ವಸತಿ ದರ ಏರಿಕೆಯಲ್ಲಿ ಎಲ್ಲ ನಗರ ಹಿಂದಿಕ್ಕಿದ ಬೆಂಗಳೂರು

ನವದೆಹಲಿ, ಆಗಸ್ಟ್‌ 28: ಬೆಂಗಳೂರಿಗೆ ಮೆಟ್ರೋ ನಗರದ ಪಟ್ಟ ಸಿಗದೆ ಇದ್ದರೂ ಇಲ್ಲಿ ಆಸ್ತಿ ದರ ಏರಿಕೆ ಮಾತ್ರ ಯಾವುದೇ ಮೆಟ್ರೋ ನಗರಕ್ಕಿಂತ ಕಡಿಮೆ ಇಲ್ಲ. ಪ್ರಮುಖ ನಗರಗಳಲ್ಲಿ ಕಮರ್ಷಿಯಲ್ ಆಸ್ತಿಗಳು ಮಾತ್ರವಲ್ಲ ವಸತಿ ಆಸ್ತಿಗಳ ಬೆಲೆಯೂ ಸಿಕ್ಕಾಪಟ್ಟೆ ಏರುತ್ತಿದೆ. ಬೆಂಗಳೂರು ಮತ್ತು ಹೈದರಾಬಾದ್ ನಲ್ಲಿ ಅತಿ ಹೆಚ್ಚಿನ ಏರಿಕೆ ಕಂಡುಬಂದಿದೆ.

ಬೆಂಗಳೂರಿನ ಬಾಗಲೂರಿನಲ್ಲಿ ವಸತಿ ಬೆಲೆ ಏರಿಕೆ ದೇಶದಲ್ಲೇ ಗರಿಷ್ಠ ಎನಿಸಿದೆ. ಕೇವಲ ನಾಲ್ಕು ವರ್ಷದೊಳಗಿನ ಅವಧಿಯಲ್ಲಿ ಬಾಗಲೂರಿನಲ್ಲಿ ವಸತಿ ಬೆಲೆ ಶೇ. 90ರಷ್ಟು ಏರಿದೆ. ಐಟಿ ಕಂಪನಿಗಳ ತವರಾಗಿರುವ ವೈಟ್‌ಫೀಲ್ಡ್‌ನಲ್ಲಿ ಶೇ. 80ರಷ್ಟು ಬೆಲೆ ಏರಿದೆ. ಹೈದರಾಬಾದ್ನ ಕೋಕಾಪೇಟ್ ಪ್ರದೇಶದಲ್ಲಿ ವಸತಿ ಬೆಲೆ ಶೇ. 89ರಷ್ಟು ಏರಿದೆ ಎಂದು ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್ ಕಂಪನಿ ಅನರಾಕ್ ರಿಸರ್ಚ್ ಹೇಳಿದೆ.

ವಸತಿ ದರ ಏರಿಕೆಯಲ್ಲಿ  ಎಲ್ಲ ನಗರ ಹಿಂದಿಕ್ಕಿದ ಬೆಂಗಳೂರು

ಬೆಂಗಳೂರು, ಹೈದರಾಬಾದ್, ದೆಹಲಿ ಎನ್ಸಿಆರ್, ಮುಂಬೈ, ಪುಣೆ, ಚೆನ್ನೈ ಮತ್ತು ಕೋಲ್ಕತಾ ನಗರಗಳಲ್ಲಿ ಈ ನಾಲ್ಕು ವರ್ಷದ ಅವಧಿಯಲ್ಲಿ ಅತಿಹೆಚ್ಚು ಮನೆ ಬಾಡಿಗೆ ಹೆಚ್ಚಳ ಆಗಿದೆ ಎಂದು ಅನರಾಕ್ ಹೇಳಿದೆ.

2019ರಲ್ಲಿ ಬಾಗಲೂರಿನಲ್ಲಿ ವಸತಿ ಬೆಲೆ ಸರಾಸರಿಯಾಗಿ ಪ್ರತೀ ಚದರಕ್ಕೆ 4,300 ರೂ ಇತ್ತು. ಈಗ 2024 ರಜೂನ್ ತಿಂಗಳಲ್ಲಿ ನೋಡಿದರೆ ಚದರಡಿಗೆ ಸರಾಸರಿಯಾಗಿ 8,151 ರೂ ಬೆಲೆ ಬಂದಿದೆ. ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ಸರಾಸರಿ ವಸತಿ ಬೆಲೆ ಚದರಡಿಗೆ 8,600 ರೂಗೆ ಏರಿದೆ. ಸರ್ಜಾಪುರ ರಸ್ತೆ ಪ್ರದೇಶದಲ್ಲಿ ಚದರಡಿ ಬೆಲೆ 9,300 ರೂ ಇದೆ. ಅತಿಹೆಚ್ಚು ವಸತಿ ಬೆಲೆ ಏರಿಕೆಯಲ್ಲಿ ಇದು ಐದನೆ ಸ್ಥಾನ ಪಡೆದಿದೆ. ಈ ಎಲ್ಲ ಲೆಕ್ಕಾಚಾರ ನೋಡಿದರೆ ಟಾಪ್ 5ನಲ್ಲಿ ಬೆಂಗಳೂರಿನ ಮೂರು ಪ್ರದೇಶಗಳೇ ಇದ್ದಂತಾಗಿದೆ.

ಈ ರೀತಿಯ ದರ ಏರಿಕೆಗೆ ಕಾರಣವೇನು?

ಬಾಗಲೂರು, ವೈಟ್ಫೀಲ್ಡ್, ಸರ್ಜಾಪುರ ರಸ್ತೆ, ಉತ್ತರ ಬೆಂಗಳೂರು ಇತ್ಯಾದಿ ಸ್ಥಳಗಳಲ್ಲಿ ಬಹಳ ವೇಗವಾಗಿ ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿ ಆಗಿದೆ. ಅಗ್ರಮಾನ್ಯ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಐಟಿ ಕಂಪನಿಗಳು ಇಲ್ಲಿ ಸ್ಥಾಪನೆಯಾಗಿವೆ. ಕಮರ್ಷಿಯಲ್ ಚಟುವಟಿಕೆ ಹೆಚ್ಚಿದೆ. ಮನರಂಜನಾ ತಾಣಗಳು ಹೆಚ್ಚಿವೆ. ಹೀಗಾಗಿ, ಇಲ್ಲಿ ವಸತಿಗಳಿಗೆ ಬೇಡಿಕೆ ಸಿಕ್ಕಾಪಟ್ಟೆ ಏರಿಕೆಯಾಗಿದೆ ಎಂದು ವಿಶ್ಲೇಷಣೆಗಳು ಹೇಳುತ್ತವೆ.

ವಸತಿ ಬೆಲೆ ಏರಿಕೆಯ ದತ್ತಾಂಶ ಬಿಡುಗಡೆ ಮಾಡಿದ ಅನರಾಕ್ ಗ್ರೂಪ್ನ ಛೇರ್ಮನ್ ಅನುಜ್ ಪುರಿ, ಬಹಳ ಕುತೂಹಲ ಎನಿಸುವ ಒಂದು ಸಂಗತಿಯನ್ನು ಕಾರಣವಾಗಿ ಪ್ರಸ್ತಾಪಿಸಿದ್ದಾರೆ. ಅವರ ಪ್ರಕಾರ 2013ರಿಂದ 2019ರವರೆಗೆ ರಿಯಲ್ ಎಸ್ಟೇಟ್ ವಸತಿ ಆಸ್ತಿ ಬೆಲೆ ವರ್ಷಕ್ಕೆ ಶೇ. 2ರಷ್ಟು ಮಾತ್ರವೇ ಹೆಚ್ಚಳ ಕಂಡಿದೆ. ಇದೇ ಅವಧಿಯಲ್ಲಿ ಜನರ ಆದಾಯ ಮಟ್ಟದಲ್ಲಿ ಶೇ. 7ರಿಂದ 8ರಷ್ಟು ಏರಿಕೆ ಆಗಿದೆ. ಹೀಗಾಗಿ, 2020ರಿಂದ 2024ರವರೆಗೆ ಜನರು ತಮ್ಮ ಆದಾಯವನ್ನು ರಿಯಲ್ ಎಸ್ಟೇಟ್ ಮೇಲೆ ವ್ಯಯಿಸುತ್ತಿದ್ದಾರೆ. ಇದು ಬೆಲೆ ಏರಿಕೆಗೆ ಕಾರಣವಾಗಿರಬಹುದು ಎನ್ನುವುದು ಅವರ ಅನಿಸಿಕೆ.

ಅನಾರಾಕ್ ಪ್ರಕಾರ, ಬೆಂಗಳೂರಿನ ಬಾಗಲೂರಿನಲ್ಲಿ ವಸತಿ ಬೆಲೆಗಳು 2020 ರಿಂದ ಗರಿಷ್ಠ 90 ಪ್ರತಿಶತದಷ್ಟು ಏರಿದೆ, ಆದರೆ ದೆಹಲಿ-ಎನ್‌ಸಿಆರ್‌ನಲ್ಲಿರುವ ದ್ವಾರಕಾ ಎಕ್ಸ್‌ಪ್ರೆಸ್‌ವೇ 4 ನೇ ಸ್ಥಾನದಲ್ಲಿದೆ ಎಂದು ಅನಾರಕ್ ಹೇಳಿದೆ.

ವೈಟ್ ಫೀಲ್ಡ್ ಬಲ್ಲಿ 2019 ರಲ್ಲಿ ಪ್ರತಿ ಚದರ ಅಡಿಗೆ 4,765 ಇತ್ತು. 2024 ರಲ್ಲಿ ಸರಾಸರಿ ಬೆಲೆಗಳು ಪ್ರತಿ ಚದರ ಅಡಿಗೆ 8,600 ರೂ. ಕ್ಕೆ ಏರಿಕೆಯಾಗಿದೆ. ಎನ್‌ಸಿಆರ್‌ನ ದ್ವಾರಕಾ ಎಕ್ಸ್‌ಪ್ರೆಸ್‌ವೇ ಶೇ. 79 ರಷ್ಟು ಬೆಲೆ ಏರಿಕೆಯೊಂದಿಗೆ 4 ನೇ ಸ್ಥಾನದಲ್ಲಿದೆ. ಸರಾಸರಿ ಬೆಲೆಗಳು 2019 ರಲ್ಲಿ ಪ್ರತಿ ಚದರ ಅಡಿಗೆ 5,359 ಇದ್ದು 2024 ರಲ್ಲಿ ಪ್ರತಿ ಚದರ ಅಡಿಗೆ 9,600 ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನ ಸರ್ಜಾಪುರ ರಸ್ತೆ ಶೇ 58ರಷ್ಟು ಬೆಲೆ ಏರಿಕೆಯೊಂದಿಗೆ 5ನೇ ಸ್ಥಾನದಲ್ಲಿದೆ. ಇಲ್ಲಿನ ಸರಾಸರಿ ಬೆಲೆಗಳು 2019 ರಲ್ಲಿ ಪ್ರತಿ ಚದರ ಅಡಿಗೆ 5,870 ಇತ್ತು. ಈಗ 2024 ರಲ್ಲಿ ಪ್ರತಿ ಚದರ ಅಡಿಗೆ 9,300 ಕ್ಕೆ ಏರಿಕೆಯಾಗಿದೆ. ಹೈದರಾಬಾದ್‌ನ ಬಾಚುಪಲ್ಲಿ 6ನೇ ಸ್ಥಾನದಲ್ಲಿದ್ದು ಸರಾಸರಿ ಬೆಲೆಗಳು ಪ್ರತಿ ಚದರ ಅಡಿಗೆ 3,690 ರಿಂದ 5,800ಕ್ಕೆ ಅಂದರೆ ಶೇ. 57 ರಷ್ಟು ಏರಿಕೆಯಾಗಿದೆ.

ತಪ್ರತಿ ಚದರ ಅಡಿಗೆ 4,819 ರಿಂದ 7,350 ರೂ.ಗೆ ಸರಾಸರಿ ಬೆಲೆಗಳಲ್ಲಿ 53 ಪ್ರತಿಶತ ಜಿಗಿತದೊಂದಿಗೆ ಹೈದರಾಬಾದ್‌ನ ತಲ್ಲಾಪುರ 7ನೇ ಸ್ಥಾನದಲ್ಲಿದೆ. ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಪನ್ವೆಲ್ 8 ನೇ ಸ್ಥಾನದಲ್ಲಿದ್ದು, ಪ್ರತಿ ಚದರ ಅಡಿಗೆ 5,520 ರಿಂದ 8,300 ರೂಗೆ ಅಂದರೆ ಶೇ. 50ರಷ್ಟು ಏರಿಕೆಯಾಗಿದೆ.

ದೆಹಲಿ-ಎನ್‌ಸಿಆರ್‌ನ ನ್ಯೂ ಗುರುಗ್ರಾಮ್ 9 ನೇ ಸ್ಥಾನದಲ್ಲಿದೆ. ಸರಾಸರಿ ಬೆಲೆಗಳು ಪ್ರತಿ ಚದರ ಅಡಿಗೆ 6,100 ರಿಂದ 9,000ಕ್ಕೆ ಅಂದರೆ ಶೇ. 48 ಏರಿಕೆಯಾಗಿದೆ. ಎಂಎಂಆರ್‌ನ ಡೊಂಬಿವಿಲಿ 10ನೇ ಸ್ಥಾನದಲ್ಲಿದೆ. ದರಗಳು 2019-ಅಂತ್ಯದಲ್ಲಿ ಪ್ರತಿ ಚದರ ಅಡಿಗೆ 6,625 ಇದ್ದಿದ್ದು ಪ್ರತಿ ಚದರ ಅಡಿಗೆ 9,300 ಕ್ಕೆ ಶೇ. 40 ಪ್ರತಿಶತದಷ್ಟು ಬೆಳೆದಿದೆ.

ಬೆಂಗಳೂರು ವಸತಿ ಮಾರುಕಟ್ಟೆ ಕುರಿತು ಪ್ರತಿಕ್ರಿಯಿಸಿದ ರಿಯಲ್ ಎಸ್ಟೇಟ್ ನಿರ್ಮಾಣ ಮತ್ತು ಅಭಿವೃದ್ಧಿ ಸಂಸ್ಥೆಯ ಬಿಸಿಡಿ ಗ್ರೂಪ್ ಸಿಎಂಡಿ ಅಂಗದ್ ಬೇಡಿ, "ಉತ್ತರ ಬೆಂಗಳೂರು, ವೈಟ್‌ಫೀಲ್ಡ್ ಮತ್ತು ಸರ್ಜಾಪುರ ರಸ್ತೆಯಲ್ಲಿ ವಸತಿ ರಿಯಲ್ ಎಸ್ಟೇಟ್‌ನಲ್ಲಿ ಗಣನೀಯ ಬೆಲೆ ಏರಿಕೆಗೆ ಈ ಮೈಕ್ರೋಮಾರ್ಕೆಟ್‌ಗಳಲ್ಲಿನ ತ್ವರಿತ ಮೂಲಸೌಕರ್ಯ ಅಭಿವೃದ್ಧಿಯೇ ಕಾರಣ ಎಂದಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+