ಇಂದು (ಜನವರಿ 22) ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಮಾಡಲಾಗಿದೆ. ಜನವರಿ 23 ರಿಂದ ಅಯೋಧ್ಯೆಯ ರಾಮಜನ್ಮಭೂಮಿ ದೇವಸ್ಥಾನವನ್ನು ಸಾರ್ವಜನಿಕರಿಗೆ ತೆರೆಯಲಾಗುತ್ತದೆ. ಪ್ರತಿದಿನ ಶ್ರೀ ರಾಮನ ದರ್ಶನಕ್ಕಾಗಿ ಸಾವಿರಾರು ಭಕ್ತರು ಮತ್ತು ಯಾತ್ರಿಕರು ಆಗಮಿಸುವ ನಿರೀಕ್ಷೆಯಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಇತರ ವಿವಿಐಪಿ ಅತಿಥಿಗಳು ಭಾಗವಹಿಸುವ ಕಾರ್ಯಕ್ರಮದಲ್ಲಿ ಜನವರಿ 22 ರಂದು ದೇವಾಲಯದ 'ಪ್ರಾಣ ಪ್ರತಿಷ್ಠಾ' ಸಮಾರಂಭ ನಡೆಯುತ್ತಿದೆ. ರಾಮನ ಜನ್ಮಸ್ಥಳದಲ್ಲಿ ನೆಲೆಗೊಂಡಿದೆ ಎಂದು ನಂಬುವ ಲಕ್ಷಾಂತರ ಭಕ್ತರು ಮತ್ತು ಹಿಂದೂ ಧರ್ಮದ ಅನುಯಾಯಿಗಳಿಗೆ ರಾಮ ಮಂದಿರವು ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ.

51 ಇಂಚು ಎತ್ತರದ ರಾಮಲಲ್ಲಾ ವಿಗ್ರಹವನ್ನು ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ರಚಿಸಿದ್ದಾರೆ. ಈ ವಿಗ್ರಹವು ಭಗವಾನ್ ವಿಷ್ಣುವಿನ ಎಲ್ಲಾ ಹತ್ತು ಅವತಾರಗಳ ಕೆತ್ತನೆಗಳನ್ನು ಒಳಗೊಂಡಿದೆ. ಭಗವಾನ್ ಹನುಮಾನ್ ಮತ್ತು ಇತರ ಪ್ರಮುಖ ಹಿಂದೂ ಧಾರ್ಮಿಕ ಚಿಹ್ನೆಗಳನ್ನು ಕೂಡಾ ಹೊಂದಿದೆ.
ದರ್ಶನ ಹಾಗೂ ಆರತಿ ವಿವರ
ಅಯೋಧ್ಯೆಯ ರಾಮಜನ್ಮಭೂಮಿ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನ ಮತ್ತು ಆರತಿ ಸಮಯದ ವಿವರವನ್ನು ನಾವಿಲ್ಲಿ ನೀಡಿದ್ದೇವೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ವೆಬ್‌ಸೈಟ್ ಪ್ರಕಾರ, ಈ ಕೆಳಗಿನ ಸಮಯದ ಸ್ಲಾಟ್‌ಗಳ ಪ್ರಕಾರ ಭಗವಾನ್ ರಾಮ ಲಲ್ಲಾನ 'ದರ್ಶನ'ವನ್ನು ಮಾಡಬಹುದು.
ದರ್ಶನ ಸಮಯ:
ಬೆಳಿಗ್ಗೆ ಸಮಯ - 7:00 ರಿಂದ 11:30 ರವರೆಗೆ
ಮಧ್ಯಾಹ್ನ ಸಮಯ - 2:00 ರಿಂದ 7:00 ರವರೆಗೆ
ಆರತಿ ಸಮಯಗಳು
ಜಾಗರಣ/ ಶೃಂಗಾರ ಆರತಿ- ಬೆಳಗ್ಗೆ 6:30
ಸಂಧ್ಯಾ ಆರತಿ- ಸಂಜೆ 7:30
"ಆರತಿ" ಗಾಗಿ ಉಚಿತ ಪಾಸ್‌ಗಳನ್ನು ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ಪಡೆಯಬಹುದು. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ವೆಬ್‌ಸೈಟ್ ಪ್ರಕಾರ, ಮಾನ್ಯ ಸರ್ಕಾರಿ ಐಡಿ ಪುರಾವೆಯನ್ನು ಒದಗಿಸಿದ ನಂತರ ಶ್ರೀ ರಾಮ ಜನ್ಮಭೂಮಿಯಲ್ಲಿರುವ ಶಿಬಿರ ಕಚೇರಿಯಿಂದ ಆಫ್‌ಲೈನ್ ಪಾಸ್‌ಗಳನ್ನು ಪಡೆಯಬಹುದು.
ಮಹಾಮಸ್ತಕಾಭಿಷೇಕದ ಏಳು ದಿನಗಳ ಧಾರ್ಮಿಕ ವಿಧಿವಿಧಾನಗಳು ಜನವರಿ 16 ರಂದು ಪ್ರಾರಂಭವಾಯಿತು. ಜನವರಿ 22 ರಂದು ವಾರಣಾಸಿಯ ಅರ್ಚಕ ಲಕ್ಷ್ಮೀಕಾಂತ್ ದೀಕ್ಷಿತ್ ಅವರು ಮಧ್ಯಾಹ್ನ 12.20 ಕ್ಕೆ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ನೆರವೇರಿಸಿದ್ದಾರೆ. ಅಯೋಧ್ಯೆಯನ್ನು ಸಂಪೂರ್ಣವಾಗಿ ಶೃಂಗಾರ ಮಾಡಲಾಗಿದೆ. ಸಮಾರಂಭಕ್ಕೆ ಭಾರೀ ಭದ್ರತಾ ವ್ಯವಸ್ಥೆ ಮಾಡಲಾಗಿದೆ.


Click it and Unblock the Notifications