ಪ್ರಸ್ತುತ ಆಧಾರ್ ಕಾರ್ಡ್‌ನಂತೆಯೇ ಪ್ಯಾನ್ ಕಾರ್ಡ್ ಕೂಡಾ ಅಗತ್ಯ ದಾಖಲೆಯಾಗಿದೆ. ನಮ್ಮ ಬ್ಯಾಂಕ್ ಸಂಬಂಧಿತ, ಹಣಕಾಸು ಸಂಬಂಧಿತ ಎಲ್ಲ ಕಾರ್ಯಗಳಿಗೂ ಪ್ಯಾನ್ ಕಾರ್ಡ್ ಒದಗಿಸುವುದು ಮುಖ್ಯವಾಗಿದೆ. ಈ ನಡುವೆ ನಾವು ಒಂದಕ್ಕಿಂತ ಅಧಿಕ ಪ್ಯಾನ್ ಕಾರ್ಡ್ ಅನ್ನು ಹೊಂದಬಹುದೇ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಅದಕ್ಕೆ ನಾವಿಲ್ಲಿ ಉತ್ತರ ನೀಡಿದ್ದೇವೆ.
ಇನ್ನು ನೀವು ಪ್ಯಾನ್ ಕಾರ್ಡ್ ಅನ್ನು ಆನ್‌ಲೈನ್ ಆಗಿಯೂ ಪಡೆಯಬಹುದು. ಅದಕ್ಕೆ ಇ-ಪ್ಯಾನ್ ಎಂದು ಕರೆಯಲಾಗುತ್ತದೆ. ಇದು ಪಿಡಿಎಫ್ ಮೂಲದಲ್ಲಿ ಲಭ್ಯವಾಗಲಿದೆ. ನಿಮ್ಮ ಪ್ಯಾನ್ ಅಪ್ಲಿಕೇಶನ್ ಫಾರ್ಮ್ ಅಲ್ಲಿ ಉಲ್ಲೇಖ ಮಾಡಲಾದ ಇಮೇಲ್ ಐಡಿಗೆ ಇ-ಪ್ಯಾನ್ ಕಳುಹಿಸಲಾಗುತ್ತದೆ. ಇದು ನಮಗೆ ಪ್ಯಾನ್ ಕಾರ್ಡ್ ತೀರಾ ಅಗತ್ಯವಾದ್ದಲ್ಲಿ ಮಾತ್ರ ಲಭ್ಯವಾಗಲಿದೆ.
ಇನ್ನು ನಮ್ಮಲ್ಲಿ ಇರುವ ಪ್ಯಾನ್ ಕಾರ್ಡ್ ಕಳೆದುಹೋದರೆ ಮತ್ತೆ ನಾವು ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಮಾಡಲು ಸಾಧ್ಯವಾಗದು. ಆ ಸಂದರ್ಭದಲ್ಲಿ ಎರಡು ಪ್ಯಾನ್ ಕಾರ್ಡ್‌ಗೆ ನಾವು ಅರ್ಜಿ ಸಲ್ಲಿಕೆ ಮಾಡಿದಂತೆ ಆಗಲಿದೆ. ಆ ಸಂದರ್ಭದಲ್ಲಿ ನಾವು ಏನು ಮಾಡುವುದು, ಒಂದಕ್ಕಿಂತ ಅಧಿಕ ಪ್ಯಾನ್ ಕಾರ್ಡ್ ಹೊದಬಹುದೇ, ನಾವು ಪ್ಯಾನ್ ಕಾರ್ಡ್ ಅನ್ನು ವೆರಿಫಿಕೇಶನ್ ಮಾಡುವುದು ಹೇಗೆ, ಪ್ಯಾನ್ ಕಾರ್ಡ್ ಸಂಬಂಧಿತ ಇತರೆ ದಂಡಗಳು ಯಾವುದು ಇದೆ ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ...
ಒಂದಕ್ಕಿಂತ ಅಧಿಕ ಪ್ಯಾನ್ ಕಾರ್ಡ್ ಹೊಂದಬಹುದೇ?
ಒಬ್ಬ ವ್ಯಕ್ತಿಯು ಒಂದಕ್ಕಿಂತ ಅಧಿಕ ಪ್ಯಾನ್ ಕಾರ್ಡ್ ಅನ್ನು ಹೊಂದಲು ಅವಕಾಶವಿಲ್ಲ. ಒಬ್ಬ ವ್ಯಕ್ತಿಗೆ ಈಗಾಗಲೇ ಪ್ಯಾನ್ ಮಂಜೂರು ಆಗಿದ್ದರೆ ಮತ್ತೆ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಮಾಡಲು ಸಾಧ್ಯವಾಗುವುದಿಲ್ಲ. ಅಕ್ರಮವಾಗಿ ಒಂದಕ್ಕಿಂತ ಅಧಿಕ ಪ್ಯಾನ್ ಕಾರ್ಡ್ ಅನ್ನು ಹೊಂದಿದ್ದರೆ 1961ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272B ಅಡಿಯಲ್ಲಿ 10,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಒಬ್ಬ ವ್ಯಕ್ತಿಗೆ ಒಂದಕ್ಕಿಂತ ಅಧಿಕ ಪ್ಯಾನ್ ಕಾರ್ಡ್ ಮಂಜೂರು. ಆದರೆ, ಆ ವ್ಯಕ್ತಿಯು ಆ ಪೈಕಿ ಒಂದು ಪ್ಯಾನ್ ಕಾರ್ಡ್ ಅನ್ನು ವಾಪಾಸ್ ನೀಡಬೇಕಾಗುತ್ತದೆ.
ಪ್ಯಾನ್ ಕಾರ್ಡ್ ಕಳೆದುಹೋದರೆ ಏನು ಮಾಡುವುದು?
ನಮ್ಮ ಪ್ಯಾನ್ ಕಾರ್ಡ್ ಕಳೆದುಹೋದರೆ ಅಥವಾ ಕಳ್ಳತನವಾದರೆ ನಾವು ಇನ್ನೊಂದು ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಮಾಡಲು ಸಾಧ್ಯವಾಗುವುದಿಲ್ಲ. ನಾವು ಅಕ್ರಮವಾಗಿ ಡುಬ್ಲಿಕೇಟ್ ಪ್ಯಾನ್ ಕಾರ್ಡ್ ಅನ್ನು ಮಾಡಿಸುವ ಉಸಾಬರಿಗೆ ಹೋಗಬೇಡಿ. ಯಾಕೆಂದರೆ ಇದಕ್ಕೆ ಹತ್ತು ಸಾವಿರ ರೂಪಾಯಿ ದಂಡ ಬೀಳಲಿದೆ. ನಿಮ್ಮ ಪ್ಯಾನ್ ಕಾರ್ಡ್ ಕಳ್ಳತನವಾದರೆ ಅಥವಾ ಕಳೆದುಹೋದರೆ ನೀವು ಮೊದಲು ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎಫ್‌ಐಆರ್ ಪ್ರತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಬಳಿಕ 49ಎ ಫಾರ್ಮ್ ಅನ್ನು ಪ್ಯಾನ್ ಕೇಂದ್ರದಲ್ಲಿ ಭರ್ತಿ ಮಾಡಬೇಕಾಗುತ್ತದೆ. ಐಟಿ ಇಲಾಖೆಗೆ ರಿಕ್ವೆಸ್ಟ್ ಲೆಟರ್ ಅನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಈ ವೇಳೆ ಎಫ್‌ಐಆರ್ ಕೂಡಾ ಲಗತ್ತಿಸಬೇಕಾಗುತ್ತದೆ.
ಪ್ಯಾನ್ ಕಾರ್ಡ್‌ನ ವ್ಯಾಲಿಡಿಟಿ ಎಷ್ಟು?
ಭಾರತದಾದ್ಯಂತ ಪ್ಯಾನ್ ಕಾರ್ಡ್ ಜೀವನ ಪೂರ್ತಿ ಇರುವ ದಾಖಲೆಯಾಗಿದೆ. ನಿಮ್ಮ ವಿಳಾಸ ಬದಲಾವಣೆ ಮೊದಲಾದವುಗಳು ಪ್ಯಾನ್ ಕಾರ್ಡ್ ಮೇಲೆ ಪ್ರಭಾವ ಉಂಟು ಮಾಡುವುದಿಲ್ಲ. ಆದರೆ ಪ್ಯಾನ್ ಕಾರ್ಡ್‌ನಲ್ಲಿ ಯಾವುದೇ ಬದಲಾವಣೆಯನ್ನು ಮಾಡುವುದಿದ್ದರೆ ನೀವು "Request For New PAN Card Or/ And Changes or Correction in PAN Data" ಎಂಬ ಫಾರ್ಮ್ ಅನ್ನು ಸಲ್ಲಿಕೆ ಮಾಡಬೇಕಾಗುತ್ತದೆ.
ಪ್ಯಾನ್ ಸಂಬಂಧಿತ ಕಾರ್ಯ ಮಾಡದಿದ್ದರೆ ದಂಡವೇನು?
ಪ್ಯಾನ್‌ಗೆ ಸಂಬಂಧಿಸಿದ ಕಾರ್ಯಗಳನ್ನು ನೀವು ಅನುಸರಿಸದಿದ್ದರೆ ತೆರಿಗೆದಾರರಿಂದ ಡೀಫಾಲ್ಟ್ ಆಗಿದ್ದಲ್ಲಿ ಸೆಕ್ಷನ್ 272B ದಂಡವನ್ನು ವಿಧಿಸಲಾಗುತ್ತದೆ. ಪ್ಯಾನ್ ಸಂಬಂಧಿತ ದಾಖಲೆಯಲ್ಲಿ ತಪ್ಪಾದ ಪ್ಯಾನ್ ಅನ್ನು ಉಲ್ಲೇಖ ಮಾಡಿದ್ದರೂ ಕೂಡಾ ದಂಡ ವಿಧಿಸಲಾಗುತ್ತದೆ. ತೆರಿಗೆಯನ್ನು ಕಡಿತಗೊಳಿಸುವ ವ್ಯಕ್ತಿ ಅಥವಾ ತೆರಿಗೆ ಸಂಗ್ರಹಿಸುವ ವ್ಯಕ್ತಿಗೆ ತಪ್ಪಾದ ಪ್ಯಾನ್ ನೀಡಿದರೂ ಕೂಡಾ ದಂಡ ವಿಧಿಸಲಾಗುತ್ತದೆ. ಹತ್ತು ಸಾವಿರದವರೆಗೆ ದಂಡ ವಿಧಿಸಬಹುದು.


Click it and Unblock the Notifications