ಬೆಂಗಳೂರು, ಆಗಸ್ಟ್ 15: ಚಿಲ್ಲರೆ ಹಣದುಬ್ಬರವು ಜೂನ್‌ನಲ್ಲಿ 4.81% ರಿಂದ ಜುಲೈನಲ್ಲಿ 15 ತಿಂಗಳ ಗರಿಷ್ಠ 7.44% ಕ್ಕೆ ಏರಿಕೆ ಕಂಡಿದೆ. ಪರಿಣಾಮ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆ ಕಂಡಿದೆ. ಇದರಿಂದ ಸಹಜವಾಗಿ ಬಿಲ್‌ಗಳಲ್ಲಿ ಏರಿಕೆ ಕಂಡು ಬಂದಿದೆ.
ತರಕಾರಿ ಬೆಲೆಗಳು, ಮುಖ್ಯವಾಗಿ ಟೊಮೆಟೊಗಳು ಮತ್ತು ಇತರ ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಹಣದುಬ್ಬರ ಪ್ರಮುಖ ಕಾರಣವಾಗಿದೆ. 2022ರ ಏಪ್ರಿಲ್‌ನಿಂದ ಹಣದುಬ್ಬರವು 7.79% ರಷ್ಟಿದ್ದ ಅಂಕಿ ಅಂಶ ಈಗ ಹೆಚ್ಚಾಗಿದೆ.

ಹಣದುಬ್ಬರವು ನಾಲ್ಕು ತಿಂಗಳ ಕಾಲ ಮಿತಿಯೊಳಗೆ ಉಳಿದುಕೊಂಡ ನಂತರ RBI ಯ ಸಹಿಷ್ಣುತೆಯ ವ್ಯಾಪ್ತಿಯ 2-6% ಅನ್ನು ಮೀರಿಸಿದೆ. ಆಹಾರ ಹಣದುಬ್ಬರ, ಗ್ರಾಹಕರ ಬೆಲೆ ಬುಟ್ಟಿಯ ಅರ್ಧದಷ್ಟು ಭಾಗವನ್ನು ಹೊಂದಿದ್ದು, 11.51% ನಷ್ಟು ಏರಿಕೆ ಕಂಡಿದೆ.
ಜುಲೈನಲ್ಲಿ ಗ್ರಾಹಕ ಆಹಾರ ಬೆಲೆ ಸೂಚ್ಯಂಕವು ಅಕ್ಟೋಬರ್ 2020ಕ್ಕಿಂತ ಅತ್ಯಧಿಕ ಮಟ್ಟ 11.51% ಕ್ಕೆ ಏರಿತು. ವರ್ಷದಿಂದ ವರ್ಷಕ್ಕೆ ತರಕಾರಿ ಹಣದುಬ್ಬರವು 37.43% ಅನ್ನು ತಲುಪಿದೆ. ಹಿಂದಿನ ತಿಂಗಳಲ್ಲಿ 1% ಕುಸಿತವಾಗಿ ಬಳಿಕ ತೀವ್ರವಾಗಿ ಹೆಚ್ಚಳವಾಗಿದೆ. ಧಾನ್ಯಗಳು ಮತ್ತು ಉತ್ಪನ್ನಗಳು ಸಹ ಗಮನಾರ್ಹ ಬೆಲೆ ಏರಿಕೆಯಾಘಿದ್ದು, ಜೂನ್‌ನಲ್ಲಿ 12.7% ರಿಂದ 13% ಕ್ಕೆ ಏರಿಕೆಯಾಗಿದೆ.
ಕಳೆದ ವಾರ RBI ಪ್ರಸಕ್ತ ಹಣಕಾಸು ವರ್ಷದಲ್ಲಿ ಅದರ ಹಣದುಬ್ಬರವನ್ನು ಆಹಾರ ಬೆಲೆಯ ಒತ್ತಡವನ್ನು ಉಲ್ಲೇಖಿಸಿ, ಅದರ ಜೂನ್ ಸಭೆಯಲ್ಲಿ 5.1% ರಿಂದ 5.4% ಕ್ಕೆ ಅಂದಾಜು ಪರಿಷ್ಕರಿಸಿತ್ತು. ಜುಲೈ-ಸೆಪ್ಟೆಂಬರ್‌ನ ಹಣದುಬ್ಬರ ಮುನ್ಸೂಚನೆಯು ಈಗ 6.2% ಆಗಿದೆ, ಇದು ಹಿಂದಿನ 5.2% ಗಿಂತ ಹೆಚ್ಚಾಗಿದೆ.
ಮಾನ್ಸೂನ್ ವೇಗವನ್ನು ಪಡೆದುಕೊಂಡಿದೆ, ಆದರೆ ದೇಶದ ವಿವಿಧೆಡೆ ಅಸಮತೋಲನದ ಪರಿಣಾಮವನ್ನು ಬೀರಿದೆ. ಭತ್ತ ಬೆಳೆಯುವ ಪ್ರದೇಶಗಳಲ್ಲಿನ ಕೊರತೆಯ ಮಳೆಯು ಬೆಳೆ ಬಿತ್ತನೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸಂಭಾವ್ಯ ಎಲ್ ನಿನೊ ಪರಿಣಾಮವು ಹೆಚ್ಚಾಗಿದೆ. ಅನಿಯಮಿತ ಮಾನ್ಸೂನ್‌ನಿಂದಾಗಿ ಟೊಮೆಟೊ ತನ್ನ ಸಗಟು ಮಾರುಕಟ್ಟೆ ಬೆಲೆಗಳಲ್ಲಿ 1,400% ಕ್ಕಿಂತ ಹೆಚ್ಚು ಬೆಲೆ ಹೆಚ್ಚಳವಾಗಿದೆ.
ಭಾರತವು ತನ್ನ ಅತಿದೊಡ್ಡ ಅಕ್ಕಿ ರಫ್ತು ವರ್ಗವನ್ನು ಸ್ಥಗಿತಗೊಳಿಸಿದ್ದು, ಜಾಗತಿಕ ಆಹಾರ ಮಾರುಕಟ್ಟೆಗಳಲ್ಲಿ ಮತ್ತಷ್ಟು ಹಣದುಬ್ಬರದ ಬಗ್ಗೆ ಕಳವಳವನ್ನು ಹೆಚ್ಚಿಸಿದೆ. ಜುಲೈನಲ್ಲಿ ಸತತ ನಾಲ್ಕನೇ ತಿಂಗಳು ಸಗಟು ಹಣದುಬ್ಬರ ಋಣಾತ್ಮಕವಾಗಿದೆ. ತರಕಾರಿ ಬೆಲೆಯಲ್ಲಿನ ಹೆಚ್ಚಳವು ಜೂನ್‌ನ ಅಂಕಿ ಅಂಶದಿಂದ ಬೆಲೆ ಏರಿಕೆ ಕಾರಣವಾಗಿದೆ.


Click it and Unblock the Notifications