Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ

2023-2024ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅಧಿವೇಶನ ಜನವರಿ 31ರಂದು ಆರಂಭವಾಗಿದೆ. ನಾಳೆ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಇಂದು ಬಜೆಟ್ ಅಧಿವೇಶನವು ರಾಷ್ಟ್ರಪತಿ ದ್ರೌಪತಿ ಮುರ್ಮು ಭಾಷಣದೊಂದಿಗೆ ಆರಂಭವಾಗಿದೆ. ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆಯನ್ನು ಮಂಡನೆ ಮಾಡಿದ್ದಾರೆ. ಆರ್ಥಿಕ ಸಮೀಕ್ಷೆ ಪ್ರಕಾರ ಭಾರತದ ಜಿಡಿಪಿ ಬೆಳವಣಿಗೆ ದರವನ್ನು ಶೇಕಡ 6.5 ಎಂದು ಅಂದಾಜು ಮಾಡಲಾಗಿದೆ. ಭಾರತದ ಜಿಡಿಪಿ ದರವು ಶೇಕಡ 6-6.8ಕ್ಕೆ ತಗ್ಗುವ ಅಂದಾಜು ಮಾಡಲಾಗಿದೆ. ಈ ಆರ್ಥಿಕ ಸಮೀಕ್ಷೆಯ ಪ್ರಮುಖಾಂಶಗಳನ್ನು ನಾವಿಲ್ಲಿ ವಿವರಿಸಿದ್ದೇವೆ ಮುಂದೆ ಓದಿ...

ಆರ್ಥಿಕ ಸಮೀಕ್ಷೆಯ ಪ್ರಮುಖಾಂಶಗಳು ಇಲ್ಲಿದೆ

* ಆರ್ಥಿಕ ಸಮೀಕ್ಷೆ ಪ್ರಕಾರ ಭಾರತದ ಜಿಡಿಪಿ ಬೆಳವಣಿಗೆ ದರವನ್ನು ಶೇಕಡ 6.5 ಎಂದು ಅಂದಾಜು ಮಾಡಲಾಗಿದೆ. ಭಾರತದ ಜಿಡಿಪಿ ದರವು ಶೇಕಡ 6-6.8ಕ್ಕೆ ತಗ್ಗುವ ಅಂದಾಜು ಮಾಡಲಾಗಿದೆ.

* 2023-24ರಲ್ಲಿ ಜಿಡಿಪಿಯು ಶೇಕಡ 6.5ಕ್ಕೆ ಬೆಳೆಯುವ ಅಂದಾಜು ಮಾಡಲಾಗಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಜಿಡಿಪಿ ದರ ಶೇಕಡ 7 ಆಗಿದೆ. 2021-22ರಲ್ಲಿ ಶೇಕಡ 8.7 ಆಗಿತ್ತು.

* ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಭಾರತವು ಅತೀ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಆರ್ಥಿಕ ಕೊರತೆ ಇನ್ನಷ್ಟು ಮುಂದುವರಿಯಲಿದೆ. ರೂಪಾಯಿಯು ಇನ್ನಷ್ಟು ಒತ್ತಡಕ್ಕೆ ಒಳಗಾಗಬಹುದು ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.

 Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ

* ಹಣಕಾಸು ವರ್ಷ 2023ರಲ್ಲಿ ಹಣದುಬ್ಬರವು ಶೇಕಡ 6.8ರಷ್ಟಿರಲಿದೆ. ಹಣದುಬ್ಬರ ಅಧಿಕವಾದ ಕಾರಣದಿಂದಾಗಿ ಬಡ್ಡಿದರವು ದೀರ್ಘ ಕಾಲದವರೆಗೆ ಹೆಚ್ಚಳವಾಗಿಯೇ ಇರಲಿದೆ.

* ನವೆಂಬರ್ 2022ರ ಕೊನೆಗೆ ಆರ್ಥಿಕ ಕೊರತೆಯು ಶೇಕಡ 58.9ರಷ್ಟಿದೆ. ಕಳೆದ ಐದು ವರ್ಷದಲ್ಲಿ ಇದೇ ಅವಧಿಗಿಂತ ಶೇಕಡ 104.6ರಷ್ಟು ಇಳಿಕೆ ಕಂಡಿದೆ.

* ತೆರಿಗೆಯು ಏಪ್ರಿಲ್‌-ನವೆಂಬರ್‌ 2022ರಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 15.5ರಷ್ಟು ಬೆಳವಣಿಗೆ ಕಂಡಿದೆ. ಏಪ್ರಿಲ್-ಡಿಸೆಂಬರ್ 2022ರಲ್ಲಿ ವರ್ಷದಿಂದ ವರ್ಷಕ್ಕೆ ಜಿಎಸ್‌ಟಿ ಸಂಗ್ರಹವು ಶೇಕಡ 24.8ರಷ್ಟು ಹೆಚ್ಚಳವಾಗಿದೆ.

* ಫಾರ್ಮಾ ಸೆಕ್ಟರ್‌ನಲ್ಲಿ ಎಫ್‌ಡಿಐ ಸೆಪ್ಟೆಂಬರ್‌ 2022ರಲ್ಲಿ 20 ಬಿಲಿಯನ್ ಡಾಲರ್ ದಾಟಿದೆ. ಫಾರ್ಮಾ ವಲಯದಲ್ಲಿ ಸೆಪ್ಟೆಂಬರ್ 2022ರವರೆಗೆ ಕಳೆದ ಐದು ವರ್ಷದಲ್ಲಿ ಎಫ್‌ಡಿಐ ನಾಲ್ಕು ಪಟ್ಟು ಹೆಚ್ಚಾಗಿ 699 ಮಿಲಿಯನ್ ಯುಎಸ್‌ ಡಾಲರ್‌ಗೆ ತಲುಪಿದೆ. ಪ್ರತಿಕೂಲ ಸ್ಥಿತಿ ಮತ್ತು ಕೋವಿಡ್ ಸಾಂಕ್ರಾಮಿಕ ಕಡಿಮೆಯಾಗುತ್ತಿದ್ದಂತೆ ಔಷಧೀಯ ಉತ್ಪಾದನೆ ಬೆಳವಣಿಗೆ ಮಂದಗತಿಯಾಗಿದೆ.

* ಸ್ಟೀಲ್ ಉತ್ಪಾದನೆಯಲ್ಲಿ ಭಾರತವು ಜಾಗತಿಕವಾಗಿ ಪ್ರಮುಖ ದೇಶವಾಗಿದೆ. ಎರಡನೇ ಕಚ್ಚಾ ಸ್ಟೀಲ್ ಉತ್ಪಾದನೆ ಮಾಡುವ ದೇಶವಾಗಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಸ್ಟೀಲ್ ವಲಯದಲ್ಲಿ ಬೆಳವಣಿಗೆ ಕಂಡು ಬಂದಿದೆ.

* ಡಿಮ್ಯಾಟ್ ಖಾತೆಯಲ್ಲಿ ಹೆಚ್ಚಳವಾದರೂ ಕೂಡಾ ಈಕ್ವಿಟಿ ವಹಿವಾಟಿನಲ್ಲಿ ವೈಯಕ್ತಿಕ ಹೂಡಿಕೆದಾರರ ಷೇರು ಕಡಿಮೆಯಾಗಿದೆ. ತೆರಿಗೆ ಸಂಗ್ರಹ ಹಣಕಾಸು ವರ್ಷ 2023ರಲ್ಲಿ ಅಂದಾಜಿಗಿಂತ ಅಧಿಕವಾಗಿಯೇ ಇರುವ ಸಾಧ್ಯತೆಯಿದೆ.

* ಕಳೆದ ಕೆಲವು ವರ್ಷಗಳಿಂದ ಉತ್ಪಾದನಾ ವಲಯದಲ್ಲಿ ವಾರ್ಷಿಕವಾಗಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಪ್ರಮಾಣವು ಅಧಿಕವಾಗುತ್ತಾ ಸಾಗುತ್ತಿದೆ. ಹಣಕಾಸು ವರ್ಷ 2021ರಲ್ಲಿ ಎಫ್‌ಡಿಐ 12.1 ಬಿಲಿಯನ್ ಡಾಲರ್ ಆಗಿದ್ದು, ಹಣಕಾಸು ವರ್ಷ 2022ರಲ್ಲಿ 21.3 ಬಿಲಿಯನ್ ಡಾಲರ್‌ಗೆ ಎಫ್‌ಡಿಐ ಜಿಗಿದಿದೆ.

* ನವೆಂಬರ್‌ 2022ರಿಂದ ರಿಟೇಲ್ ಹಣದುಬ್ಬರವು ಆರ್‌ಬಿಐನ ಸಹಿಷ್ಣುಮಟ್ಟವನ್ನು ತಲುಪಿದೆ. ಸುಮಾರು ಮೂರು ನಾಲ್ಕು ದಶಕಗಳ ಬಳಿಕ 2022ರಲ್ಲಿ ವಿಶ್ವದಲ್ಲೇ ಭಾರೀ ಪ್ರಮಾಣದಲ್ಲಿ ಹಣದುಬ್ಬರ ಏರಿಕೆಯಾಗಿದೆ. ಭಾರತದಲ್ಲಿ ಅಗತ್ಯ ವಸ್ತುಗಳ ದರ ಹೆಚ್ಚಳವಾಗಿದೆ. ಹಣದುಬ್ಬರವನ್ನು ಹತೋಟಿಗೆ ತರಲು ಆರ್‌ಬಿಐನ ಕ್ರಮವು ಸಹಕಾರಿಯಾಗಿದೆ.

* ಹಣಕಾಸು ವರ್ಷ 2021ರಲ್ಲಿ ಜಿಎಸ್‌ಟಿ ಸಂಗ್ರಹ ಕುಂಠಿತವಾದ ಬಳಿ, ಈಗ ಸಣ್ಣ ಉದ್ಯಮಗಳಿಂದ ಜಿಎಸ್‌ಟಿ ಸಂಗ್ರಹ ಹೆಚ್ಚಾಗುತ್ತಿದೆ. ಕೋವಿಡ್‌ ಪೂರ್ವದಲ್ಲಿ ಸಂಗ್ರಹವಾಗುತ್ತಿದ್ದ ಜಿಎಸ್‌ಟಿಗೂ ಅಧಿಕ ಜಿಎಸ್‌ಟಿಯನ್ನು ಸಣ್ಣ ಉದ್ಯಮಗಳು ಪಾವತಿಸಿದೆ.

* ಕೃಷಿ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಯು 2020-21ರಲ್ಲಿ ಶೇಕಡ 9.3ರಷ್ಟು ಏರಿಕೆಯಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಒಂದು ವರ್ಷ ಕಾಲಕ್ಕೆ 81.4 ಕೋಟಿ ಜನರಿಗೆ ಉಚಿತ ಆಹಾರ ಉತ್ಪನ್ನ ಒದಗಿಸಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿಯಲ್ಲಿ 2022-23ರ ಏಪ್ರಿಲ್-ಜುಲೈ ಪಾವತಿ ಅವಧಿಯಲ್ಲಿ 11.3 ಕೋಟಿ ರೈತರಿಗೆ ಹಣಕಾಸು ಸಹಾಯ ಮಾಡಲಾಗಿದೆ.

* ಹಣಕಾಸು ವರ್ಷ 2020ರಲ್ಲಿ ಉನ್ನತ ಶಿಕ್ಷಣಕ್ಕೆ ದಾಖಲಾತಿಯಾಗುವ ಸಂಖ್ಯೆಯು 3.9 ಕೋಟಿ ಆಗಿತ್ತು. ಆದರೆ ಈ ಸಂಖ್ಯೆಯು ಹಣಕಾಸು ವರ್ಷ 2021ರಲ್ಲಿ 4.1 ಕೋಟಿಗೆ ಹೆಚ್ಚಳವಾಗಿದೆ. ಹಣಕಾಸು ವರ್ಷ 2015ರಿಂದ ಈವರೆಗೆ ಉನ್ನತ ಶಿಕ್ಷಣ ದಾಖಲಾತಿಯಲ್ಲಿ ಶೇಕಡ 21ರಷ್ಟು ಅಂದರೆ 72 ಲಕ್ಷದಷ್ಟು ಏರಿಕೆ ಕಂಡು ಬಂದಿದೆ. ಹಣಕಾಸು ವರ್ಷ 2020ರಲ್ಲಿ 1.9 ಹೆಣ್ಣು ಮಕ್ಕಳು ದಾಖಲಾತಿಯಾಗಿತ್ತು. ಆದರೆ ಹಣಕಾಸು ವರ್ಷ 2021ರಲ್ಲಿ 2.0 ಕೋಟಿ ಹೆಣ್ಣು ಮಕ್ಕಳು ಉನ್ನತ ಶಿಕ್ಷಣವನ್ನು ಮಾಡಲು ಮುಂದಾಗಿದ್ದಾರೆ.

* 141.4 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ 89,151 ಯೋಜನೆಗಳನ್ನು ಜಾರಿ ಮಾಡಲಾಗಿದೆ. 5.5 ಲಕ್ಷ ಕೋಟಿ ರೂಪಾಯಿಯ 1009 ಯೋಜನೆಗಳು ಸಂಪೂರ್ಣವಾಗಿದೆ. ಯೋಜನೆಯ ಕ್ಲಿಯರೆನ್ಸ್, ಅನುಮೋದನೆಗಾಗಿ ಎನ್‌ಐಪಿ ಮತ್ತು ಪ್ರಾಜೆಕ್ಟ್ ಮಾನಿಟರಿಂಗ್ ಗ್ರೂಪ್ (ಪಿಎಂಜಿ) ಪೋರ್ಟಲ್‌ ಲಿಂಕ್‌ ಆರಂಭಿಸಲಾಗಿದೆ.

* ಆರ್ಥಿಕ ಸಮೀಕ್ಷೆಯ ಪ್ರಕಾರ ಈವರೆಗೆ ಆಧಾರ್ ಬಳಸಿಕೊಂಡು 1,350.2 ಕೋಟಿ ಇಕೆವೈಸಿ ಮಾಡಲಾಗಿದೆ. ಭಾರತದಲ್ಲಿ 75.3 ಕೋಟಿ ಕಟುಂಬವು ತಮ್ಮ ರೇಷನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಿಕೊಂಡಿದ್ದಾರೆ. 27.9 ಕೋಟಿ ಜನರು ತಮ್ಮ ಆಧಾರ್ ಅನ್ನು ಎಲ್‌ಪಿಜಿ ಸಬ್ಸಿಡಿಗೆ ಲಿಂಕ್ ಮಾಡಿಕೊಂಡಿದ್ದಾರೆ. ಇನ್ನು 75.4 ಕೋಟಿ ಬ್ಯಾಂಕ್ ಖಾತೆಗಳು ಆಧಾರ್‌ನೊಂದಿಗೆ ಲಿಂಕ್ ಆಗಿದೆ. ಆಧಾರ್ ಪಾವತಿ ವಿಧಾನದಿಂದ (AePS) 1,549.8 ಕೋಟಿ ವಹಿವಾಟು ನಡೆದಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+