ಅಂಕಿತಿ ಬೋಸ್ ಅವರು ಭಾರತದ ಯುವ ಉದ್ಯಮಿಯಾಗಿದ್ದು, ಝಿಲಿಂಗೋ ಎಂಬ ಬಹುರಾಷ್ಟ್ರೀಯ ತಂತ್ರಜ್ಞಾನ ಹಾಗೂ ವಾಣಿಜ್ಯ ಸ್ಟಾರ್ಟಪ್ ಅನ್ನು ಸ್ಥಾಪಿಸುವುದಕ್ಕೆ ಅವರು ಧ್ರುವ್ ಕಪೂರ್ ಅವರೊಂದಿಗೆ ಪಾಲುದಾರಿಕೆಯನ್ನು ಹೊಂದಿದ್ದರು. ವರದಿಗಳ ಪ್ರಕಾರ 2019ರಲ್ಲಿ ಝಿಲಿಂಗೋ ಅವರ ಗರಿಷ್ಠ ಆಸ್ತಿ ಮೌಲ್ಯವು ಸುಮಾರು 7000 ಕೋಟಿ ರೂ. ತಲುಪಿದ್ದು, ಅದರ ಯಶಸ್ವಿನ ಹಿಂದೆ ಅಂಕಿತಿ ಬೋಸ್ ಅವರ ದೊಡ್ಡ ಪರಿಶ್ರಮ ಹಾಗೂ ಪಾತ್ರವಿದೆ.
ಈ ನಡುವೆ ಕಂಪನಿಯನ್ನು ಎತ್ತರಕ್ಕೆ ಕೊಂಡೊಯ್ದ ನಂತರ ಬೋಸ್ ಅವರ ವಿರುದ್ಧ ಹಣಕಾಸಿನಲ್ಲಿ ಅಕ್ರಮ ಎಸಗುವ ಮೂಲಕ ಕಂಪನಿಗೆ ವಂಚಿಸಿದ ಆರೋಪದ ಮೇಲೆ 2022ರಲ್ಲಿ ಅವರನ್ನು ಸಿಇಒ ಸ್ಥಾನದಿಂದ ಅಮಾನತುಗೊಳಿಸಲಾಯಿತು. ಆ ಮೂಲಕ ಸ್ವಂತ ಸ್ಟಾರ್ಟಪ್‌ನಿಂದಲೇ ಹೊರಗೆಬರಬೇಕಾಗಿ ಬಂತು. ವರದಿಗಳ ಪ್ರಕಾರ, ಅಂಕಿತಿ ಬೋಸ್ ಅವರು ಕಂಪನಿ ಆಡಳಿತ ಮಂಡಳಿ ಅನುಮತಿ ಇಲ್ಲದೆ ತಮ್ಮ ವೇತನವನ್ನು 10 ಪಟ್ಟು ಹೆಚ್ಚಿಸಿದ್ದರು. ಹಲವು ವೆಂಡರ್‌ಗಳಿಗೆ ದಾಖಲೆಗಳಿಲ್ಲದ ಸುಮಾರು 10 ಮಿಲಿಯನ್ ಡಾಲರ್ ಹಣ ಪಾವತಿಸಿದ ಆರೋಪ ಕೂಡ ಎದುರಾಗಿತ್ತು.
ಪ್ರಸ್ತುತ ಹೂಡಿಕೆದಾರ ಮಹೇಶ್ ಮೂರ್ತಿ ವಿರುದ್ಧ ಬೋಸ್ ಅವರು 100 ಮಿಲಿಯನ್ ಡಾಲರ್‌ನಷ್ಟುಮೊತ್ತದ ಕಾನೂನು ಸಮರ ನಡೆಯುತ್ತಿದ್ದಾರೆ. ಅಂಕಿತಿ ಬೋಸ್ ಅವರು ಡೆಹರೂಡಾನ್‌ನಲ್ಲಿ ಜನಿಸಿದ್ದು, ಅವರು ತಮ್ಮ ಶಾಲಾ ವಿದ್ಯಾಭ್ಯಾಸವನ್ನು ಮುಂಬೈನ ಕೇಂಬ್ರಿಡ್ಜ್ ಸ್ಕೂಲ್‌ನಿಂದ ಪಡೆದುಕೊಂಡಿದ್ದಾರೆ. ಬಳಿಕ ಪದವಿ ಶಿಕ್ಷಣವನ್ನು ಮುಂಬೈನ ಸೇಂಟ್ ಕ್ಸೇವಿಯರ್ ಕಾಲೇಜಿನಿಂದ ಪಡೆದುಕೊಂಡರು. ಪದವಿ ಬಳಿಕ ಅವರು ಬೆಂಗಳೂರಿನಲ್ಲಿ ಮೆಕಿನ್ಸೆ ಅಂಡ್ ಕಂಪನಿ ಹಾಗೂ ಸಿಕ್ವೊಯಾ ಕಾಪಿಟಲ್ ಕಂಪನಿಯಲ್ಲಿ ಕೆಲಸ ಪ್ರಾರಂಭಿಸಿದ್ದರು.
ವೀಕೆಂಡ್ ಮಾರ್ಕೆಟ್‌ನಲ್ಲಿ ಓಡಾಡುತ್ತಿದ್ದಾಗ ಹಲವು ಸಣ್ಣ-ಪುಟ್ಟ ಅಂಗಡಿಗಳಲ್ಲಿ ಆನ್‌ಲೈನ್ ವ್ಯವಸ್ಥೆಯ ಕೊರತೆಯಿರುವುದನ್ನು ಗಮನಿಸಿದ್ದರು. ಇದು ಸಿಕ್ವೊಯಾ ಕ್ಯಾಪಿಟಲ್‌ನಲ್ಲಿ ಹೂಡಿಕೆ ವಿಶ್ಲೇಷಕರ ಹುದ್ದೆಯನ್ನು ತೊರೆದು ಝೆಲಿಂಗೋವನ್ನು ಪ್ರಾರಂಭಿಸುವುದಕ್ಕೆ ಬೋಸ್ ಅವರಿಗೆ ಪ್ರೇರಣೆಯಾಗಿತ್ತು.

ಬೋಸ್ ಅವರು 2018ರಲ್ಲಿ ಫೋರ್ಬ್ಸ್ ಏಷ್ಯಾ-30 ಅಂಡರ್‌ನ 30 ಮಂದಿಯ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದರು. ಅಲ್ಲದೆ, ಫೋರ್ಚೂನ್ಸ್ 40 ಅಂಡರ್‌ನ 40 ಮಂದಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಈ ರೀತಿ, ಅಂಕಿತಾ ಬೋಸ್ ಅವರು ಏಷ್ಯಾದ ಇ-ಕಾಮರ್ಸ್ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡುವ ಮೂಲಕ ಗಮನಸೆಳೆದಿದ್ದಾರೆ.


Click it and Unblock the Notifications