ಬಾಲಿವುಡ್‌ನ ಅತ್ಯಂತ ಯಶಸ್ವಿ ಮತ್ತು ಪ್ರಭಾವಿ ನಟರಲ್ಲಿ ಒಬ್ಬರಾಗಿರುವ ಅಮಿತಾಬ್ ಬಚ್ಚನ್ ಈಗಲೂ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ. ನಟ ಐದು ದಶಕಗಳಿಂದ ಹಿಂದಿ ಚಲನಚಿತ್ರೋದ್ಯಮದ ಅವಿಭಾಜ್ಯ ಅಂಗವಾಗಿದ್ದಾರೆ. ಸಿನಿಮಾ ಮಾತ್ರವಲ್ಲದೆ ಹಲವಾರು ಇತರೆ 7 ಮೂಲಗಳಿಂದ ಆದಾಯವನ್ನು ಕೂಡಾ ಪಡೆಯುತ್ತಾರೆ ಬಚ್ಚನ್.
ಬಿಗ್ ಬಿ ಎಂದು ಜನಪ್ರಿಯವಾದವರ ಒಟ್ಟು ನಿವ್ವಳ ಆದಾಯವು 3,190 ಕೋಟಿ ರೂಪಾಯಿಗಳಾಗಿದೆ. ನಟನೆ ಮತ್ತು ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳು ಆದಾಯದ ಪ್ರಾಥಮಿಕ ಮೂಲಗಳಾಗಿದ್ದರೂ, ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಮೂಲಕವೂ ಆದಾಯವನ್ನು ಬಿಗ್ ಬಿ ಗಳಿಸುತ್ತಾರೆ. ಅಮಿತಾಬ್ ಬಚ್ಚನ್‌ರ 7 ಆದಾಯ ಮೂಲಗಳ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ.....

1. ಚಲನಚಿತ್ರ ನಿರ್ಮಾಣ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ
1994 ರಲ್ಲಿ, ಅಮಿತಾಭ್ ಬಚ್ಚನ್ ಅವರು ಅಮಿತಾಬ್ ಬಚ್ಚನ್ ಕಾರ್ಪೊರೇಷನ್ ಲಿಮಿಟೆಡ್ (ಎಬಿಸಿಎಲ್) ಅನ್ನು ಸ್ಥಾಪಿಸಿದರು. ಇದು ಈವೆಂಟ್ ಮ್ಯಾನೇಜ್ಮೆಂಟ್, ಉತ್ಪಾದನೆ ಮತ್ತು ವಿತರಣಾ ಕಂಪನಿಯಾಗಿದೆ. ಎಬಿಸಿಎಲ್ ಮೃತ್ಯುದಾತಾ (1997) ಮತ್ತು ಮೇಜರ್ ಸಾಬ್ (1998) ಅನ್ನು ನಿರ್ಮಿಸಿದೆ. ವಿಶ್ವ ಸುಂದರಿ 1996 ಅನ್ನು ಸಹ ಆಯೋಜಿಸಿದೆ.
2. ಎಂಡೋರ್ಸ್‌ಮೆಂಟ್‌ಗಳು
ಅಮಿತಾಭ್ ಬಚ್ಚನ್ ಜನಪ್ರಿಯ ಸೆಲೆಬ್ರಿಟಿಯಾಗಿದ್ದು, ಅವರ ಖ್ಯಾತಿಯು ಗಡಿಯನ್ನು ಮೀರಿದೆ. ಇದರ ಪರಿಣಾಮವಾಗಿ, ಅನೇಕ ಪ್ರಮುಖ ಬ್ರಾಂಡ್‌ಗಳು ಅವರನ್ನು ತಮ್ಮ ಪ್ರಮುಖ ಫೇಸ್ ಆಗಿಸಲು ಹಣವನ್ನು ನೀಡುತ್ತಾರೆ. ಬಿಗ್ ಬಿ ಪ್ರತಿ ಬ್ರಾಂಡ್ ಎಂಡೋರ್ಸ್‌ಮೆಂಟ್‌ನಿಂದ 5-8 ಕೋಟಿ ರೂಪಾಯಿ ಪಡೆಯುತ್ತಾರೆ. ಕ್ಯಾಡ್ಬರಿ, ಡಾಬರ್, ನೆಸ್ಲೆ ಮತ್ತು ಪೆಪ್ಸಿಯಂತಹ ಜನಪ್ರಿಯ ದೇಶೀಯ ಮತ್ತು ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳ ಎಂಡೋರ್ಸ್‌ಮೆಂಟ್ ಮಾಡುತ್ತಾರೆ.
3. ರಿಯಲ್ ಎಸ್ಟೇಟ್ ಹೂಡಿಕೆಗಳು
ಮುಂಬೈನಲ್ಲಿ ಐದು ಬಂಗಲೆಗಳನ್ನು (ಜಲ್ಸಾ, ಪ್ರತೀಕ್ಷಾ, ಜನಕ್ ಮತ್ತು ವತ್ಸ) ಅಮಿತಾಬ್ ಬಚ್ಚನ್ ಹೊಂದಿದ್ದಾರೆ. ಇದರೊಂದಿಗೆ ಪ್ರಪಂಚದಾದ್ಯಂತ ಕೆಲವು ಆಸ್ತಿಗಳನ್ನು ಹೊಂದಿದ್ದಾರೆ. ಅಮಿತಾಬ್ ತಮ್ಮ ಕುಟುಂಬದೊಂದಿಗೆ ಜಲ್ಸಾದಲ್ಲಿ ವಾಸಿಸುತ್ತಿದ್ದರೆ, ಬಿಗ್ ಬಿ ಮುಂಬೈನಲ್ಲಿರುವ ಕೆಲವು ಆಸ್ತಿಗಳನ್ನು ಬಾಡಿಗೆಗೆ ನೀಡಿದ್ದಾರೆ. ಇದರಿಂದ ಆದಾಯ ಲಭ್ಯವಾಗುತ್ತದೆ.
ಅಂಧೇರಿಯ ಲೋಖಂಡವಾಲಾ ರಸ್ತೆಯಲ್ಲಿರುವ ಅಟ್ಲಾಂಟಿಸ್ ಕಟ್ಟಡದ 27 ಮತ್ತು 28ನೇ ಮಹಡಿಯಲ್ಲಿರುವ ಅವರ ಡ್ಯುಪ್ಲೆಕ್ಸ್ ಒಂದನ್ನು ನಟಿ ಕೃತಿ ಸನನ್ ಅವರಿಗೆ ತಿಂಗಳಿಗೆ 10 ಲಕ್ಷ ರೂಪಾಯಿ ಬಾಡಿಗೆಗೆ ನೀಡಲಾಗಿದೆ. ಹೆಚ್ಚುವರಿಯಾಗಿ, 81 ವರ್ಷದ ನಟ ತನ್ನ ಜುಹು ಆಸ್ತಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 15 ವರ್ಷಗಳ ಕಾಲ ಗುತ್ತಿಗೆ ನೀಡಿದ್ದಾರೆ.
4. ಬಹು ವ್ಯವಹಾರಗಳಲ್ಲಿ ಹೂಡಿಕೆ
2013 ರಲ್ಲಿ, ಅಮಿತಾಬ್ ಬಚ್ಚನ್ ಜಸ್ಟ್ ಡಯಲ್‌ನಲ್ಲಿ ಶೇಕಡ 10 ರಷ್ಟು ಪಾಲನ್ನು ಖರೀದಿಸಿದ್ದಾರೆ. ಸ್ಟಾಂಪೀಡ್ ಕ್ಯಾಪಿಟಲ್ (ಶೇಕಡ 3.4) ಮತ್ತು ಮೆರಿಡಿಯನ್ ಟೆಕ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಬಚ್ಚನ್ ಕುಟುಂಬವು ಆನ್‌ಲೈನ್ ಕ್ಲೌಡ್ ಸ್ಟೋರೇಜ್ ಮತ್ತು ಹಂಚಿಕೆ ಪರಿಹಾರಗಳ ಸಂಸ್ಥೆಯಾದ ಝಿಡ್ಡು ಡಾಟ್ ಕಾಮ್‌ನಲ್ಲಿ ಹೂಡಿಕೆ ಮಾಡಿದೆ.
5. ಟಿವಿ ಕಾರ್ಯಕ್ರಮ ನಿರ್ವಹಣೆ
81 ವರ್ಷದ ನಟ ಅವರು ಎರಡು ದಶಕಗಳಿಂದ ಪ್ರಸಿದ್ಧ ಕ್ವಿಜ್ ಕಾರ್ಯಕ್ರಮ ಕೌನ್ ಬನೇಗಾ ಕರೋಡ್‌ಪತಿಯ ನಿರ್ವಹಣೆ ಮಾಡುತ್ತಾರೆ. ಅಮಿತಾಭ್ ಬಚ್ಚನ್ ಅವರು ಸೀಸನ್ 14 ರ ಪ್ರತಿ ಸಂಚಿಕೆಗೆ ಸುಮಾರು 4-5 ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ. ಮೊದಲ ಸೀಸನ್‌ನಲ್ಲಿ ಪ್ರತಿ ಸಂಚಿಕೆಗೆ 25 ಲಕ್ಷ ರೂಪಾಯಿ ಪಡೆಯುತ್ತಿದ್ದರು. ಇದರೊಂದಿಗ್ ಬಿಗ್ ಬಾಸ್ ಸೀಸನ್ 3ನ್ನು ಕೂಡಾ ಸಹ ಆಯೋಜಿಸಿದ್ದಾರೆ.
6. ಟೆನಿಸ್ ತಂಡದ ಸಹ-ಮಾಲೀಕ
2015 ರಲ್ಲಿ, ಅಮಿತಾಭ್ ಬಚ್ಚನ್ ಯುಡಿ ಗ್ರೂಪ್ ಜೊತೆಗೆ ಸೇರಿ ಇಂಟರ್ನ್ಯಾಷನಲ್ ಪ್ರೀಮಿಯರ್ ಟೆನಿಸ್ ಲೀಗ್ (ಐಪಿಟಿಎಲ್) ನಲ್ಲಿ ಸಿಂಗಾಪುರ್ ಸ್ಲ್ಯಾಮರ್ಸ್ ಅನ್ನು ಖರೀದಿಸಿದರು.
7. ಎನ್‌ಎಫ್‌ಟಿಗಳು
ಅಮಿತಾಬ್ ಬಚ್ಚನ್ ಕೆಲವು ವರ್ಷಗಳ ಹಿಂದೆ ಈ ಹೊಸ ನಾನ್-ಫಂಗಬಲ್ ಟೋಕನ್‌ಗಳ (ಎನ್‌ಎಫ್‌ಟಿ) ಲೋಕಕ್ಕೆ ಎಂಟ್ರಿ ನೀಡಿದ್ದಾರೆ. ಬಿಗ್ ಬಿ ಅವರ ಎನ್‌ಎಫ್‌ಟಿ ಸಂಗ್ರಹವು 2021 ರಲ್ಲಿ ಆನ್‌ಲೈನ್ ಬಿಡ್ಡಿಂಗ್ ಮೂಲಕ ಸರಿಸುಮಾರು 7.18 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ.
ಇದನ್ನು ಹೊರತುಪಡಿಸಿ ಭಾರತೀಯ ಚಲನಚಿತ್ರೋದ್ಯಮದಲ್ಲಿ ದೊಡ್ಡ ಹೆಸರುಗಳಲ್ಲಿ ಒಬ್ಬರಾದ ಅಮಿತಾಬ್ ಬಚ್ಚನ್ ಒಂದು ಚಲನಚಿತ್ರಕ್ಕೆ ಸುಮಾರು 6 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ. ಇತ್ತೀಚೆಗೆ ಶುಲ್ಕ ಹೆಚ್ಚಿಸಿದ್ದಾರೆ ಎಂದು ವರದಿಯಾಗಿದೆ. ಬ್ರಹ್ಮಾಸ್ತ್ರದಲ್ಲಿ ಅವರ ಅಭಿನಯಕ್ಕಾಗಿ 10 ಕೋಟಿ ರೂಪಾಯಿಗಳ ಸಂಭಾವನೆ ಮಾಡಿದ್ದಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications