APTET 2025 ಹಾಲ್‌ಟಿಕೆಟ್‌ ಬಿಡುಗಡೆಗೆ ಸಜ್ಜು! ಅಭ್ಯರ್ಥಿಗಳೇ ಹೀಗೆ ಡೌನ್‌ಲೋಡ್‌ ಮಾಡಿ

ಆಂಧ್ರಪ್ರದೇಶದಲ್ಲಿ (Andhra Pradesh) ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯಿಂದ ನಡೆಸಲ್ಪಡುವ ರಾಜ್ಯಮಟ್ಟದ ಪರೀಕ್ಷೆಗಳಲ್ಲಿ APTET (Andhra Pradesh Teacher Eligibility Test) ಕೂಡಾ ಒಂದು. ಇದು 1 ರಿಂದ 8ನೇ ತರಗತಿಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳ ಅರ್ಹತೆಯನ್ನು ಮೌಲ್ಯಮಾಪನ ಮಾಡಲು ಸಹಕಾರಿಯಾಗುತ್ತದೆ. ಈ ಪರೀಕ್ಷೆಯಲ್ಲಿ ಪಾಸ್‌ ಆದ ಅಭ್ಯರ್ಥಿಗಳು ಸರ್ಕಾರಿ, ಸಹಾಯಕ ಅಥವಾ ಖಾಸಗಿ ಶಾಲೆಗಳಲ್ಲಿ ಶಿಕ್ಷಕರ ಸ್ಥಾನಗಳಿಗೆ ಅರ್ಜಿ ಸಲ್ಲಿಸಬಹುದು. ಅಲ್ಲದೇ NCTE (National Council For Teacher Education) ನಿಯಮಗಳ ಪ್ರಕಾರ, ಈ ಸರ್ಟಿಫಿಕೇಟ್‌ ಜೀವನಾವಧೀಯವರೆಗೆ ಮಾನ್ಯವಾಗಿರುತ್ತದೆ ಮತ್ತು ಭವಿಷ್ಯದಲ್ಲಿ ನೇಮಕಾತಿ ಪರೀಕ್ಷೆಗಳಲ್ಲಿ (TRT) 20% ಮಾರ್ಕ್‌ ನೀಡಲಾಗುತ್ತದೆ.

APTET 2025 ಹಾಲ್‌ಟಿಕೆಟ್‌ ಬಿಡುಗಡೆ! ಹೀಗೆ ಡೌನ್‌ಲೋಡ್‌ ಮಾಡಿ

ಆಂಧ್ರಪ್ರದೇಶ ಸರ್ಕಾರಿ ಶಾಲಾ ಶಿಕ್ಷಣ ಇಲಾಖೆಯು ಇದೀಗ APTET 2025 ರ ಹಾಲ್‌ ಟಿಕೆಟ್‌ಗಳನ್ನು ಇಂದು, ಡಿಸೆಂಬರ್ 3 ರಂದು ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು ತಮ್ಮ ಕ್ಯಾಂಡಿಡೇಟ್‌ ಐಡಿ ಮತ್ತು ಜನ್ಮ ದಿನಾಂಕವನ್ನು ಬಳಸಿ, ಅಧಿಕೃತ ವೆಬ್‌ಸೈಟ್ tet2dsc.apcfss.in ನಿಂದ ತಮ್ಮ ಹಾಲ್ ಟಿಕೆಟ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ವರದಿ ಮಾಡಿದೆ.

ಶಿಕ್ಷಕರ ಅರ್ಹತಾ ಪರೀಕ್ಷೆ (TET) 2025 ರ ಡಿಸೆಂಬರ್ 10 ರಿಂದ ಕಂಪ್ಯೂಟರ್ ಆಧಾರಿತ (CBT) ವಿಧಾನದಲ್ಲಿ ಪ್ರತಿದಿನ ಎರಡು ಶಿಫ್ಟ್‌ಗಳಲ್ಲಿ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವವರು ಹಾಲ್ ಟಿಕೆಟ್‌ನ ಮುದ್ರಿತ ಪ್ರತಿ ಮತ್ತು ಮಾನ್ಯವಾದ ಫೋಟೋ ಗುರುತಿನ ಐಡಿ ಕಡ್ಡಾಯವಾಗಿ ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯಬೇಕು.

APTET 2025 ಹಾಲ್ ಟಿಕೆಟ್ ಡೌನ್‌ಲೋಡ್ ಮಾಡುವುದು ಹೇಗೆ?

  • tet2dsc.apcfss.in ಅಧಿಕೃತ ವೆಬ್‌ಸೈಟ್‌ಗೆ ಓಪನ್‌ ಮಾಡಬೇಕು.
  • ಅಭ್ಯರ್ಥಿ ಐಡಿ, ಮೊಬೈಲ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ಜನ್ಮ ದಿನಾಂಕದೊಂದಿಗೆ ಲಾಗಿನ್‌ ಮಾಡಿಕೊಳ್ಳಿ.
  • ವಿವರಗಳನ್ನು ಸಲ್ಲಿಸಿದ ನಂತರ, ನಿಮ್ಮ AP TET 2025 ಹಾಲ್ ಟಿಕೆಟ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.
  • ಅಲ್ಲದೇ ಅಲ್ಲೇ ಪ್ರಿಂಟ್‌ಔಟ್‌ ತೆಗೆದುಕೊಳ್ಳಬಹುದು.

ಪರೀಕ್ಷೆಯಲ್ಲಿ ಪತ್ರಿಕೆ 1 ಮತ್ತು ಪತ್ರಿಕೆ 2 ಇರಲಿದ್ದು, ತಲಾ 150 ಅಂಕಗಳು ಮತ್ತು ಒಟ್ಟು 150 ನಿಮಿಷಗಳ ಅವಧಿ ಇರಲಿದೆ. ಪತ್ರಿಕೆ 1, 1 ರಿಂದ 5 ನೇ ತರಗತಿಗಳ ಶಿಕ್ಷಕ ಹುದ್ದೆಗಳಿಗೆ, ಪತ್ರಿಕೆ 2, 6 ರಿಂದ 8 ನೇ ತರಗತಿಗಳ ಶಿಕ್ಷಕ ಹುದ್ದೆಗಳಿಗೆ ನಿಗದಿಪಡಿಸಲಾಗಿದೆ. ಎರಡೂ ಹಂತಗಳಿಗೆ ಅರ್ಹತೆ ಪಡೆಯಲು, ಅಭ್ಯರ್ಥಿಗಳು ಎರಡೂ ಪತ್ರಿಕೆಗಳಿಗೆ ಹಾಜರಾಗುವುದು ಕಡ್ಡಾಯವಾಗಿದೆ.

ಡೌನ್‌ಲೋಡ್ ಸಮಸ್ಯೆಗಳಾದರೆ (ಸರ್ವರ್ ತೊಂದರೆಗಳು), ಅಭ್ಯರ್ಥಿಗಳು ಕೆಲವು ನಿಮಿಷ ಕಾದು, ಮತ್ತೆ ಪ್ರಯತ್ನಿಸಬೇಕು.

ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯಬೇಕಾದ ಅಗತ್ಯ ದಾಖಲೆಗಳು:
ಸರ್ಕಾರ ನೀಡಿದ ಫೋಟೋ ಗುರುತಿನ ಚೀಟಿ (PAN, ಆಧಾರ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಪಾಸ್‌ಬುಕ್, 12ನೇ ಬೋರ್ಡ್ ಅಡ್ಮಿಟ್ ಕಾರ್ಡ್) ಮತ್ತು ಎರಡು ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರಗಳು.

AP TET 2025 ಹಾಲ್ ಟಿಕೆಟ್‌ನಲ್ಲಿರುವ ವಿವರಗಳು:

  • ಪರೀಕ್ಷೆಯ ಹೆಸರು
  • ಅಭ್ಯರ್ಥಿಯ ಹೆಸರು
  • ತಂದೆ-ತಾಯಿಯರ ಹೆಸರು
  • ನೋಂದಣಿ ಸಂಖ್ಯೆ
  • ರೋಲ್ ನಂಬರ್‌
  • ವರ್ಗ
  • ಲಿಂಗ
  • ಜನ್ಮ ದಿನಾಂಕ
  • ಪರೀಕ್ಷಾ ದಿನಾಂಕ
  • ಸಮಯ
  • ಪರೀಕ್ಷಾ ಕೇಂದ್ರದ ಹೆಸರು ಮತ್ತು ವಿಳಾಸ ಹಾಗೂ ಪರೀಕ್ಷಾ ದಿನದ ಸೂಚನೆಗಳು ಇರಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+