ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಯುಪಿಐ ಮೂಲಕ ಡಿಜಿಟಲ್ ರೂಪಾಯಿಗಳನ್ನು ಪಾವತಿ ಮಾಡುವ ಆಯ್ಕೆಯನ್ನು ಜನರಿಗೆ ನೀಡಿದೆ. ಕ್ಯೂ ಆರ್ ಕೋಡ್ ಅನ್ನು ಬಳಸಿಕೊಂಡು ಯುಪಿಐ ಪಾವತಿ ಮಾಡಲು ಅವಕಾಶ ನೀಡುವ ಏಳನೇ ಬ್ಯಾಂಕ್ ಇದಾಗಿದೆ. ಡಿಜಿಟಲ್ ರೂಪಾಯಿಗಳನ್ನು (ಇ ₹) ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಎಂದು ಕೂಡಾ ಕರೆಯಲಾಗುತ್ತದೆ.
ಈ ಕ್ರಮದೊಂದಿಗೆ, ಬ್ಯಾಂಕ್ ತನ್ನ ಗ್ರಾಹಕರಿಗೆ ಅನುಕೂಲ ಉಂಟು ಮಾಡುವ ಉದ್ದೇಶವನ್ನು ಹೊಂದಿದೆ. "ಈ ಅತ್ಯಾಧುನಿಕ ಫೀಚರ್ 'ಇ-ರುಪೀ ಬೈ ಎಸ್‌ಬಿಐ' ಅಪ್ಲಿಕೇಶನ್‌ನ ಮೂಲಕ ಪ್ರವೇಶಿಸಬಹುದು. ತ್ವರಿತ ಮತ್ತು ಸುರಕ್ಷಿತ ವಹಿವಾಟುಗಳಿಗಾಗಿ ಯಾವುದೇ ವ್ಯಾಪಾರಿ ಯುಪಿಐ ಕ್ಯೂಆರ್ ಕೋಡ್ ಅನ್ನು ಸಲೀಸಾಗಿ ಸ್ಕ್ಯಾನ್ ಮಾಡಲು ಎಸ್‌ಬಿಐ ಸಿಬಿಡಿಸಿ ಬಳಕೆದಾರರಿಗೆ ಅವಕಾಶ ನೀಡುತ್ತದೆ," ಎಂದು ಎಸ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.

ಡಿಸೆಂಬರ್ 2022 ರಲ್ಲಿ ಆರ್‌ಬಿಐನ ರಿಟೇಲ್ ಡಿಜಿಟಲ್ ಇ-ರೂಪಾಯಿ ಯೋಜನೆಯಲ್ಲಿ ಭಾಗವಹಿಸಿದ ಮೊದಲ ಕೆಲವು ಬ್ಯಾಂಕ್‌ಗಳಲ್ಲಿ ಎಸ್‌ಬಿಐ ಕೂಡ ಸೇರಿದೆ. ಇದು ಡಿಜಿಟಲ್ ಕರೆನ್ಸಿ ಪರಿಸರ ವ್ಯವಸ್ಥೆಗೆ ಗೇಮ್ ಚೇಂಜರ್ ಆಗಿರುತ್ತದೆ ಎಂಬುವುದು ಎಸ್‌ಬಿಐ ಅಭಿಪ್ರಾಯವಾಗಿದೆ.
ಸಿಬಿಡಿಸಿ ಮತ್ತು ವ್ಯಾಪಕವಾಗಿ ಬಳಸಲಾಗುವ ಯುಪಿಐ ಪ್ಲಾಟ್‌ಫಾರ್ಮ್ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ, ಎಸ್‌ಬಿಐ ಭಾರತದಲ್ಲಿ ಮಾಡಿದ ಪಾವತಿಗಳನ್ನು ಕ್ರಾಂತಿಯಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ. ಡಿಜಿಟಲ್ ಪಾವತಿಗಳ ಕ್ಷೇತ್ರದಲ್ಲಿನ ಸಿಬಿಡಿಸಿ ಭವಿಷ್ಯದ ಭರವಸೆಯಂತಿದೆ ಎಂದು ಎಸ್‌ಬಿಐ ಉಲ್ಲೇಖಿಸಿದೆ.
ಯುಪಿಐ ಕ್ಯೂಆರ್ ಕೋಡ್ ಬಳಸಿ ಹೇಗೆ ಸ್ಕ್ಯಾನ್ ಮಾಡುವುದು?
ಗ್ರಾಹಕರು ಈಗ ತಮ್ಮ ಡಿಜಿಟಲ್ ರೂಪಾಯಿಯ (ಸಿಬಿಡಿಸಿ- ಆರ್) ವ್ಯಾಲೆಟ್‌ನಲ್ಲಿ ಲಭ್ಯವಿರುವ ತಮ್ಮ ಡಿಜಿಟಲ್ ಕರೆನ್ಸಿಯನ್ನು ಬಳಸಬಹುದು. ಯಾವುದೇ ಯುಪಿಐ ಕ್ಯೂಆರ್ ಕೋಡ್‌ನಾದ್ಯಂತ ಪಾವತಿಸಲು ಸ್ಕ್ಯಾನ್ ಮಾಡಬಹುದು. ಒಂದೇ ಕ್ಯೂಆರ್ ಕೋಡ್ ಅನ್ನು ಬಳಸಿಕೊಂಡು ವ್ಯಾಪಾರಿಗಳು ಸಿಬಿಡಿಸಿ ಮತ್ತು ಯುಪಿಐ ಎರಡರನ್ನು ಕೂಡಾ ಪಾವತಿಸಬಹುದು.
ಈ ಆರು ಬ್ಯಾಂಕ್‌ಗಳ ಗ್ರಾಹಕರು ಯುಪಿಐ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಡಿಜಿಟಲ್ ರೂಪಾಯಿ ಮೂಲಕ ಪಾವತಿ ಮಾಡಬಹುದಾಗಿದೆ. ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಎಚ್‌ಎಸ್‌ಬಿಸಿ ಈ ಪ್ರಯೋಗವನ್ನು ಆರಂಭಿಸಿದ ಮೊದಲ ಬ್ಯಾಂಕ್‌ಗಳಲ್ಲಿ ಸೇರಿವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಸ್ತಿಗಳು, ಡೆಪಾಸಿಟ್‌ಗಳು, ಶಾಖೆಗಳು, ಗ್ರಾಹಕರು ಮತ್ತು ಉದ್ಯೋಗಿಗಳ ವಿಷಯದಲ್ಲಿ ಅತಿದೊಡ್ಡ ವಾಣಿಜ್ಯ ಬ್ಯಾಂಕ್ ಆಗಿದೆ. ಇದು ದೇಶದ ಅತಿ ದೊಡ್ಡ ಸಾಲವನ್ನು ನೀಡುವ ಬ್ಯಾಂಕ್ ನೀಡಿದೆ. ಜೂನ್ 2023 ರಂತೆ, ಬ್ಯಾಂಕ್ 45.31 ಲಕ್ಷ ಕೋಟಿ ರೂಪಾಯಿಗಿಂತ ಅಧಿಕ ಡೆಪಾಸಿಟ್ ಮೂಲವನ್ನು ಹೊಂದಿದೆ.


Click it and Unblock the Notifications