ಶ್ವಾನಪ್ರಿಯರು ತಮ್ಮ ಸಾಕು ನಾಯಿಯನ್ನು ಪ್ರಾಣಿ ಸ್ನೇಹಿಯಾದ ಕೆಫೆ ಮತ್ತು ರೆಸ್ಟೋರೆಂಟ್‌ಗಳಿಗೆ ಕರೆದೊಯ್ಯಲು ಇಷ್ಟಪಡುತ್ತಾರೆ. ತಾವು ಹೋಟೆಲ್‌ಗಳಲ್ಲಿ ಕೂತು ಆಹಾರ ಸೇವನೆ ಮಾಡಿದಂತೆ ಪ್ರಾಣಿಗಳು ಕೂಡಾ ಹೋಟೆಲ್‌ನಲ್ಲಿ ಆಹಾರ ಸೇವನೆ ಮಾಡಲು ಸಾಧ್ಯವಾಗಬೇಕು ಅಂದುಕೊಳ್ಳುವ ಪ್ರಾಣಿಪ್ರೇಮಿಗಳು ಅದೆಷ್ಟೋ ಮಂದಿ ಇದ್ದಾರೆ. ಅಂತಹ ಜನರಿಗೆ ನಾವಿಲ್ಲಿ ಒಂದು ಡಾಬಾದ ಬಗ್ಗೆ ಮಾಹಿತಿ ನೀಡುತ್ತೇವೆ. ಹೌದು ಈ ಡಾಬಾದಲ್ಲಿ ಶ್ವಾನಗಳಿಗೆ ಆಹಾರ ನೀಡಲಾಗುತ್ತದೆ.
ಈ ಡಾಬಾವು ಬರೀ ಶ್ವಾನಗಳಿಗಾಗಿ ಸ್ಥಾಪನೆ ಮಾಡಲಾಗಿದೆ. ಅಂದರೆ ಇಲ್ಲಿ ಶ್ವಾನಗಳಿಗಷ್ಟೆ ಆಹಾರ ಲಭ್ಯವಾಗುತ್ತದೆ. ಈ ರೆಸ್ಟೋರೆಂಟ್ ವಿವಿಧ ಸಸ್ಯಾಹಾರಿ ಮತ್ತು ಮಾಂಸಹಾರಿ ಆಹಾರಗಳನ್ನು ಮಾರಾಟ ಮಾಡುತ್ತಿದ್ದು, ಆದರೆ ಅದು ಶ್ವಾನಗಳಿಗಾಗಿ ಸಿದ್ಧಪಡಿಸಿದ ಆಹಾರವಾಗಿದೆ. ಅಷ್ಟಕ್ಕೂ ಡಾಗಿ ಡಾಬಾ ಎಂದು ಹೆಸರುವಾಸಿಯಾದ ಈ ಡಾಬಾ ಇರುವುದು ಮಧ್ಯಪ್ರದೇಶದ ಇಂದೋರ್‌ನಲ್ಲಿ. ಇಲ್ಲಿ ಶ್ವಾನಗಳಿಗೆ ಒಂದು ದಿನಕ್ಕೆ 7 ರೂಪಾಯಿಯಿಂದ ಹಿಡಿದು 500 ರೂಪಾಯಿವರೆಗಿನ ಆಹಾರ ಲಭ್ಯವಾಗುತ್ತದೆ.

ಹಲವಾರು ವಿಧಗಳ ಆಹಾರ ಲಭ್ಯ
7 ರೂಪಾಯಿಯಿಂದ ಹಿಡಿದು 500 ರೂಪಾಯಿವರೆಗಿನ ಆಹಾರ ಎಂದು ಹೇಳಿದಾಗಲೇ ಇಲ್ಲಿ ಹಲವಾರು ವಿಧದ ಆಹಾರಗಳು ಲಭ್ಯವಾಗಬಹುದು ಎಂಬುವುದು ನಮಗೆ ತಿಳಿಯುತ್ತದೆ. ಹೌದು, ಇಲ್ಲಿ ಹಲವಾರು ವಿಧದ ಶ್ವಾನ ಆಹಾರಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತದೆ. ನಮ್ಮ ಜೇಬಿಗೆ ತಕ್ಕುದಾದ, ನಮ್ಮ ಶ್ವಾನಕ್ಕೆ ಸರಿಯಾದ ಆಹಾರವನ್ನು ನಾವು ಆಯ್ಕೆ ಮಾಡಿಕೊಳ್ಳಬಹುದು. ಈ ಡಾಬಾದಲ್ಲಿ ಶ್ವಾನಗಳಿಗೆ ಇತರೆ ಸೇವೆಗಳನ್ನು ಕೂಡಾ ನೀಡಲಾಗುತ್ತದೆ.
ಶ್ವಾನಗಳು ಅಲ್ಲಿಯೇ ಉಳಿದುಕೊಳ್ಳುವ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದೆ. ಶ್ವಾನದ ಬರ್ತ್‌ಡೇ ಪಾರ್ಟಿಯನ್ನು ಮಾಡುವ ವ್ಯವಸ್ಥೆಯನ್ನು ಕೂಡಾ ನೀಡಲಾಗಿದೆ. ಡಾಬಾದಿಂದ ಆಹಾರವನ್ನು ಹೋಮ್ ಡೆಲಿವರಿ ಕೂಡಾ ಮಾಡಲಾಗುತ್ತದೆ. ಬಾಲ್‌ರಾಜ್ ಜಾಲಾ ಮತ್ತು ಅವರ ಪತ್ನಿ ಇಂದೋರ್‌ನಲ್ಲಿ ಈ ಡಾಬಾವನ್ನು ಆರಂಭ ಮಾಡಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಬಾಲ್‌ರಾಜ್ ಜಾಲಾರಿಗೆ ಈ ಐಡಿಯಾ ಹೊಳೆದಿದೆ.
ಇದಕ್ಕೂ ಮುನ್ನ 2019ರವೆಗೆ ಬಾಲ್‌ರಾಜ್ ಡಾಬಾವನ್ನು ನಡೆಸುತ್ತಾ ಬಂದಿದ್ದಾರೆ. ಹೋಟೆಲ್‌ನಲ್ಲಿ ಉಳಿದ ಆಹಾರಗಳನ್ನು ಬೀದಿ ನಾಯಿಗಳಿಗೆ ನೀಡುತ್ತಿದ್ದರು. ಶ್ವಾನ ಪ್ರಿಯರಾದ ಬಾಲ್‌ರಾಜ್ ಲಾಕ್‌ಡೌನ್ ಸಂದರ್ಭದಲ್ಲಿ ನಾಯಿಗಳು ಆಹಾರಕ್ಕಾಗಿ ಪಡುವ ಕಷ್ಟವನ್ನು ನೋಡಿದ್ದಾರೆ. ಜನರಿಗೆ ಆಹಾರ ಲಭ್ಯವಾಗುವುದೇ ಕಷ್ಟವಾಗಿರುವಾಗ ಶ್ವಾನಗಳಿಗೆ ಇನ್ನೆಷ್ಟು ಕಷ್ಟವಿರಬಹುದು ಎಂದು ನೊಂದಿದ್ದಾರೆ. ಶ್ವಾನ ಆಹಾರಕ್ಕೂ ಬೇಡಿಕೆ ಹೆಚ್ಚಾಗಿತ್ತು, ಆದ್ದರಿಂದ 2020ರಲ್ಲಿ ಶ್ವಾನದ ಡಾಬಾ ಮಾಡುವ ನಿರ್ಧಾರ ಮಾಡಿದ್ದಾರೆ.


Click it and Unblock the Notifications