ಬಾಲಿವುಡ್‌ನ ಪ್ರೀತಿಯ ನಟಿ, ತನ್ನ ನಗುವಿನಿಂದಲೇ ಹೆಸರುವಾಸಿಯಾದ ನಟಿ ಪ್ರೀತಿ ಜಿಂಟಾ ಈಗ ಮತ್ತೆ ಮುಂಬೈನಲ್ಲಿ ವಾಸವಾಗಲಿದ್ದಾರಾ ಎಂಬ ಸುದ್ದಿ ಹರಡುತ್ತಿದೆ. ರಿಯಲ್ ಎಸ್ಟೇಟ್ ಹೂಡಿಕೆ ಮಾಡುತ್ತಾ ಬಂದಿರುವ ಪ್ರೀತಿ ಜಿಂಟಾ ಮುಂಬೈನಲ್ಲಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ ಎಂದು ಈಗ ಸುದ್ದಿಯಾಗಿದೆ.
ಈ ಡಿಂಪಲ್ ಹುಡುಗಿ ಮುಂಬೈಗೆ ಮತ್ತೆ ಬರುತ್ತಾರೆ ಎಂಬ ಬಗ್ಗೆ ಸುದ್ದಿಯಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಸ್ಪಷ್ಟೀಕರಣ ಲಭ್ಯವಾಗಿಲ್ಲ. ಮುಂಬೈನಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಅನ್ನು ಪ್ರೀತಿ ಜಿಂಟಾ ಖರೀದಿಸಿದ್ದು, ಇದರ ಬೆಲೆ ಇಲ್ಲಿದೆ ಮುಂದೆ ಓದಿ...

ಬಾಂದ್ರಾದಲ್ಲಿ ಒಂದು ಫ್ಲಾಟ್ ಖರೀದಿಸಿದ ಜಿಂಟಾ
ಪ್ರೀತಿ ಜಿಂಟಾ ಮುಂಬೈನ ಐಷಾರಾಮಿ ನಗರವಾದ ಬಾಂದ್ರಾ ನೆರೆಹೊರೆಯಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ. ಮನಿಕಂಟ್ರೋಲ್ ಪ್ರಕಾರ, ಈ ಫ್ಲಾಟ್ 1,474 ಚದರ ಅಡಿ ಕಾರ್ಪೆಟ್ ಪ್ರದೇಶವನ್ನು ಹೊಂದಿದೆ. ಹಾಗೆಯೇ ಇದರ ಅಂದಾಜು ಬೆಲೆ 17.01 ಕೋಟಿ ರೂಪಾಯಿ ಆಗಿದೆ. ಇದು ಬಾಂದ್ರಾದ ಪಾಲಿ ಹಿಲ್ ಪ್ರದೇಶದಲ್ಲಿದೆ.
ಐಷಾರಾಮಿ ಅಪಾರ್ಟ್‌ಮೆಂಟ್ ಹಿಂದಿರುವ ಡೆವಲಪರ್
ಈ ವಸತಿ ಅಪಾರ್ಟ್‌ಮೆಂಟ್, ಒಟ್ಟು 1,721 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಇದು ಬಾಂದ್ರಾದ ಪಾಲಿ ಹಿಲ್‌ನಲ್ಲಿ ರುಸ್ತೋಮ್‌ಜೀ ನಿರ್ಮಿಸುತ್ತಿರುವ ಸೂಪರ್-ಪ್ರೀಮಿಯಂ ರೆಸಿಡೆನ್ಶಿಯಲ್ ಟವರ್‌ನ ಭಾಗವಾಗಿದೆ. ಈ ಅಂದವಾದ ಜಾಗದ ಬೆಲೆ 17.01 ಕೋಟಿ ರೂಪಾಯಿ ಆಗಿದೆ.
ಅಪಾರ್ಟ್‌ಮೆಂಟ್ ಹೇಗಿದೆ?
ನಿರ್ಮಾಣ ಹಂತದಲ್ಲಿದ್ದರೂ, ಪ್ರೀತಿ ಜಿಂಟಾರ ಹೊಸ ಫ್ಲಾಟ್ ಅದರ 1,474 ಚದರ ಅಡಿ ಕಾರ್ಪೆಟ್ ಪ್ರದೇಶದ ಆಧಾರದ ಮೇಲೆ ಪ್ರತಿ ಚದರ ಅಡಿಗೆ ಅಂದಾಜು 1.15 ಲಕ್ಷ ರೂಪಾಯಿ ಆಗಿದೆ. ಹೆಚ್ಚುವರಿಯಾಗಿ, ನಟಿ ಎರಡು ಕಾರು ಪಾರ್ಕಿಂಗ್ ಸ್ಥಳಗಳನ್ನು, 90 ಚದರ ಅಡಿ ಪ್ರದೇಶವನ್ನು ಪಡೆಯುತ್ತಾರೆ ಎಂದು ವರದಿ ಉಲ್ಲೇಖಿಸಿದೆ. ಈ ಅಪಾರ್ಟ್‌ಮೆಂಟ್ 11 ನೇ ಮಹಡಿಯಲ್ಲಿದ್ದು, ಅಕ್ಟೋಬರ್ 23 ರಂದು ನೋಂದಾವಣಿ ಮಾಡಲಾಗಿದೆ. ಕೀಸ್ಟೋನ್ ರಿಯಾಲ್ಟರ್ಸ್ ಇದರ ಮಾರಾಟಗಾರರು ಆಗಿದ್ದಾರೆ.
ಸ್ಟ್ಯಾಂಪ್ ಡ್ಯೂಟಿ ಮತ್ತು ಇನ್ನಷ್ಟು
ರಿಯಾಲ್ಟಿ ಪ್ಲಾಟ್‌ಫಾರ್ಮ್ IndexTap.com ಪರಿಶೀಲಿಸಿದ ದಾಖಲೆಗಳ ಪ್ರಕಾರ, ಖರೀದಿಗಾಗಿ, ನಟಿ 85.07 ಲಕ್ಷ ರೂಪಾಯಿಗಳ ಮುದ್ರಾಂಕ ಶುಲ್ಕ ಅಥವಾ ಸ್ಟ್ಯಾಂಪ್ ಡ್ಯೂಟಿಯನ್ನು ಪಾವತಿಸಿದ್ದಾರೆ. ಆದರೆ ಪ್ರೀತಿ ಜಿಂಟಾ ಅಥವಾ ಕೀಸ್ಟೋನ್ ರಿಯಾಲ್ಟರ್ಸ್ ಈ ವಿಷಯದ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆಗಳನ್ನು ನೀಡಿಲ್ಲ.
ಪ್ರೀತಿ ಜಿಂಟಾ ನಿವ್ವಳ ಮೌಲ್ಯ
ಪ್ರೀತಿ ಜಿಂಟಾ ಸಿನಿಮಾ ನಟನೆಯಿಂದ ವಿರಾಮ ತೆಗೆದುಕೊಂಡಿದ್ದರೂ ವ್ವಳ ಮೌಲ್ಯವು 15 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಭಾರತೀಯ ರೂಪಾಯಿಯಲ್ಲಿ ಇದು 110 ಕೋಟಿ ರೂಪಾಯಿ ಆಗಿದೆ. ಐಪಿಎಲ್ ಸೀಸನ್‌ನಲ್ಲಿ ಪ್ರಮುಖವಾಗಿ ಪ್ರೀತಿ ಜಿಂಟಾ ಕಾಣಿಸಿಕೊಳ್ಳುತ್ತಾರೆ. ಪ್ರೀತಿ ಜಿಂಟಾ ಕಿಂಗ್ಸ್ XI ಪಂಜಾಬ್ ತಂಡದ ಸಹ-ಮಾಲೀಕರಾಗಿದ್ದಾರೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications