ಟಾಟಾ ಸನ್ಸ್ ಸಂಸ್ಥೆ ಮಾಜಿ ಚೇರ್ಮನ್ ಸೈರಸ್ ಮಿಸ್ತ್ರಿ ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಮೃತರಾಗಿದ್ದಾರೆ. ಸೈರಸ್ ಮಿಸ್ತ್ರಿ ಅವರಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದು ಅಪಘಾತದಲ್ಲಿ ಸೈರಸ್ ಮಿಸ್ತ್ರಿ ಸಾವನ್ನಪ್ಪಿದರೆ ಮೂವರು ಗಾಯಗೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು, "ಮಿಸ್ತ್ರಿ ಅವರು ಅಹಮದಾಬಾದಿನಿಂದ ಮುಂಬೈ ಕಡೆಗೆ ಪ್ರಯಾಣಿಸುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ಮಧ್ಯಾಹ್ನ ಸುಮಾರು 3.15ಕ್ಕೆ ಅಪಘಾತ ನಡೆದಿದ್ದು, ಸೂರ್ಯ ನದಿಯ ಮೇಲಿನ ಸೇತುವೆ ಬಳಿ ಅಪಘಾತ ಸಂಭವಿಸಿದೆ,'' ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಟಾಟಾ ಸಮೂಹದ ಮಾಜಿ ಚೇರ್ಮನ್ ಸೈರಸ್ ಮಿಸ್ತ್ರಿ ಯಾರು, ಸೈರಸ್ ಮಿಸ್ತ್ರಿ Vs ಟಾಟಾ ಪ್ರಕರಣವೇನು?, ಈ ಹಿಂದಿನ ಪ್ರಮುಖ ಘಟನೆಗಳ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
2012 ರಿಂದ 2016 ರವರೆಗೆ ಟಾಟಾ ಸಮೂಹದಲ್ಲಿ
ಮಿಸ್ತ್ರಿ 1991 ರಲ್ಲಿ ಕುಟುಂಬ ನಿರ್ಮಾಣ ಕಂಪನಿಯಾದ ಶಾಪೂರ್ಜಿ ಪಲ್ಲೋಂಜಿ & ಕಂ. ಲಿಮಿಟೆಡ್‌ಗೆ ನಿರ್ದೇಶಕರಾಗಿ ಸೇರಿದ್ದರು. 2012 ರಿಂದ 2016 ರವರೆಗೆ ಭಾರತೀಯ ವ್ಯಾಪಾರ ಸಮೂಹವಾದ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿದ್ದರು. ಟಾಟಾ ಗ್ರೂಪ್‌ನ ಆರನೇ ಅಧ್ಯಕ್ಷರಾಗಿದ್ದರು.
2012: ಟಾಟಾ ಗ್ರೂಪ್‌ನ ಮುಖ್ಯಸ್ಥರಾಗಿ ಆಯ್ಕೆಯಾದರು ಮತ್ತು ಅದೇ ವರ್ಷ ಡಿಸೆಂಬರ್‌ನಲ್ಲಿ ಅಧಿಕಾರ ವಹಿಸಿಕೊಂಡರು.
ಅಕ್ಟೋಬರ್ 24, 2016: ಟಾಟಾ ಸನ್ಸ್ ನ ಅಧ್ಯಕ್ಷ ಹುದ್ದೆಯಿಂದ ಸೈರಸ್ ಮಿಸ್ತ್ರಿ ವಜಾ; ರತನ್ ಟಾಟಾ ಮಧ್ಯಂತರ ಅಧ್ಯಕ್ಷರಾಗಿ ನೇಮಕ
ಅಕ್ಟೋಬರ್ 25, 2016: ಟಾಟಾ ಟ್ರಸ್ಟಿಗಳ ನೆರಳಿನಂಥ ನಿಯಂತ್ರಣ ಇದೆ ಎಂದು ಟಾಟಾ ಸನ್ಸ್ ಆಡಳಿತ ಮಂಡಳಿಗೆ ಪತ್ರ ಬರೆದ ಸೈರಸ್ ಮಿಸ್ತ್ರಿ
ಡಿಸೆಂಬರ್ 19, 2016: ಟಾಟಾ ಗ್ರೂಪ್ ಎಲ್ಲ ಸಂಸ್ಥೆಗಳ ನಿರ್ದೇಶಕ ಹುದ್ದೆಗೆ ಸೈರಸ್ ಮಿಸ್ತ್ರಿ ರಾಜೀನಾಮೆ
ಡಿಸೆಂಬರ್ 20, 2016: National Company Law Tribunal (NCLT) ಮೆಟ್ಟಿಲೇರಿದ ಮಿಸ್ತ್ರಿ. ಅಧಿಕಾರ ದುರುಪಯೋಗದ ಆರೋಪ.
ಟಾಟಾ ಸನ್ಸ್ ಆಡಳಿತ ಮಂಡಳಿ ನಿರ್ದೇಶಕ ಹುದ್ದೆಯಿಂದ ವಜಾ
ಜನವರಿ 12, 2017: ಟಾಟಾ ಸನ್ಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಎನ್ ಚಂದ್ರಶೇಖರನ್ ಹೆಸರು ಘೋಷಣೆ
ಫೆಬ್ರವರಿ 6, 2017: ಟಾಟಾ ಸನ್ಸ್ ಆಡಳಿತ ಮಂಡಳಿ ನಿರ್ದೇಶಕ ಹುದ್ದೆಯಿಂದ ಸೈರಸ್ ಮಿಸ್ತ್ರಿ ವಜಾ
ಸೆಪ್ಟೆಂಬರ್ 21, 2017: ಖಾಸಗಿ ಕಂಪೆನಿ ಆಗುವ ಯೋಜನೆಗೆ ಟಾಟಾ ಸನ್ಸ್ ಮಂಡಳಿಯಿಂದ ಒಪ್ಪಿಗೆ
ಫೆಬ್ರವರಿ 6, 2017: ಟಾಟಾ ಸನ್ಸ್ ಆಡಳಿತ ಮಂಡಳಿ ನಿರ್ದೇಶಕ ಹುದ್ದೆಯಿಂದ ಸೈರಸ್ ಮಿಸ್ತ್ರಿ ವಜಾ
ಸೆಪ್ಟೆಂಬರ್ 21, 2017: ಖಾಸಗಿ ಕಂಪೆನಿ ಆಗುವ ಯೋಜನೆಗೆ ಟಾಟಾ ಸನ್ಸ್ ಮಂಡಳಿಯಿಂದ ಒಪ್ಪಿಗೆ
NCLT ಆದೇಶ ಹೇಳಿದ್ದೇನು, ಸುಪ್ರೀಂ ಹೇಳಿದ್ದೇನು?
ಜೂನ್ 12, 2018: National Company Law Tribunal (NCLT) ಜುಲೈ 4ರಂದು ಆದೇಶದ ದಿನವಾಗಿ ನಿಗದಿ
ಜುಲೈ 4, 2018: NCLTಯಿಂದ ತೀರ್ಪು ಜುಲೈ 9ರ ತನಕ ಮುಂದೂಡಿಕೆ
ಜುಲೈ 9, 2018: ಟಾಟಾ ಸನ್ಸ್ ನಿಂದ ಅಧ್ಯಕ್ಷ ಹುದ್ದೆಯಿಂದ ವಜಾ ಮಾಡಿದ ಕ್ರಮ ಪ್ರಶ್ನಿಸಿ, ಸೈರಸ್ ಮಿಸ್ತ್ರಿ ಸಲ್ಲಿಸಿದ್ದ ಅರ್ಜಿ NCLTಯಿಂದ ವಜಾ. ಆಡಳಿತ ಮಂಡಳಿಯು ವಿಶ್ವಾಸ ಕಳೆದುಕೊಂಡ ಕಾರಣಕ್ಕೆ ಮಿಸ್ತ್ರಿ ಅವರನ್ನು ವಜಾ ಮಾಡಿದೆ ಎಂದ ನ್ಯಾಯಮಂಡಳಿ.
ಡಿಸೆಂಬರ್ 18, 2019: National Company Law Appellate Tribunal (NCLAT)ನಿಂದ ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಗ್ರೂಪ್ ನ ಕಾರ್ಯ ನಿರ್ವಾಹಕ ಅಧ್ಯಕ್ಷರಾಗಿ ಮತ್ತೆ ನೇಮಕ. ಟಾಟಾ ಗ್ರೂಪ್ ನ ಕಾರ್ಯ ನಿರ್ವಾಹಕ ಅಧ್ಯಕ್ಷರಾಗಿ ಎನ್. ಚಂದ್ರಶೇಖರನ್ ಅವರ ನೇಮಕ ಕಾನೂನು ಬಾಹಿರ ಎಂದು ಘೋಷಣೆ.
ಜನವರಿ 10 , 2020: NCLAT ನ ಆದೇಶವನ್ನು ತಡೆಹಿಡಿದ ಸುಪ್ರೀಂ ಕೋರ್ಟ್. ಸೈರಸ್ ಮಿಸ್ತ್ರಿ ವಜಾವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ಜೂನ್ 2020: ನ್ಯಾನೋ, ಟಾಟಾ ಸ್ಟೀಲ್ ಯುರೋಪ್ ಸೇರಿದಂತೆ ನಷ್ಟದಲ್ಲಿ ಇರುವ ಯೋಜನೆ, ಉದ್ಯಮದಲ್ಲಿ ಹೂಡಿಕೆ ಮುಂದುವರಿಸಿರುವ ಬಗ್ಗೆ ಟಾಟಾ ಸನ್ಸ್ ಉಚ್ಚಾಟಿತ ಅಧ್ಯಕ್ಷ ಸೈರಸ್ ಮಿಸ್ತ್ರಿ ಪ್ರಶ್ನೆ. ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ ಸಲ್ಲಿಕೆ


Click it and Unblock the Notifications