For Quick Alerts
ALLOW NOTIFICATIONS  
For Daily Alerts

ಬಿರಿಯಾನಿ ಹೋಟೆಲ್, ಡಿಟಿಡಿಸಿ ಕೊರಿಯರ್, ಲೆನ್ಸ್‌ಕಾರ್ಟ್- ಲಾಭ ಕೊಡುವ ಬ್ಯುಸಿನೆಸ್ ಆರಂಭಿಸಿ

|

ಸ್ವಂತ ಉದ್ಯೋಗ ಮಾಡಬೇಕೆನ್ನುವವರಿಗೆ ಮತ್ತು ಹೆಚ್ಚು ರಿಸ್ಕ್ ಇಲ್ಲದೇ ಬ್ಯುಸಿನೆಸ್ ಮಾಡಬೇಕೆನ್ನುವವರಿಗೆ ಫ್ರಾಂಚೈಸಿ ಮಾಡೆಲ್ ಒಳ್ಳೆಯ ಐಡಿಯಾ. ಬಹಳಷ್ಟು ಫ್ರಾಂಚೈಸಿ ವ್ಯವಹಾರಗಳು ನಾನಾ ಕಾರಣಗಳಿಗೆ ವಿಫಲವಾಗುತ್ತವೆ. ಆದರೆ, ಒಳ್ಳೆಯ ಬ್ರ್ಯಾಂಡಿಂಗ್ ಇರುವ ಫ್ರಾಂಚೈಸಿಯನ್ನು ಆರಿಸಿಕೊಳ್ಳುವುದು ಮುಖ್ಯ. ಆ ಬಳಿಕ ಬ್ಯುಸಿನೆಸ್ ಇರುವ ಸ್ಥಳ ಕೂಡ ಪ್ರಧಾನ ಎನಿಸುತ್ತದೆ.

ಕೆಲ ಫ್ರಾಂಚೈಸಿಗಳು ಸಾಮಾನ್ಯವಾಗಿ ಒಳ್ಳೆಯ ಬ್ಯುಸಿನೆಸ್ ತರುತ್ತವೆ. ಅಂಥ ಕೆಲ ಫ್ರಾಂಚೈಸಿ ಬ್ಯುಸಿನೆಸ್ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ. ಸ್ವಂತ ಬದಲು ಯಾಕೆ ಫ್ರಾಂಚೈಸಿ ಪಡೆದುಕೊಳ್ಳಬೇಕು ಎನ್ನುವ ಪ್ರಶ್ನೆಗೆ ಸುಲಭ ಉತ್ತರ ಎಂದರೆ ರಿಸ್ಕ್ ಕಡಿಮೆ ಎನ್ನುವುದು. ಇಲ್ಲಿ ಫ್ರಾಂಚೈಸರ್‌ಗಳ ಬಳಿ ರೆಡಿಮೇಡ್ ಉತ್ಪನ್ನಗಳಿರುತ್ತವೆ. ಬ್ಯುಸಿನೆಸ್ ಬೆಳೆಸುವ ಐಡಿಯಾ ಮತ್ತು ಟ್ರಿಕ್‌ಗಳನ್ನು ಹಂಚಿಕೊಳ್ಳುತ್ತಾರೆ. ಅಗತ್ಯ ಬಿದ್ದರೆ ತರಬೇತಿ ವ್ಯವಸ್ಥೆ ಮಾಡುತ್ತಾರೆ. ಒಟ್ಟಾರೆ ಫ್ರಾಂಚೈಸಿಗಳಿಗೆ ಸುಗಮವಾಗಿ ವ್ಯವಹಾರ ಸಾಗುವ ರೀತಿಯಲ್ಲಿ ಬೆಂಬಲ ಸಿಗುತ್ತಿರುತ್ತದೆ.

ಎಲೆಕ್ಟ್ರಿಕ್ ವಾಹನ ವ್ಯಾಪಾರ: ವಿಧ, ಹೂಡಿಕೆ, ಏನೆಲ್ಲ ಅಗತ್ಯ?ಎಲೆಕ್ಟ್ರಿಕ್ ವಾಹನ ವ್ಯಾಪಾರ: ವಿಧ, ಹೂಡಿಕೆ, ಏನೆಲ್ಲ ಅಗತ್ಯ?

ಜಿಎಫ್‌ಸಿ ಚಿಕನ್

ಬಿರಿಯಾನಿ ಹೋಟೆಲ್ ಸಾಮಾನ್ಯವಾಗಿ ನಷ್ಟ ಉಂಟು ಮಾಡದ ವ್ಯವಹಾರ ಎನಿಸಿದೆ. ಬಿರಿಯಾನಿ ಯಾವತ್ತೂ ಬೇಡಿಕೆ ಹೊಂದಿರುವ ಆಹಾರ. ಹದವಾದ ಮತ್ತು ರುಚಿಕಟ್ಟಾದ ಬಿರ್ಯಾನಿ ಮತ್ತು ಚಿಕನ್ ಆಹಾರವನ್ನು ಒದಗಿಸಿದರೆ ಜನ ತಪ್ಪದೇ ಬರುತ್ತಾರೆ. ಬೆಂಗಳೂರಿನಲ್ಲಿ ಈಗೀಗ ಜಿಎಫ್‌ಸಿ ಚಿಕನ್ ಫ್ರಾಂಚೈಸಿಗಳು ಟ್ರೆಂಡಿಂಗ್‌ನಲ್ಲಿವೆ. ಅನೇಕ ಕಡೆ ಜಿಎಫ್‌ಸಿ ಹೋಟೆಲ್‌ಗಳು ಆರಂಭವಾಗುತ್ತಿವೆ.

ಬಿರಿಯಾನಿ, ಕೊರಿಯರ್... ಕಡಿಮೆ ಬಂಡವಾಳಕ್ಕೆ ಬ್ಯುಸಿನೆಸ್ ಆರಂಭಿಸಿ

ಬೆಂಗಳೂರಿನ ಮೈಸೂರು ರಸ್ತೆಯ ದೀಪಾಂಜಲಿ ನಗರದಲ್ಲಿ ಕೃಷ್ಣಪ್ಪ ಅವರು ಮೊದಲು ಆರಂಭಿಸಿದ್ದು ಜಿಎಫ್‌ಸಿ. ಗೌಡಾಸ್ ಫ್ರೈಡ್ ಚಿಕನ್. ಇದರ ಫ್ರಾಂಚೈಸಿ ಉತ್ತಮ ಐಡಿಯಾ. ಮೂಲ ಜಿಎಫ್‌ಸಿಯಿಂದಲೇ ಬಿರಿಯಾನಿ ಸಿದ್ಧವಾಗಿ ಸಿಗುತ್ತದೆ. ಕಬಾಬ್, ಚಿಕನ್ ಫ್ರೈಗೆ ಬೇಕಾದ ಪೂರಕ ಆಹಾರವಸ್ತು ಇಲ್ಲಿಂದಲೇ ಸಿಗುತ್ತದೆ. ನೀವು ದೀಪಾಂಜಲಿ ನಗರದಲ್ಲಿರುವ ಜಿಎಫ್‌ಸಿ ಸೆಂಟರ್ ಅನ್ನು ಸಂಪರ್ಕಿಸಿದರೆ ಫ್ರಾಂಚೈಸಿ ಬಗ್ಗೆ ಮಾಹಿತಿ ಸಿಗುತ್ತದೆ.

ಡಿಟಿಡಿಸಿ ಕೊರಿಯರ್

ಡಿಟಿಡಿಸಿ ಕಾರ್ಗೋ ಮತ್ತು ಕೊರಿಯರ್ಸ್ ಸಂಸ್ಥೆ ಬೆಂಗಳೂರಿನದ್ದೇ. 1990ರಲ್ಲಿ ಆರಂಭವಾದ ಇದು ಈಗ ದೇಶವ್ಯಾಪಿ ಬೆಳೆದಿದೆ. ಭಾರತದಾದ್ಯಂತ ಸಾವಿರಕ್ಕೂ ಹೆಚ್ಚು ಫ್ರಾಂಚೈಸಿಗಳನ್ನು ಹೊಂದಿದ್ದು ಭಾರತದ ಅತ್ಯಂತ ದೊಡ್ಡ ಕೊರಿಯರ್ ನೆಟ್ವರ್ಕ್‌ಗಳಲ್ಲಿ ಒಂದೆನಿಸಿದೆ. ಸಣ್ಣ ಪಟ್ಟಣಗಳಲ್ಲೂ ಡಿಟಿಡಿಸಿ ಫ್ರಾಂಚೈಸಿಗಳಿವೆ.

ಸ್ವಂತ ಉದ್ಯೋಗ; ಕೇವಲ 2 ಲಕ್ಷ ರೂಗೆ ಐಸ್‌ಕ್ರೀಮ್ ಪಾರ್ಲರ್ ಪ್ರಾರಂಭಿಸಿಸ್ವಂತ ಉದ್ಯೋಗ; ಕೇವಲ 2 ಲಕ್ಷ ರೂಗೆ ಐಸ್‌ಕ್ರೀಮ್ ಪಾರ್ಲರ್ ಪ್ರಾರಂಭಿಸಿ

ಜನಪ್ರಿಯ ಬ್ರ್ಯಾಂಡ್ ಆದ್ದರಿಂದ ಡಿಟಿಡಿಸಿ ಫ್ರಾಂಚೈಸಿ ಒಳ್ಳೆಯ ಲಾಭ ತಂದುಕೊಡಬಲ್ಲುದು.

ಲೆನ್ಸ್‌ಕಾರ್ಟ್

2011ರಲ್ಲಿ ಆರಂಭಗೊಂಡ ಕನ್ನಡಕದ ಅಂಗಡಿ ಇದು. ಅತ್ಯುತ್ತಮ ಕನ್ನಡಕ ಮತ್ತು ಫ್ರೇಮ್‌ಗಳು ಇಲ್ಲಿ ಸಿಗುತ್ತವೆ. ಇಲ್ಲಿರುವ ಐ ಗ್ಲಾಸ್‌ಗಳು ಬಹಳ ಟ್ರೆಂಡಿ, ಫ್ಯಾಷನಬಲ್ ಎನಿಸಿವೆ. ದೇಶಾದ್ಯಂತ 330ಕ್ಕೂ ಹೆಚ್ಚು ಲೆನ್ಸ್‌ಕಾರ್ಟ್ ಫ್ರಾಂಚೈಸಿಗಳು ಆರಂಭಗೊಂಡಿವೆ.

English summary

Biriyani Hotel, Courier, Eyeglass: Profitable Business Ideas in Bengaluru

Franchise business model usually works well giving good profits. Here is some of the good franchise ideas that can be started in Bengaluru or any place.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X