ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಎಂಎಚ್‌ಎಡಿಎ) ಲಾಟರಿ 2023 ರ ವಿಜೇತರನ್ನು ಪ್ರಕಟಿಸಿದೆ. ಬಿಜೆಪಿ ಶಾಸಕ ನಾರಾಯಣ್ ಕುಚೆ ದಕ್ಷಿಣ ಮುಂಬೈನಲ್ಲಿ ಮಾರಾಟವಾದ 7.57 ಕೋಟಿ ರೂಪಾಯಿಗಳ ದುಬಾರಿ ಅಪಾರ್ಟ್‌ಮೆಂಟ್‌ನ ವಿಜೇತ ಎಂದು ಘೋಷಣೆ ಮಾಡಲಾಗಿದೆ.
ಲಾಟರಿ, ಪಟ್ಟಿಯನ್ನು ಆಗಸ್ಟ್‌ನಲ್ಲಿ ಪ್ರಕಟಿಸಲಾಗಿದೆ. 14, 4,082 ಮನೆಗಳು ಮಾರಾಟಕ್ಕಿವೆ. ನಾರಾಯಣ್ ಕುಚೆ ಮಹಾರಾಷ್ಟ್ರದ ಬದ್ನಾಪುರ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ. ಕುಚೆ ಅಲ್ಲದೆ ಕೇಂದ್ರ ಸಚಿವ ಭಾಗವತ್ ಕರದ್ ಕೂಡ ನಿರ್ದಿಷ್ಟ ಮನೆ ಖರೀದಿಗೆ ಅರ್ಜಿ ಸಲ್ಲಿಸಿದ್ದರು.

ಬಹುತೇಕ ಕೈಗೆಟುಕುವ ದರದಲ್ಲಿ, ಮೇ 2023 ರಲ್ಲಿ ಮನೆಗಳ ಮಾರಾಟ ಆರಂಭವಾಗಿದೆ. 24 ಲಕ್ಷ ರೂಪಾಯಿಯಿಂದ 7.57 ಕೋಟಿ ರೂಪಾಯಿಯಗಳ ನಡುವೆ ಮನೆಗಳು ಲಭ್ಯವಿದೆ. ಕುಚೆ ಗೆದ್ದಿರುವ ಅಪಾರ್ಟ್‌ಮೆಂಟ್ ದಕ್ಷಿಣ ಮುಂಬೈನ ತಾರ್ಡಿಯೊದಲ್ಲಿದೆ. ಇದು ಒಟ್ಟು 1,500 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ.
ಯಾವ ವಿಭಾಗಕ್ಕೆ ಎಷ್ಟು ಮೀಸಲು
ಲಾಟರಿ ಮಾರಾಟದಲ್ಲಿ, ಸುಮಾರು ಶೇಕಡ 93 ಮನೆಗಳು ಆರ್ಥಿಕವಾಗಿ ದುರ್ಬಲ ವಿಭಾಗ (ಇಡಬ್ಲ್ಯೂಎಸ್) ಮತ್ತು ಕಡಿಮೆ ಆದಾಯದ ಗುಂಪು (ಎಲ್‌ಐಜಿ) ವರ್ಗದಲ್ಲಿವೆ. ಉಳಿದ ಶೇಕಡ 7 ರಷ್ಟು ಮಧ್ಯಮ-ಆದಾಯದ ಗುಂಪು (ಎಂಐಜಿ) ಮತ್ತು ಎಚ್‌ಐಜಿ ವರ್ಗಗಳ ಅಡಿಯಲ್ಲಿ ಮನೆಗಳನ್ನು ಒಳಗೊಂಡಿದೆ.
4,082 ಅಪಾರ್ಟ್‌ಮೆಂಟ್‌ಗಳಲ್ಲಿ, 2,700 ಕ್ಕಿಂತ ಹೆಚ್ಚು ಇಡಬ್ಲ್ಯೂಎಸ್ ವರ್ಗಕ್ಕೆ ಮತ್ತು 1,000 ಕ್ಕಿಂತ ಹೆಚ್ಚು ಎಲ್‌ಐಜಿಗಾಗಿ ಮೀಸಲಾಗಿದೆ. ಎಂಐಜಿಗಾಗಿ ಒಟ್ಟು 130 ಮತ್ತು ಎಚ್‌ಐಜಿಗಾಗಿ ಸುಮಾರು 120 ಮನೆಗಳನ್ನು ಮೀಸಲಿಡಲಾಗಿದೆ.
"ಈವರೆಗೆ ನನ್ನಲ್ಲಿ ಎಲ್ಲಿಯೂ ಸ್ವಂತ ಮನೆ ಇಲ್ಲದ ಕಾರಣ ನಾನು ಮನೆಗಾಗಿ ಅರ್ಜಿ ಸಲ್ಲಿಸಿದ್ದೆ. ಆದ್ದರಿಂದ, ನಾನು ಮುಂಬೈನಲ್ಲಿ ಎಂಎಚ್‌ಎಡಿಎ ಲಾಟರಿ 2023 ಮೂಲಕ ಖರೀದಿಸಲು ನಿರ್ಧರಿಸಿದೆ. ನಾನು ಗೃಹ ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದೇನೆ ಮತ್ತು ಅಪಾರ್ಟ್‌ಮೆಂಟ್ ಖರೀದಿಸುತ್ತಿದ್ದೇನೆ," ಎಂದು ನಾರಾಯಣ್ ಕುಚೆ ತಿಳಿಸಿರುವುದಾಗಿ ಮನಿ ಕಂಟ್ರೋಲ್ ವರದಿ ಮಾಡಿದೆ.
26 ವರ್ಷದ ರೋಹಿತ್ ಪಾಟೀಲ್ ಎಂಎಚ್‌ಎಡಿಎ ಲಾಟರಿ 2023 ರಲ್ಲಿ ಕಿರಿಯ ವಿಜೇತರಲ್ಲಿ ಒಬ್ಬರು. ಲಾಟರಿ ಮನೆಗಳಿಗೆ ಅರ್ಜಿ ಸಲ್ಲಿಸುವ ಸಂಸದ/ಶಾಸಕರಿಗೆ ಸಂಬಂಧಿಸಿದಂತೆ, ಹೇಳುವುದಾದರೆ ಎಂಎಚ್‌ಎಡಿಎ ಲಾಟರಿಯಲ್ಲಿ ಮಾರಾಟವಾಗುವ ಒಟ್ಟು ಮನೆಗಳಲ್ಲಿ ಶೇಕಡ 2ರಷ್ಟನ್ನು ಸಂಸದರು ಮತ್ತು ಶಾಸಕರಿಗೆ ಮೀಸಲಿಡಲಾಗಿದೆ.


Click it and Unblock the Notifications