ಬಾಬಾ ರಾಮ್‌ದೇವ್ ಪ್ರಪಂಚದಾದ್ಯಂತದ ಅತ್ಯಂತ ಜನಪ್ರಿಯ ಭಾರತೀಯ ಯೋಗ ಗುರುಗಳಲ್ಲಿ ಒಬ್ಬರಾಗಿದ್ದಾರೆ. ಭಾರತದಲ್ಲಿ ಯೋಗ ಮತ್ತು ಆಯುರ್ವೇದದಲ್ಲಿ ಪ್ರಮುಖ ವ್ಯಕ್ತಿ ಎಂದು ಗುರುತಿಸಲ್ಪಟ್ಟಿರುವ ಬಾಬಾ ರಾಮದೇವ್ ಈಗ ಹೊಸ ಎಸ್‌ಯುವಿಯನ್ನು ಖರೀದಿ ಮಾಡಿದ್ದಾರೆ. ಅದು ಕೂಡಾ ಬರೋಬ್ಬರಿ 1.5 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಸುರಕ್ಷತಾ ಎಸ್‌ಯುವಿ ಇದಾಗಿದೆ.
ಬಾಬಾ ರಾಮ್‌ದೇವ್ ನಿಜವಾದ ಹೆಸರು ರಾಮಕೃಷ್ಣ ಯಾದವ್. ಯೋಗ ಶಿಕ್ಷಕರಲ್ಲದೆ, ರಾಮ್‌ದೇವ್, 46,000 ಕೋಟಿ ರೂಪಾಯಿಗೂ ಅಧಿಕ ಮಾರುಕಟ್ಟೆ ಮೌಲ್ಯ ಹೊಂದಿರುವ ಬಹುರಾಷ್ಟ್ರೀಯ ಕಂಪನಿ ಪತಂಜಲಿಯ ಸಹ-ಸಂಸ್ಥಾಪಕ ಮತ್ತು ಬ್ರಾಂಡ್ ಅಂಬಾಸಿಡರ್ ಕೂಡಾ ಆಗಿದ್ದಾರೆ. ತನ್ನ ಚಟುವಟಿಕೆಗಳಿಂದ ಆಗಾಗ್ಗೆ ಸುದ್ದಿಯಾಗುವ ಯೋಗ ಗುರು ಅವರ ಹೊಸ ಸೂಪರ್ ದುಬಾರಿ ಕಾರು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

1.5 ಕೋಟಿ ರೂಪಾಯಿಯ ಕಾರು
ವರದಿಯ ಪ್ರಕಾರ ಬಾಬಾ ರಾಮ್‌ದೇವ್ ಅವರು 1.5 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಹೊಸ ಸುರಕ್ಷತಾ ಲ್ಯಾಂಡ್ ರೋವರ್ ಡಿಫೆಂಡರ್ 130 ಎಸ್‌ಯುವಿ ಖರೀದಿಸಿದ್ದಾರೆ. ಬಾಬಾ ರಾಮ್‌ದೇವ್ ಸಾಮಾನ್ಯವಾಗಿ ಧರಿಸಿರುವ ಸಾಂಪ್ರದಾಯಿಕ ಮರದ ಚಪ್ಪಲಿಗಳನ್ನು ಧರಿಸಿ ಎಸ್‌ಯುವಿಯನ್ನು ಚಾಲನೆ ಮಾಡುತ್ತಿರುವ ವೀಡಿಯೊವನ್ನು ಆಟೋಮೊಬಿಲಿಯಾರ್ಡೆಂಟ್‌ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ರಾಮ್‌ದೇವ್‌ರ ಹೊಸ ಕಾರಿನ ಬಗ್ಗೆ ತಿಳಿಯಿರಿ
ಲ್ಯಾಂಡ್ ರೋವರ್ ಡಿಫೆಂಡರ್ 130 ಅನ್ನು ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಬಾಬಾ ರಾಮ್‌ದೇವ್‌ರ ಈ ಎಸ್‌ಯುವಿ ಸೆಡೋನಾ ರೆಡ್ ಬಣ್ಣದ್ದಾಗಿದೆ. ಯಾವುದೇ ನೋಂದಣಿ ಫಲಕವಿಲ್ಲದೆ ಕಾರನ್ನು ಶೋರೂಮ್‌ನಿಂದ ತರಲಾಗಿದ್ದು, ರಾಮ್‌ದೇವ್ ಕಾರು ಚಲಾಯಿಸುವ ವಿಡಿಯೋ ವೈರಲ್ ಆಗುತ್ತಿದೆ. ಭಾರತದಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ 130 ಬೆಲೆ 1.3 ಕೋಟಿ ರೂಪಾಯಿಗಳಿಂದ ಆರಂಭವಾಗುತ್ತದೆ.
ಭಾರತದಲ್ಲಿ, ಲ್ಯಾಂಡ್ ರೋವರ್ ಡಿಫೆಂಡರ್ 130 ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿರುತ್ತದೆ. 3.0-ಲೀಟರ್ ಪೆಟ್ರೋಲ್ ಎಂಜಿನ್ 394 BHP ಮತ್ತು 550 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮತ್ತೊಂದೆಡೆ, 3.0-ಲೀಟರ್ ಡೀಸೆಲ್ ಎಂಜಿನ್ 296 BHP ಮತ್ತು 600 Nm ಟಾರ್ಕ್ ಅನ್ನು ನೀಡುತ್ತದೆ. ಇನ್ನು ಡಿಫೆಂಡರ್ 130 ಖರೀದಿಗೂ ಮುನ್ನ ಬಾಬಾ ರಾಮ್‌ದೇವ್ ಮಹೀಂದ್ರಾ ಎಕ್ಸ್‌ಯುವಿ 700 ಎಸ್‌ಯುವಿಯಲ್ಲಿ ಪ್ರಯಾಣ ಮಾಡುತ್ತಿದ್ದರು. ಹಾಗೆಯೇ ಹಲವಾರು ಸಂದರ್ಭಗಳಲ್ಲಿ ಮೋಟಾರ್ ಸೈಕಲ್ ಸವಾರಿ ಮಾಡುತ್ತಿರುವುದು ನಾವು ಕಾಣಬಹುದು.
ಇತ್ತೀಚೆಗೆ ಕಾರು ಖರೀದಿಸಿದ ಸೆಲೆಬ್ರೆಟಿಗಳು
ಇತ್ತೀಚೆಗೆ ಸೆಲೆಬ್ರೆಟಿಗಳು ಅತೀ ದುಬಾರಿ ಕಾರುಗಳನ್ನು ಖರೀದಿ ಮಾಡುವ ಸುದ್ದಿ ಕೇಳಿ ಬರುತ್ತಲೇ ಇದೆ. ಇತ್ತೀಚೆಗೆ ಕೆಜಿಎಫ್ ಸ್ಟಾರ್ ಯಶ್ ಸುಮಾರು 4 ಕೋಟಿ ರೂಪಾಯಿಯ ಎಸ್‌ಯುವಿ ಖರೀದಿಸಿದ್ದಾರೆ. ಅತೀ ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರಾದ ಶಿಖರ್ ಧವನ್ ಕೂಡಾ ಅತೀ ದುಬಾರಿ ಎಸ್‌ಯುವಿಯನ್ನು ಖರೀದಿ ಮಾಡಿದ್ದಾರೆ. ಈ 4 ಕೋಟಿ ರೂಪಾಯಿಯ ಕಾರಿನ ವಿಡಿಯೋವನ್ನು ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ಶಿಖರ್ ಧವನ್ ಹಂಚಿಕೊಂಡಿದ್ದಾರೆ.
ಜನಪ್ರಿಯ ಭಾರತೀಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಭಾರತದಲ್ಲಿ ಈಗ ಅತೀ ದುಬಾರಿಯಾದ, ಅತೀ ವೇಗವಾದ ಎಸ್‌ಯುವಿ ಲ್ಯಾಂಬೋರ್ಗಿನಿ ಉರುಸ್ ಎಸ್ ಅನ್ನು ಖರೀದಿ ಮಾಡಿದ್ದಾರೆ. ಇತ್ತೀಚೆಗೆ ನಟಿ ಕಿಯಾರಾ ಅಡ್ವಾಣಿ 2.69 ಕೋಟಿ ರೂಪಾಯಿ ಮೌಲ್ಯದ ಹೊಸ ಮರ್ಸಿಡಿಸ್-ಮೇಬ್ಯಾಕ್ ಎಸ್580 ಐಷಾರಾಮಿ ಸೆಡಾನ್ ಖರೀದಿಸಿದ್ದಾರೆ.
ಅಜಯ್ ದೇವ್‌ಗನ್ ಇತ್ತೀಚೆಗೆ ತನ್ನ ಈ ಕಾರುಗಳ ಸಂಗ್ರಹಕ್ಕೆ ಹೊಸ ಸೇರ್ಪಡೆಯನ್ನು ಮಾಡಿಕೊಂಡಿದ್ದಾರೆ. ವರದಿಯ ಪ್ರಕಾರ ನಟ ಅಜಯ್ ದೇವ್‌ಗನ್ ಸುಮಾರು 1.95 ಕೋಟಿ ರೂಪಾಯಿ ಮೌಲ್ಯದ ಬಿಎಂಡಬ್ಲ್ಯೂ i7 ಐಷಾರಾಮಿ ಎಲೆಕ್ಟ್ರಿಕ್ ಕಾರನ್ನು ಖರೀದಿ ಮಾಡಿದ್ದಾರೆ. ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್ ಖಾನ್ ಈ ಹಿಂದೆ ಅತೀ ದುಬಾರಿ ಎಸ್‌ಯುವಿಯನ್ನು ಆಮದು ಮಾಡಿಕೊಂಡಿದ್ದಾರೆ.


Click it and Unblock the Notifications