ಭಾರತದ ಮೊದಲ ಶ್ರೀಮಂತ ವ್ಯಕ್ತಿ ಯಾರೆಂದು ಬಹುತೇಕರಿಗೆ ಗೊತ್ತಿದೆ. ಎಲ್ಲಿಯವರೆಗೆ ಅಂದರೆ ಗೂಗಲ್‌ನಲ್ಲಿ ವಿಶ್ವದ ಮೊದಲ ಶ್ರೀಮಂತ ವ್ಯಕ್ತಿ ಯಾರೆಂದು ಬರೆದು ಹುಡುಕುವುದಕ್ಕೂ ಮೊದಲೇ ಎಲಾನ್ ಮಸ್ಕ್ ಅವರ ಹೆಸರು ಬಂದು ಬಿಡುತ್ತದೆ. ಅಷ್ಟರಮಟ್ಟಿಗೆ ಮಸ್ಕ್ ಅವರು ತಮ್ಮ ಶ್ರೀಮಂತಿಕೆ ಬಗ್ಗೆ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಎಲಾನ್ ಮಸ್ಕ್ ಅವರು ಒಂದು ಕಾಲದಲ್ಲಿ ಆರ್ಥಿಕವಾಗಿ ದಿವಾಳಿತನದತ್ತ ಮುಖ ಮಾಡಿದ್ದರು.
ಟೆಸ್ಲಾ ಹಾಗೂ X (ಟ್ವಿಟ್ಟರ್) ಮಾಲೀಕರಾಗಿರುವ 52 ವರ್ಷದ ಎಲಾನ್ ಮಸ್ಕ್ ಅವರು ಉದ್ಯಮಶೀಲವನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ. ಅವರು ತಮ್ಮ ಬಾಲ್ಯದಿಂದಲೇ ಐಡಿಯಾಗಳನ್ನು ಹುಟ್ಟು ಹಾಕುವುದು, ಆ ದಿಕ್ಕಿನಲ್ಲಿ ಕಾರ್ಯಪ್ರವೃತ್ತಗೊಳ್ಳುವುದು, ಕೆಲವೊಮ್ಮೆ ವಿಫಲಗೊಳ್ಳುವಂಥಹ ಪ್ರವೃತ್ತಿಯನ್ನು ಹೊಂದಿದ್ದರು.

ಫೋರ್ಬ್ಸ್ ಹೇಳಿರುವಂತೆ ಸಣ್ಣ ವಯಸ್ಸು ಇರುವಾಗಲೇ ಮಸ್ಕ್ ಅವರು ಕೋಡ್ ಮಾಡುವುದನ್ನು ಕಲಿತುಕೊಂಡು ತಾವು ತಯಾರಿಸಿದ ಮೊದಲ ಆಟ ಬೋಲ್ಸ್ಟಾರ್ ಅನ್ನು500 ಡಾಲರ್‌ಗೆ ಮಾರಾಟ ಮಾಡಿದ್ದರು.
ಪೆನಿನ್ಸುಲುಯಾ ವಿಶ್ವವಿದ್ಯಾಲಯದಿಂದ ಕಲೆ/ವಿಜ್ಞಾನ ಪದವಿ ಪಡೆದುಕೊಂಡಿರುವ ಎಲಾನ್ ಮಸ್ಕ್ ಅವರು ಎಲೆಕ್ಟ್ರಿಕಲ್ ಕಾರು ತಯಾರಿಕಾ ಕಂಪನಿಯಾದ ಟೆಸ್ಲಾ, ಸ್ಪೇಸ್‌ಎಕ್ಸ್, ಬೋರಿಂಗ್ ಕಂಪನಿ ಸೇರಿದಂತೆ ಆರು ಕಂಪನಿಗಳನ್ನು ಹೊಂದಿದ್ದಾರೆ. 2008ರಲ್ಲಿ ಎಲಾನ್ ಮಸ್ಕ್ ಅವರು ಸ್ಥಾಪಿಸಿದ ಟೆಸ್ಲಾ ಹಾಗೂ ಸ್ಪೇಸ್‌ಎಕ್ಸ್ ಕಂಪನಿಯು ಹೇಗೆ ಆರ್ಥಿಕವಾಗಿ ದಿವಾಳಿತನದ ಹಾದಿಯಲ್ಲಿತ್ತು ಎಂಬುದನ್ನು 2016ರಲ್ಲಿ ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನ ರಿಸರ್ಚ್ ಪೇಪರ್‌ನಲ್ಲಿ ಉಲ್ಲೇಖಿಸಲಾಗಿದೆ.
ಕೈಯಲ್ಲಿದ್ದ ನಗದು ಹಣವೆಲ್ಲ ಬಹುತೇಕ ಖಾಲಿಯಾಗಿತ್ತು. ಜತೆಗೆ ಮಸ್ಕ್ ದುಬಾರಿ ವಿಚ್ಚೇತನದ ಸೆಟ್ಲ್‌ಮೆಂಟ್ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದರು. ಟೆಸ್ಲಾ ಕಂಪನಿಯನ್ನು ಆರ್ಥಿಕವಾಗಿ ಸುಸ್ಥಿತಿಯಲ್ಲಿಡಲು 40 ಮಿಲಿಯನ್ ಡಾಲರ್ ಹಣ ಬೇಕಾಗಿತ್ತು. ಅವರು ಸ್ವಂತವಾಗಿ 20 ಮಿಲಿಯನ್ ಡಾಲರ್ ಅನ್ನು ಒಟ್ಟುಗೂಡಿಸಿಕೊಂಡಿದ್ದರು ಹಾಗೂ ಉಳಿದ ಹಣಕ್ಕಾಗಿ ಹೂಡಿಕೆದಾರರ ನೆರವು ಪಡೆದಿದ್ದರು ಎಂದು ಅಧ್ಯಯನ ವರದಿಯು ಉಲ್ಲೇಖಿಸಿದೆ.
2008ರ ಆರ್ಥಿಕ ಬಿಕ್ಕಟ್ಟು ನಡುವೆ ಜನರಲ್ ಮೋಟಾರ್ಸ್ ಹಾಗೂ ಕ್ರಿಸ್ಲರ್‌ನಂಥಹ ಸರ್ಕಾರದ ಬೇಲ್‌ಔಟ್‌ನಡಿ ಶತಕೋಟಿ ಡಾಲರ್ ಪಡೆದುಕೊಂಡಿತ್ತು. ಅಷ್ಟೊತ್ತಿಗೆ ಆರ್ಥಿಕ ಸಂಕಷ್ಟದಲ್ಲಿದ್ದ ಎಲಾನ್ ಮಸ್ಕ್ ಪಾಲಿಗೆ ದೊಡ್ಡ ಪವಾಡವೇ ಸಂಭವಿಸಿತ್ತು. ಅದೇನೆಂದರೆ, ಕೊನೆಯ ಕ್ಷಣದಲ್ಲಿ ಸ್ವತಃ ಆರ್ಥಿಕ ಗೊಂದಲದಲ್ಲಿದ್ದ ಜರ್ಮನ್ ವಾಹನ ತಯಾರಿಕಾ ಕಂಪನಿ ಡೈಮ್ಲರ್, ಟೆಸ್ಲಾದಲ್ಲಿ 50 ಮಿಲಿಯನ್ ಡಾಲರ್ ಹೂಡಿಕೆ ಮಾಡಿತ್ತು. ಇಂದಿನ ಮೌಲ್ಯದಲ್ಲಿ ಅದು 55 ಮಿಲಿಯನ್ ಡಾಲರ್ ಆಗಿದೆ.
2008ರ ಕ್ರಿಸ್ಮಸ್‌ನ ಸಮಯದಲ್ಲಿಹೂಡಿಕೆ ಸಂಬಂಧ ನಾವು ಹಣಕಾಸಿನ ರೌಂಡ್ ಮುಕ್ತಾಯಗೊಳಿಸುವ ಹಂತದಲ್ಲಿದ್ದೆವು. ಅದು ಕೊನೆಯ ದಿನದ ಕೊನೆಯ ಒಂದು ಗಂಟೆಯಷ್ಟೇ ಬಾಕಿಯಿರಬೇಕಾದರೆ ಎಲ್ಲವೂ ಅನಿರೀಕ್ಷಿತ ಎಂಬಂತೆ ಸಾಧ್ಯವಾಗಿ ಹೋಯಿತು. ಆ ಮೂಲಕ ಡೈಮ್ಲರ್ ಹೂಡಿಕೆಯು ಟೆಸ್ಲಾ ಕಂಪನಿಯ ಅಸ್ತಿತ್ವವನ್ನು ಉಳಿಸುವಂತೆ ಮಾಡಿದೆ ಎಂಬುದಾಗಿ ಆ ದಿನಗಳ ಬಗ್ಗೆ ಮಸ್ಕ್ ಭಾಷಣವೊಂದರಲ್ಲಿ ನೆನಪಿಸಿಕೊಂಡಿದ್ದರು.
ಫೋರ್ಬ್ಸ್ ಪ್ರಕಾರ, ಜಗತ್ತಿನಲ್ಲಿಯೇ ಎಲಾನ್ ಮಸ್ಕ್ ಅವರು ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ. ಮಸ್ಕ್ ಅವರ ನಿವ್ವಳ ಆಸ್ತಿ ಮೌಲ್ಯ 269.8 ಬಿಲಿಯನ್ ಡಾಲರ್ ಹೊಂದಿದ್ದಾರೆ. ಮಸ್ಕ್ ಅವರ ಬಳಿ ಎಷ್ಟೊಂದು ಶ್ರೀಮಂತಿಕೆ ಇದೆ ಅಂದರೆ, ಅವರ ನಿವ್ವಳ ಮೌಲ್ಯವು ಪ್ರಪಂಚದ 50 ಪ್ರತಿಶತಕ್ಕಿಂತ ಹೆಚ್ಚಿನ ದೇಶಗಳ ಜಿಡಿಪಿಗಿಂತ ಜಾಸ್ತಿಯಿದೆ.


Click it and Unblock the Notifications