ಬೆಳಕಿನ ಹಬ್ಬ ದೀಪಾವಳಿಗೆ (Diwali) ದಿನಗಣನೆ ಶುರುವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಮನೆ ಮನೆಗಳಲ್ಲಿ ಹಬ್ಬದ ಸಂಭ್ರಮ ಜೋರಾಗಿಯೇ ನಡೆಯುತ್ತಿರುತ್ತೆ. ದೇಶದಲ್ಲಿ ಈಗಾಗಲೇ ಹಬ್ಬಕ್ಕಾಗಿ ಹಲವು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ದೀಪಾವಲಿ ಹಬ್ಬ ಬಂದ್ರೆ ಸಾಕು ಪಟಾಕಿಗಳ ಸದ್ದು ಎಲ್ಲಾ ಊರುಗಳಲ್ಲಿ ಕೇಳುತ್ತಿರುತ್ತದೆ. ಒಂದು ಕಡೆ ಪಟಾಕಿ, ಮತ್ತೊಂದು ಕಡೆ ಮನೆ ಮುಂದೆ ಕಲರ್ ಕಲರ್ ಲೈಟು, ದೀಪಗಳು ಕಂಗೊಳಿಸುತ್ತಿರುತ್ತದೆ. ಇನ್ನು ದೂರದ ಊರುಗಳಿಂದ ಹಬ್ಬಕ್ಕಾಗಿ ಅದೆಷ್ಟೋ ಮಂದಿ ಊರಿಗೆ ಬರುತ್ತಾರೆ. ಈ ಸಂದರ್ಭದಲ್ಲಿ ಬಟ್ಟೆ, ದೀಪ, ಸಿಹಿತಿಂಡಿಗಳು, ಪಟಾಕಿಗಳನ್ನು (firecrackers) ಮನೆಗೆ ತಂದು ಕುಟುಂಬದವರ ಜೊತೆಗೆ ಸೆಲೆಬ್ರೇಷನ್ ಮಾಡಲು ಪ್ಲಾನ್‌ನಲ್ಲಿರುತ್ತಾರೆ. ಆದ್ರೆ ರೈಲಿನಲ್ಲಿ ಬರುವ ಪ್ರಯಾಣಿಕರು ಕೆಲವು ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಹೌದು, ರೈಲಿನಲ್ಲಿ ಬಟ್ಟೆ, ಆಟಿಕೆ, ಸಿಹಿತಿಂಡಿ ಇಂತಹ ವಸ್ತುಗಳನ್ನು ಆರಾಮವಾಗಿ ತೆಗೆದುಕೊಂಡು ಹೋಗಬಹುದು. ಆದ್ರೆ ಸ್ಫೋಟಕದಂತಹ ವಸ್ತುಗಳನ್ನು ರೈಲಿನಲ್ಲಿ ಕೊಂಡೊಯ್ಯುವಂತಿಲ್ಲ. ಅಲ್ಲದೇ ಯಾವುದೇ ಪಟಾಕಿಗಳೊಂದಿಗೆ ಕೂಡ ರೈಲಿನಲ್ಲಿ ಪ್ರಯಾಣಿಸಬಾರದು. ಏಕೆಂದರೆ ಇಂತಹ ವಸ್ತುಗಳನ್ನು ರೈಲಿನಲ್ಲಿ ಸಾಗಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನೀವು ಪಟಾಕಿಗಳು ಅಥವಾ ಸ್ಪಾರ್ಕ್ಲರ್‌ಗಳೊಂದಿಗೆ ಸಿಕ್ಕಿಬಿದ್ದರೆ, ನೀವು ದಂಡ ಮತ್ತು ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಬರಬಹುದು.
ಇದನ್ನು ಮಾತ್ರ ರೈಲಿನಲ್ಲಿ ಸಾಗಿಸಬೇಡಿ!
ಸಾಮಾನ್ಯವಾಗಿ ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ನಮ್ಮ ರಾಜ್ಯದಲ್ಲಿ ಪಟಾಕಿಗಳಿಗೆ ಸ್ವಲ್ಪ ದುಬಾರಿ. ಆದ್ದರಿಂದ ಹೆಚ್ಚಿನವರು ಹೊರ ರಾಜ್ಯದಲ್ಲಿರುವವರು ಅಗ್ಗದ ಅಂಗಡಿಗಳಿಂದ ಪಟಾಕಿ, ಇನ್ನಿತರ ವಸ್ತುಗಳನ್ನು ಹಬ್ಬಕ್ಕಾಗಿ ಮನೆಗೆ ತರುವ ಪ್ಲಾನ್ ಮಾಡುತ್ತಾರೆ. ಆದ್ರೆ ರೈಲಿನಲ್ಲಿ ಅಂತರ ಸುಡುವ, ಸ್ಫೋಟಕದಂತೆ ವಸ್ತುಗಳನ್ನು ಸಾಗಿಸುವುದಕ್ಕೆ ಅನುಮತಿಯಿಲ್ಲ. ರೈಲಿನಲ್ಲಿ ಸಂಪೂರ್ಣವಾಗಿ ಪಟಾಕಿಯನ್ನು ನಿಷೇಧಿಸಲಾಗಿದೆ.
ರೈಲಿನಲ್ಲಿ ಪಟಾಕಿ ಏಕೆ ನಿಷೇಧ?
ಯಾರೇ ಒಬ್ಬ ಪ್ರಯಾಣಿಕ ರೈಲಿನಲ್ಲಿ ಪಟಾಕಿಯನ್ನು ಕೊಂಡೊಯ್ಯುವಂತಿಲ್ಲ. ಏಕೆಂದರೆ ರೈಲು ಸಾರ್ವಜನಿಕ ಸಾರಿಗೆ. ಸಾವಿರಾರು ಪ್ರಯಾಣಿಕರು ಪ್ರಯಾಣಿಸುವ ಸಾರಿಗೆ ವ್ಯವಸ್ಥೆಯದು. ಅಂಥದ್ರಲ್ಲಿ ಕೊಂಡೊಯ್ದ ಪಟಾಕಿಗೆ ಸ್ವಲ್ಪ ಕಿಡಿ ತಾಗಿದರೂ ಇಡೀ ರೈಲು, ದುರಂತಕ್ಕೀಡಾಗಬಹುದು. ಅದೇ ಕಾರಣದಿಂದ ಪ್ರತಿ ವರ್ಷ ದೀಪಾವಳಿಯ ಸಮಯದಲ್ಲಿ, ರೈಲ್ವೆ ಸುರಕ್ಷತಾ ಇಲಾಖೆಯು ಈ ನಿಯಮದ ಬಗ್ಗೆ ಖಡಕ್ ಆಗಿ ಸೂಚನೆ ನೀಡುತ್ತದೆ.
ತಪ್ಪಿದ್ರೆ ಜೈಲು ಫಿಕ್ಸ್
ಇನ್ನು ಭಾರತೀಯ ರೈಲ್ವೆ ನಿಯಮಗಳ ಪ್ರಕಾರ, ಸೂಚನೆಯ ಹೊರತಾಗಿಯೂ ನಿಯಮ ಉಲ್ಲಂಘಿಸಿ ಯಾವುದೇ ಪಟಾಕಿಯಂತಹ ವಸ್ತುಗಳನ್ನು ರೈಲಿನಲ್ಲಿ ಸಾಗಿಸಿದರೆ ಅಂತಹ ಪ್ರಯಾಣಿಕರ ವಿರುದ್ಧ ರೈಲ್ವೇ ಕಾಯ್ದೆಯ ಸೆಕ್ಷನ್ 164 ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಅಲ್ಲದೇ ದಂಡ ವಿಧಿಸುವ ಸಾಧ್ಯತೆ ಇದೆ. ಜೊತೆಗೆ 3 ವರ್ಷಗಳ ಕಾಲ ಜೈಲು ಶಿಕ್ಷೆಯನ್ನೂ ವಿಧಿಸಬಹುದು. ಇನ್ನು ರೈಲಿನಲ್ಲಿ ಪಟಾಕಿಯಂತಹ ಸ್ಫೋಟಕ ವಸ್ತುಗಳ ಸಾಗಾಟವನ್ನು ನಿಷೇಧಿಸಿದ್ದರಿಂದ, ಈ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
ಆದ್ದರಿಂದ ದೀಪಾವಳಿಗೆ ಊರಿಗೆ ಹೋಗುವ ಪ್ಲಾನ್ ಮಾಡಿದ್ದವರು, ಊರಿಗೆ ಹೋಗುವಾಗ ಪಟಾಕಿ ತೆಗೆದುಕೊಂಡು ಹೋಗ್ಬೇಕು ಎಂದು ಪ್ಲಾನ್ ಮಾಡಿದ್ದವರಿಗೆ ಈ ನಿಯಮ ಅನ್ವಯವಾಗುತ್ತೆ.


Click it and Unblock the Notifications