ಫೋರ್ಬ್ಸ್‌ನ 2023ರ ಶ್ರೀಮಂತರ ಪಟ್ಟಿಯಲ್ಲಿ 2ನೇ ಮಹಾಯುದ್ಧದಲ್ಲಿ ಸೇನಾನಿಯಾಗಿದ್ದ ಅಮೆರಿಕದ ಜಾರ್ಜ್ ಜೋಸೆಫ್ ಅವರು ದಿವಂಗತ ಕೆಶುಬ್ ಮಹೀಂದ್ರಾ ಅವರಿಗಿಂತ ಹಳೇಯ ಬಿಲಿಯನೇರ್ ಪಟ್ಟಿಯಲ್ಲಿ ಮುಂದಿದ್ದರು. ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರ 99 ವರ್ಷದ ಚಿಕ್ಕಪ್ಪ ಅವರು ಇತ್ತೀಚೆಗೆ ನಿಧನರಾಗಿದ್ದು, ಅವರು ಭಾರತದ ಅತ್ಯಂತ ಹಿರಿಯ ಬಿಲಿಯನೇರ್ ಆಗಿದ್ದರು.
ಆದರೆ, 101 ವರ್ಷದ ಜೋಸೆಫ್ ಅವರು 10,784 ಕೋಟಿ ರೂ (1.3 ಬಿಲಿಯನ್ ಡಾಲರ್) ನಿವ್ವಳ ಮೌಲ್ಯದೊಂದಿಗೆ ಜಗತ್ತಿನ ಅತ್ಯಂತ ಹಳೆಯ ಬಿಲಿಯನೇರ್ ಆಗಿದ್ದಾರೆ. ಅಮೆರಿಕದ ಏರ್‌ಫೋರ್ಸ್ ನಾವಿಗೇಟರ್ ಆಗಿದ್ದ ಅವರು ವಿಶ್ವಯುದ್ಧ-2ರಲ್ಲಿ ಸುಮಾರು 50 ಯುದ್ಧ ವಿಮಾನಗಳ ಹಾರಾಟವನ್ನು ನಡೆಸಿದ್ದರು.

ಅವರು ಸೇಲ್ಸ್‌ಮನ್ ಆಗಿ ಮನೆಗೆ ತೆರಳಿ ವಾರ್ಷಿಕ 29,000 ಕೋಟಿ ರೂ.( $3.5 ಬಿಲಿಯನ್) ಆದಾಯ ಗಳಿಸುವ ಕಂಪನಿಯನ್ನು ಕಟ್ಟಿ ಬೆಳೆಸುವಲ್ಲಿ ಯಶಸ್ವಿಯಾದರು. ಅವರು 1962ರಲ್ಲಿ ಮರ್ಕ್ಯುರಿ ಜನರಲ್ ಹೆಸರಿನ ವಿಮಾ ಕಂಪನಿಯನ್ನು ಸ್ಥಾಪಿಸಿದ್ದರು. ಆ ಸಮಯದಲ್ಲಿ, ಜೋಸೆಫ್ $2 ಮಿಲಿಯನ್ ಸಂಗ್ರಹಿಸಿದ್ದರು.
ಜೋಸೆಫ್ ತಮ್ಮ ಅಗಾಧವಾದ ಸಂಪತ್ತನ್ನು ಪಬ್ಲಿಕ್ ಲಿಸ್ಟೆಡ್ ಕಂಪನಿಯಲ್ಲಿ ಹೊಂದಿರುವ ಶೇ.34 ಷೇರಿನಿಂದ ಪಡೆಯುತ್ತಿದ್ದಾರೆ. ಅವರ ಸಂಸ್ಥೆಯು ವಾಹನ, ಮನೆ ಮತ್ತು ಅಗ್ನಿ ವಿಮೆಯನ್ನು ಒದಗಿಸುವಲ್ಲಿ ಪರಿಣತಿ ಹೊಂದಿದೆ. ವಿಶ್ವದ ಅತ್ಯಂತ ಹಿರಿಯ ಬಿಲಿಯನೇರ್ ಆಗಿರುವ ಜೋಸೆಫ್ ಅವರ ಹೆತ್ತವರು ಲೆಬನಾನ್‌ನಿಂದ ವಲಸೆ ಬಂದವರಾಗಿದ್ದರು.
ಅವರ ಸಂಸ್ಥೆಯು ವಾಹನ, ಮನೆ ಮತ್ತು ಅಗ್ನಿ ಅವಘಡ ವಿಮೆಯನ್ನು ಒದಗಿಸುವಲ್ಲಿ ಮಂಚೂಣಿಯಲ್ಲಿದೆ. ಜಾರ್ಜ್ 1921ರಲ್ಲಿ ವೆಸ್ಟ್ ವರ್ಜೀನಿಯಾದ ಬೆಕ್ಲಿಯಲ್ಲಿ ಜನಿಸಿದರು. ಫೋರ್ಬ್ಸ್ ಪ್ರಕಾರ ಇವರು ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಯಾಗಿದ್ದು, 1949ರಲ್ಲಿ ಗಣಿತ ಮತ್ತು ಭೌತಶಾಸ್ತ್ರದಲ್ಲಿ ಮೇಜರ್ ವಿಷಯವಾಗಿ ಪದವಿ ಪಡೆದರು.
ಅವರು ಸಿಸ್ಟಮ್ ಅನಾಲಿಸ್ಟ್ ಆಗಿ ಲಾಸ್ ಏಂಜಲ್ಸ್‌ನಲ್ಲಿ Occidental ಲೈಫ್ ಇನ್ಶೂರೆನ್ಸ್ ಕಂಪನಿಯಲ್ಲಿ ಸೇರಿದ್ದರು. ಅವರು ರಾತ್ರಿ ವೇಳೆಯು ಮನೆ-ಮನೆಗೆ ತೆರಳಿ ಪಾಲಿಸಿಯನ್ನು ಮಾಡಿಸುತ್ತಿದ್ದರು. ಅವರು ವಿಮೆಯನ್ನು ಇತರ ಕ್ಷೇತ್ರಗಳಿಗೆ ವಿಸ್ತರಿಸುವ ಕುರಿತು ಕಂಪನಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಆದರೆ ಅದನ್ನು ತಿರಸ್ಕರಿಸಿದ ನಂತರ ಅವರು 1954 ರಲ್ಲಿ ಆಕ್ಸಿಡೆಂಟಲ್ ಅನ್ನು ತೊರೆದರು. ನಂತರ ಅವರು ಕ್ಯಾಲಿಫೋರ್ನಿಯಾದಲ್ಲಿ ತಮ್ಮದೇ ಆದ ವಿಮಾ ಕಂಪನಿಯನ್ನು ಪ್ರಾರಂಭಿಸಿದರು.


Click it and Unblock the Notifications