ಪ್ರಸ್ತುತ ಎಲ್ಲ ಕಾರ್ಯಗಳಿಗೂ ಕ್ರೆಡಿಟ್ ಕಾರ್ಡ್ ಅನ್ನು ಬಳಕೆ ಮಾಡಲಾಗುತ್ತದೆ. ಜನರು ತಮ್ಮ ಎಲ್ಲ ಖರ್ಚು ವೆಚ್ಚಗಳಿಗೂ ಕ್ರೆಡಿಟ್ ಕಾರ್ಡ್ ಅನ್ನು ಬಳಕೆ ಮಾಡಿ, ಅದಾದ ಬಳಿಕ ಮೊತ್ತವನ್ನು ಪಾವತಿ ಮಾಡುತ್ತಾರೆ. ಈ ನಡುವೆ ಈಗ ಕ್ರೆಡಿಟ್ ಕಾರ್ಡ್ ಬಳಕೆಯೂ ಕೂಡಾ ಭಾರೀ ಪ್ರಮಾಣದಲ್ಲಿ ಅಧಿಕವಾಗಿದೆ.
ಕ್ರೆಡಿಟ್ ಕಾರ್ಡ್ ಖರ್ಚುಗಳು ವರ್ಷದಿಂದ ವರ್ಷಕ್ಕೆ ಶೇಕಡ 38.3 ರಷ್ಟು ಏರಿಕೆಯಾಗಿದ್ದು, ಅಕ್ಟೋಬರ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕ್ರೆಡಿಟ್ ಕಾರ್ಡ್ ವೆಚ್ಚ 1.8 ಟ್ರಿಲಿಯನ್ ರೂಪಾಯಿಗೆ ತಲುಪಿದೆ.

ಅಕ್ಟೋಬರ್‌ನಲ್ಲಿ ಈ ಕ್ರೆಡಿಟ್ ಕಾರ್ಡ್ ಖರ್ಚು ಒಂಬತ್ತು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ವರ್ಷದಿಂದ ವರ್ಷಕ್ಕೆ ಸುಮಾರು ಶೇಕಡ 38.3 ರಷ್ಟು ಏರಿಕೆ ಕಂಡಿದೆ. ಇನ್ನು ಖರ್ಚುಗಳು ತಿಂಗಳಿನಿಂದ ತಿಂಗಳಿಗೆ ಶೇಕಡ 25.4 ರಷ್ಟು ಏರಿಕೆಯಾಗಿದೆ. ಹಾಗೆಯೇ ಎರಡು ವರ್ಷಗಳಲ್ಲೇ ಅತೀ ಅಧಿಕ ಕ್ರೆಡಿಟ್ ಕಾರ್ಡ್ ಬಳಕೆ ಇದಾಗಿದೆ.
ಪ್ರತಿ ಕಾರ್ಡ್‌ಗೆ ಖರ್ಚು ಅಕ್ಟೋಬರ್‌ನಲ್ಲಿ ಸಾರ್ವಕಾಲಿಕ ಗರಿಷ್ಠ 18,898 ರೂಪಾಯಿಗೆ ಏರಿದ್ದು, ವರ್ಷದಿಂದ ವರ್ಷಕ್ಕೆ ಶೇಕಡ 16 ರಷ್ಟು ಏರಿಕೆ ಕಂಡಿದೆ. ಹಾಗೆಯೇ ತಿಂಗಳಿನಿಂದ ತಿಂಗಳಿಗೆ ಪ್ರತಿ ಕಾರ್ಡ್‌ಗೆ ಖರ್ಚು ಶೇಕಡ 23.2 ರಷ್ಟು ಜಿಗಿತ ಕಂಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬ್ಯಾಂಕ್‌ಬಜಾರ್ ಡಾಟ್ ಕಾಮ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದಿಲ್ ಶೆಟ್ಟಿ, "ನಾವು ಎರಡು ದೊಡ್ಡ ಬಳಕೆಯ ಪ್ರಕರಣಗಳನ್ನು ನೋಡಿದ್ದೇವೆ. ಸುಮಾರು ಶೇಕಡ 65 ರಷ್ಟು ಕ್ರೆಡಿಟ್ ಕಾರ್ಡ್ ಖರ್ಚುಗಳು ಆನ್‌ಲೈನ್‌ನಲ್ಲಿ ನಡೆಯುತ್ತವೆ. ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿ ಪ್ರಮಾಣವು ಅಧಿಕವಾಗಿದೆ," ಎಂದು ವರದಿ ಉಲ್ಲೇಖ ಮಾಡಿದೆ.
ಅಕ್ಟೋಬರ್‌ನಲ್ಲಿ, ಆನ್‌ಲೈನ್ ವಹಿವಾಟುಗಳು ಪರಿಮಾಣದ ವಿಷಯದಲ್ಲಿ ನಾವು ನೋಡಿದಾಗ ವರ್ಷದಿಂದ ವರ್ಷಕ್ಕೆ ಶೇಕಡ 39 ರಷ್ಟು ಏರಿಕೆ ಕಾಣಬಹುದು. ಮೌಲ್ಯದ ವಿಷಯದಲ್ಲಿ ನೋಡಿದಾಗ ವರ್ಷದಿಂದ ವರ್ಷಕ್ಕೆ ಶೇಕಡ 55.1 ರಷ್ಟು ಏರಿಕೆ ಕಂಡು ಬಂದಿದೆ.
ನಿರ್ದಿಷ್ಟವಾಗಿ, ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲಿನ ಖರ್ಚು ವರ್ಷದಿಂದ ವರ್ಷಕ್ಕೆ ಶೇಕಡ 20.3 ರಷ್ಟು ಜಿಗಿತ ಕಂಡು, 45,296 ಕೋಟಿ ರೂಪಾಯಿ ತಲುಪಿದೆ. ಎಸ್‌ಬಿಐ ಕಾರ್ಡ್ ಖರ್ಚು ಸುಮಾರು ಶೇಕಡ 52 ರಷ್ಟು ಏರಿಕೆಯಾಗಿ 35,459 ಕೋಟಿ ರೂಪಾಯಿಗೆ ತಲುಪಿದೆ.
ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವೆಚ್ಚದಲ್ಲಿ ಅತ್ಯಧಿಕ ವಾರ್ಷಿಕ ಬೆಳವಣಿಗೆಯನ್ನು ಕಂಡಿದೆ.ಅಕ್ಟೋಬರ್‌ನಲ್ಲಿ ಶೇಕಡ 92 ರಷ್ಟು ಏರಿಕೆಯಾಗಿ 21,767 ಕೋಟಿ ರೂಪಾಯಿಗೆ ತಲುಪಿದೆ. ಸೆಪ್ಟೆಂಬರ್ 30 ಕ್ಕೆ 93.02 ಮಿಲಿಯನ್ ಕ್ರೆಡಿಟ್ ಕಾರ್ಡ್‌ಗಳು ಬಳಕೆಯಲ್ಲಿತ್ತು. ಆದರೆ ಅಕ್ಟೋಬರ್ 31 ರಂದು ಜಾರಿಯಲ್ಲಿರುವ ಒಟ್ಟು ಕಾರ್ಡ್‌ಗಳು 94.7 ಮಿಲಿಯನ್‌ಗೆ ಏರಿದೆ.
ಅಕ್ಟೋಬರ್‌ನಲ್ಲಿ ಜಾರಿಯಲ್ಲಿರುವ ಕಾರ್ಡ್‌ಗಳು ವರ್ಷದಿಂದ ವರ್ಷಕ್ಕೆ ಶೇಕಡ 19.3 ರಷ್ಟು ಏರಿಕೆಯಾಗಿದೆ. ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಅಥವಾ ಯುಪಿಐನಲ್ಲಿ ರುಪೇ ಕ್ರೆಡಿಟ್ ಕಾರ್ಡ್‌ನಂತಹ ಹೊಸ ಉತ್ಪನ್ನಗಳ ಬಳಕೆಯು ಒಟ್ಟಾರೆ ಖರ್ಚುಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ತಜ್ಞರು ಭಾವಿಸುತ್ತಾರೆ.


Click it and Unblock the Notifications