ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ರೈತರು ದೆಹಲಿಯಲ್ಲಿ ದೀರ್ಘ ಅವಧಿಯ ಪ್ರತಿಭಟನೆ, ಧರಣಿಯನ್ನು ನಡೆಸಿದ ಸುಮಾರು ಎರಡು ವರ್ಷಗಳ ನಂತರ ಈಗ ಮತ್ತೊಮ್ಮೆ ಪ್ರತಿಭಟನೆಗೆ ಇಳಿದಿದ್ದಾರೆ. ದೆಹಲಿ ನಗರದ ಗಡಿಯುದ್ದಕ್ಕೂ ರೈತರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.
ಅದೇ ಭಾಗದ ರೈತರು ಎರಡನೇ ಸುತ್ತಿನ ಪ್ರತಿಭಟನೆ ಆರಂಭಿಸಿದ್ದು, ನಗರದ ಜನಜೀವನದ ಮೇಲೆ ಮತ್ತೆ ಪ್ರಭಾವ ಬೀರುವ ಸಾಧ್ಯತೆಯಿದೆ. ಗಮನಾರ್ಹವಾಗಿ, ತೀರಾ ಇತ್ತೀಚಿನ 'ಚಲೋ ದೆಹಲಿ' ಮೆರವಣಿಗೆಯು 2020-2021ರಲ್ಲಿ ಕಂಡುಬಂದ ಹಿಂದಿನ ಪ್ರತಿಭಟನೆಗಳಿಗಿಂತ ಸ್ವಲ್ಪಮಟ್ಟಿಗೆ ಬೇಡಿಕೆಗಳನ್ನು ಬದಲಾಯಿಸಿದೆ. ರೈತರ ಪ್ರತಿಭಟನೆಗಳು 2.0 ರ ಸಂದರ್ಭದಲ್ಲಿ ನಾವು ಮೂಲ ಕಾರಣ ಮತ್ತು ಚರ್ಚೆಯ ಪ್ರಮುಖ ಅಂಶಗಳನ್ನು ಅರ್ಥಮಾಡಿಕೊಳ್ಳೋಣ. ಮುಂದೆ ಓದಿ.....

ಪ್ರತಿಭಟನಾ ನಿರತ ರೈತರ ಪ್ರಮುಖ ಬೇಡಿಕೆ
60 ವರ್ಷಕ್ಕಿಂತ ಮೇಲ್ಪಟ್ಟ ರೈತರಿಗೆ 10,000 ರೂ. ಪಿಂಚಣಿ ನೀಡುವುದರ ಜೊತೆಗೆ ಎಲ್ಲಾ ಖಾರಿಫ್ ಮತ್ತು ರಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನು ಖಾತರಿ ಈ ಬಾರಿ ಪ್ರತಿಭಟನಾ ನಿರತ ರೈತರ ಪ್ರಮುಖ ಬೇಡಿಕೆಯಾಗಿದೆ. ಖಾರಿಫ್ ಮತ್ತು ರಬಿ ಬೆಳೆಗಳಿಗೆ ಎಂಎಸ್‌ಪಿ ಎಂದರೆ ಸರ್ಕಾರವು ನಿಗದಿತ ಬೆಲೆಯನ್ನು ನಿಗದಿಪಡಿಸುವುದು ಆಗಿದೆ. ಇದರಿಂದ ರೈತರು ತಮ್ಮ ಬೆಳೆ ಉತ್ಪನ್ನಗಳ ಪ್ರಮಾಣ ಮತ್ತು ಗುಣಮಟ್ಟವನ್ನು ಲೆಕ್ಕಿಸದೆ 'ನಿಶ್ಚಿತ' ಆದಾಯವನ್ನು ಪಡೆಯಬಹುದಾಗಿದೆ.
ರೈತರಿಗೆ 'ಸರ್ಕಾರದ ಗುರಾಣಿ' ಪಡೆಯಲು ಎಲ್ಲ ಹಕ್ಕಿದೆ, ಈ ಹಕ್ಕನ್ನು ರೈತರು ಈಗ ಕೇಳುತ್ತಿದ್ದು, ಇದು ರಾಜಕೀಯ, ಆರ್ಥಿಕ ಬಣ್ಣ ಪಡೆಯುವ ಎಲ್ಲ ಸಾಧ್ಯತೆಗಳಿದೆ. ಇನ್ನು ನಾವು ರ್ಥಿಕ ಕುಸಿತದ ಬಗ್ಗೆ ಮಾತನಾಡುವುದಾದರೆ ರೈತರ ಬೇಡಿಕೆ ಮತ್ತು ಸರ್ಕಾರದ ಎಂಎಸ್‌ಪಿ ಹಂಚಿಕೆಯ ನಡುವೆ ವರ್ಷಗಳಿಂದ ದೊಡ್ಡ ಅಂತರವಿದೆ.
ಸ್ವಾಮಿನಾಥನ್ ಆಯೋಗ ಎಂದರೇನು, ಅದು ಏನು ಶಿಫಾರಸು ಮಾಡಿದೆ?
ಪ್ರಧಾನಿ ಮನಮೋಹನ್ ಸಿಂಗ್ ಅವರು ರೈತರ ಸಮಸ್ಯೆಗಳನ್ನು ಅಧ್ಯಯನ ಮಾಡಲು ನವೆಂಬರ್ 2004 ರಲ್ಲಿ ಪ್ರಸಿದ್ಧ ಕೃಷಿ ವಿಜ್ಞಾನಿ ಎಂಎಸ್ ಸ್ವಾಮಿನಾಥನ್ ಅವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಿದರು. ಅದಕ್ಕೆ 'ರೈತರ ರಾಷ್ಟ್ರೀಯ ಆಯೋಗ' ಎಂದು ಹೆಸರಿಸಲಾಯಿತು. ಸಮಿತಿಯು ಡಿಸೆಂಬರ್ 2004 ರಿಂದ ಅಕ್ಟೋಬರ್ 2006 ರವರೆಗೆ ಆರು ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿತು.
ಎಂಎಸ್‌ಪಿನಲ್ಲಿ ಸಿ2+50% ಫಾರ್ಮುಲಾ ಎಂದರೇನು?
ಎಂಎಸ್‌ಪಿ ಮೇಲಿನ C2+50% ಸೂತ್ರವು ಸ್ವಾಮಿನಾಥನ್ ಆಯೋಗವು ರೈತರಿಗೆ ಅವರ ಬೆಳೆ ವೆಚ್ಚದ 50% ಹೆಚ್ಚುವರಿ ನೀಡಲು ಮುಂದಿಟ್ಟ ಕಲ್ಪನೆಯಾಗಿದೆ. ಹೀಗಾಗಿ ಅವರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪ್ರಸ್ತುತ ಪ್ರತಿಭಟನೆಗಳಲ್ಲಿ, ಎಂಎಸ್‌ಪಿ ಗ್ಯಾರಂಟಿ ಕಾಯಿದೆಯಲ್ಲಿ ಈ ಸೂತ್ರವನ್ನು ಜಾರಿಗೆ ತರುವಂತೆ ರೈತರು ಬೇಡಿಕೆ ಇಟ್ಟಿದ್ದಾರೆ. ಈ ನಡುವೆ ಮುಂಬರುವ 2024 ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ, ಎಂಎಸ್‌ಪಿಗೆ ಕಾನೂನು ಸ್ಥಾನಮಾನ ನೀಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಎಂಎಸ್‌ಪಿ ಮತ್ತು ಮಾರುಕಟ್ಟೆ ಸ್ಥಿತಿ
2020 ರ ಆರ್ಥಿಕ ವರ್ಷದಲ್ಲಿ, ಕೃಷಿ ಉತ್ಪನ್ನಗಳ ಮಾರುಕಟ್ಟೆ ಮೌಲ್ಯವು 10 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು. ಇದು ಎಂಎಸ್‌ಪಿ ವ್ಯಾಪ್ತಿಯ ಎಲ್ಲಾ 24 ಬೆಳೆಗಳನ್ನು ಒಳಗೊಂಡಿದೆ. ಆದಾಗ್ಯೂ, ಆ ವರ್ಷದಲ್ಲಿ ಒಟ್ಟು ಎಂಎಸ್‌ಪಿ ಸಂಗ್ರಹಣೆಯು 2.5 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು, ಇದು ಎಂಎಸ್‌ಪಿ ಅಡಿಯಲ್ಲಿ ಉತ್ಪನ್ನದ ಕೇವಲ 25 ಪ್ರತಿಶತವಾಗಿದೆ.
ಸರ್ಕಾರವು ರೈತರ ಬೇಡಿಕೆಯನ್ನು ಜಾರಿಗೆ ತಂದರೆ ವಾರ್ಷಿಕ ಕನಿಷ್ಠ 10 ಲಕ್ಷ ಕೋಟಿ ರೂಪಾಯಿಗಳ ಹೆಚ್ಚುವರಿ ವೆಚ್ಚವಾಗಲಿದೆ. ಮೂಲಸೌಕರ್ಯ ಅಭಿವೃದ್ಧಿಗಾಗಿ ಈ ವರ್ಷದ ಮಧ್ಯಂತರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ನೀಡಿರುವ 11.11 ಲಕ್ಷ ಕೋಟಿ ರೂಪಾಯಿಗೆ ಇದು ಸರಿಸಮವಾಗಿದೆ ಎಂದು ಸುದ್ದಿ ಸಂಸ್ಥೆ ಐಎಎನ್‌ಎಸ್ ವರದಿ ಮಾಡಿದೆ.
ಭಾರತದಲ್ಲಿ ರೈತರನ್ನು ದೇಶದ ಬೆನ್ನೆಲುಬು ಎಂದು ಕರೆಯಲಾಗುತ್ತದೆ. ದೇಶದ ಆರ್ಥಿಕತೆಗೆ ಕೃಷಿ ವಲಯದ ಕೊಡುಗೆ ಅಭೂತ. ಆದರೆ ಕೇಂದ್ರ ಸರ್ಕಾರವು ಈ ಮಧ್ಯಂತರ ಬಜೆಟ್‌ನಲ್ಲಿ ಎಲ್ಲ ವಲಯಕ್ಕೆ ಮೀಸಲಿಟ್ಟ ನಿಧಿಗಿಂತ ಅತೀ ಕಡಿಮೆ ನಿಧಿಯನ್ನು ಕೃಷಿ ವಲಯಕ್ಕೆ ಇಟ್ಟಿದೆ.
ರಕ್ಷಣಾ ಸಚಿವಾಲಯ: 6.1 ಲಕ್ಷ ಕೋಟಿ ರೂಪಾಯಿ
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ: 2.78 ಲಕ್ಷ ಕೋಟಿ ರೂಪಾಯಿ
ರೈಲ್ವೆ ಸಚಿವಾಲಯ: 2.55 ಲಕ್ಷ ಕೋಟಿ ರೂಪಾಯಿ
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯ: 2.13 ಲಕ್ಷ ಕೋಟಿ ರೂಪಾಯಿ
ಗೃಹ ವ್ಯವಹಾರಗಳ ಸಚಿವಾಲಯ: 2.03 ಲಕ್ಷ ಕೋಟಿ ರೂಪಾಯಿ
ಗ್ರಾಮೀಣಾಭಿವೃದ್ಧಿ ಸಚಿವಾಲಯ: 1.77 ಲಕ್ಷ ಕೋಟಿ ರೂಪಾಯಿ
ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯ: 1.68 ಲಕ್ಷ ಕೋಟಿ ರೂಪಾಯಿ
ಸಂವಹನ ಸಚಿವಾಲಯ: 1.37 ಲಕ್ಷ ಕೋಟಿ ರೂಪಾಯಿ
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ: 1.27 ಲಕ್ಷ ಕೋಟಿ ರೂಪಾಯಿ
More From GoodReturns

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ



Click it and Unblock the Notifications