ಜನರು ದಿನಸಿಯಿಂದ ಹಿಡಿದು ಬಟ್ಟೆ ಖರೀದಿಯವರೆಗೂ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಅನ್ನು ಬಳಸುತ್ತಾರೆ. ಆದರೆ ಈ ಡಿಜಿಟಲ್, ಅವಲಂಭಿತ ಜಗತ್ತಿನಲ್ಲಿ ನಾವು ಇಂದಿಗೂ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ನಡುವಿನ ವ್ಯತ್ಯಾಸವನ್ನು ತಿಳಿದಿಲ್ಲ. ಎರಡು ಕಾರ್ಡ್‌ಗಳು ಕೂಡಾ 16 ಡಿಜಿಟಲ್ ಅಂಕಿಯನ್ನು, ಎಕ್ಸ್‌ಪೈರ್ ದಿನಾಂಕ, ಮ್ಯಾಗ್‌ನೆಟಿಕ್ ಸ್ಟ್ರಿಪ್, ಇಎಂವಿ ಚಿಪ್‌ಗಳನ್ನು ಹೊಂದಿರುತ್ತದೆ. ಇವೆಲ್ಲವೂ ಕೂಡಾ ಒಂದೇ ರೀತಿ ಆಗಿದ್ದರೂ ಕೂಡಾ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್‌ನ ಕಾರ್ಯವೈಖರಿ ಬೇರೆಯೇ ಆಗಿದೆ.
ಡೆಬಿಟ್ ಕಾರ್ಡ್‌ನಲ್ಲಿ ನಿಮ್ಮಲ್ಲಿರುವ ಮೊತ್ತದಿಂದ ನೀವು ಖರೀದಿ ಮಾಡಿದರೆ, ಕ್ರೆಡಿಟ್ ಕಾರ್ಡ್‌ನಲ್ಲಿ ನೀವು ಮೊತ್ತವನ್ನು ಸಾಲ ಮಾಡಿ ಖರೀದಿ ಮಾಡುವುದು ಆಗಿದೆ. ಇವೆರಡಕ್ಕೂ ಕೂಡಾ ಗರಿಷ್ಠ ಮತ್ತು ಕನಿಷ್ಠ ವಹಿವಾಟು ಮಿತಿಗಳು ಇದೆ. ಎರಡು ಕಾರ್ಡ್‌ಗಳು ಕೂಡಾ ಹಲವಾರು ಪ್ರಯೋಜನಗಳನ್ನು ನಮಗೆ ನೀಡುತ್ತದೆ. ಆದರೆ ಅದರ ಬಳಕೆಯ ವಿಚಾರಕ್ಕೆ ಬಂದಾಗ ಎರಡೂ ಕೂಡಾ ವಿಭಿನ್ನವಾಗಿದೆ. ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಒಂದಕ್ಕಿಂತ ಒಂದು ಹೇಗೆ ಭಿನ್ನ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ಕ್ರೆಡಿಟ್ ಕಾರ್ಡ್ ಬಗ್ಗೆ ಮಾಹಿತಿ
ಬ್ಯಾಂಕ್‌ನಿಂದ, ಹಣಕಾಸು ಸಂಸ್ಥೆಯಿಂದ ಜನರು ಕ್ರೆಡಿಟ್ ಕಾರ್ಡ್ ಮೂಲಕ ಹಣವನ್ನು ಸಾಲ ಪಡೆಯಬಹುದಾಗಿದೆ. ಬಡ್ಡಿದರದೊಂದಿಗೆ ಹಣವನ್ನು ಹಿಂದಕ್ಕೆ ನೀಡಬೇಕಾಗುತ್ತದೆ. ಆದರೆ ಕೆಲವು ವಿನಾಯಿತಿ ಇರುತ್ತದೆ. ಪ್ರಮುಖವಾಗಿ ಮೂರು ಬಗ್ಗೆಯ ಕ್ರೆಡಿಟ್ ಕಾರ್ಡ್‌ಗಳು ಇದೆ. ಸ್ಟಾಡರ್ಡ್ ಕ್ರೆಡಿಟ್ ಕಾರ್ಡ್ ಹೆಚ್ಚಾಗಿ ಯಾವುದೇ ವಾರ್ಷಿಕ ಶುಲ್ಕವನ್ನು ಹೊಂದಿರುವುದಿಲ್ಲ. ಕ್ರೆಡಿಟ್ ಅನ್ನು ಬಳಸಿಕೊಂಡು ಆನ್‌ಲೈನ್ ಆಫ್‌ಲೈನ್ ವಸ್ತುಗಳ್ನನು ಖರೀದಿಸುವ ಅವಕಾಶವಿದೆ. ಇನ್ನು ಪ್ರೀಮಿಯಂ ಕ್ರೆಡಿಟ್ ಕಾರ್ಡ್ ಕೂಡಾ ಇದೆ.
ಪ್ರೀಮಿಯಂ ಕ್ರೆಡಿಟ್ ಕಾರ್ಡ್‌ನಲ್ಲಿ ಸಹಾಯಕ ಸೇವೆಗಳು, ಏರ್‌ಪೋರ್ಟ್ ಭೇಟಿ ಅವಕಾಶ, ವಿಶೇಷ ಕಾರ್ಯಕ್ರಮಕ್ಕೆ ಭೇಟಿ ನೀಡುವ ಅವಕಾಶ ಇರಲಿದೆ. ಆದರೆ ಶುಲ್ಕ ಹೆಚ್ಚಾಗಿರುತ್ತದೆ. ಕ್ಯಾಷ್‌ಬ್ಯಾಕ್, ಟ್ರಾವೆಲ್ ಪಾಯಿಂಟ್‌ನಂತಹ ರಿವಾರ್ಡ್‌ಗಳು ಕೂಡಾ ಲಭ್ಯವಾಗುತ್ತದೆ. ಕಡಿಮೆ ಬಡ್ಡಿದರ ಇರಲಿದೆ. ಆದರೆ ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್‌ನಲ್ಲಿ ಡೌನ್ ಪೇಮೆಂಟ್ ಮಾಡಲಾಗುತ್ತದೆ. ನೀವು ಡೌನ್ ಪೇಮೆಂಟ್ ಮಾಡಿದ ಮೊತ್ತವನ್ನು ಬಳಸಲಾಗುತ್ತದೆ.
ಡೆಬಿಟ್ ಕಾರ್ಡ್ ಬಗ್ಗೆ ಮಾಹಿತಿ
ಗ್ರಾಹಕರು ಯಾವುದೇ ವಸ್ತು ಖರೀದಿಸಲು ಡೆಬಿಟ್ ಕಾರ್ಡ್ ಅನ್ನು ಬಳಸಿದಾಗ, ಅವರ ಬ್ಯಾಂಕ್‌ನಲ್ಲಿರುವ ಮೊತ್ತದಿಂದ ನೇರವಾಗಿ ಹಣವನ್ನು ಕಡಿತ ಮಾಡಲಾಗುತ್ತದೆ. ವೀಸಾ ಅಥವಾ ಮಾಸ್ಟರ್‌ಕಾರ್ಡ್‌ಗಳಲ್ಲಿ ಕ್ರೆಡಿಟ್ ಕಾರ್ಡ್‌ನಂತೆಯೇ ಗ್ರಾಹಕರ ಸುರಕ್ಷತೆಯು ಇರಲಿದೆ. ಇನ್ನು ಸ್ಟಾಡರ್ಡ್ ಡೆಬಿಟ್ ಕಾರ್ಡ್‌ನಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿರಬೇಕಾಗಿಲ್ಲ. ಇದರಲ್ಲಿ ಪ್ರೀಪೇ ಮಾಡುವ ಆಯ್ಕೆ ಇರುತ್ತದೆ. ನಾವು ಮೊದಲೇ ಮೊತ್ತವನ್ನು ಪಾವತಿ ಮಾಡಿ ಆ ಬಳಿಕ ಕಾರ್ಡ್‌ನಿಂದ ಬಳಕೆ ಮಾಡುತ್ತಾ ಹೋಗುವುದು ಆಗಿದೆ.


Click it and Unblock the Notifications