ಬೆಂಗಳೂರಿನ ಗ್ರಾಹಕರೊಬ್ಬರು ಕೇವಲ ಒಂದು ಡಜನ್ ಬಾಳೆಹಣ್ಣುಗಳು, ಲೇಸ್ ಪ್ಯಾಕೆಟ್ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಅನ್ನು ಬ್ಲಿಂಕಿಟ್‌ನಿಂದ ಆರ್ಡರ್ ಮಾಡಿದ್ದಾರೆ. ಆದರೆ ದೆಹಲಿಯ ವ್ಯಕ್ತಿಯೊಬ್ಬರು ಒಂದು ವರ್ಷದಲ್ಲಿ ಅಂದರೆ 365 ದಿನಗಳಲ್ಲಿ 9,940 ಕಾಂಡಮ್‌ಗಳನ್ನು ಆರ್ಡರ್ ಮಾಡಿದ್ದಾರೆ!
ಹೌದು, ಬ್ಲಿಂಕಿಟ್ ತನ್ನ ವಾರ್ಷಿಕ ಟ್ರೆಂಡ್ ಅನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಮೇಲಿನ ಬೆಂಗಳೂರಿನ ವ್ಯಕ್ತಿಯ ಆರ್ಡರ್ ಬಗ್ಗೆ ಕೇಳಿದಾಗ, ಯಾರೋ ಬಾಳೆಹಣ್ಣು ಮತ್ತು ಲೇಸ್ ಆರ್ಡರ್ ಮಾಡಲು ಬಯಸಿದ್ದರು ಆದರೆ ಬಿಲ್ ಉಚಿತ ಶಿಪ್ಪಿಂಗ್ ಮಾರ್ಕ್ ಅನ್ನು ದಾಟುತ್ತಿಲ್ಲವೆಂದು ಆಕಸ್ಮಿಕವಾಗಿ ಕಾರ್ಟ್‌ಗೆ ಐಫೋನ್ ಅನ್ನು ಸೇರಿಸಿದರು ಅನಿಸುವುದಿಲ್ಲವೇ?. ಇಂತಹ ವಿಚಿತ್ರ ಆರ್ಡರ್‌ಗಳ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಬ್ಲಿಂಕಿಟ್‌ನ ವಾರ್ಷಿಕ ಟ್ರೆಂಡ್ ಇಲ್ಲಿದೆ
ಬ್ಲಿಂಕಿಟ್ 2023 ರಲ್ಲಿ ತನ್ನ ಇತ್ತೀಚಿಗೆ ಬಿಡುಗಡೆಯಾದ ಮಾರಾಟದ ಟ್ರೆಂಡ್‌ಗಳಲ್ಲಿ ಕೆಲವು ವಿಚಿತ್ರ, ವಿಭಿನ್ನವಾದ ವಿವರವನ್ನು ಅನಾವರಣಗೊಳಿಸಿದೆ. ದಕ್ಷಿಣ ದೆಹಲಿಯ ಒಬ್ಬ ಗ್ರಾಹಕರು ಈ ವರ್ಷದ ಅವಧಿಯಲ್ಲಿ 9,940 ಕಾಂಡೋಮ್‌ಗಳನ್ನು ಆರ್ಡರ್ ಮಾಡಿದ್ದಾರೆ. ಅಂದರೆ ದಿನಕ್ಕೆ ಸುಮಾರು 27 ಮತ್ತು ಪ್ರತಿ ಗಂಟೆಗೆ 1 ಕಾಂಡೋಮ್ ಆರ್ಡರ್ ಮಾಡಿದ್ದಂತೆ ಆಗುತ್ತದೆ.
ಇನ್ನೋರ್ವ ಗ್ರಾಹಕರೊಬ್ಬರು ತಿಂಗಳಿಗೆ 38 ಒಳ ಉಡುಪುಗಳನ್ನು ಆರ್ಡರ್ ಮಾಡಿದ್ದಾರೆ. ತಿಂಗಳ 30 ದಿನಗಳಲ್ಲಿ ಒಂದೊಂದು ಒಳ ಉಡುಪು ತೊಡುವ ಲೆಕ್ಕಾಚಾರವಾದರೂ ಇದು ಅಧಿಕವಾಗಿದೆ. ಹೀಗೆ ವಿಚಿತ್ರವಾದ, ನಮಗೆ ಆಶ್ಚರ್ಯ ಉಂಟು ಮಾಡುವ ಹಲವಾರು ಆರ್ಡರ್‌ಗಳ ವಿವರ ಬ್ಲಿಂಕಿಟ್ ನೀಡಿದೆ.
ಇನ್ನೊಬ್ಬ ಗ್ರಾಹಕರು 2023 ರಲ್ಲಿ 4,832 ಸ್ನಾನದ ಸಾಬೂನುಗಳನ್ನು ಖರೀದಿಸಿದರು. ಅಂದರೆ ದಿನಕ್ಕೆ ಸುಮಾರು 13 ಖರೀದಿ ಮಾಡಿದಂತೆ ಆಗಿದೆ!. ಈ ಆರ್ಡರ್ ಮಾಡಿದ ವ್ಯಕ್ತಿಯು ಈ ಸಾಬೂನನ್ನು ಬಳಕೆ ಮಾಡುತ್ತಿದ್ದರೆ, ಅವನು/ಅವಳು ಪ್ರತಿ ಎರಡು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಒಂದು ಸಾಬೂನನ್ನು ಬಳಕೆ ಮಾಡಿದಂತೆ ಆಗುತ್ತದೆ.
ಇನ್ನೊಬ್ಬ ಗ್ರಾಹಕರು ಒಂದೇ ಆರ್ಡರ್‌ನಲ್ಲಿ 101 ಲೀಟರ್ ಮಿನರಲ್ ವಾಟರ್ (ಬಾಟಲ್ ನೀರು) ಅನ್ನು ಖರೀದಿಸಿದ್ದಾರೆ. ಒಬ್ಬ ವ್ಯಕ್ತಿಯು ವರ್ಷದಲ್ಲಿ 2,670 ಟೂತ್ ಬ್ರಷ್‌ಗಳನ್ನು ಖರೀದಿ ಮಾಡಿದ್ದಾರೆ. ಅಂದರೆ ದಿನಕ್ಕೆ ಸುಮಾರು ಏಳು ಟೂತ್ ಬ್ರಷ್‌ಗಳನ್ನು ಖರೀದಿ ಮಾಡಿದ್ದಂತೆ ಆಗುತ್ತದೆ.
2023 ಅನ್ನು ತನ್ನನ್ನು ತಾನು ಅಲಂಕರಿಸಿಕೊಳ್ಳಲು, ತನ್ನ ಸೌಂದರ್ಯಕ್ಕೆ ಅಧಿಕ ಆದ್ಯತೆ ನೀಡಿದ ಮಹಿಳಾ ಗ್ರಾಹಕರೊಬ್ಬರು ವರ್ಷದಲ್ಲಿ 183 ವಿವಿಧ ಶೇಡ್‌ಗಳ ಲಿಪ್‌ಸ್ಟಿಕ್‌ಗಳನ್ನು ಆರ್ಡರ್ ಮಾಡಿದ್ದಾರೆ. ಹೈದರಾಬಾದಿಯೊಬ್ಬರು ಆ್ಯಪ್‌ನಲ್ಲಿ 17,000 ಕೆಜಿ ಅಕ್ಕಿಯನ್ನು ಆರ್ಡರ್ ಮಾಡಿದ್ದಾರೆ. ಆದರೆ ನಾವು ಇಷ್ಟೊಂದು ಅಕ್ಕಿ ಯಾಕೆ ಎಂದು ಊಹಿಸಲು ಕೂಡಾ ಕಷ್ಟವಾಗಿದೆ.
ಇನ್ನು ಈ ಅಪ್ಲಿಕೇಷನ್‌ನಲ್ಲಿ ಮಧ್ಯರಾತ್ರಿಯ ನಂತರ 3.20 ಲಕ್ಷಕ್ಕೂ ಹೆಚ್ಚು ಮ್ಯಾಗಿ ಪ್ಯಾಕೆಟ್‌ಗಳನ್ನು ಆರ್ಡರ್ ಮಾಡಲಾಗಿದ್ದು, ಅದನ್ನು ತನ್ನ ಗ್ರಾಹಕರಿಗೆ ಆಪ್ ತಲುಪಿಸಿದೆ. ಶಾಲೆಗೆ ಹೋಗುವ ಸಮಯಕ್ಕಿಂತ ಮುಂಚೆಯೇ ಪ್ರಿಂಟ್‌ಔಟ್‌ಗಳಿಗೆ ಸಾಕಷ್ಟು ಬೇಡಿಕೆ ಇದ್ದು, 351,033 ಪ್ರಿಂಟ್‌ಔಟ್‌ಗಳನ್ನು ಬೆಳಿಗ್ಗೆ 8 ಗಂಟೆಗೆ ಮೊದಲು ತಲುಪಿಸಲಾಗಿದೆ.
ಬ್ಲಿಂಕಿಟ್‌ನಲ್ಲಿ 2023ರ ಅತಿ ದೊಡ್ಡ ಆರ್ಡರ್ 1,59,900 ರೂಪಾಯಿಯದ್ದಾಗಿದೆ. ಅದು ಐಫೋನ್ ಪ್ರೋ ಮ್ಯಾಕ್ಸ್ ಆಗಿದೆ. ಬ್ಲಿಂಕಿಟ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ಅಲ್ಬಿಂದರ್ ದಿಂಡ್ಸಾ ಅವರು ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಈ ಕೆಲವು ವಿವರಗಳನ್ನು ಹಂಚಿಕೊಂಡಿದ್ದಾರೆ.
"2023 ರ ಹೊತ್ತಿಗೆ ಬ್ಲಿಂಕಿಟ್‌ನಲ್ಲಿ ಪ್ಯಾಟರ್ನ್‌ಗಳನ್ನು ಖರೀದಿಸುವ ಕುರಿತು ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ವರ್ಷ ಕೊನೆಯಾದಂತೆ ಕೆಲವು ಅತ್ಯುತ್ತಮ ಆರ್ಡರ್‌ಗಳ ಮಾಹಿತಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ," ಎಂದು ಕೆಲವು ಚಿತ್ರಗಳನ್ನು ಹಂಚಿಕೊಂಡು ಅಲ್ಬಿಂದರ್ ದಿಂಡ್ಸಾ ಬರೆದುಕೊಂಡಿದ್ದಾರೆ.


Click it and Unblock the Notifications