವೃದ್ದಿಸುತ್ತದೆ, ಅದೃಷ್ಟ ತರುತ್ತದೆ ಎಂಬ ನಂಬಿಕೆಯಿದೆ.
ಸಂಪತ್ತು ಹಾಗೂ ಸಮೃದ್ಧಿ ವೃದ್ಧಿಯಾಗುತ್ತದೆ ಎಂಬ ನಂಬಿಕೆಯನ್ನು ಹೊಂದಿರುವ ಜನರು ಅಕ್ಷಯ ತೃತೀಯ ದಿನವೇ ಸಾಮಾನ್ಯವಾಗಿ ಚಿನ್ನವನ್ನು ಖರೀದಿ ಮಾಡುವುದು ಪ್ರತೀತಿಯಾಗಿದೆ. ಈ ದಿನದಂದು ಹೆಚ್ಚಾಗಿ ಚಿನ್ನವನ್ನು ಖರೀದಿ ಮಾಡಲಾಗುತ್ತದೆ. ಹಾಗೆಯೇ ಈ ದಿನವೇ ರಮಾದಾನ್ ಕೂಡಾ ಇದೆ. ಆದ್ದರಿಂದ ಚಿನ್ನ ಖರೀದಿ ಭರ್ಜರಿಯಾಗಿ ನಡೆಯುವ ಸಾಧ್ಯತೆ, ನಿರೀಕ್ಷೆಯಿದೆ. ಆದರೆ ಅಕ್ಷಯ ತೃತೀಯ ದಿನ ನಾವು ಚಿನ್ನವನ್ನು ಖರೀದಿ ಮಾಡುವುದರಿಂದ ಏನೆಲ್ಲ ಲಾಭವಿದೆ, ಏನೆಲ್ಲ ನಷ್ಟವಿದೆ ಎಂಬ ಬಗ್ಗೆ ನಾವಿಲ್ಲಿ ವಿವರಿಸಿದ್ದೇವೆ ಮುಂದೆ ಓದಿ...

ಅಕ್ಷಯ ತೃತೀಯ ದಿನ ಚಿನ್ನ ಖರೀದಿಯ ಪ್ರಯೋಜನ
ರಿಯಾಯಿತಿ ಹಾಗೂ ಆಫರ್: ಅಕ್ಷಯ ತೃತೀಯ ದಿನದಂದು ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಜ್ಯುವೆಲ್ಲರಿ ಮಳಿಗೆಗಳು ಹಲವಾರು ರಿಯಾಯಿತಿ ಹಾಗೂ ಆಫರ್‌ಗಳನ್ನು ನೀಡುತ್ತದೆ. ಅಕ್ಷಯ ತೃತೀಯ ದಿನ ನಾವು ಚಿನ್ನವನ್ನು ಖರೀದಿ ಮಾಡುವುದರಿಂದ ಚಿನ್ನದ ಕಾಯಿನ್ ಅನ್ನು ಪಡೆಯುವ ಆಫರ್ ಲಭ್ಯವಾಗಬಹುದು. ಜ್ಯುವೆಲ್ಲರಿಯನ್ನು ರಿಯಾಯಿತಿ ದರದಲ್ಲಿ ಪಡೆಯಲು ಸಾಧ್ಯವಾಗುತ್ತದೆ.
ಪವಿತ್ರ ದಿನವೆಂಬ ನಂಬಿಕೆ: ಅಕ್ಷಯ ತೃತೀಯ ದಿನ ಚಿನ್ನವನ್ನು ಖರೀದಿ ಮಾಡುವುದನ್ನು ಅದೃಷ್ಟವನ್ನು ತರುತ್ತದೆ ಎಂಬ ನಂಬಿಕೆಯಿದೆ. ಹಾಗೆಯೇ ಪವಿತ್ರ ದಿನವಾದ ಕಾರಣ ಶ್ರೀಮಂತಿಕೆ ತರುತ್ತದೆ ಎಂಬ ನಂಬಿಕೆಯಿದೆ. ಹಾಗೆಯೇ ಅಕ್ಷಯ ತೃತೀಯ ದಿನ ವಿವಾಹ, ಇತರೆ ಸಮಾರಂಭಗಳಿಗೆ ಚಿನ್ನವನ್ನು ಖರೀದಿ ಮಾಡಲಾಗುತ್ತದೆ. ಚಿನ್ನದ ಆಭರಣಗಳನ್ನು ಖರೀದಿ ಮಾಡಲಾಗುತ್ತದೆ.
ಹೂಡಿಕೆಗೆ ಉತ್ತಮ ಸಮಯ: ಅಕ್ಷಯ ತೃತೀಯ ದಿನದಂದು ಚಿನ್ನದ ಮೇಲೆ ಹೂಡಿಕೆ ಅಥವಾ ಚಿನ್ನವನ್ನು ಖರೀದಿ ಮಾಡುವುದು ಅತೀ ಉತ್ತಮವಾದ ನಿರ್ಧಾರವಾಗಿದೆ. ಚಿನ್ನ ಎಂದಿಗೂ ಕೂಡಾ ಸುರಕ್ಷಿತ ಹೂಡಿಕೆ ಎಂದೇ ಪರಿಗಣಿಸಲಾಗುತ್ತದೆ. ಹಾಗೆಯೇ ಸುರಕ್ಷಿತ ಹೂಡಿಕೆ ಆಯ್ಕೆ ಇದಾಗಿದೆ. ಈ ದಿನದಂದು ನೀವು ಚಿನ್ನವನ್ನು ಖರೀದಿ ಮಾಡುವುದರಿಂದ ನಿಮಗೆ ಅಧಿಕ ಲಾಭ ಲಭ್ಯವಾಗಲಿದೆ. ಯಾಕೆಂದರೆ ಇಂದು ಅಧಿಕ ಆಫರ್ ರಿಯಾಯಿತಿ ಇದೆ.
ಅಕ್ಷಯ ತೃತೀಯ ದಿನ ಚಿನ್ನ ಖರೀದಿಯ ನಷ್ಟ
ಬೇಡಿಕೆ ಅಧಿಕ: ಸಾಮಾನ್ಯವಾಗಿ ಅಕ್ಷಯ ತೃತೀಯ ದಿನ ಚಿನ್ನದ ನಾಣ್ಯ ಹಾಗೂ ಜ್ಯುವೆಲ್ಲರಿಗಳಿಗೆ ಅಧಿಕ ಬೇಡಿಕೆ ಇರುತ್ತದೆ. ಅದಕ್ಕೆ ಮುಖ್ಯ ಕಾರಣ ಅಕ್ಷಯ ತೃತೀಯ ದಿನ ಚಿನ್ನ ಖರೀದಿ ಪವಿತ್ರ ಎಂಬ ನಂಬಿಕೆಯಾಗಿದೆ. ಬೇಡಿಕೆ ಹೆಚ್ಚಾದಂತೆ ಜ್ಯುವೆಲ್ಲರಿ ಮಳಿಗೆಗಳಲ್ಲಿ ಜನಜಂಗುಳಿ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ನಿಮಗೆ ಸರಿಯಾಗಿ ಜ್ಯುವೆಲ್ಲರಿಯನ್ನು ಆಯ್ಕೆ ಮಾಡಿ ಖರೀದಿ ಮಾಡಲು ಸಾಧ್ಯವಾಗದೆ ಇರಬಹುದು.
ದರ ಬದಲಾವಣೆ: ನೀವು ಅಕ್ಷಯ ತೃತೀಯ ದಿನ ಚಿನ್ನವನ್ನು ಖರೀದಿ ಮಾಡುತ್ತಿದ್ದರೆ ಆ ದಿನ ಚಿನ್ನದ ಬೆಲೆ ಅತೀ ಕಡಿಮೆಯಾಗಿರುತ್ತದೆ ಎಂಬ ಅರ್ಥವೇನಲ್ಲ. ಯಾಕೆಂದರೆ ಆ ದಿನವೂ ಕೂಡಾ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಳಿತವಾಗುತ್ತದೆ. ಅಕ್ಷಯ ತೃತೀಯ ದಿನ ಚಿನ್ನ ಖರೀದಿ ಮಾಡುವುದಕ್ಕೂ ಮುನ್ನ ನೀವು ಎಲ್ಲಿ ಚಿನ್ನದ ಬೆಲೆ ರಿಯಾಯಿತಿ, ಆಫರ್ ಬಳಿಕ ಕಡಿಮೆಯಾಗಿದೆ ಎಂಬುವುದನ್ನು ನೋಡಬೇಕಾಗುತ್ತದೆ.
ಹಠಾತ್ ಚಿನ್ನ ಖರೀದಿ: ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿ ಮಾಡಿದರೆ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆಯಿದೆ. ಇದರಿಂದಾಗಿ ಜನರು ದಿಡೀರ್ ಆಗಿ, ಚಿನ್ನವನ್ನು ಖರೀದಿ ಮಾಡಲು ಮುಂದಾಗುತ್ತಾರೆ. ಇದರಿಂದಾಗಿ ಅತೀಯಾದ ಖರ್ಚಾಗಿ ನೀವು ಸಾಲದ ಹೊರೆಗೆ ಬೀಳಬಹುದು.


Click it and Unblock the Notifications