ಭಾರತದ ಅತಿ ಉದ್ದದ ಸಮುದ್ರ ಸೇತುವೆಗೆ ಜನವರಿ 12 ರಂದು ಚಾಲನೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (ಎಂಟಿಎಚ್‌ಎಲ್) ಭಾರತದ ಅತಿ ಉದ್ದದ ಸಮುದ್ರ ಸೇತುವೆಯನ್ನು ಉದ್ಘಾಟಿಸಿದ್ದಾರೆ. ಅಧಿಕೃತವಾಗಿ ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವ ಶೇವಾ ಅಟಲ್ ಸೇತು ಎಂದು ಈ ಸೇತುವೆಯನ್ನು ಕರೆಯಲಾಗುತ್ತದೆ.
ಸುಮಾರು 17,840 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಅಟಲ್ ಸೇತು ಸೇತುವೆಯು ಮುಂಬೈ ಮತ್ತು ನವಿ ಮುಂಬೈ ನಡುವಿನ ಅಂತರವನ್ನು 2 ಗಂಟೆಗಳಿಂದ ಕೇವಲ 20 ನಿಮಿಷಗಳಿಗೆ ಕಡಿಮೆ ಮಾಡಿದೆ. ಸೇತುವೆಯ ಶಂಕುಸ್ಥಾಪನೆಯನ್ನು ಪ್ರಧಾನಿ ಮೋದಿ ಅವರು ಡಿಸೆಂಬರ್ 2016 ರಲ್ಲಿ ಮಾಡಿದ್ದಾರೆ. ಹಾಗಾದರೆ ಈ ಸೇತುವೆಯಲ್ಲಿ ಟೋಲ್ ಶುಲ್ಕ ಎಷ್ಟಿದೆ ಎಂಬ ವಿವರ ಇಲ್ಲಿದೆ ಮುಂದೆ ಓದಿ....

ಟೋಲ್ ಶುಲ್ಕ ಎಷ್ಟಿದೆ ತಿಳಿಯಿರಿ
1. ಕಾರು: ಕಾರುಗಳಿಗೆ, ಒಂದೇ ಪ್ರಯಾಣದಲ್ಲಿ 250 ರೂಪಾಯಿ ಟೋಲ್ ಶುಲ್ಕವನ್ನು ವಿಧಿಸಲಾಗುತ್ತದೆ. ಹಿಂದಿರುಗುವ ಪ್ರಯಾಣದಲ್ಲಿ 375 ರೂಪಾಯಿ ಶುಲ್ಕವಿದೆ. ಇದಲ್ಲದೇ ಕಾರುಗಳಿಗೆ 625 ರೂಪಾಯಿ ದೈನಂದಿನ ಪಾಸ್ ಮತ್ತು 79,000 ರೂಪಾಯಿ ಮಾಸಿಕ ಪಾಸ್ ಕೂಡ ಲಭ್ಯವಿದೆ.
2. ಎಲ್‌ಸಿವಿ/ ಮಿನಿ ಬಸ್: ಈ ವಾಹನಗಳಿಗೆ ಒಂದೇ ಪ್ರಯಾಣದಲ್ಲಿ 400 ರೂಪಾಯಿ ಮತ್ತು ಹಿಂದಿರುಗುವ ಪ್ರಯಾಣದಲ್ಲಿ 600 ರೂಪಾಯಿಗಳ ಟೋಲ್ ಅನ್ನು ವಿಧಿಸಲಾಗುತ್ತದೆ. ಅಲ್ಲದೆ, 1,000 ರೂಪಾಯಿ ದೈನಂದಿನ ಪಾಸ್ ಮತ್ತು 20,000 ರೂಪಾಯಿ ಮಾಸಿಕ ಪಾಸ್ ಲಭ್ಯವಿದೆ.
3. ಬಸ್/2-ಆಕ್ಸಲ್ ಟ್ರಕ್: ಒಂದೇ ಪ್ರಯಾಣದಲ್ಲಿ, ಪ್ರಯಾಣಿಕರು 830 ರೂಪಾಯಿ ಟೋಲ್ ಶುಲ್ಕ ಪಾವತಿಸಬೇಕು. ಹಿಂದಿರುಗುವಾಗ, ಬೆಲೆ 1,245 ರೂಪಾಯಿಗೆ ಏರಿಕೆಯಾಗುತ್ತದೆ. ಪ್ರಯಾಣಿಕರು ದೈನಂದಿನ ಮತ್ತು ಮಾಸಿಕ ಪಾಸ್‌ಗಳನ್ನು ಕ್ರಮವಾಗಿ 2,075 ರೂಪಾಯಿ ಮತ್ತು 41,500 ರೂಪಾಯಿಗೆ ಖರೀದಿಸಬಹುದು.
4. ಎಂಎವಿ (3ಆಕ್ಸಲ್): ಈ ವಾಹನಗಳಲ್ಲಿ, ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಅನ್ನು ಬಳಸುವ ವೆಚ್ಚ ಒಂದೇ ಪ್ರಯಾಣದಲ್ಲಿ 905 ರೂಪಾಯಿ ಆಗಿದೆ. ಹಿಂದಿರುಗುವಾಗ ಟೋಲ್ ಶುಲ್ಕ 1,360 ರೂಪಾಯಿ ಆಗಿದೆ. ದೈನಂದಿನ ಮತ್ತು ಮಾಸಿಕ ಪಾಸ್‌ಗಳು ಕ್ರಮವಾಗಿ 2,265 ರೂಪಾಯಿ ಮತ್ತು 45,250 ರೂಪಾಯಿ ಆಗಿದೆ.
5. ಎಂಎವಿ (4 ರಿಂದ 6 ಆಕ್ಸಲ್): ಒಂದೇ ಪ್ರಯಾಣದಲ್ಲಿ 1,300 ರೂಪಾಯಿ ಟೋಲ್ ಶುಲ್ಕ ವಿಧಿಸಲಾಗುತ್ತದೆ. ಹಿಂದಿರುಗುವಾಗ ಟೋಲ್ ಶುಲ್ಕ 1,950 ರೂಪಾಯಿ ಆಗಿದೆ. ಇದಲ್ಲದೆ, 3,250 ರೂಪಾಯಿಗಳ ದೈನಂದಿನ ಪಾಸ್ ಮತ್ತು ಮಾಸಿಕ 65,000 ರೂಪಾಯಿ ಪಾಸ್ ಲಭ್ಯವಿದೆ.
6. ಓವರ್‌ಸೈಜೆಡ್: ಈ ರೀತಿಯ ವಾಹನಗಳಲ್ಲಿ, ಒಂದೇ ಪ್ರಯಾಣಕ್ಕೆ 1,580 ರೂಪಾಯಿ ಟೋಲ್ ಆಗಿದೆ. ಹಿಂದಿರುಗುವ ಪ್ರಯಾಣಕ್ಕೆ 2,370 ರೂಪಾಯಿ ಟೋಲ್ ಆಗಿದೆ. ದೈನಂದಿನ ಮತ್ತು ಮಾಸಿಕ ಪಾಸ್‌ಗಳು ಕ್ರಮವಾಗಿ 3,950 ರೂಪಾಯಿ ಮತ್ತು 79,000 ರೂಪಾಯಿ ಆಗಿದೆ.


Click it and Unblock the Notifications