ಪ್ರತಿ ಗಂಟೆಗೆ 12 ಕೋಟಿ ರೂಪಾಯಿ ಸಂಪಾದನೆ ಎಂದರೆ ಕಡಿಮೆಯೇ?. ಇಲ್ಲೋರ್ವ ವ್ಯಕ್ತಿ ಪ್ರತಿ ಗಂಟೆಗೆ 12 ಕೋಟಿ ರೂಪಾಯಿ ಆದಾಯವನ್ನು ಗಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಬ್ಲ್ಯಾಕ್‌ಸ್ಟೋನ್ ಸಿಇಒ ಸ್ಟೀವ್ ಶ್ವಾರ್ಜ್‌ಮನ್ 2022ರಲ್ಲಿ 1.27 ಬಿಲಿಯನ್ ಡಾಲರ್ ಹಣವನ್ನು ಸಂಪಾದನೆ ಮಾಡುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಸರಿ ಸುಮಾರು ಶೇಕಡ 20ರಷ್ಟು ಬ್ಲ್ಯಾಕ್‌ಸ್ಟೋನ್ ಷೇರುಗಳನ್ನು ಸ್ಟೀವ್ ಶ್ವಾರ್ಜ್‌ಮನ್ ಹೊಂದಿದ್ದಾರೆ.
ಮಾಧ್ಯಮಗಳ ವರದಿಗಳ ಪ್ರಕಾರ ಬ್ಲ್ಯಾಕ್‌ಸ್ಟೋನ್ ಸಿಇಒ ಸ್ಟೀವ್ ಶ್ವಾರ್ಜ್‌ಮನ್ ಸುಮಾರು 1 ಬಿಲಿಯನ್ ಡಾಲರ್‌ನಷ್ಟು ಡಿವಿಡೆಂಟ್ ಅನ್ನು ಪಡೆದಿದ್ದಾರೆ ಮತ್ತು 253.1 ಮಿಲಿಯನ್ ಡಾಲರ್‌ನಷ್ಟು ಪರಿಹಾರವನ್ನು ಪಡೆದಿದ್ದಾರೆ. ಸ್ಟೀವ್ ಶ್ವಾರ್ಜ್‌ಮನ್ ವಾರ್ಷಿಕ ಆದಾಯವು 2021ರಲ್ಲಿ 1.1 ಬಿಲಿಯನ್ ಯುಎಸ್ ಡಾಲರ್ ಆಗಿತ್ತು. ಆದರೆ ಸ್ಟೀವ್ ಶ್ವಾರ್ಜ್‌ಮನ್‌ನ ನೂತನ ಆದಾಯವು ವಾಲ್ ಸ್ಟ್ರೀಟ್‌ನಲ್ಲಿಅತೀ ಅಧಿಕ ಲಾಭವನ್ನು ಪಡೆದ ವ್ಯಕ್ತಿಯಾಗಿದ್ದಾರೆ.

ಈ ಬಗ್ಗೆ ಸ್ಟೀವ್ ಶ್ವಾರ್ಜ್‌ಮನ್ ಹೇಳುವುದೇನು?
ಬ್ಲ್ಯೂಬರ್ಗ್ ಬಿಲಿಯನೇರ್‌ಗಳ ಇಂಡೆಕ್ಸ್ ಪ್ರಕಾರ, ಬ್ಲ್ಯಾಕ್‌ಸ್ಟೋನ್ ಸಿಇಒ ಸ್ಟೀವ್ ಶ್ವಾರ್ಜ್‌ಮನ್ ನಿವ್ವಳ ಆದಾಯವು 30.6 ಬಿಲಿಯನ್ ಯುಎಸ್ ಡಾಲರ್ ಆಗಿದೆ. "ನಾನು ಹಲವಾರು ಸ್ಟಾಕ್‌ಗಳನ್ನು ಹೊಂದಿದ್ದೇವೆ. ಹಾಗೆಯೇ ಎಲ್ಲ ಫಂಡ್‌ಗಳಲ್ಲಿ ನಾನು ಹೂಡಿಕೆ ಮಾಡುತ್ತೇನೆ. ಸಂಸ್ಥೆಯೇ ನನ್ನ ಕುಟುಂಬವಾಗಿದೆ," ಎಂದು 76 ವರ್ಷ ಪ್ರಾಯದ ಸ್ಟೀವ್ ಶ್ವಾರ್ಜ್‌ಮನ್ ತಿಳಿಸಿದ್ದಾರೆ.
ಬ್ಲ್ಯಾಕ್‌ಸ್ಟೋನ್ ಸಿಇಒ ಸ್ಟೀವ್ ಶ್ವಾರ್ಜ್‌ಮನ್, ಬ್ಲ್ಯಾಕ್‌ಸ್ಟೋನ್ ಅಧ್ಯಕ್ಷರೂ ಆಗಿರುವ ಜಾನ್ ಗ್ರೇ 2022 ರಲ್ಲಿ 479.2 ಮಿಲಿಯನ್ ಡಾಲರ್ ಆದಾಯವನ್ನು ಗಳಿಸಿದ್ದಾರೆ. ಬ್ಲ್ಯಾಕ್‌ಸ್ಟೋನ್‌ನ ಶೇಕಡ 3ರಷ್ಟು ಸ್ಟೇಕ್‌ನಿಂದ ಬಂದ ಡಿವಿಡೆಂಟ್ 182.7 ಯುಎಸ್ ಡಾಲರ್ ಕೂಡಾ ಈ 479.2 ಮಿಲಿಯನ್ ಡಾಲರ್ ಆದಾಯದಲ್ಲಿ ಸೇರ್ಪಡೆಯಾಗಿದೆ. "ಬ್ಲ್ಯಾಕ್‌ಸ್ಟೋನ್ ಉತ್ತಮ ಮಾದರಿಯನ್ನು ಹೊಂದಿದೆ. ನಮ್ಮ ಹೂಡಿಕೆದಾರರೊಂದಿಗೆ ದೀರ್ಘಕಾಲೀನ ಹೊಂದಾಣಿಕೆಯ ಮೇಲೆ ಇದ್ದಾರೆ," ಎಂದು ವಕ್ತಾರರು ತಿಳಿಸಿದ್ದಾರೆ.
ಬ್ಲ್ಯಾಕ್‌ಸ್ಟೋನ್ ಸಿಇಒ ಸ್ಟೀವ್ ಶ್ವಾರ್ಜ್‌ಮನ್ ಫೆಬ್ರವರಿ 14, 1947ರಲ್ಲಿ ಜನಸಿದ್ದಾರೆ. ಸ್ಟೀವ್ ಶ್ವಾರ್ಜ್‌ಮನ್ ಬ್ಲ್ಯಾಕ್‌ಸ್ಟೋನ್ ಗ್ರೂಪ್ ಅನ್ನು ಆರಂಭ ಮಾಡಿದ್ದಾರೆ. ಇದು 1985ರಲ್ಲಿ ಆರಂಭವಾದ ಜಾಗತಿಕ ಖಾಸಗಿ ಈಕ್ವಿಟಿ ಸಂಸ್ಥೆಯಾಗಿದೆ. ಲೆಹ್‌ಮನ್ ಬ್ರದರ್ಸ್‌ನ ಮಾಜಿ ಸಿಇಒ, ಚೇರ್‌ಮನ್ ಪೀಟರ್ ಜಿ ಪೀಟರ್‌ಸನ್ ಜೊತೆಯಲ್ಲಿ ಈ ಸಂಸ್ಥೆಯನ್ನು ಆರಂಭ ಮಾಡಿದ್ದಾರೆ.


Click it and Unblock the Notifications