ಉದ್ಯೋಗ ಕಡಿತ ಎಂಬುವುದು ಮುಗಿಯದ ಕಥೆಯಾಗಿದೆ. ಕೋವಿಡ್ ಸಂದರ್ಭದಲ್ಲಿ ಸಂಸ್ಥೆಗಳು ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ಕೈಗೊಂಡ ಈ ಕ್ರಮವು ಇಂದಿಗೂ ಮುಂದುವರಿದಿದೆ. ಈ ನಡುವೆ ಸಂಸ್ಥೆಯೊಂದು ಬರೀ 120 ಸೆಂಕೆಡುಗಳ ಅಂದರೆ ಎರಡು ನಿಮಿಷದ ಗೂಗಲ್ ಮೀಟ್‌ನಲ್ಲಿ ಎಲ್ಲ ಉದ್ಯೋಗಿಗಳನ್ನು ವಜಾಗೊಳಿಸಿದೆ.
ಹೌದು, ಟೆಕ್ ಸ್ಟಾರ್ಟ್‌ಅಪ್ ಫ್ರಂಟ್‌ಡೆಸ್ಕ್ ಬರೀ ಎರಡು ನಿಮಿಷಗಳ ಗೂಗಲ್ ಮೀಟ್ ಕರೆಯ ಸಮಯದಲ್ಲಿ ತನ್ನ ಸಂಪೂರ್ಣ 200 ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ಮೂಲಕ 2024 ರಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದ ಮೊದಲ ಟೆಕ್ ಸ್ಟಾರ್ಟ್‌ಅಪ್ ಎಂದೆನಿಸಿಕೊಂಡಿದೆ.

ಟೆಕ್ಕ್ರಂಚ್ ಪ್ರಕಾರ, ಪೂರ್ಣ ಸಮಯ, ಅರೆಕಾಲಿಕ ಕೆಲಸಗಾರರು ಮತ್ತು ಗುತ್ತಿಗೆದಾರರನ್ನು ವಜಾಗೊಳಿಸಲಾಗಿದೆ. ಪ್ರಾಪ್ಟೆಕ್ ಸ್ಟಾರ್ಟ್ಅಪ್ ಮುಚ್ಚುವ ಸ್ಥಿತಿಗೆ ಬಂದು ತಲುಪಿದೆ. ಫ್ರಂಟ್‌ಡೆಸ್ಕ್ ಸಿಇಒ ಜೆಸ್ಸಿ ಡೆಪಿಂಟೊ ಕಂಪನಿಯ ನಿರ್ಧಾರದ ಬಗ್ಗೆ ಉದ್ಯೋಗಿಗಳಿಗೆ ಮಾಹಿತಿ ನೀಡಿದರು.
ದಿವಾಳಿತನದ ಅಂಚಿನಲ್ಲಿ ಸಂಸ್ಥೆ
ದಿವಾಳಿತನಕ್ಕೆ ಪರ್ಯಾಯವಾಗಿ ರಾಜ್ಯ ರಿಸೀವರ್‌ಶಿಪ್‌ಗಾಗಿ ಸಲ್ಲಿಸುವ ಯೋಜನೆಗಳನ್ನು ಫ್ರಂಟ್‌ಡೆಸ್ಕ್ ಸಿಇಒ ಜೆಸ್ಸಿ ಡೆಪಿಂಟೊ ಬಹಿರಂಗಪಡಿಸಿದರು. 2017 ರಲ್ಲಿ ಸ್ಥಾಪನೆಯಾದ ಸ್ಟಾರ್ಟಪ್, ಯುಎಸ್‌ನಾದ್ಯಂತ ಸುಮಾರು ಒಂದು ಸಾವಿರ ಸುಸಜ್ಜಿತ ಅಪಾರ್ಟ್‌ಮೆಂಟ್‌ಗಳನ್ನು ನಿರ್ವಹಣೆ ಮಾಡುತ್ತಿದೆ.
ಜೆಟ್‌ಬ್ಲೂ ವೆಂಚರ್ಸ್, ವೆರಿಟಾಸ್ ಇನ್ವೆಸ್ಟ್‌ಮೆಂಟ್ಸ್ ಮತ್ತು ಸ್ಯಾಂಡ್ ಹಿಲ್ ಏಂಜಲ್ಸ್‌ನಂತಹ ಹೂಡಿಕೆದಾರರಿಂದ 26 ಮಿಲಿಯನ್ ಡಾಲರ್ ಸಂಗ್ರಹ ಮಾಡಿದ್ದರೂ ಕೂಡಾ ಹೆಚ್ಚುವರಿ ಬಂಡವಾಳವನ್ನು ಪಡೆದುಕೊಳ್ಳಲು ಫ್ರಂಟ್‌ಡೆಸ್ಕ್‌ನ ಪ್ರಯತ್ನ ವಿಫಲವಾಗಿದೆ.
ಸ್ಟಾರ್ಟ್‌ಅಪ್ ಇಂದಿಗೂ ನಿಧಿಸಂಗ್ರಹಣೆಯ ಬಗ್ಗೆ ಆಶಾವಾದ ಹೊಂದಿದೆ. ಕೇವಲ ಎರಡು ತಿಂಗಳ ಹಿಂದೆ ಲಿಂಕ್ಡ್‌ಇನ್‌ನಲ್ಲಿ ಮುಖ್ಯ ಸಿಬ್ಬಂದಿ ಪಾತ್ರವನ್ನು ಒಳಗೊಂಡಂತೆ ಉದ್ಯೋಗಾವಕಾಶಗಳನ್ನು ಪೋಸ್ಟ್ ಮಾಡಿದೆ. ಇನ್ನು ಜೆರಾಕ್ಸ್ ಸಂಸ್ಥೆ ಕೂಡಾ ಉದ್ಯೋಗಿಗಳನ್ನು ವಜಾಗೊಳಿಸಿದೆ. ಒಟ್ಟಾಗಿ ಮೂರು ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ.
ಕಳೆದ ಎರಡು ವರ್ಷಗಳಲ್ಲಿ 425,000 ಉದ್ಯೋಗಿಗಳನ್ನು ಸ್ಟಾರ್ಟ್‌ಅಪ್‌ಗಳು ಸೇರಿದಂತೆ ವಿಶ್ವದಾದ್ಯಂತ ಟೆಕ್ ಕಂಪನಿಗಳು ವಜಾಗೊಳಿಸಿದೆ. ಬ್ಯುಸಿನೆಸ್ ಇನ್‌ಸೈಡರ್ ಪ್ರಕಾರ, ಭಾರತವೊಂದರಲ್ಲೇ ಇದೇ ಅವಧಿಯಲ್ಲಿ 36,000 ಮಂದಿಯನ್ನು ಉದ್ಯೋಗ ಕಡಿತ ಮಾಡಲಾಗಿದೆ.
2023ರಲ್ಲಿ ಎಷ್ಟು ಉದ್ಯೋಗ ಕಡಿತ?
2023 ರಲ್ಲಿ, ಜಾಗತಿಕ ತಂತ್ರಜ್ಞಾನ ಮತ್ತು ಸ್ಟಾರ್ಟ್‌ಅಪ್ ವಲಯದಲ್ಲಿ ಸುಮಾರು 2.6 ಲಕ್ಷ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ವಜಾಗೊಂಡವರ ಪೈಕಿ ಶೇಕಡ 70 ರಷ್ಟು ಮಂದಿ ಯುನೈಟೆಡ್ ಸ್ಟೇಟ್ಸ್‌ಗೆ (ಯುಎಸ್) ಸೇರಿದವರಾಗಿದ್ದಾರೆ. ಇನ್ನು ನಂತರದ ಸ್ಥಾನದಲ್ಲಿ ಭಾರತ, ಜರ್ಮನಿ, ಸ್ವೀಡನ್ ಮತ್ತು ಯುನೈಟೆಡ್ ಕಿಂಗ್‌ಡಮ್ (ಯುಕೆ) ಇದೆ.
ಎಜುಕೇಷನ್ ಟೆಕ್ನಾಲಜಿ ವಲಯದಲ್ಲಿ ಸುಮಾರು 4,700 ವ್ಯಕ್ತಿಗಳನ್ನು ವಜಾಗೊಳಿಸಲಾಗಿದೆ. ನಂತರ ಆಹಾರ (2,765), ಹಣಕಾಸು (2,141), ರಿಟೇಲ್ (1,772), ಗ್ರಾಹಕ (1,488), ಮತ್ತು ಆರೋಗ್ಯ (991) ವಲಯಗಳಲ್ಲಿ ಉದ್ಯೋಗಗಳನ್ನು ವಜಾಗೊಳಿಸಲಾಗಿದೆ.
ಭಾರತೀಯ ಕಂಪನಿಗಳು ಈ ವರ್ಷ ಸುಮಾರು 18,000 ಉದ್ಯೋಗಿಗಳನ್ನು ವಜಾಗೊಳಿಸಿವೆ. ಭಾರತದಲ್ಲಿ ಒಟ್ಟಾಗಿ 16.4 ಸಾವಿರ ಉದ್ಯೋಗ ಕಡಿತ ನಡೆದಿದೆ. ಯುನೈಟೆಡ್ ಸ್ಟೇಟ್ಸ್ 179.2 ಸಾವಿರ, ಜರ್ಮನಿ 13.1 ಸಾವಿರ, ಸ್ವೀಡನ್ 11.1 ಸಾವಿರ, ಯುನೈಟೆಡ್ ಕಿಂಗ್ಡಮ್ 9.4 ಸಾವಿರ ಮಂದಿಯನ್ನು 2023ರಲ್ಲಿ ವಜಾಗೊಳಿಸಿದೆ.
More From GoodReturns

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Silver Rate Today: ಬೆಳ್ಳಿ ದರಕ್ಕೂ ತಟ್ಟಿದ ಇಸ್ರೇಲ್-ಇರಾನ್ ವಾರ್ ಬಿಸಿ! ಬೆಲೆ ಭಾರೀ ಏರಿಕೆ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications