ಏಷ್ಯಾದ, ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಬಿಲಿಯನೇರ್ ಮುಕೇಶ್ ಅಂಬಾನಿ ಇದೀಗ ತಮ್ಮ ಮುಂದಿನ ದೊಡ್ಡ ಯೋಜನೆಯನ್ನು ದೇಶದಲ್ಲಿ ಪ್ರಾರಂಭಿಸುವ ಹಾದಿಯಲ್ಲಿದ್ದಾರೆ. ಭಾರತದ ಅತಿದೊಡ್ಡ ಐಷಾರಾಮಿ ಮಾಲ್ ಮೂಲಕ ಸೆಲೆಕ್ಟ್ ಸಿಟಿವಾಕ್ ಮತ್ತು ಡಿಎಲ್‌ಎಫ್ ಎಂಪೋರಿಯೊವನ್ನು ಹಿಂದಿಕ್ಕಲು ಸಿದ್ಧವಾಗಿದ್ದಾರೆ.
ಮುಕೇಶ್ ಅಂಬಾನಿಯ ಈ ಹೊಸ ಮಾಲ್ ಅನ್ನು ಜಿಯೋ ವರ್ಲ್ಡ್ ಪ್ಲಾಜಾ ಎಂದು ಕರೆಯಲಾಗುವುದು. ಜಿಯೋ ವರ್ಲ್ಡ್ ಪ್ಲಾಜಾ ಮುಂಬೈನ ಐಷಾರಾಮಿ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ಪ್ರದೇಶದಲ್ಲಿದೆ. ಇದು ರಿಲಯನ್ಸ್ ಮತ್ತು ಅಂಬಾನಿ ಕುಟುಂಬದ ಪ್ರಾಬಲ್ಯ ಹೊಂದಿರುವ ನಗರ ಅಭಿವೃದ್ಧಿ ಸ್ಥಳವಾಗಿದೆ.

ಮಾಲ್ ಇಂಡಸ್ಟ್ರೀಯಲ್ಲಿ ಅಧಿಪತ್ಯ ಸ್ಥಾಪಿಸಲು ಸಜ್ಜು
ಅಂಬಾನಿ ಮತ್ತು ರಿಲಯನ್ಸ್ ಸಂಸ್ಥೆಯು ಈಗಾಗಲೇ ಈ ಪ್ರದೇಶದಲ್ಲಿ ಜಿಯೋ ವರ್ಲ್ಡ್ ಡ್ರೈವ್ ಮತ್ತು ಸೆಂಟರ್ ಅನ್ನು ಸ್ಥಾಪಿಸಿದ್ದಾರೆ. ಈಗ ಈ ಪ್ರದೇಶದಲ್ಲಿಯೇ ದುಬಾರಿ ಮಾಲ್ ಸ್ಥಾಪಿಸಲಿದ್ದಾರೆ. ಈಗ ಮುಕೇಶ್ ಅಂಬಾನಿ ತಮ್ಮ ಮೆಗಾ-ಮಾಲ್ ಜಿಯೋ ವರ್ಲ್ಡ್ ಪ್ಲಾಜಾ ಮೂಲಕ ಭಾರತದಲ್ಲಿ 5 ಬಿಲಿಯನ್ ಡಾಲರ್‌ನ ರಿಟೇಲ್ ಉದ್ಯಮದಲ್ಲಿ ಅಧಿಪತ್ಯ ಸ್ಥಾಪಿಸಲು ಮುಂದಾಗಿದ್ದಾರೆ.
ಮಾಲ್ ಹೇಗಿರಲಿದೆ?
ಈ ಐಷಾರಾಮಿ ಮಾಲ್‌ನಲ್ಲಿ ನೂರಾರು ಅಂತರಾಷ್ಟ್ರೀಯ ಐಷಾರಾಮಿ ಮಳಿಗೆಗಳು ಇರಲಿದೆ. ಇನ್ನು ಈ ಮಾಲ್ ಮೂಲಕವೇ ಕೆಲವು ಅಂತರಾಷ್ಟ್ರೀಯ ಬ್ರ್ಯಾಂಡ್‌ಗಳು ಮೊದಲ ಬಾರಿಗೆ ಭಾರತದಲ್ಲಿ ತಮ್ಮ ವ್ಯಾಪಾರವನ್ನು ಆರಂಭ ಮಾಡಲಿದ್ದಾರೆ. ಈ ಮಾಲ್ ತೆರೆಯುವ ನಿಖರವಾದ ದಿನಾಂಕ ಬಹಿರಂಗವಾಗಿಲ್ಲ.
ಆದರೆ ಭಾರತದಲ್ಲಿ ಹಬ್ಬದ ಸೀಸನ್‌ಗಳ ಮಧ್ಯದಲ್ಲಿ 2023 ರ ಅಂತ್ಯದ ವೇಳೆಗೆ ಅಥವಾ 2024 ರ ಮೊದಲ ಒಂದೆರಡು ತಿಂಗಳುಗಳಲ್ಲಿ ಜಿಯೋ ವರ್ಲ್ಡ್ ಪ್ಲಾಜಾ ಐಷಾರಾಮಿ ಮಾಲ್ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ. ಜಿಯೋ ವರ್ಲ್ಡ್ ಪ್ಲಾಜಾ ಭಾರತದ ಅತ್ಯಂತ ದುಬಾರಿ ಮಾಲ್ ಆಗಲಿದೆ ಎಂದು ವರದಿ ಹೇಳಿದೆ.
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಬರ್ನಾರ್ಡ್ ಅರ್ನಾಲ್ಟ್ ಒಡೆತನದ ಬ್ರಾಂಡ್ ಲೂಯಿ ವಿಟಾನ್, ಮುಕೇಶ್ ಅಂಬಾನಿಯ ಮೆಗಾ-ಮಾಲ್‌ನಲ್ಲಿ ತನ್ನ ಮಳಿಗೆಯನ್ನು ತೆರೆಯಲು ಸಿದ್ಧವಾಗಿದೆ. ತಿಂಗಳಿಗೆ 40 ಲಕ್ಷ ರೂಪಾಯಿಗಳನ್ನು ಬಾಡಿಗೆಯಾಗಿ ಪಾವತಿ ಮಾಡಲಿದೆ. ಜಿಯೋ ವರ್ಲ್ಡ್ ಪ್ಲಾಜಾ ಇಲ್ಲಿಯವರೆಗೆ ಭಾರತದ ಅತಿದೊಡ್ಡ ಎಲ್‌ವಿಎಂಎಚ್ ಸ್ಟೋರ್ ಅನ್ನು ಹೊಂದಿರುತ್ತದೆ.
ಇದಲ್ಲದೆ, ಐಷಾರಾಮಿ ಬ್ರಾಂಡ್ ಡಿಯೊರ್ ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ಒಂದು ಮಳಿಗೆಯನ್ನು ಬಾಡಿಗೆಗೆ ತೆಗೆದುಕೊಂಡಿದೆ. ತಿಂಗಳಿಗೆ 21 ಲಕ್ಷ ರೂಪಾಯಿ ಬಾಡಿಗೆಯನ್ನು ಪಾವತಿಸಲಿದೆ. ಹಾಗೆಯೇ 1.39 ಕೋಟಿ ರೂಪಾಯಿ ಸೆಕ್ಯೂರಿಟಿ ಡೆಪಾಸಿಟ್ ಆಗಿ ಪಾವತಿಸಲು ನಿರ್ಧರಿಸಿದೆ.
ಆದಾಗ್ಯೂ, ಡಿಯೊರ್ ಮತ್ತು ಎಲ್ವಿ ಹೊಸ ಅಂಬಾನಿ ಮಾಲ್‌ನಲ್ಲಿ ಐಷಾರಾಮಿ ಬ್ರಾಂಡ್‌ಗಳನ್ನು ಆರಂಭ ಮಾಡಲಿದೆ. ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ಲೂಯಿ ವಿಟಾನ್, ಗುಸ್ಸಿ, ಕಾರ್ಟಿಯರ್, ಬರ್ಬೆರಿ, ಬಲ್ಗರಿ, ಡಿಯರ್, ಐಡಬ್ಲ್ಯೂಸಿ ಶಾಫ್‌ಹೌಸೆನ್, ರಿಮೋವಾ, ರಿಚೆಮಾಂಟ್, ಕೆರಿಂಗ್ ಮೊದಲಾದ ಬ್ರ್ಯಾಂಡ್‌ಗಳನ್ನು ಆರಂಭ ಮಾಡಲಾಗುತ್ತದೆ.


Click it and Unblock the Notifications