ಅಕ್ಷಯ ತೃತೀಯವು ಜನಪ್ರಿಯವಾದ ಹಿಂದೂ ಹಬ್ಬವಾಗಿದೆ. ಈ ದಿನದಂದು ಹಿಂದೂಗಳು ಹಾಗೂ ಜೈನರು ಚಿನ್ನವನ್ನು ಹೆಚ್ಚಾಗಿ ಖರೀದಿ ಮಾಡುತ್ತಾರೆ ಎಂಬ ವಿಚಾರದಲ್ಲೇ ಈ ದಿನವು ಅಧಿಕವಾಗಿ ಸುದ್ದಿಯಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ವೈಶಾಖ ತಿಂಗಳ ಮೂರನೇ ದಿನವೇ ಅಕ್ಷಯ ತೃತೀಯ ದಿನವಾಗಿದೆ. ಇನ್ನು ಸಾಮಾನ್ಯವಾಗಿ ಅಕ್ಷಯ ಎಂಬ ಪದವೇ ನಮಗೆ ಅರ್ಥವನ್ನು ಹೇಳುತ್ತದೆ. ಅಕ್ಷಯ ಎಂದರೆ ಎಂದಿಗೂ ಖಾಲಿಯಾಗದ್ದು ಎಂದರ್ಥವಾಗಿದೆ.
ಅಕ್ಷಯ ಎಂದರೇ ಶಾಶ್ವತ ಎಂದಾದರೆ ತೃತೀಯ ಎಂದರೆ ಮೂರು ಎಂದು ಅರ್ಥವಾಗಿದೆ. ಅಕ್ಷಯ ತೃತೀಯವು ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ವಿಶ್ವದಾದ್ಯಂತ ಯಾವುದೇ ದೇಶದಲ್ಲಿದ್ದರೂ ಕೂಡಾ ಹಿಂದೂಗಳು ಹಾಗೂ ಜೈನರು ಈ ಹಬ್ಬವನ್ನು ಆಚರಣೆಯ ಭಾಗವಾಗಿ ಚಿನ್ನವನ್ನು ಖರೀದಿ ಮಾಡುವುದು ಒಂದು ಪ್ರತೀತಿಯಾಗಿದೆ. ಈ ದಿನದಂದು ಚಿನ್ನವನ್ನು ಖರೀದಿ ಮಾಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.

ಇತ್ತೀಚಿನ ವರ್ಷಗಳಲ್ಲಿ ಬರೀ ಚಿನ್ನವನ್ನು ಖರೀದಿ ಮಾಡುವ ಮೂಲಕವೇ ಅಕ್ಷಯ ತೃತೀಯ ಹಬ್ಬ ಆಚರಣೆ ಮಾಡಲಾಗುತ್ತದೆ ಎಂಬ ಅಪನಂಬಿಕೆ ಜನರಲ್ಲಿದೆ. ಅಕ್ಷಯ ತೃತೀಯದ ಎಲ್ಲ ಆಚರಣೆಗಳನ್ನು ಜನರು ಮರೆತಿದ್ದಾರೆ ಅಥವಾ ಈ ದಿನ ಮಾಡಲಾಗುವ ಆಚರಣೆಗಳನ್ನು ಜನರು ಮಾಡುತ್ತಿಲ್ಲ. ಬದಲಾಗಿ ಬರೀ ಚಿನ್ನ ಖರೀದಿಯೇ ಅಕ್ಷಯ ತೃತೀಯ ಆಚರಣೆ ಎಂಬ ನಂಬಿಕೆಗೆ ಅಂಟಿಕೊಂಡಿದ್ದಾರೆ.
ಆದರೆ ಸಾಮಾನ್ಯವಾಗಿ ಅಕ್ಷಯ ತೃತೀಯ ಆಚರಣೆಗೆ ಬೇರೆ ಬೇರೆ ದಾರಿಗಳು ಇದೆ. ಚಿನ್ನವನ್ನು ಖರೀದಿ ಮಾಡುವುದು ಹೂಡಿಕೆಯ ಒಂದು ಭಾಗವಾಗಿದೆ. ಆದರೆ ಕೆಲವೊಬ್ಬರಿಗೆ ಇದನ್ನು ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಬೇರೆ ವಿಧಾನವು ಕೂಡಾ ಇದೆ. ನೀವು ಚಿನ್ನ ಖರೀದಿ ಮಾಡದೆಯೇ ಅಕ್ಷಯ ತೃತೀಯವನ್ನು ಹೇಗೆ ಆಚರಣೆ ಮಾಡುವುದು ಎಂಬುವುದು ಇಲ್ಲಿದೆ ವಿವರ ಮುಂದೆ ಓದಿ...
ಧಾರ್ಮಿಕ ಆಚರಣೆಯನ್ನು ಮಾಡಿ
ಅಕ್ಷಯ ತೃತೀಯ ಎಂಬವುದು ಒಂದು ಧಾರ್ಮಿಕ ಆಚರಣೆಯಾಗಿದೆ. ನೀವು ಮನೆಯಲ್ಲಿ ಅಥವಾ ಪೂಜಾ ಸ್ಥಳದಲ್ಲಿ ಸಾಂಪ್ರದಾಯಿಕ ಆಚರಣೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಈ ದಿನವನ್ನು ಆಚರಣೆ ಮಾಡಬಹುದಾಗಿದೆ. ನಿಮ್ಮ ಧಾರ್ಮಿಕ ನಂಬಿಕೆಗಳನ್ನು ಅವಲಂಬಿಸಿ, ನೀವು ಆಚರಣೆಯನ್ನು ಮಾಡಬಹುದಾಗಿದೆ. ದೀಪ ಬೆಳಗಿಸುವುದು, ಮಂತ್ರ ಪಠಿಸುವುದು, ಇತರೆ ಧಾರ್ಮಿಕ ಆಚರಣೆಗಳಲ್ಲಿ ನೀವು ತೊಡಗಬಹುದು.
ಆಹಾರವನ್ನು ದಾನ ಮಾಡಿ
ಹಸಿದವರಿಗೆ ಆಹಾರ ನೀಡುವುದು, ಮನೆ ಇಲ್ಲದವರಿಗೆ ಆಹಾರ ನೀಡುವುದು, ಪ್ರಾಣಿ- ಪಕ್ಷಿಗಳಿಗೆ ಆಹಾರವನ್ನು ನೀಡುವುದು ಕೂಡಾ ಅಕ್ಷಯ ತೃತೀಯ ದಿನ ನಾವು ಚಿನ್ನ ಖರೀದಿ ಬದಲಾಗಿ ಮಾಡಬಹುದಾದ ಆಚರಣೆಗಳು ಆಗಿದೆ. ಈ ರೀತಿ ಆಹಾರ ದಾನ ಮಾಡುವುದು ನಿಮ್ಮ ಮನಸ್ಸಿಗೂ ನೆಮ್ಮದಿಯನ್ನು ನೀಡುತ್ತದೆ. ಹಸಿದವರಿಗೆ ಆಹಾರ ನೀಡುವುದು ಎಂದಿಗೂ ಕೂಡಾ ಉತ್ತಮ ಕಾರ್ಯ.
ವಿವಾಹ: ಅಕ್ಷಯ ತೃತೀಯವನ್ನು ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಲಾಭದಾಯಕ ಮತ್ತು ಸೂಕ್ತವಾದ ಅವಧಿ ಎಂದು ಪರಿಗಣಿಸಲ್ಪಟ್ಟಿದೆ. ಈ ದಿನದಂದು ವಿವಾಹವಾದಾಗ ಹೊಸ ಜೀವನವನ್ನು ಆರಂಭಿಸುವುದಕ್ಕೆ ಅಕ್ಷಯ ತೃತೀಯ ದಿನ ಸೂಕ್ತ ಎಂಬ ನಂಬಿಕೆಯಿದೆ.
ಅಕ್ಷಯ ತೃತೀಯ ದಿನವೇ ಚಿನ್ನ ಖರೀದಿ ಮಾಡುವುದೇಕೆ?
ಪ್ರಮುಖವಾಗಿ ಧಾರ್ಮಿಕ ನಂಬಿಕೆಯಿಂದಾಗಿ ಅಕ್ಷಯ ತೃತೀಯ ದಿನ ಚಿನ್ನವನ್ನು ಖರೀದಿ ಮಾಡಲಾಗುತ್ತದೆ. ಹಿಂದೂ ಪುರಾಣ ಹಾಗೂ ಸಂಸ್ಕೃತಿ ಪ್ರಕಾರ ಚಿನ್ನ ಅತೀ ಪವಿತ್ರವಾದ ಲೋಹವಾಗಿದೆ. ಅಕ್ಷಯ ತೃತೀಯ ದಿನ ಚಿನ್ನವನ್ನು ಖರೀದಿ ಮಾಡಿದರೆ ದೇವಿ ಲಕ್ಷ್ಮೀಯ ಕೃಪಕಟಾಕ್ಷ ನಮ್ಮಲ್ಲಿ ಇರಲಿದೆ ಎಂಬ ನಂಬಿಕೆಯಿದೆ. ಸಾಂಪ್ರದಾಯಿಕವಾಗಿ ಶ್ರೀಮಂತಿಕೆ ಹಾಗೂ ಯಶಸ್ವಿಯ ಪ್ರತೀಕವೇ ಮೌಲ್ಯಯುತ ಲೋಹವಾದ ಚಿನ್ನವಾಗಿದೆ.


Click it and Unblock the Notifications