ಎಲಾನ್ ಮಸ್ಕ್ ಅವರು ಸದ್ಯ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮೊದಲ ಸ್ಥಾನದಲ್ಲಿದ್ದು, ಫೇಸ್‌ಬುಕ್ ಮಾಲೀಕ ಮಾರ್ಕ್ ಜುಕರ್‌ಬರ್ಗ್ ಅವರು ಬಿಲಿಯನೇರ್‌ಗಳ ಸಾಲಿನಲ್ಲಿ 9ನೇ ಸ್ಥಾನದಲ್ಲಿದ್ದಾರೆ. ಪ್ರಸ್ತುತ ಶ್ರೀಮಂತಿಕೆಯಲ್ಲಿ ಮೊದಲ ಸ್ಥಾನದಲ್ಲಿರುವ ಎಲಾನ್ ಮಸ್ಕ್ ಅವರು ತಮ್ಮ 41ನೇ ವಯಸ್ಸಿನಲ್ಲಿ ಬಿಲಿಯನೇರ್ ಸ್ಥಾನವನ್ನು ಪಡೆದುಕೊಂಡಿದ್ದರು.
ಆದರೆ, ಕಾರ್ಲೋಸ್ ಸ್ಲಿಮ್ ಅವರು 51ನೇ ವಯಸ್ಸಿನಲ್ಲಿ ಬಿಲಿಯನೇರ್ ಆಗಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಹಾಗಾದರೆ, ಜಗತ್ತಿನ ಶ್ರೀಮಂತರ ವ್ಯಕ್ತಿಗಳ ಪಟ್ಟಿಯಲ್ಲಿ ಇರುವವರು ಹಾಗೂ ಅವರೆಲ್ಲ ಯಾವ ವಯಸ್ಸಿನಲ್ಲಿ ಬಿಲಿಯನೇರ್ ಸ್ಥಾನಕ್ಕೆ ಏರಿದ್ದಾರೆ ಎಂಬುದನ್ನು ಗಮನಿಸೋಣ... ಮುಂದೆ ಓದಿ....

ಕಿರಿಯ ವಯಸ್ಸಿನಲ್ಲೇ ಬಿಲಿಯನೇರ್ ಆದ ಜುಗರ್‌ಬರ್ಕ್
ಫೇಸ್‌ಬುಕ್‌ನ ಮಾಲೀಕ ಮಾರ್ಕ್ ಜುಗರ್‌ಬರ್ಕ್ ಹೊರತುಪಡಿಸಿದರೆ ಉಳಿದ ಯಾವ ಯುವ ಉದ್ಯಮಿಗಳು ಕೂಡ ಕಿರಿಯ ವಯಸ್ಸಿನಲ್ಲಿ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಹೆಸರು ಪಡೆದುಕೊಂಡಿಲ್ಲ. ಮಾರ್ಕ್ ತಮ್ಮ 23ನೇ ವಯಸ್ಸಿನಲ್ಲಿಯೇ ಈ ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ.
ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್‌ನ ಮಾಹಿತಿ ಪ್ರಕಾರ, ಲ್ಯಾರಿ ಪೇಜ್ 30ನೇ ವಯಸ್ಸಿನಲ್ಲಿ ಬಿಲಿಯನೇರ್ ಆಗಿ ಗುರುತಿಸಿಕೊಂಡಿದ್ದರೆ, 31ನೇ ವಯಸ್ಸಿನಲ್ಲಿ ಸೆರ್ಗೆಯ್ ಬ್ರಿನ್ ಅವರು ಬಿಲಿಯನೇರ್ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸಾಫ್ಟ್‌ವೇರ್ ದಿಗ್ಗಜ ಬಿಲ್ ಗೇಟ್ಸ್ ಅವರು 31ನೇ ವಯಸ್ಸಿನಲ್ಲಿ ಕಿರಿಯ ಬಿಲಿಯನೇರ್‌ಗಳ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಜೆಫ್ ಬೆಜೋಸ್ ಅವರು 35ನೇ ವಯಸ್ಸಿಗೆ ಇದೇ ಸ್ಥಾನಕ್ಕೆ ಏರುವಲ್ಲಿ ಯಶಸ್ವಿಯಾಗಿದ್ದರು. ಅದೇರೀತಿ ಸ್ಟೀವ್ ಬಾಲ್ಮರ್ ಅವರು ತಮ್ಮ 38ನೇ ವಯಸ್ಸಿನಲ್ಲಿ ಬಿಲಿಯನೇರ್ ಆಗಿದ್ದಾರೆ.
ಭಾರತೀಯ ಅಗರ್ಭ ಶ್ರೀಮಂತರ ಪಟ್ಟಿಯನ್ನು ನೋಡಿದಾಗ ಅದಾನಿ ಗ್ರೂಪ್‌ನ ಗೌತಮ್ ಅದಾನಿ ಅವರು ತಮ್ಮ 46ನೇ ವಯಸ್ಸಿನಲ್ಲಿ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಇನ್ನು ಹಲವಾರು ಉದ್ಯಮಗಳಲ್ಲಿ ತೊಡಗಿಸಿಕೊಂಡು ಜಗತ್ತಿನ ಬಿಸಿನೆಸ್ ಐಕಾನ್ ಆಗಿ ಗುರುತಿಸಿಕೊಂಡಿರುವ ವಾರೆನ್ ಬಫೆಟ್ ಅವರು ತಮ್ಮ 56ನೇ ವಯಸ್ಸಿಗೆ ಬಿಲಿಯನೇರ್ ಕ್ಲಬ್‌ಗೆ ಸೇರ್ಪಡೆಯಾಗಿರುವುದು ಗಮನಾರ್ಹ.


Click it and Unblock the Notifications