For Quick Alerts
ALLOW NOTIFICATIONS  
For Daily Alerts

ನಿಮ್ಮ ವಾಟ್ಸಾಪ್ ಚಾಟ್‌ ಗೌಪ್ಯವಾಗಿರಬೇಕಾದ್ರೆ ಈ Setting ಚೇಂಜ್ ಮಾಡಿ

|

ವಾಟ್ಸಾಪ್ ವಿಶ್ವದಾದ್ಯಂತ ಜನಪ್ರಿಯತೆ ಪಡೆದಿರುವ ಮೆಸೇಜಿಂಗ್ ಅಪ್ಲಿಕೇಶನ್. ಇತ್ತೀಚೆಗಷ್ಟೇ ವಾಟ್ಸಾಪ್ ಜಗತ್ತಿನಲ್ಲಿ 2 ಬಿಲಿಯನ್ ಬಳಕೆದಾರರನ್ನು ತಲುಪಿದೆ. ಫೇಸ್‌ಬುಕ್ ಒಡೆತನದ ಈ ಅಪ್ಲಿಕೇಶನ್ ಪ್ರಾಯೋಗಿಕವಾಗಿ ಆರಂಭಗೊಂಡು ವಿಶ್ವದ ಅತಿದೊಡ್ಡ ತ್ವರಿತ ಸಂದೇಶ ಅಪ್ಲಿಕೇಶನ್ ಆಗಿ ಬದಲಾಗಿದೆ.

ಬಹು ಸಂಖ್ಯೆಯಲ್ಲಿ ಬಳಕೆದಾರರನ್ನ ಹೊಂದಿರುವ ಕಾರಣ ಫೇಸ್‌ಬುಕ್ ಒಡೆತನದ ವಾಟ್ಸಾಪ್‌ ನ್ನು ಅತ್ಯಂತ ಸುಗಮವಾಗಿ ಚಾಟ್‌ ಮಾಡಲು ಅಪ್‌ಡೇಟ್ ಮಾಡಲಾಗುತ್ತಿರುತ್ತದೆ. ಆಂಡ್ರಾಯ್ಡ್‌ ಮತ್ತು ಐಒಎಸ್‌ ಸಾಧನಗಳಲ್ಲಿ ವೈಶಿಷ್ಟ್ಯಗಳನ್ನು ಸೇರಿಸುತ್ತಲೇ ಇರುತ್ತದೆ. ಜೊತೆಗೆ ಪ್ರಮುಖ ಮಾಹಿತಿಯನ್ನು ರಕ್ಷಿಸಲು ಕೆಲವು ಗೌಪ್ಯತೆಯ ವೈಶಿಷ್ಟ್ಯಗಳನ್ನು ನೀಡುತ್ತದೆ.

ವಾಟ್ಸಾಪ್ ಬಳಸುವ ಪ್ರತಿಯೊಬ್ಬರು ತಮ್ಮ ಚಾಟ್‌ ಸುರಕ್ಷಿತವಾಗಿರಲು ಬಯಸುತ್ತಾರೆ. ನಿಮ್ಮ ಗೌಪ್ಯ ಮಾಹಿತಿಗಳು ಯಾರಿಗೂ ತಿಳಿಯಬಾರದು ಎನ್ನುವುದಾದರೆ ಕೆಲವೊಂದು ಗೌಪ್ಯ ವಾಟ್ಸಾಪ್‌ಗಳ ಸೆಟ್ಟಿಂಗ್ ಬಗ್ಗೆ ಮಾಹಿತಿ ಇಲ್ಲಿದೆ.

ಫಿಂಗರ್‌ಪ್ರಿಂಟ್ ಅಥವಾ ಫೇಸ್ ಐಡಿ ಲಾಕ್ ಅನ್ನು ಸಕ್ರಿಯಗೊಳಿಸಿ

ಫಿಂಗರ್‌ಪ್ರಿಂಟ್ ಅಥವಾ ಫೇಸ್ ಐಡಿ ಲಾಕ್ ಅನ್ನು ಸಕ್ರಿಯಗೊಳಿಸಿ

ವಾಟ್ಸಾಪ್ ಮೂಲಕ ಚಾಟ್ ಮಾಡುವ ಬಳಕೆದಾರರಿಗೆ ಮಾಹಿತಿ ಅತ್ಯಂತ ಸುರಕ್ಷಿತವಾಗಿರಲಿ ಎಂದು ವಾಟ್ಸಾಒ್, ಕಳೆದ ವರ್ಷ ತನ್ನ ಆ್ಯಂಡ್ರಾಯ್ಡ್‌ ಮತ್ತು ಐಒಎಸ್ ಬಳಕೆದಾರರಿಗೆ ಫಿಂಗರ್‌ಪ್ರಿಂಟ್ ಲಾಕ್ ವೈಶಿಷ್ಟ್ಯವನ್ನು ಸೇರಿಸಿದೆ. ಈ ವೈಶಿಷ್ಟಯವು ಫಿಂಗರ್‌ಪ್ರಿಂಟ್ ಮತ್ತು ಫೇಸ್ ಸ್ಕ್ಯಾನರ್‌ಗಳನ್ನು ಒಳಗೊಂಡಿದೆ.

ಫಿಂಗರ್‌ಪ್ರಿಂಟ್ ಮತ್ತು ಫೇಸ್ ಸ್ಕ್ಯಾನರ್ ಸಕ್ರಿಯಗೊಳಿಸಲು ನೀವು ವಾಟ್ಸಾಪ್ ಸೆಟ್ಟಿಂಗ್ ತೆರಳಿ > ಅಕೌಂಟ್> ಪ್ರೈವೇಸಿ> ಫಿಂಗರ್‌ಪ್ರಿಂಟ್ ಲಾಕ್‌ಗೆ ಹೋಗಿ. ನೀವು 'ಫಿಂಗರ್‌ಪ್ರಿಂಟ್' ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದರೆ, ನಿಮ್ಮ ಫಿಂಗರ್‌ಪ್ರಿಂಟ್ ಅಥವಾ ಓಎಸ್‌ನಲ್ಲಿ ಸಂಗ್ರಹವಾಗಿರುವ ಫೇಸ್ ಐಡಿಯನ್ನು ದೃಢೀಕರಿಸಲು ಕೇಳುತ್ತದೆ. ನೀವು ಅದಾಗಲೇ ಮೊಬೈಲ್ ಸೆಟ್ಟಿಂಗ್‌ನಲ್ಲಿ ಫೇಸ್ ಐಡಿ ಇಲ್ಲವೇ ಫಿಂಗರ್ ಪ್ರಿಂಟ್ ಲಾಕ್ ಮಾಡಿದ್ದರೆ ವಾಟ್ಸಾಪ್‌ನಲ್ಲಿ ಸಕ್ರಿಯಗೊಳಿಸಲು ಸುಲಭ.

 

Two-Step Verification ಸೆಟ್ಟಿಂಗ್ ಅನ್ನು ಬದಲಾಯಿಸಿ

Two-Step Verification ಸೆಟ್ಟಿಂಗ್ ಅನ್ನು ಬದಲಾಯಿಸಿ

ಎರಡು ಹಂತ ಪರಿಶೀಲನೆ (Two-Step Verification) ನಿಮ್ಮ ವಾಟ್ಸಾಪ್ ಸುರಕ್ಷಿತವಾಗಿರಲು ಉತ್ತಮ ವೈಶಿಷ್ಟ್ಯವಾಗಿದೆ. ನಿಮ್ಮ ಮೊಬೈಲ್‌ನಲ್ಲಿ ವಾಟ್ಸಾಪ್ re-Install ಮಾಡಿದಾಗ ಅಥವಾ ನಿಮ್ಮ ಹೊಸ ಮೊಬೈಲ್‌ನಲ್ಲಿ ಹೊಸದಾಗಿ ಡೌನ್‌ಲೋಡ್ ಮಾಡುವಾಗಲು ಅಪ್ಲಿಕೇಶನ್ ಅನ್ನು ಸುರಕ್ಷಿತಗೊಳಿಸಲು ಈ ಎರಡು-ಹಂತದ ಪರಿಶೀಲನೆ ಸೆಟ್ಟಿಂಗ್ ಒಂದು ಪ್ರಮುಖ ಲಕ್ಷಣವಾಗಿದೆ.

ನಿಮ್ಮ ವಾಟ್ಸಾಪ್ ಅಪ್ಲಿಕೇಶನ್ re-Install ಅಥವಾ ಡೌನ್‌ಲೋಡ್ ಮಾಡುವಾಗ ಈ ಎರಡು ಹಂತಹ ಪರಿಶೀಲನೆ ಸೆಟ್ಟಿಂಗ್ 6 ಅಂಕಿಯ ಪಿನ್‌ಕೋಡ್ ಅನ್ನು ಕೇಳುತ್ತದೆ . ಈ ವೈಶಿಷ್ಟ್ಯವನ್ನು ನೀವು ಮೊದಲೇ ನೊಂದಾಯಿಸಿದ್ದರೆ ನಿಮ್ಮ ಸಿಮ್ ಕಾರ್ಡ್ ಕದಿಯಲ್ಪಟ್ಟಾಗ ಅಥವಾ ನಿಮ್ಮ ವಾಟ್ಸಾಪ್ ಲಿಂಕ್ ಮಾಡಿದ ಫೋನ್ ಸಂಖ್ಯೆ ಹೊಂದಾಣಿಕೆ ಆಗುವ ಸಮಯದಲ್ಲಿ ನಿಮ್ಮ ವಾಟ್ಸಾಪ್ ಖಾತೆಯು ಸುರಕ್ಷಿತವಾಗಿರುತ್ತದೆ.

ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವಾಗ ಅಥವಾ ಮರು-ಸ್ಥಾಪಿಸುವಾಗ ಎರಡು-ಹಂತದ ಪರಿಶೀಲನೆ ಸೆಟ್ಟಿಂಗ್ ಆರು-ಅಂಕಿಯ ಪಿನ್ ಕೋಡ್ ಅನ್ನು ವಾಟ್ಸಾಪ್ ಪರಿಶೀಲನೆಯಂತೆ ಇನ್ಪುಟ್ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಈ ರೀತಿಯಾಗಿ, ನಿಮ್ಮ ಸಿಮ್ ಕಾರ್ಡ್ ಕದಿಯಲ್ಪಟ್ಟಾಗ ಅಥವಾ ನಿಮ್ಮ ವಾಟ್ಸಾಪ್-ಲಿಂಕ್ ಮಾಡಿದ ಫೋನ್ ಸಂಖ್ಯೆ ಹೊಂದಾಣಿಕೆ ಆಗುವ ಸಮಯದಲ್ಲಿ ನಿಮ್ಮ ವಾಟ್ಸಾಪ್ ಖಾತೆಯು ಸುರಕ್ಷಿತವಾಗಿರುತ್ತದೆ.

ಎರಡು-ಹಂತದ ಪರಿಶೀಲನೆ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಲು, ವಾಟ್ಸಾಪ್ ಸೆಟ್ಟಿಂಗ್‌ಗೆ ಹೋಗಿ ಮತ್ತು ಖಾತೆಯನ್ನು ಕ್ಲಿಕ್ ಮಾಡಿ. ಅದರ ಅಡಿಯಲ್ಲಿ, ನೀವು ಎರಡು-ಹಂತದ ಪರಿಶೀಲನೆ (Two-Step Verification) ಆಯ್ಕೆಯನ್ನು ಕಾಣಬಹುದು. ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಲು ನಿಮ್ಮ 6 ಅಂಕಿಯ ಪಿನ್ ಕೋಡ್ ಸೇರಿಸಿ.

 

ಈಗ ಬ್ಯಾಂಕಿಂಗ್ ಗೂ ಬಂತು ವಾಟ್ಸಾಪ್; ಏನಿದು ವಾಟ್ಸಾಪ್ ಬ್ಯಾಂಕಿಂಗ್?ಈಗ ಬ್ಯಾಂಕಿಂಗ್ ಗೂ ಬಂತು ವಾಟ್ಸಾಪ್; ಏನಿದು ವಾಟ್ಸಾಪ್ ಬ್ಯಾಂಕಿಂಗ್?

ನಿಮ್ಮ ಪ್ರೊಫೈಲ್, ಸ್ಟೇಟಸ್ ಮತ್ತು ಗ್ರೂಪ್ ಗೌಪ್ಯತೆ ಸೆಟ್ಟಿಂಗ್‌ಗಳನ್ನು ನವೀಕರಿಸಿ

ನಿಮ್ಮ ಪ್ರೊಫೈಲ್, ಸ್ಟೇಟಸ್ ಮತ್ತು ಗ್ರೂಪ್ ಗೌಪ್ಯತೆ ಸೆಟ್ಟಿಂಗ್‌ಗಳನ್ನು ನವೀಕರಿಸಿ

ನೀವು ಸ್ಟೇಟಸ್ ಬದಲಿಸಿದಾಗ ಮತ್ತು ಫೋಟೋ, ಸ್ಟೋರಿಯನ್ನು ಬದಲಿಸಿದಾಗ ಯಾರಾದರೂ ವೀಕ್ಷಿಸಬಹುದು ಎಂದು ಚಿಂತೆಯಿದ್ದರೆ, ವಾಟ್ಸಾಪ್ ನಿಮ್ಮ ಸುರಕ್ಷತೆಗೆ ವೈಶಿಷ್ಟ್ಯಗಳನ್ನು ಒದಗಿಸಿದೆ. ಈ ಮೂಲಕ ನಿಮ್ಮ ಸ್ಟೇಟಸ್, ಫೋಟೋವನ್ನು ಯಾರು ವೀಕ್ಷಿಸಬೇಕು, ಬೇಡ ಎಂಬ ನಿಯಂತ್ರಣವನ್ನು ನೀಡುತ್ತದೆ. ಅಲ್ಲದೆ ಗ್ರೂಪ್‌ನಲ್ಲಿ ವೈಯಕ್ತಿಕ ಮಾಹಿತಿ ಹಂಚಿಕೆ, ಚಾಟ್‌ಗಳಿಗೆ ಮತ್ತು ಗ್ರೂಪ್ ವಾಟ್ಸಾಪ್‌ಗೆ ನೀಡುವ ಸೆಟ್ಟಿಂಗ್‌ಗಳಲ್ಲಿ ಒಂದಾಗಿದೆ.

ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲು ನೀವು:
ವಾಟ್ಸಾಪ್ ಸೆಟ್ಟಿಂಗ್> ಅಕೌಂಟ್> ಪ್ರೈವೆಸಿಗೆ ಹೋಗಿ

ಪ್ರೈವೆಸಿಗೆ ತೆರಳುತ್ತಿದ್ದಂತೆ ನೀವು ಅದರೊಳಗೆ Last seen, Profile photo, About, status ವೀಕ್ಷಿಸಬಹುದು. ಇದರ ಮೂಲಕ ನಿಮ್ಮ ಮಾಹಿತಿಯನ್ನು ಯಾರು ವೀಕ್ಷಿಸಬೇಕು ಎಂಬುದನ್ನು ಸಕ್ರಿಯಗೊಳಿಸಲು ಒಂದನ್ನು ಆರಿಸಿ.

ಗ್ರೂಪ್ ಮತ್ತು ಸ್ಟೇಟಸ್ ಸೆಟ್ಟಿಂಗ್‌ಗಳು ಹೆಚ್ಚುವರಿಯಾದ ಆಯ್ಕೆಯನ್ನು ಹೊಂದಿವೆ. ನಿಮ್ಮ ಸಂಪರ್ಕಗಳನ್ನು ಹೊರತುಪಡಿಸಿ, ನಿಮ್ಮ ಕಾಂಟಾಕ್ಟ್ಸ್ ಮಾತ್ರ ನೋಡಲು, ಇಲ್ಲವೆ ಯಾರು ನೋಡಬಾರದು ಎಂದು ಸೆಟ್ಟಿಂಗ್ ಬದಲಿಸಬಹುದು.

ನಿಮಗೆ ಅಗತ್ಯವಿರುವ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಪಡೆಯಲು ಯಾವುದೇ ಆಯ್ಕೆಗಳನ್ನು ಕ್ಲಿಕ್ ಮಾಡಿ. Everyone, My contacts, nobody ಆಯ್ಕೆಗಳಿದ್ದು ಸೆಲೆಕ್ಟ್ ಮಾಡಿಕೊಳ್ಳಿ.

 

ವಾಟ್ಸಾಪ್ ಬಳಕೆದಾರರ ಪ್ರಮಾಣ 200 ಕೋಟಿಗೆ ಏರಿಕೆ!ವಾಟ್ಸಾಪ್ ಬಳಕೆದಾರರ ಪ್ರಮಾಣ 200 ಕೋಟಿಗೆ ಏರಿಕೆ!

ವಾಟ್ಸಾಪ್ ಅನ್ನು ಯಾವಾಗಲೂ ಅಪ್‌ಡೇಟ್ ಮಾಡುತ್ತಿರಿ

ವಾಟ್ಸಾಪ್ ಅನ್ನು ಯಾವಾಗಲೂ ಅಪ್‌ಡೇಟ್ ಮಾಡುತ್ತಿರಿ

ವಾಟ್ಸಾಪ್ ತನ್ನ ಬಳಕೆದಾರರಿಗೆ ಚಾಟ್‌ ಸುಗಮವಾಗಿ ಸಾಗಲು ಮತ್ತು ಉತ್ತಮ ಕರೆ ಅನುಭವವನ್ನು ಒದಗಿಸಲು ಹೊಸ ಹೊಸ ವೈಶಿಷ್ಟ್ಯಗಳನ್ನು ಸೇರಿಸುತ್ತಾ ಇರುತ್ತದೆ. ಹೊಸ ವೈಶಿಷ್ಟ್ಯಗಳು ಸೇವೆಗಳನ್ನು ಸರಳಗೊಳಿಸುವುದರ ಜೊತೆಗೆ ಮಾಲ್‌ವೇರ್‌ಗಳು , ಬಗ್ಸ್‌ಗಳನ್ನು ತೆರವುಗೊಳಿಸಲು ಅನುವು ಮಾಡಿಕೊಡುತ್ತದೆ.

ನೀವು ಅಪ್ಲಿಕೇಶನ್ ನಿಯಮಿತವಾಗಿ ಅಪ್‌ಡೇಟ್ ಮಾಡುತ್ತಲೇ ಇರಬೇಕು. ಇದರಿಂದ ನಿಮ್ಮ ಅಪ್ಲಿಕೇಶನ್ ಹೆಚ್ಚು ಸುರಕ್ಷಿತವಾಗಿರುತ್ತದೆ. ಸಾಮಾನ್ಯವಾಗಿ ನಿಮ್ಮ ಫೋನ್‌ನಲ್ಲಿ ಆಟೋ ಅಪ್‌ಡೇಟ್‌ ಆಯ್ಕೆಯು ಇರುತ್ತದೆ. ಇಲ್ಲವೆ ಫೋನ್ ಅಪ್ಲಿಕೇಶನನ್‌ಗಳಲ್ಲಿ ಆಪ್‌ ಸ್ಟೋಟ್‌, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗಾಗಿ ಗೂಗಲ್ ಪ್ಲೇ ಸ್ಟೋರ್ ಮತ್ತು ಐಫೋನ್‌ಗಳಿಗಾಗಿ ಆಪ್ ಸ್ಟೋರ್‌ಗೆ ಹೋಗಿ ಮತ್ತು ವಾಟ್ಸಾಪ್ ಅಪ್ಲಿಕೇಶನ್‌ಗಾಗಿ ಹುಡುಕಿ ಅಪ್‌ಡೇಟ್ ಮಾಡುವುದು ಉತ್ತಮ.

ಇದಲ್ಲದೆ, ನಿಮ್ಮ ಫೋನ್ ಮತ್ತು ನಿಮ್ಮ ಅಪ್ಲಿಕೇಶನ್‌ಗಳಿಗಾಗಿ ಒಟ್ಟಾರೆ ಸುಧಾರಿತ ವೈಶಿಷ್ಟ್ಯಗಳನ್ನು ಕಾರ್ಯಗತಗೊಳಿಸಲು ನಿಮ್ಮ ಫೋನ್‌ನ ಆಪರೇಟಿಂಗ್ ಸಿಸ್ಟಮ್ ಅನ್ನು ನೀವು ನವೀಕೃತವಾಗಿರಿಸಿಕೊಳ್ಳಬೇಕು.

 

English summary

Enable These Settings Now To Keep WhatsApp Chats Safe

Here are a few really important WhatsApp privacy settings that you must know
Story first published: Tuesday, February 18, 2020, 11:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X