ದೇಶದ ಅತೀ ದೊಡ್ಡ ಖಾಸಗಿ ವಲಯದ ಬ್ಯಾಂಕುಗಳಲ್ಲಿ ಐಸಿಐಸಿಐ ಬ್ಯಾಂಕ್ ಕೂಡಾ ಒಂದಾಗಿದೆ. ಈ ಬ್ಯಾಂಕ್ ತನ್ನ ಗ್ರಾಹಕರಿಗೆ ಹೊಸ ಫೀಚರ್ ಅನ್ನು ಜಾರಿ ಮಾಡಿದೆ. ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಇಎಂಐ (Equated Monthly Installments) ಮೂಲಕ ಯುಪಿಐ ಪಾವತಿಯ ಅವಕಾಶವನ್ನು ನೀಡಿದೆ. ಆಶ್ಚರ್ಯ ಎನಿಸಿತೇ? ಹೌದು ನೀವು ಸರಿಯಾಗಿ ಓದುತ್ತಿದ್ದೀರಿ. ಯುಪಿಐ ಪಾವತಿಯನ್ನು ಇಎಂಐ ಆಗಿ ಬದಲಾವಣೆ ಮಾಡುವ ಅವಕಾಶವಿದೆ. ಬ್ಯಾಂಕ್‌ನ ಪೇ ಲೇಟರ್ ಯೋಜನೆಯಾದ ಬೈ ನೌ ಪೇ ಲೇಟರ್ (ಸೇವೆಗೆ ಅರ್ಹರಾಗಿರುವವರು ಈ ಇಎಂಐ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.
ಹಾಗೆಯೇ ಸರಳವಾಗಿ ಯಾವುದೇ ತೊಂದರೆ ಇಲ್ಲದೆ ಈ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಈ ತಂತ್ರಜ್ಞಾನವು ಗ್ರಾಹಕರಲ್ಲಿ ಯಾವುದೇ ವಸ್ತುವನ್ನು ಖರೀದಿ ಮಾಡುವ ಅಥವಾ ಕೊಂಡುಕೊಳ್ಳುವ ಪ್ರಮಾಣವನ್ನು ಹೆಚ್ಚಳ ಮಾಡುತ್ತದೆ. ಐಸಿಐಸಿಐ ಬ್ಯಾಂಕ್ ಗ್ರಾಹಕರು ಸರಳವಾಗಿ ಮಳಿಗೆಗಳಲ್ಲಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಇಎಂಐ ಪಾವತಿ ಮಾಡಬಹುದು. ಈ ಸೇವೆಯು ಹಲವಾರು ವಸ್ತುಗಳಿಗೆ ಲಭ್ಯವಿದೆ. ಗ್ಯಾಡ್ಜೆಟ್, ಆಹಾರ, ಬಟ್ಟೆ, ಪ್ರಯಾಣ, ಹೋಟೆಲ್ ರಿಸರ್ವೆಷನ್ ಗೆ ಈ ಸೇವೆ ಲಭ್ಯವಿದೆ.

ಗ್ರಾಹಕರು ಹತ್ತು ಸಾವಿರ ರೂಪಾಯಿ ಮೊತ್ತಕ್ಕೂ ಅಧಿಕ ಮೊತ್ತದ ಖರೀದಿ ವೇಳೆ ಮೂರು, ಆರು ಅಥವಾ ಒಂಬತ್ತು ಇನ್‌ಸ್ಟಾಲ್‌ಮೆಂಟ್‌ಗಳಲ್ಲಿ ಪಾವತಿ ಮಾಡುವ ಅವಕಾಶವಿದೆ. ಪೇ ಲೇಟರ್ ಮೂಲಕ ಆನ್‌ಲೈನ್ ಶಾಪಿಂಗ್ ಕೂಡಾ ಮಾಡಬಹುದಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಐಸಿಐಸಿಐ ಬ್ಯಾಂಕ್‌ನ ಡಿಜಿಟಲ್ ಚಾನೆಲ್ & ಪಾರ್ಟ್‌ನರ್‌ಶಿಪ್ ಮುಖ್ಯಸ್ಥ ಬಿಜಿತ್ ಭಾಸ್ಕರ್, "ನಮ್ಮ ಗ್ರಾಹಕರಿಗೆ ಅನುಕೂಲವಾಗುವಂತೆ ನಮ್ಮಲ್ಲಿ ಸರಕು ಹಾಗೂ ಸೇವೆಯನ್ನು ನಾವು ನೀಡುತ್ತಾ ಬರುತ್ತಿದ್ದೇವೆ. ಹಾಗೆಯೇ ಕಾಲಕ್ಕೆ ತಕ್ಕುದಾಗಿ ಗ್ರಾಹಕರ ನಿರೀಕ್ಷೆಯನ್ನು ಪೂರೈಸುವ ಕಾರ್ಯವನ್ನು ನಾವು ಮಾಡುತ್ತಿದ್ದೇವೆ," ಎಂದು ತಿಳಿಸಿದ್ದಾರೆ.
"ಪ್ರಸ್ತುತ ಹೆಚ್ಚಾಗಿ ಯುಪಿಐ ಪಾವತಿ ವ್ಯವಸ್ಥೆಯನ್ನು ಜನರು ಬಳಕೆ ಮಾಡುತ್ತಾರೆ. ಫೇ ಲೇಟರ್ ಆಯ್ಕೆಯ ಸಂದರ್ಭದಲ್ಲಿ ಗ್ರಾಹಕರು ಹೆಚ್ಚಾಗಿ ಯುಪಿಐ ವಹಿವಾಟನ್ನು ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಜನರು ಬ್ಯಾಂಕ್‌ನ ಬೈ ನೌ ಪೇ ಲೇಟರ್ (ಈಗ ಖರೀದಿ ಮಾಡಿ ಬಳಿಕ ಪಾವತಿಸಿ) ಸೇವೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ," ಎಂದು ಕೂಡಾ ಐಸಿಐಸಿಐ ಬ್ಯಾಂಕ್‌ನ ಡಿಜಿಟಲ್ ಚಾನೆಲ್ & ಪಾರ್ಟ್‌ನರ್‌ಶಿಪ್ ಮುಖ್ಯಸ್ಥ ಬಿಜಿತ್ ಭಾಸ್ಕರ್ ಮಾಹಿತಿ ನೀಡಿದ್ದಾರೆ.
"ಪೇ ಲೇಟರ್ ಮೂಲಕ ಯುಪಿಐ ಪಾವತಿ ಮಾಡಿದರೆ ಇಎಂಐ ಆಗಿ ಬದಲಾಯಿಸುವ ಆಯ್ಕೆಯನ್ನು ನಾವು ಪರಿಚಯಿಸುತ್ತಿದ್ದೇವೆ. ನಾವು ಈಗ ಯುಪಿಐ ಹಾಗೂ ಪೇ ಲೇಟರ್ ಅನ್ನು ಒಟ್ಟುಗೂಡಿಸುತ್ತಿದ್ದೇವೆ. ಇವೆರಡು ಕೂಡಾ ಸದ್ಯ ಟ್ರೆಡಿಂಗ್ ನಲ್ಲಿರುವ, ಜನರು ಹೆಚ್ಚಾಗಿ ಬಳಸುವ ಆಯ್ಕೆಯಾಗಿದೆ. ಈ ಯೋಜನೆಯ ಮೂಲಕ ಗ್ರಾಹಕರು ಯಾವುದೇ ಒಂದು ಮಳಿಗೆಯಲ್ಲಿ ಅತೀ ದುಬಾರಿಯಾದ ವಸ್ತುಗಳನ್ನು ಖರೀದಿ ಮಾಡಿ ಇಎಂಐ ಮೂಲಕ ಮರುಪಾವತಿ ಮಾಡಬಹುದಾಗಿದೆ," ಎಂದು ತಿಳಿಸಿದ್ದಾರೆ.
ಅತೀ ದುಬಾರಿಯಾದ ವಸ್ತುವನ್ನು ಖರೀದಿ ಮಾಡುವ ಸಂದರ್ಭದಲ್ಲಿ ಇಎಂಐ ಆಯ್ಕೆ ಎಂದಿಗೂ ಕೂಡಾ ಉತ್ತಮ ಆಯ್ಕೆ. 2018ರಲ್ಲಿ ಪೇ ಲೇಟರ್ ಆಯ್ಕೆಯನ್ನು ನೀಡಿದ ಮೊದಲ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ಆಗಿದೆ. ಅದಾದ ಬಳಿಕ ಸಣ್ಣ ಮೊತ್ತದ ವಸ್ತುಗಳನ್ನು ಖರೀದಿ ಮಾಡುವಾಗಲೂ ಕೂಡಾ ಗ್ರಾಹಕರು ಪೇ ಲೇಟರ್ ಆಯ್ಕೆಯನ್ನು ಮಾಡಿಕೊಳ್ಳಲು ಆರಂಭಿಸಿದ್ದಾರೆ. ಆನ್‌ಲೈನಲ್ಲಿ ಶಾಪಿಂಗ್ ಮಾಡಲು, ಬಿಲ್ ಪಾವತಿಸಲು ಈ ಆಯ್ಕೆಯನ್ನು ಗ್ರಾಹಕರು ಮಾಡಿಕೊಳ್ಳಬಹುದು ಎಂದು ಕೂಡಾ ಮಾಹಿತಿ ನೀಡಿದ್ದಾರೆ.
ಪೇ ಲೇಟರ್‌ನಲ್ಲಿ ಇಎಂಐ ಪಾವತಿ ಮಾಡುವುದು ಹೇಗೆ?
ಹಂತ 1: ಯಾವುದೇ ರಿಟೇಲ್ ಸ್ಟೋರ್ ಗೆ ಭೇಟಿ ನೀಡಿ
ಹಂತ 2: ನಿಮಗೆ ಬೇಕಾದ ವಸ್ತು ಅಥವಾ ಸೇವೆಯನ್ನು ಆಯ್ಕೆ ಮಾಡಿಕೊಳ್ಳಿ
ಹಂತ 3: ಪಾವತಿ ಮಾಡುವ ಸಂದರ್ಭದಲ್ಲಿ ಐಮೊಬೈಲ್ ಪೇ ಆಪ್ ಅನ್ನು ಬಳಕೆ ಮಾಡಿಕೊಳ್ಳಿ
ಹಂತ 4: ಯಾವುದೇ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಆಯ್ಕೆ ಮಾಡಿಕೊಳ್ಳಿ
ಹಂತ 5: ಹತ್ತು ಸಾವಿರ ರೂಪಾಯಿಗಿಂತ ಅಧಿಕ ಮೊತ್ತವಿದ್ದಾಗ ಪೇಮೆಂಟ್ ಲೇಟರ್ ಇಎಂಐ ಆಯ್ಕೆಯನ್ನು ಮಾಡಿಕೊಳ್ಳಿ.
ಹಂತ 6: ಇಎಂಐ ಅವಧಿ (3, 6, 9 ತಿಂಗಳು) ಆಯ್ಕೆ ಮಾಡಿಕೊಳ್ಳಿ
ಹಂತ 7: ಕನ್ಫರ್ಮ್ ಮಾಡಿದರೆ ಪ್ರಕ್ರಿಯೆ ಯಶಸ್ವಿಯಾಗಲಿದೆ


Click it and Unblock the Notifications