ಶ್ರೀಲಂಕಾ, ರಷ್ಯಾ, ಲಿಬಾನನ್ ಸೇರಿ ಹಲವಾರು ರಾಷ್ಟ್ರಗಳು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆದರೆ ಇನ್ನು ಹಲವಾರು ದೇಶಗಳು ಆರ್ಥಿಕ ಡೇಂಜರ್ ಝೋನ್‌ಗೆ ಲಗ್ಗೆ ಇಡುತ್ತಿದೆ. ಈ ನಡುವೆ ಹಲವಾರು ತಜ್ಞರು ಭಾರತದಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಮುಂದೊಂದು ದಿನ ಭಾರತದಲ್ಲಿ ಶ್ರೀಲಂಕಾದಂತಹ ಆರ್ಥಿಕ ಬಿಕ್ಕಟ್ಟು ಉಂಟಾಗಬಹುದು ಎಂದು ಹೇಳಿದ್ದಾರೆ.
ಸಾಲದ ಬಿಕ್ಕಟ್ಟು, ತಮ್ಮ ದೇಶದ ಕರೆನ್ಸಿ ಮೌಲ್ಯ ಕುಸಿತ, ಆರ್ಥಿಕ ಬಿಕ್ಕಟ್ಟಿನಿಂದಾಗಿ ಹಲವಾರು ದೇಶಗಳು ಸಂಕಷ್ಟದಲ್ಲಿದೆ. ಶ್ರೀಲಂಕಾ, ಲೆಬನಾನ್, ರಷ್ಯಾ, ಸುರಿನಾಮ್ ಮತ್ತು ಜಾಂಬಿಯಾದಲ್ಲಿ ಈಗಾಗಲೇ ಸಾಲದ ಹೊರೆ ಅಧಿಕವಾಗಿ ಜನರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೆ ಈ ನಡುವೆ ಕನಿಷ್ಠ ಒಂದು ಡಜನ್ ರಾಷ್ಟ್ರಗಳು ಆರ್ಥಿಕ ಬಿಕ್ಕಟ್ಟಿಗೆ ತಲುಪುವ ಸಾಧ್ಯತೆ ಇದೆ. ಆಯಾ ದೇಶದ ಸರ್ಕಾರ ಮಾಡಿರುವ ವೆಚ್ಚವು ಜನರ ಜೇಬಿಗೆ ಕತ್ತರಿ ಹಾಕಿದೆ.
ಅರ್ಜೆಂಟೀನಾವು 150 ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ಸಾಲವನ್ನು ಹೊಂದಿದೆ. ಇದರ ನಂತರದ ಸಾಲಿನಲ್ಲಿ ಈಕ್ವೆಡಾರ್ ಮತ್ತು ಈಜಿಪ್ಟ್ ಇದೆ. ಈ ದೇಶದಲ್ಲಿ ಕ್ರಮವಾಗಿ 40 ಬಿಲಿಯನ್, 45 ಬಿಲಿಯನ್ ಡಾಲರ್ ಸಾಲವಿದೆ. ಅನೇಕ ದೇಶಗಳು ಈಗಾಗಲೇ ಐಎಂಎಫ್ ಬೆಂಬಲ ಕೋರಿದೆ. ಹಾಗಾದರೆ ಈ ಡೇಂಜರ್ ಝೋನ್‌ನಲ್ಲಿ ಇರುವ ಹನ್ನೆರಡು ರಾಷ್ಟ್ರಗಳು ಯಾವುದು ಭಾರತವೂ ಕೂಡಾ ಈ ಪಟ್ಟಿಯಲ್ಲಿ ಇದೆಯೇ ಎಂಬ ಬಗ್ಗೆ ತಿಳಿಯಲು ಮುಂದೆ ಓದಿ...
ಅರ್ಜೆಂಟೀನಾ: ಆರ್ಥಿಕ ಬಿಕ್ಕಟ್ಟಿನ ಆತಂಕ ವ್ಯಕ್ತಪಡಿಸಿದ ಉಪಾಧ್ಯಕ್ಷೆ
ಅರ್ಜೆಂಟೀನಾ ಕೂಡಾ ಡೀಫಾಲ್ಟ್ ರಾಷ್ಟ್ರಗಳ ಪಟ್ಟಿಯಲ್ಲಿದೆ. ಪೆಸೊ ಈಗ ಕಪ್ಪು ಮಾರುಕಟ್ಟೆಯಲ್ಲಿ ಸುಮಾರು ಶೇಕಡ 50ರಷ್ಟು ಇಳಿದು ವಹಿವಾಟು ನಡೆಸುತ್ತಿದೆ. ಸರ್ಕಾರವು 2024 ರವರೆಗೆ ಸೇವೆಗೆ ಯಾವುದೇ ಗಣನೀಯ ಸಾಲವನ್ನು ಹೊಂದಿಲ್ಲ. ಆದರೆ ಅದರ ನಂತರ ಸಾಲ ಅಧಿಕವಾಗಲಿದೆ. ಐಎಂಎಫ್‌ನಿಂದ ಹಣಕಾಸು ಸಹಾಯ ಕೋರುವ ಸ್ಥಿತಿ ಉಂಟಾಗಬಹುದು ಎಂದು ಉಪಾಧ್ಯಕ್ಷೆ ಕ್ರಿಸ್ಟಿನಾ ಫೆರ್ನಾಂಡಿಸ್ ಡಿ ಕಿರ್ಚ್ನರ್ ಅಭಿಪ್ರಾಯಿಸಿದ್ದಾರೆ.
ಉಕ್ರೇನ್: ಸೆಪ್ಟಂಬರ್‌ನಲ್ಲಿ ಬಿಕ್ಕಟ್ಟು ಸಾಧ್ಯತೆ
ರಷ್ಯಾವು ಕಳೆದ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ದಾಳಿ ನಡೆಸಿದೆ. ಪ್ರಸ್ತುತ ಉಭಯ ದೇಶಗಳ ನಡುವೆ ಯುದ್ಧ ನಡೆಯುತ್ತಲೇ ಇದೆ. ರಷ್ಯಾದ ಆಕ್ರಮಣದಿಂದ ಉಂಟಾದ ನಷ್ಟವನ್ನು ಸರಿದೂಗಿಸಲು ಉಕ್ರೇನ್ 20 ಬಿಲಿಯನ್ ಸಾಲವನ್ನು ಮಾಡಬೇಕಾಗುತ್ತದೆ. ಈ ಬಗ್ಗೆ ಮೋರ್ಗನ್ ಸ್ಟಾನ್ಲಿಯಂತಹ ಹೂಡಿಕೆದಾರರು ಎಚ್ಚರಿಕೆ ನೀಡಿದ್ದಾರೆ. ಸೆಪ್ಟಂಬರ್‌ನಲ್ಲಿ ಬಿಕ್ಕಟ್ಟು ಬರುತ್ತದೆ. ಸಹಾಯವಾಗಿ ಹಣ ಬಂದರೆ ಕೀವ್ ಸಮರ್ಥವಾಗಿ ಪಾವತಿ ಮಾಡಲು ಸಾಧ್ಯವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.
ಟುನೀಶಿಯಾ: ಅತ್ಯಂತ ಅಪಾಯದಲ್ಲಿರುವ ದೇಶ
ಆಫ್ರಿಕಾದಲ್ಲಿ ಹಲವಾರು ದೇಶಗಳು ಐಎಂಎಫ್‌ನ ಸಹಾಯ ಕೋರಲು ಮುಂದಾಗಿದೆ. ಆ ಪೈಕಿ ಟುನೀಶಿಯಾ ಅತ್ಯಂತ ಅಪಾಯದಲ್ಲಿದೆ. ಸುಮಾರು ಶೇಕಡ 10ರಷ್ಟು ಬಜೆಟ್ ಕೊರತೆ ಕಂಡು ಬಂದಿದೆ. ಅಧ್ಯಕ್ಷ ಕೈಸ್ ಸೈಯದ್ ಅವರ ಅಧಿಕಾರದ ಮೇಲೆ ತನ್ನ ಹಿಡಿತವನ್ನು ಬಲಪಡಿಸುವ ಪ್ರಯತ್ನದಿಂದಾಗಿ ಐಎಂಎಫ್ ಸಹಾಯದ ಮೇಲೂ ಪರಿಣಾಮ ಬೀರುವ ನಿರೀಕ್ಷೆ ಇದೆ.
ಘಾನಾ: ಹಣದುಬ್ಬರವು ಶೇಕಡ 30ರ ಸಮೀಪ
ಭಾರೀ ಸಾಲದ ಕಾರಣದಿಂದಾಗಿ ಘಾನಾದ ಸಾಲ ಹಾಗೂ ಜಿಡಿಪಿ ಅನುಪಾತವು ಸುಮಾರು ಶೇಕಡ 85ಕ್ಕೆ ಏರಿಕೆ ಕಂಡಿದೆ. ಘಾನಾ ಕರೆನ್ಸಿ ಸೆಡಿ ಈಗಾಗಲೇ ಕಾಲು ಭಾಗದಷ್ಟು ಕುಸಿತ ಕಂಡಿದೆ. ಈಗಾಗಲೇ ಸಾಲದ ಬಡ್ಡಿ ಪಾವತಿಗೆ ತೆರಿಗೆ ಆದಾಯದ ಅರ್ಧಕ್ಕಿಂತ ಅಧಿಕ ಹಣವನ್ನು ಖರ್ಚು ಮಾಡುತ್ತಿದೆ. ಹಣದುಬ್ಬರವು ಶೇಕಡ 30ರ ಸಮೀಪದಲ್ಲಿದೆ.
ಈಜಿಪ್ಟ್: ಪೌಂಡ್ ಶೇಕಡ 15ಕ್ಕಿಂತ ಅಧಿಕ ಕುಸಿತ
ಮುಂದಿನ ಐದು ವರ್ಷದಲ್ಲಿ ಮರುಪಾವತಿ ಮಾಡಬೇಕಾದ ಸುಮಾರು 100 ಬಿಲಿಯನ್ ಡಾಲರ್ ಸಾಲವನ್ನು ಈಜಿಪ್ಟ್ ಹೊಂದಿದೆ. ಇದರಲ್ಲಿ 2024ರ 3.3 ಶತಕೋಟಿ ಡಾಲರ್ ಬಾಂಡ್ ಕೂಡಾ ಸೇರಿದೆ. ಈಜಿಪ್ಟ್ ಪೌಂಡ್ ಶೇಕಡ 15ಕ್ಕಿಂತ ಅಧಿಕ ಕುಸಿತ ಕಂಡಿದೆ. ಮಾರ್ಚ್‌ನಲ್ಲಿ ಸಹಾಯಕ್ಕಾಗಿ ಈ ದೇಶವು ಐಎಂಎಫ್ ಮೊರೆ ಹೋಗಿದೆ.
ಕೀನ್ಯಾ: 30 ಪ್ರತಿಶತ ಆದಾಯ ಬಡ್ಡಿ ಪಾವತಿಗೆ ಖರ್ಚು
ಕೀನ್ಯಾ ಸುಮಾರು 30 ಪ್ರತಿಶತ ಆದಾಯವನ್ನು ಬಡ್ಡಿ ಪಾವತಿಗೆ ಖರ್ಚು ಮಾಡುತ್ತಿದೆ. ಬಾಂಡ್‌ಗಳು ಅರ್ಧದಷ್ಟು ನಷ್ಟವಾಗಿದೆ. ಕೀನ್ಯಾ, ಈಜಿಪ್ಟ್, ಟುನೀಶಿಯಾ ಮತ್ತು ಘಾನಾ ಕುರಿತು ಮಾತನಾಡಿದ ವಿಶ್ಲೇಷಕರು ಈ ದೇಶಗಳು ಭಾರೀ ಸಂಕಷ್ಟದ ಸ್ಥಿತಿಯಲ್ಲಿದೆ ಎಂದು ಹೇಳಿದ್ದಾರೆ.
ಇಥಿಯೋಪಿಯಾ: ಅಂತರ್ ಯುದ್ಧದಿಂದ ಇಕ್ಕಟ್ಟಿನಲ್ಲಿ
ಇಥಿಯೋಪಿಯಾ G20 ಕಾರ್ಯಕ್ರಮದ ಅಡಿಯಲ್ಲಿ ಸಾಲ ಪರಿಹಾರ ಪಡೆಯಲು ಮುಂದಾದ ಮೊದಲ ದೇಶವಾಗಿದೆ. ಅಂತರ್ ಯುದ್ಧದಿಂದಾಗಿ ಈ ದೇಶದಲ್ಲಿ ಪ್ರಗತಿಯು ತೀವ್ರ ಕುಂಠಿತವಾಗಿದೆ. ಈ ನಡುವೆ ಕೇವಲ ಒಂದು ಬಿಲಿಯನ್ ಡಾಲರ್ ಅಂತರರಾಷ್ಟ್ರೀಯ ಬಾಂಡ್ ಸೇವೆಯನ್ನು ಮುಂದುವರೆಸಿದೆ.
ಎಲ್ ಸಾಲ್ವಡಾರ್: ಬಾಂಡ್‌ಗಳು ಭಾರೀ ಕುಸಿತ
ಬಿಟ್‌ಕಾಯಿನ್ ಅನ್ನು ಕಾನೂನುಬದ್ಧ ಟೆಂಡರ್ ಮಾಡುವುದು ಈ ದೇಶದ ಮೇಲೆ ಪ್ರಭಾವ ಉಂಟು ಮಾಡಿದೆ. ಆರು ತಿಂಗಳುಗಳಲ್ಲಿ ಮೆಚ್ಯೂರಿಟಿ ಹೊಂದುವ 800 ಮಿಲಿಯನ್ ಡಾಲರ್ ಶೇಕಡ 30ರಷ್ಟು ರಿಯಾಯಿತಿಯಲ್ಲಿ ಹಾಗೂ ಅಧಿಕ ಅವಧಿಯಲ್ಲಿ ಮೆಚ್ಯೂರಿಟಿ ಹೊಂದುವ ಬಾಂಡ್‌ಗಳು ಶೇಕಡ 70ರಷ್ಟು ರಿಯಾಯಿತಿಯಲ್ಲಿ ವಹಿವಾಟು ನಡೆಸುವ ಹಂತಕ್ಕೆ ಕುಸಿದಿದೆ.
ಪಾಕಿಸ್ತಾನ: ರೂಪಾಯಿ ದಾಖಲೆ ಕುಸಿತ
ಪಾಕಿಸ್ತಾನವು ಈ ವಾರ ನಿರ್ಣಾಯಕ ಹಂತದಲ್ಲಿ ಐಎಂಎಫ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ರಫ್ತು, ಆಮದಿನ ನಡುವಿನ ಏರಿಳಿತವು ಪಾಕಿಸ್ತಾನವನ್ನು ಸಂಕಷ್ಟಕ್ಕೆ ದೂಡಿದೆ. ವಿದೇಶಿ ಕರೆನ್ಸಿ ಮೀಸಲು 9.8 ಬಿಲಿಯನ್ ಡಾಲರ್ ಅಷ್ಟು ಇಳಿಕೆಯಾಗಿದೆ. ಇದು ಐದು ವಾರಗಳ ಆಮದಿಗೂ ಸಾಕಾಗಲಾರದು. ಪಾಕಿಸ್ತಾನದ ರೂಪಾಯಿ ದಾಖಲೆಯ ಕುಸಿತಕ್ಕೆ ಕುಸಿದಿದೆ. ಆದಾಯದ ಶೇಕಡ 40ರಷ್ಟು ಬಡ್ಡಿ ಪಾವತಿಗೆಯೇ ಖರ್ಚು ಮಾಡಲಾಗುತ್ತಿದೆ.
ಬೆಲಾರಸ್: ರಷ್ಯಾ ಪರ ನಿಂತ ಬೆಲಾರಸ್ ಸಂಕಷ್ಟದಲ್ಲಿ
ಪಾಶ್ಚಿಮಾತ್ಯ ನಿರ್ಬಂಧಗಳು ಕಳೆದ ತಿಂಗಳು ರಷ್ಯಾವನ್ನು ಡೀಫಾಲ್ಟ್ ರಾಷ್ಟ್ರವನ್ನಾಗಿಸಿದೆ. ಉಕ್ರೇನ್ ರಷ್ಯಾ ಬಿಕ್ಕಟ್ಟಿನಲ್ಲಿ ರಷ್ಯಾದ ಪರವಾಗಿ ನಿಂತಿದ್ದ ಬೆಲಾರಸ್ ಈಗ ಕಠಿಣ ಸ್ಥಿತಿಯಲ್ಲಿದೆ. ಹಲವಾರು ರಾಷ್ಟ್ರಗಳಿಂದ ನಿರ್ಬಂಧಕ್ಕೆ ಒಳಗಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿದೆ.
ಈಕ್ವೆಡಾರ್: ಪ್ರತಿಭಟನೆಯಿಂದ ಬಿಕ್ಕಟ್ಟು
ಲ್ಯಾಟಿನ್ ಅಮೇರಿಕನ್ ದೇಶವು ಕೇವಲ ಎರಡು ವರ್ಷಗಳ ಹಿಂದೆ ಡೀಫಾಲ್ಟ್ ಸ್ಥಿತಿಗೆ ತಲುಪಿದೆ. ಈಗ ಪ್ರತಿಭಟನೆ, ಅಧ್ಯಕ್ಷ ಗಿಲ್ಲೆರ್ಮೊ ಲಾಸ್ಸೊ ಅವರನ್ನು ಪದಚ್ಯುತಗೊಳಿಸುವ ಪ್ರಯತ್ನದಿಂದ ದೇಶವು ಮತ್ತೆ ಬಿಕ್ಕಟ್ಟಿಗೆ ಸಿಲುಕಿದೆ. ಈ ದೇಶವು ಭಾರೀ ಸಾಲವನ್ನು ಹೊಂದಿದೆ.
ನೈಜೀರಿಯಾ: ಹಣದುಬ್ಬರದ ತೀವ್ರ ಅಧಿಕ
ನೈಜೀರಿಯಾ ಸಾಲದ ಬಡ್ಡಿದರವನ್ನು ಪಾವತಿ ಮಾಡಲು ಆದಾಯದ ಸುಮಾರು ಶೇಕಡ 30ಕ್ಕಿಂತ ಅಧಿಕ ಖರ್ಚು ಮಾಡುತ್ತಿದೆ. ಜೂನ್‌ನಲ್ಲಿ ನೈಜೀರಿಯಾದಲ್ಲಿ ಹಣದುಬ್ಬರದ ದರವು ಅಧಿಕವಾಗಿದೆ. ಜೀವನ ವೆಚ್ಚವು ಕೂಡಾ ಭಾರೀ ಅಧಿಕವಾಗಿದೆ. ಹಣದುಬ್ಬರವು ಕಳೆದ ವರ್ಷದಿಂದ ಈ ವರ್ಷಕ್ಕೆ ಶೇಕಡ 18.60ಕ್ಕೆ ಹೆಚ್ಚಾಗಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications