ಈ ತಿಂಗಳ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರ ಇತ್ತೀಚಿನ ಡಿಎ ಹೆಚ್ಚಳವನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಜುಲೈ 1, 2023 ರಿಂದ ಜಾರಿಗೆ ಬರುವಂತೆ ತುಟ್ಟಿ ಭತ್ಯೆ ಶೇಕಡ 3 ರಷ್ಟು ಹೆಚ್ಚಾಗಿ ಶೇಕಡ 45 ಕ್ಕೆ ತಲುಪುವ ನಿರೀಕ್ಷೆಯಿದೆ. ಇತ್ತೀಚಿಗೆ ಹಿಮಾಚಲ ಪ್ರದೇಶ ಸರ್ಕಾರವು ಜನವರಿ 1, 2022 ರಿಂದ ಜಾರಿಗೆ ಬರುವಂತೆ ಅರಣ್ಯ ನಿಗಮದ ಉದ್ಯೋಗಿಗಳಿಗೆ ಡಿಎಯನ್ನು ಶೇಕಡ 3 ರಷ್ಟು ಹೆಚ್ಚಿಸಿದೆ.
ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಕಾರ್ಮಿಕ ಬ್ಯೂರೋ ಪ್ರತಿ ತಿಂಗಳು ಹೊರತರುವ ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ- ಐಡಬ್ಲ್ಯೂ) ಆಧಾರದ ಮೇಲೆ ನಿರ್ಧಾರ ಮಾಡಲಾಗುತ್ತದೆ. ಲೇಬರ್ ಬ್ಯೂರೋ ಅಥವಾ ಕಾರ್ಮಿಕ ಬ್ಯೂರೋ ಕಾರ್ಮಿಕ ಸಚಿವಾಲಯದ ಒಂದು ವಿಭಾಗವಾಗಿದೆ.

ಇತ್ತೀಚಿನ ಮಾಹಿತಿಯ ಪ್ರಕಾರ, ಜುಲೈ 2023 ಕ್ಕೆ ಅಖಿಲ ಭಾರತ ಸಿಪಿಐ - ಐಡಬ್ಲ್ಯೂ 3.3 ಪಾಯಿಂಟ್‌ಗಳಷ್ಟು ಏರಿಕೆಯಾಗಿ 139.7 ಕ್ಕೆ ತಲುಪಿದೆ. ಒಂದು ತಿಂಗಳ ಶೇಕಡಾವಾರು ಬದಲಾವಣೆಯಲ್ಲಿ ಇದು ಹಿಂದಿನ ತಿಂಗಳಿಗೆ ಸಂಬಂಧಿಸಿದಂತೆ ಶೇಕಡ 2.42 ರಷ್ಟು ಹೆಚ್ಚಾಗಿದೆ. ವರ್ಷದ ಹಿಂದೆ ದಾಖಲಾದ ಸಿಪಿಐ - ಐಡಬ್ಲ್ಯೂ ಶೇಕಡ 0.90 ರಷ್ಟು ಹೆಚ್ಚಳವಾಗಿದೆ.
ಶೇಕಡ 3ರಷ್ಟು ಡಿಎ ಹೆಚ್ಚಳದ ಮಾಧ್ಯಮ ವರದಿಗಳ ಪ್ರಕಾರ, ಕೇಂದ್ರ ಸರ್ಕಾರಿ ನೌಕರರ ಅಂದಾಜು ವೇತನ ಹೆಚ್ಚಳ ಇಲ್ಲಿದೆ. ಉದ್ಯೋಗಿಯ ವೇತನವು ತಿಂಗಳಿಗೆ 50,000 ರೂಪಾಯಿ ಆಗಿದ್ದರೆ, ಮೂಲ ವೇತನವಾಗಿ 15,000 ರೂಪಾಯಿ ಬೇಸಿಕ್ ಸ್ಯಾಲರಿ ಅಥವಾ ಮೂಲ ವೇತನ ಆಗಿರುತ್ತದೆ. ಅವನು ಅಥವಾ ಅವಳು ಪ್ರಸ್ತುತ ಶೇಕಡ 42 ರೂಪಾಯಿಯಂತೆ 6,300 ರೂಪಾಯಿ ತುಟ್ಟಿಭತ್ಯೆ ಪಡೆಯುತ್ತಾರೆ.
ಆದರೆ ತುಟ್ಟಿಭತ್ಯೆಯು ಶೇಕಡ 3 ರಷ್ಟು ಹೆಚ್ಚಳವಾದರೆ ನಂತರ, ಡಿಎ ತಿಂಗಳಿಗೆ 6,750 ರೂಪಾಯಿಗೆ ಏರಿಕೆಯಾಗಲಿದೆ. ಇದು ಮೊದಲಿಗಿಂತ 450 ರೂಪಾಯಿ ಹೆಚ್ಚಾಗುತ್ತದೆ. ಆದ್ದರಿಂದ, ಮಾಸಿಕವಾಗಿ 50 ಸಾವಿರ ರೂಪಾಯಿ ಪಡೆಯುವ ವ್ಯಕ್ತಿಯು 15,000 ರೂಪಾಯಿಯನ್ನು ಮೂಲ ವೇತನವಾಗಿ ಹೊಂದಿದ್ದರೆ, ಅವನ ಅಥವಾ ಅವಳ ಸಂಬಳವು ತಿಂಗಳಿಗೆ 450 ರೂಪಾಯಿ ಹೆಚ್ಚಳವಾಗುತ್ತದೆ.
ಸರ್ಕಾರಿ ನೌಕರರಿಗೆ ಡಿಎ ನೀಡಿದರೆ, ಪಿಂಚಣಿದಾರರಿಗೆ ಡಿಆರ್ ನೀಡಲಾಗುತ್ತದೆ. ಡಿಎ ಮತ್ತು ಡಿಆರ್ ಅನ್ನು ವರ್ಷಕ್ಕೆ ಎರಡು ಬಾರಿ ಅಂದರೆ ಜನವರಿ ಮತ್ತು ಜುಲೈನಲ್ಲಿ ಹೆಚ್ಚಿಸಲಾಗುತ್ತದೆ. ಪ್ರಸ್ತುತ, ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಶೇಕಡ 42 ರಷ್ಟು ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ.
"ಜೂನ್ 2023 ರ ಸಿಪಿಐ - ಐಡಬ್ಲ್ಯೂ ಅನ್ನು ಜುಲೈ 31, 2023 ರಂದು ಬಿಡುಗಡೆ ಮಾಡಲಾಗಿದೆ. ನಾವು ತುಟ್ಟಿಭತ್ಯೆಯಲ್ಲಿ ನಾಲ್ಕು ಶೇಕಡದಷ್ಟು ಏರಿಕೆ ಮಾಡಬೇಕು ಎಂದು ನಾವು ಒತ್ತಾಯ ಮಾಡುತ್ತೇವೆ. ಆದರೆ ತುಟ್ಟಿಭತ್ಯೆ ಶೇಕಡ 3ಕ್ಕಿಂತ ಕೊಂಚ ಅಧಿಕ ಹೆಚ್ಚಳ ಮಾಡುವ ಅವಕಾಶ ಸರ್ಕಾರಕ್ಕಿದೆ. ಡಿಎ ಮೂರು ಶೇಕಡ ಹೆಚ್ಚಳವಾದರೆ, ಡಿಎ ಶೇಕಡ 45ಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ," ಎಂದು ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಇತ್ತೀಚೆಗೆ ಹೇಳಿದ್ದಾರೆ.
ಮಾರ್ಚ್ 2023 ರಲ್ಲಿ ಕೊನೆಯ ಬಾರಿಗೆ, ಡಿಎಯನ್ನು ಶೇಕಡ 4 ರಷ್ಟು ಏರಿಕೆ ಮಾಡಲಾಗಿದ್ದು ಡಿಎ ಶೇಕಡ 42 ಕ್ಕೆ ತಲುಪಿದೆ. ಪ್ರಸ್ತುತ ಹಣದುಬ್ಬರ ದರವನ್ನು ಗಮನಿಸಿದರೆ, ವಿವಿಧ ವರದಿಗಳ ಪ್ರಕಾರ ಮುಂದಿನ ಡಿಎ ಹೆಚ್ಚಳವು ಶೇಕಡ 4 ರಷ್ಟಿರುವ ನಿರೀಕ್ಷೆಯಿದೆ. ಇತ್ತೀಚೆಗೆ, ಮಧ್ಯಪ್ರದೇಶ, ಒಡಿಶಾ, ಕರ್ನಾಟಕ, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳು ತಮ್ಮ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯನ್ನು ಹೆಚ್ಚಿಸಿವೆ.
ಡಿಎ ಹೆಚ್ಚಳವನ್ನು ಯಾವಾಗ ಘೋಷಿಸಲಾಗುತ್ತದೆ?
ಡಿಎ ಹೆಚ್ಚಳದ ನಿಖರವಾದ ದಿನಾಂಕವನ್ನು ಕೇಂದ್ರವು ಇನ್ನೂ ಘೋಷಿಸದಿದ್ದರೂ, ಹಣಕಾಸು ಸಚಿವಾಲಯದ ವೆಚ್ಚ ವಿಭಾಗವು ಅದರ ಆದಾಯದ ಪರಿಣಾಮದೊಂದಿಗೆ ಡಿಎಯನ್ನು ಹೆಚ್ಚಿಸುವ ಪ್ರಸ್ತಾಪವನ್ನು ರೂಪಿಸಿದ ನಂತರ ಕೇಂದ್ರ ಸಚಿವ ಸಂಪುಟವು ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಇದಾದ ಬಳಿಕ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿ ಅನುಮೋದನೆ ಪಡೆಯಲಾಗುವುದು.


Click it and Unblock the Notifications