ಇತ್ತೀಚಿನ ದಿನಗಳಲ್ಲಿ, ಭಾರತದಲ್ಲಿ ವೈಯಕ್ತಿಕ ಸಾಲದ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಈ ನಡುವೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಯಾವುದೇ ರೀತಿಯ ಒತ್ತಡ ತಪ್ಪಿಸಲು ತಮ್ಮ ವ್ಯಾಪಾರ ಕಾರ್ಯವಿಧಾನವನ್ನು ಬಲಪಡಿಸುವಂತೆ ಸಾಲ ನೀಡುವ ಸಂಸ್ಥೆಗಳಿಗೆ ಒತ್ತಾಯಿಸಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ವರದಿಯ ಪ್ರಕಾರ, ವೈಯಕ್ತಿಕ ಸಾಲಗಳ ಒಟ್ಟು ಕ್ರೆಡಿಟ್ ವಿಭಾಗವು 47.7 ಟ್ರಿಲಿಯನ್ ರೂಪಾಯಿ ಅಂದರೆ ಹಿಂದಿನ ವರ್ಷ 36.47 ಟ್ರಿಲಿಯನ್ ರೂಪಾಯಿಯಿಂದ ಶೇಕಡ 30 ರಷ್ಟು ಏರಿಕೆಯನ್ನು ಕಂಡಿದೆ. ಒಟ್ಟು ವೈಯಕ್ತಿಕ ಸಾಲದ ಚಲಾವಣೆಯಲ್ಲಿ, ಶೇಕಡ 47 ರಷ್ಟು ಮಾರುಕಟ್ಟೆ ಪಾಲು ಫಿನ್‌ಟೆಕ್ ನಿಗಮಗಳಿಗೆ ಸೇರಿದೆ.

ಫಿನ್‌ಟೆಕ್ ನಿಗಮಗಳಲ್ಲಿ 1 ಲಕ್ಷ ರೂಪಾಯಿಗಿಂತ ಕಡಿಮೆ ಮೊತ್ತದ ಸಾಲಗಳ ಪ್ರಕಾರ ಶೇಕಡ 73 ರಷ್ಟು ಏರಿಕೆಯಾಗಿದೆ. ಅಲ್ವಾರ್, ಗೋರಖ್‌ಪುರ ಮತ್ತು ಬಾರ್ಪೇಟಾದಂತಹ ಪಟ್ಟಣಗಳಲ್ಲಿ ಸಾಲ ವಿತರಣೆ ಹೆಚ್ಚಳ ಕಂಡಿದೆ. ಎಲ್ಲ ವಸ್ತುಗಳ ಬೆಲೆಯು ದುಬಾರಿಯಾಗುತ್ತಾ ಸಾಗುತ್ತಿದ್ದಂತೆ ವೈಯಕ್ತಿಕ ಸಾಲದ ಪ್ರಮಾಣವು ಕೂಡಾ ಅಧಿಕವಾಗುತ್ತಾ ಸಾಗುತ್ತಿದೆ.
ಆದರೆ ನಾವು ಕಡಿಮೆ ಬಡ್ಡಿದರ ಎಲ್ಲಿದೆ ನೋಡಿ ಸಾಲವನ್ನು ಪಡೆದರೆ ಉತ್ತಮವಲ್ಲವೇ?. ವೈಯಕ್ತಿಕ ಸಾಲಕ್ಕೆ ಯಾವ ಬ್ಯಾಂಕ್‌ನಲ್ಲಿ ಅತೀ ಕಡಿಮೆ ಬಡ್ಡಿದರ ನೀಡಲಾಗುತ್ತದೆ?, ಇಎಂಐ ಲೆಕ್ಕಾಚಾರ ಹೇಗೆ ನಡೆಯುತ್ತದೆ?, ಕ್ರೆಡಿಟ್ ಸ್ಕೋರ್ ಎಷ್ಟು ಮುಖ್ಯವಾಗುತ್ತದೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....
ಕ್ರೆಡಿಟ್ ಸ್ಕೋರ್ ಬಗ್ಗೆ ಮಾಹಿತಿ
ಇತ್ತೀಚಿನ ದಿನಗಳಲ್ಲಿ, ವ್ಯಕ್ತಿಯ ಅಥವಾ ಸಂಸ್ಥೆಯ ಕ್ರೆಡಿಟ್ ಸ್ಕೋರ್ ಸುರಕ್ಷಿತ ಅಥವಾ ಅಸುರಕ್ಷಿತ ಸಾಲಗಳನ್ನು ಪಡೆಯುವ ಮುಖ್ಯ ಅಂಶವಾಗಿದೆ. ಸಾಲ ಪಡೆಯುವವರ ಹಣಕಾಸಿನ ಕ್ರೆಡಿಟ್ ಹಿಸ್ಟರಿ ಸೂಕ್ತವಾದ ಮೊತ್ತಗಳು ಮತ್ತು ಬಡ್ಡಿದರಗಳನ್ನು ನೀಡುವುದನ್ನು ಖಚಿತಪಡಿಸಿಕೊಳ್ಳಲು ಮಹತ್ವದ್ದಾಗಿದೆ.
739 ಅಥವಾ 799 ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಕಡಿಮೆ ಬಡ್ಡಿದರಗಳೊಂದಿಗೆ ಹೆಚ್ಚಿನ ಸಾಲದ ಮೊತ್ತವನ್ನು ಪಡೆಯಲು ಸಹಾಯ ಮಾಡುತ್ತದೆ. 600 ಕ್ಕೂ ಕೆಳಗಿನ ಕ್ರೆಡಿಟ್ ಸ್ಕೋರ್ ಸಾಲದಾತರಿಗೆ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಕ್ರೆಡಿಟ್ ಸ್ಕೋರ್ ಕಡಿಮೆಯಾಗಿದ್ದರೆ ಸಾಲದ ಮೊತ್ತ ಕಡಿಮೆಯಾಗುತ್ತದೆ ಮತ್ತು ಬಡ್ಡಿದರಗಳು ಕೂಡಾ ಅಧಿಕವಾಗುತ್ತದೆ.
ವೈಯಕ್ತಿಕ ಸಾಲ ಇಎಂಐಯ ಲೆಕ್ಕಾಚಾರ
ಇಎಂಐ ಎನ್ನುವುದು ವ್ಯಕ್ತಿಯೊಬ್ಬರು ಸಂಪಾದಿಸಿದ ವೈಯಕ್ತಿಕ ಸಾಲಕ್ಕೆ ಪಾವತಿ ಮಾಡಲು ಅಗತ್ಯವಿರುವ ಕಂತುಗಳಾಗಿದೆ. ಅಂದಾಜು ಕಂತು ಮೊತ್ತವನ್ನು ಸಾಲ ನೀಡಿರುವ ಸಂಸ್ಥೆಯ ವೆಬ್‌ಸೈಟ್‌ಗಳಲ್ಲಿ ಲಭ್ಯವಿರುವ ಆನ್‌ಲೈನ್ ಇಎಂಐ ಕ್ಯಾಲ್ಕುಲೇಟರ್ ಮೂಲಕ ಲೆಕ್ಕಹಾಕಲಾಗುತ್ತದೆ.
ಮಾಸಿಕ ಕಂತುಗಳನ್ನು ಲೆಕ್ಕಾಚಾರ ಮಾಡುವ ಸೂತ್ರ:
ಇಎಂಐ= [(ಪಿ x ಆರ್) x (1 + ಆರ್) /ಎನ್] ÷ [(1 + ಆರ್) / (ಎನ್- 1)]
ಅಂದರೆ EMI = [(P x R) x (1 + R) / N] ÷ [(1 + R) / (N - 1)] ಆಗಿದೆ. ಅಂದರೆ ಪಿ ಎಂದರೆ ಪ್ರಿನ್ಸಿಪಲ್ ಮೊತ್ತ ಅಥವಾ ಸಾಲದ ಮೊತ್ತವಾಗಿದೆ. ಆರ್ ಎಂದರೆ ಮಾಸಿಕ ಅನ್ವಯವಾಗುವ ಬಡ್ಡಿ ದರವಾಗಿದೆ. ಎನ್ ಎಂದರೆ ಸಾಲವನ್ನು ಮರುಪಾವತಿಸಬೇಕಾದ ತಿಂಗಳುಗಳ ಸಂಖ್ಯೆ (ವರ್ಷಗಳ ಸಂಖ್ಯೆ x 12 ತಿಂಗಳುಗಳು) ಆಗಿದೆ.
ಉದಾಹರಣೆಗೆ, ಒಬ್ಬರು ವೈಯಕ್ತಿಕ ಸಾಲ ಎರಡು ಲಕ್ಷ ರೂಪಾಯಿಯನ್ನು 5 ವರ್ಷಗಳವರೆಗೆ (5 x 12 ತಿಂಗಳುಗಳು) ಶೇಕಡ 12 ಬಡ್ಡಿ ದರದೊಂದಿಗೆ (ಶೇಕಡ 12 ÷ 12 ತಿಂಗಳು = ಶೇಕಡ 1 ಪ್ರತಿ ತಿಂಗಳು) ಪಡೆದರೆ ಸೂತ್ರದ ಪ್ರಕಾರ ಲೆಕ್ಕಾಚಾರ ಈ ಕೆಳಗಿದೆ.
ಇಎಂಐ = [(2,00,000 x 1/100) x (1 + 1/100) / 60] ÷ [(1 + 1/100) / (60 - 1)]
ಲೆಕ್ಕಾಚಾರದ ನಂತರ, ಮಾಸಿಕ ಕಂತುಗಳು ಅಥವಾ ಇಎಂಐ ಮೊತ್ತವು ಸರಿಸುಮಾರು 4,449 ರೂಪಾಯಿ ಆಗಿದೆ.
ಅಗತ್ಯ ದಾಖಲೆಗಳ ಬಗ್ಗೆ ತಿಳಿದಿರಲಿ
ವೈಯಕ್ತಿಕ ಸಾಲ ಅಗತ್ಯವಿರುವ ಡಾಕ್ಯುಮೆಂಟ್‌ಗಳು ಯಾವುದು ಎಂದು ತಿಳಿಸಿದರಬೇಕಾಗುತ್ತದೆ. ಸಂಬಳ ಪಡೆಯುವವರು ಅಥವಾ ಸ್ವಯಂ ಉದ್ಯೋಗ ಮಾಡುವವರಿಗೆ ಸಾಮಾನ್ಯವಾಗಿ ವೈಯಕ್ತಿಕ ಸಾಲವನ್ನು ನೀಡಲಾಗುತ್ತದೆ.
ಸಂಬಳ ಪಡೆಯುವ ಉದ್ಯೋಗಿಗೆ ಐಡಿ ಪುರಾವೆ, ಉದ್ಯೋಗದಾತರ ಪುರಾವೆ ಮತ್ತು ಆದಾಯ ಪುರಾವೆಗಳಾದ ಮೂರು ತಿಂಗಳ ಪೇಸ್ಲಿಪ್ ಮತ್ತು ಮೂರು ವರ್ಷಗಳ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಬೇಕಾಗುತ್ತದೆ. ಸ್ವಯಂ ಉದ್ಯೋಗ ಮಾಡುವವರಿಗೆ ಆದಾಯ ಪುರಾವೆ, ವೃತ್ತಿಪರ ನೋಂದಣಿ, ಬ್ಯಾಂಕ್ ಸ್ಟೇಟ್‌ಮೆಂಟ್ ಮತ್ತು ಕಳೆದ ಮೂರು ವರ್ಷಗಳ ಐಟಿಆರ್ ದಾಖಲೆಗಳು ಅಗತ್ಯವಾಗಿದೆ.
ಕಡಿಮೆ ಬಡ್ಡಿದರವಿರುವ ಬ್ಯಾಂಕ್‌ಗಳಿವು
1. ಬ್ಯಾಂಕ್ ಆಫ್ ಮಹಾರಾಷ್ಟ್ರ, ಶೇಕಡ 10 ಬಡ್ಡಿದರ
2. ಬ್ಯಾಂಕ್ ಆಫ್ ಇಂಡಿಯಾ, ಶೇಕಡ 10.25 ಬಡ್ಡಿದರ
3. ಆಕ್ಸಿಸ್ ಬ್ಯಾಂಕ್, ಶೇಕಡ 10.49 ಬಡ್ಡಿದರ
4. ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಶೇಕಡ 10.49 ಬಡ್ಡಿದರ
5. ಎಚ್‌ಡಿಎಫ್‌ಸಿ ಬ್ಯಾಂಕ್, ಶೇಕಡ 10.50 ಬಡ್ಡಿದರ
6. ಐಸಿಐಸಿಐ ಬ್ಯಾಂಕ್, ಶೇಕಡ 10.50 ಬಡ್ಡಿದರ
7. ಎಸ್‌ಬಿಐ, ಶೇಕಡ 10.55 ಬಡ್ಡಿದರ
8. ಕೋಟಕ್ ಮಹೀಂದ್ರಾ ಬ್ಯಾಂಕ್, ಶೇಕಡ 10.99 ಬಡ್ಡಿದರ
9. ಟಾಟಾ ಕ್ಯಾಪಿಟಲ್, ಶೇಕಡ 10.99 ಬಡ್ಡಿದರ
10. ಬಜಾಜ್ ಫಿನ್‌ಸರ್ವ್, ಶೇಕಡ 11 ಬಡ್ಡಿದರ


Click it and Unblock the Notifications