ಬಿಲಿಯನೇರ್ ಮುಕೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಅತೀ ದುಬಾರಿ ಹಾಗೂ ಐಷಾರಾಮಿ ಮನೆಯಾದ ಆಂಟಿಲಿಯಾ ಮಾಲೀಕರಾಗಿದ್ದಾರೆ. ಇದು ಸುಮಾರು 15,000 ಕೋಟಿ ರೂಪಾಯಿಗಳ ಭಾರತದ ಅತ್ಯಂತ ದುಬಾರಿ ಮನೆಯಾಗಿದೆ. ಆದರೆ ಅಂಬಾನಿಗಳ ಒಡೆತನದ ಏಕೈಕ ದುಬಾರಿ ಆಸ್ತಿ ಇದಲ್ಲ. ಅವರ ಇತ್ತೀಚಿನ ಆಸ್ತಿಯೊಂದರಲ್ಲಿ ವಜ್ರದ ಸೀಲಿಂಗ್‌ಗಳು ಇದೆ ಎಂದರೆ ನೀವು ನಂಬುತ್ತೀರಾ!?
ಮುಕೇಶ್ ಅಂಬಾನಿ ಪ್ರಪಂಚದಾದ್ಯಂತ ಹಲವಾರು ಪ್ರಾಪರ್ಟಿಗಳನ್ನು ಹೊಂದಿದ್ದಾರೆ. ಅಂಬಾನಿ ಕುಟುಂಬದ ಇತ್ತೀಚಿನ ಉದ್ಯಮಗಳಲ್ಲಿ ಒಂದಾದ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ (ಎನ್‌ಎಂಎಸಿಸಿ) ಮುಂಬೈನಲ್ಲಿ ಇದೆ. ಮೆಟ್ ಗಾಲಾ 2023 ಕ್ಕಿಂತ ಇದು ಭಿನ್ನವಾಗಿದೆ. ಇಲ್ಲಿ ಇತ್ತೀಚೆಗೆ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮವನ್ನು ನಡೆಸಿರುವುದನ್ನು ನಾವು ನನೆಪಿಸಬಹುದು.

ಎನ್‌ಎಂಎಸಿಸಿ ನೀತಾ ಅಂಬಾನಿಯವರ ಕನಸಿನ ಯೋಜನೆಯಾಗಿದೆ. ಇದನ್ನು ಮಾರ್ಚ್ 31, 2023 ರಂದು ಉದ್ಘಾಟಿಸಲಾಯಿತು. ಸಂಸ್ಕೃತಿ ಮತ್ತು ಕಲೆಗಳ ಕೇಂದ್ರವಾಗಿರುವುದರ ಹೊರತಾಗಿ, ಎನ್‌ಎಂಎಸಿಸಿ ಬಹು ಐಷಾರಾಮಿಯಾದ, ಅಂಬಾನಿಗಳ ಒಡೆತನದ ಅತ್ಯಂತ ಅದ್ದೂರಿ ಆಸ್ತಿಯಾಗಿದೆ.
ಸ್ವರೊವಸ್ಕಿ ವಜ್ರಗಳನ್ನು ಹೊಂದಿರುವ ಸೀಲಿಂಗ್
ಎನ್‌ಎಂಎಸಿಸಿಯ ಒಂದು ಸೀಲಿಂಗ್ ಸಂಪೂರ್ಣವಾಗಿ ವಜ್ರಗಳಿಂದ ಮಾಡಲ್ಪಟ್ಟಿದೆ. ಎನ್‌ಎಂಎಸಿಸಿಯ ಒಳಗಿನ ವಜ್ರದಿಂದ ತುಂಬಿದ ಸೀಲಿಂಗ್ ಸಾಂಸ್ಕೃತಿಕ ಕೇಂದ್ರದ ಗ್ರ್ಯಾಂಡ್ ಥಿಯೇಟರ್‌ನಲ್ಲಿದೆ. ಸೀಲಿಂಗ್‌ನೊಳಗೆ 8500 ಕ್ಕೂ ಹೆಚ್ಚು ಸ್ವರೊವಸ್ಕಿ (Swarovski) ವಜ್ರಗಳನ್ನು ಹೊಂದಿದೆ.
ಗ್ರ್ಯಾಂಡ್ ಥಿಯೇಟರ್‌ನ ಒಳಗಿನ ವಜ್ರ ಹೊದಿಕೆಯ ಸೀಲಿಂಗ್‌ನ ಹೊರತಾಗಿ, ಎನ್‌ಎಂಎಸಿಸಿಯ ಒಳಗೆ ಇರುವ ಮತ್ತೊಂದು ಅತೀ ದುಬಾರಿಯಾದ ವಸ್ತು ಇಶಾ ಅಂಬಾನಿಯವರ ಅತ್ಯಂತ ದುಬಾರಿ ಮದುವೆಯ ಲೆಹೆಂಗಾವಾಗಿದೆ. ಇದನ್ನು ವಿಶ್ವದ ಅತ್ಯಂತ ದುಬಾರಿ ಲೆಹೆಂಗಾ ಎಂದು ಕರೆಯಲಾಗುತ್ತದೆ. ಇದರ ಬೆಲೆ 90 ಕೋಟಿ ರೂಪಾಯಿ ಆಗಿದೆ.
ಮೋರಿ ಆರ್ಟ್ ಮ್ಯೂಸಿಯಂ, ಆಂಡಿ ವಾರ್ಹೋಲ್ ಮ್ಯೂಸಿಯಂ ಮತ್ತು ಪಿಕಾಸೊ ಮ್ಯೂಸಿಯಂತಹ ಜನಪ್ರಿಯ ಸ್ಥಳಗಳನ್ನು ವಿನ್ಯಾಸಗೊಳಿಸಿದ ಖ್ಯಾತಿಯನ್ನು ಹೊಂದಿರುವ ರಿಚರ್ಡ್ ಗ್ಲಕ್‌ಮ್ಯಾನ್ ಈ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ (ಎನ್‌ಎಂಎಸಿಸಿ) ಅನ್ನು ವಿನ್ಯಾಸಗೊಳಿಸಿದ್ದಾರೆ. ಇಡೀ ಥಿಯೇಟರ್ ಡಾಲ್ಬಿ ಅಟ್ಮಾಸ್ ಸರೌಂಡ್ ಸೌಂಡ್, ಟೆಲಿಸ್ಕೋಪಿಂಗ್ ಸೀಟಿಂಗ್ ಸಿಸ್ಟಮ್ ಮತ್ತು ಇನ್-ಹೌಸ್ ಆರ್ಟ್ ಗ್ಯಾಲರಿಯನ್ನು ಹೊಂದಿದೆ.
ಎನ್‌ಎಂಎಸಿಸಿ ನಿರ್ಮಾಣದ ಅಂದಾಜು ವೆಚ್ಚ 121 ಕೋಟಿ ರೂಪಾಯಿಗಳಾಗಿದ್ದು, ಅಂಬಾನಿ ಕುಟುಂಬ ನಿರ್ಮಿಸಿದ ಅಥವಾ ಖರೀದಿಸಿದ ಅತ್ಯಂತ ದುಬಾರಿ ಆಸ್ತಿಗಳ ಪಟ್ಟಿಯಲ್ಲಿ ಇದು ಸ್ಥಾನ ಪಡೆದಿದೆ. ಇದಲ್ಲದೆ ಮುಕೇಶ್ ಅಂಬಾನಿ ಯುಕೆಯಲ್ಲಿ ಸ್ಟೋಕ್ ಪಾರ್ಕ್ ಮ್ಯಾನರ್ ಎಂಬ 529 ಕೋಟಿ ರೂಪಾಯಿಗಳ ಹೋಟೆಲ್ ಅನ್ನು ಸಹ ಖರೀದಿಸಿದ್ದಾರೆ.


Click it and Unblock the Notifications