ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು ಸಬ್‌ಮಿಟ್ ಮಾಡುವ ವಿಚಾರಕ್ಕೆ ಬಂದಾಗ ವಯಸ್ಸು ಎಂದಿಗೂ ರಕ್ಷಣಾ ಕವಚ ಆಗಲಾರದು. ಹದಿಹರೆಯದವರು, ಮಕ್ಕಳು ಕೂಡಾ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಬೇಕು ಎಂಬುವುದನ್ನು ಆದಾಯ ತೆರಿಗೆ ಪಾವತಿದಾರರು ತಿಳಿದಿರುವ ವಿಚಾರವಾಗಿದೆ. ಅಪ್ರಾಪ್ತರಿಗೆ ಆದಾಯ ಲಭ್ಯವಾಗುತ್ತಿದ್ದರೆ, ಆದಾಯ ತೆರಿಗೆ ರಿಟರ್ನ್ ಪಾವತಿಸುವುದು ಕಡ್ಡಾಯವಾಗುತ್ತದೆ.
ಆದರೆ ಕೆಲವೊಂದು ನಿರ್ಬಂಧಗಳು ಮತ್ತು ವಿನಾಯಿತಿಗಳು ಕೂಡಾ ಇದೆ. 18 ವರ್ಷಕ್ಕಿಂತ ಕೆಳಗಿನ ವಯಸ್ಸಿನ 4800 ಮಂದಿ ಹಣಕಾಸು ವರ್ಷ 2022-23ರ ಐಟಿಆರ್ ಅನ್ನು ಜನವರಿ 31, 2023ರವರೆಗೆ ಫೈಲ್ ಮಾಡಿದ್ದಾರೆ. ಅಪ್ರಾಪ್ತರಿಗೆ ಮತ್ತು ಮಕ್ಕಳಿಗೆ ಐಟಿಆರ್ ಫೈಲಿಂಗ್ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ ಮುಂದೆ ಓದಿ...
ತೆರಿಗೆ ತಜ್ಞರ ಪ್ರಕಾರ 18 ವರ್ಷಕ್ಕಿಂತ ಕೆಳಗಿನ ಇನ್‌ಫ್ಲಾನ್ಸರ್ಸ್ ಸೇರಿದಂತೆ ಯುವಜನರು ತಮ್ಮ ಆದಾಯ ತೆರಿಗೆ ಪಾವತಿಸಬೇಕಾದ ಆದಾಯವನ್ನು ಬೇರೆ ತೆರಿಗೆ ಪಾವತಿದಾರರಂತೆಯೇ ಪಾವತಿಸಬೇಕಾಗುತ್ತದೆ. Tax2win ಸಂಸ್ಥೆಯ ಸಿಇಒ, ಸಹ ಸಂಸ್ಥಾಪಕ ಅಭಿಷೇಕ್ ಸೋನಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದಾಯ ತೆರಿಗೆಯನ್ನು ಪಾವತಿ ಮಾಡುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.

ಆದಾಯ ತೆರಿಗೆ ರೆಗ್ಯೂಲೇಷನ್ಸ್ ಪ್ರಕಾರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರು ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದರೆ ಬೇರೆಯೇ ತೆರಿಗೆ ದರ ಇರಲಿದೆ. Taxbuddyಯ ಮುಖ್ಯಸ್ಥ ಸುಜಿತ್ ಬಂಗಾರ್ ಪ್ರಕಾರ, "ಅಪ್ರಾಪ್ತರು ತನ್ನದೇ ಆದ ಆದಾಯ ತೆರಿಗೆ ರಿಟರ್ನ್ ಅನ್ನು ಪಾವತಿಸಬೇಕಾಗುತ್ತದೆ. ಪೋಷಕರೊಂದಿಗೆ ಈ ಆದಾಯವು ಒಳಗೊಂಡಿರುತ್ತದೆ. ಮಕ್ಕಳು ಮತ್ತು ಅಪ್ರಾಪ್ತರು ಆದಾಯ ತೆರಿಗೆ ರಿಟರ್ನ್ ಪಾವತಿ ಬಗ್ಗೆ ಈ ಕೆಳಗಿನ ಮಾಹಿತಿಯಿದೆ.
ಅಪ್ರಾಪ್ತರಿಗೆ, ಮಕ್ಕಳಿಗೆ ಆದಾಯ ತೆರಿಗೆ ರಿಟರ್ನ್
ಗಳಿಕೆಯ ಹಣ: ಮಕ್ಕಳು ತಮ್ಮ ಪ್ರತಿಭೆ, ಕೌಶಲ್ಯ, ಸ್ಪರ್ಧೆಯಿಂದ ಹಣವನ್ನು ಗಳಿಸಿದಾಗ, ಅದನ್ನು ಆದಾಯವೆಂದೇ ಪರಿಗಣಿಸಲಾಗುತ್ತದೆ. ಈ ಹಣದಲ್ಲೇ ವೇತನ ಮೊತ್ತವು ಸೇರಿರುತ್ತದೆ.
ಗಳಿಸದ ಆದಾಯ: ಕುಟುಂಬದ ಸದಸ್ಯರು, ಅಜ್ಜ-ಅಜ್ಜಿ ಅಪ್ರಾಪ್ತರಿಗೆ ನೀಡುವ ಉಡುಗೊರೆ ಮೊತ್ತವನ್ನು ಗಳಿಸದ ಆದಾಯ ಎಂದು ಪರಿಗಣಿಸಲಾಗುತ್ತದೆ. ಇದು ಅಪ್ರಾಪ್ತರು ನೇರವಾಗಿ ಗಳಿಸಿದ ಆದಾಯ ಆಗಿರುವುದಿಲ್ಲ.
ಮೇಲೆ ತಿಳಿಸಿದ ಎರಡೂ ರೀತಿಯಲ್ಲಿ ಅಪ್ರಾಪ್ತರಿಗೆ ಆದಾಯ ಲಭ್ಯವಾದರೆ, ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 64(1A) ಅಡಿಯಲ್ಲಿ ಆದಾಯ ತೆರಿಗೆಗೆ ಒಳಪಡುತ್ತದೆ. ಆದ್ದರಿಂದಾಗಿ ಆದಾಯ ತೆರಿಗೆಯನ್ನು ಪಾವತಿ ಮಾಡುವುದು ಮುಖ್ಯವಾಗುತ್ತದೆ.


Click it and Unblock the Notifications