ಈ ಡಿಜಿಟಲ್ ಯುಗದಲ್ಲಿ ಪಾಸ್‌ವರ್ಡ್ ಎಂಬುವುದು ಅತೀ ಮುಖ್ಯವಾಗಿದೆ. ನಮ್ಮ ಮೊಬೈಲ್ ಅನ್ನು ಆನ್ ಮಾಡುವುದರಿಂದ ಹಿಡಿದು ಎಲ್ಲ ಆಪ್‌ಗಳಿಗೂ ಪಾಸ್‌ವರ್ಡ್ ಅನ್ನು ನಾವು ಹಾಕುತ್ತೇವೆ. ಇದು ನಮ್ಮ ಗೌಪ್ಯತೆಯ ಸುರಕ್ಷತೆಗೂ ಕೂಡಾ ಸಹಕಾರಿ.
ಇನ್ನು ಹಲವಾರು ಬ್ಯಾಂಕ್‌ಗಳು ತಮ್ಮ ಬ್ಯಾಂಕ್‌ನ ಆಪ್‌ಗಳನ್ನು ಹೊಂದಿದೆ. ನಾವು ನಮ್ಮ ಬ್ಯಾಂಕ್ ಖಾತೆಯ ವಹಿವಾಟನ್ನು ನಡೆಸಬೇಕಾದರೆ ಆ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಬಳಕೆ ಮಾಡುತ್ತೇವೆ. ಆ ಆಪ್‌ಗಳಿಗೂ ಸುರಕ್ಷತೆ ದೃಷ್ಟಿಯಿಂದ ಪಾಸ್‌ವರ್ಡ್ ಇರುತ್ತದೆ. ಹಾಗೆಯೇ ಕೆಲವು ಬ್ಯಾಂಕ್‌ಗಳ ವೆಬ್‌ಸೈಟ್‌ಗೂ ಪಾಸ್‌ವರ್ಡ್‌ಗಳು ಇರುತ್ತದೆ. ಆದರೆ ನಾವು ಆ ಪಾಸ್‌ವರ್ಡ್ ಅನ್ನೇ ಮರೆತು ಬಿಟ್ಟರೆ ಏನು ಮಾಡುವುದು.
ನಾವು ಬ್ಯಾಂಕ್ ಆಪ್‌ಗಳಿನ್ನು ತೆರೆಯಬೇಕಾದರೆ ಅದರ ಪ್ರೊಫೈಲ್ ಪಾಸ್‌ವರ್ಡ್ ಅನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ. ಪ್ರೊಫೈಲ್ ಪಾಸ್‌ವರ್ಡ್ ಎಂಬುವುದು ಅತೀ ಮುಖ್ಯವಾಗಿದೆ. ನಾವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವೆಬ್‌ಸೈಟ್ ಅಥವಾ ಆಪ್‌ನ ಪ್ರೊಫೈಲ್ ಪಾಸ್‌ವರ್ಡ್ ಅನ್ನು ಮರೆತರೆ ಏನು ಮಾಡುವುದು ಹಾಗೂ ಅದನ್ನು ಮತ್ತೆ ರಿಸೆಟ್ ಮಾಡುವುದು ಹೇಗೆ ಎಂಬುವುದನ್ನು ನಾವು ಇಲ್ಲಿ ವಿವರಿಸಿದ್ದೇವೆ. ಮುಂದೆ ಓದಿ...
ಏನಿದು ಪ್ರೊಫೈಲ್ ಪಾಸ್‌ವರ್ಡ್?
ನಾವು ಇಂಟರ್‌ನೆಟ್ ಬ್ಯಾಂಕಿಂಗ್ ವೆಬ್‌ಸೈಟ್‌ಗೆ ಮೊದಲ ಬಾರಿಗೆ ಲಾಗಿನ್ ಆಗುವ ಸಂದರ್ಭದಲ್ಲೇ ಪ್ರೊಫೈಲ್ ಪಾಸ್‌ವರ್ಡ್ ಅನ್ನು ಸೆಟ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಲಾಗಿನ್ ಪಾಸ್‌ವರ್ಡ್‌ಗಿಂತ ಈ ಪ್ರೊಫೈಲ್ ಪಾಸ್‌ವರ್ಡ್ ಬೇರೆಯೇ ಆಗಿರಬೇಕು. ನಮ್ಮ ಪ್ರೊಫೈಲ್ ಪಾಸ್‌ವರ್ಡ್ ಎಂದಿಗೂ ವಿಭಿನ್ನವಾಗಿರಬೇಕಾಗುತ್ತದೆ. ಅದರಲ್ಲಿ ಅಕ್ಷರ, ಸಂಖ್ಯೆ, ಚಿಹ್ನೆಗಳು ಎಲ್ಲವೂ ಇರಲೇಬೇಕಾಗಿದೆ. ಬೇರೆ ಯಾರಿಗೂ ಸುಲಭವಾಗಿ ತಿಳಿಯಲು ಸಾಧ್ಯವಾಗಬಾರದು ಎಂಬ ನಿಟ್ಟಿನಲ್ಲಿ ಅಕ್ಷರ, ಸಂಖ್ಯೆ, ಚಿಹ್ನೆ ಎಲ್ಲವೂ ಪಾಸ್‌ವರ್ಡ್‌ನಲ್ಲಿ ಇರಬೇಕು ಎಂದು ಬ್ಯಾಂಕ್‌ಗಳು ಹೇಳುತ್ತದೆ. ಈ ಪಾಸ್‌ವರ್ಡ್ ಅನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ನೀವು ಸುಳಿವನ್ನು ಕೂಡಾ ಆಗಲೇ ಸೆಟ್ ಮಾಡಿಕೊಳ್ಳಬೇಕಾಗುತ್ತದೆ. ನೀವು ಪಾಸ್‌ವರ್ಡ್ ಅನ್ನು ಮರೆತರೆ ಈ ಸುಳಿವನ್ನು ನೀಡುವ ಮೂಲಕ ಪಾಸ್‌ವರ್ಡ್ ನೆನಪಿಸಲು ಸಹಾಯ ಮಾಡಲಾಗುತ್ತದೆ ಎಂದು ಎಸ್‌ಬಿಐ ವೆಬ್‌ಸೈಟ್ ಹೇಳುತ್ತದೆ.
ಶೀಘ್ರವಾಗಿ ಎಸ್‌ಬಿಐ ಪ್ರೊಫೈಲ್ ಪಾಸ್‌ವರ್ಡ್ ರಿಸೆಟ್ ಮಾಡುವುದು ಹೇಗೆ?
ನೀವು ಎಸ್‌ಬಿಐ ಪ್ರೊಫೈಲ್ ಪಾಸ್‌ವರ್ಡ್ ಅನ್ನು ಮರೆತಿದ್ದರೆ, ನೀವಾಗಿಯೇ ರಿಸೆಟ್ ಮಾಡಿಕೊಳ್ಳಬಹುದು. ನೀವು ಸುಳಿವಿನ ಬಗ್ಗೆ ಕೇಳಲಾಗುವ ಪ್ರಶ್ನೆಗೆ ಉತ್ತರವನ್ನು ನೀಡುವ ಮೂಲಕ ಪಾಸ್‌ವರ್ಡ್ ಅನ್ನು ರಿಸೆಟ್ ಮಾಡಿಕೊಳ್ಳಬಹುದು. ಎಟಿಎಂ ಡೆಬಿಟ್ ಕಾರ್ಡ್ ವಾಲಿಡೇಶನ್ ಮೂಲಕವು ಈ ಪ್ರಕ್ರಿಯೆ ಮಾಡಬಹುದು. ನಿಮಗೆ ಈ ಸುಳಿವು ಪ್ರಶ್ನೆಗೂ ಉತ್ತರ ನೆನಪು ಇಲ್ಲದಿದ್ದರೆ ಅಥವಾ ಎಟಿಎಂ ಡೆಬಿಟ್ ಕಾರ್ಡ್ ಇಲ್ಲದಿದ್ದರೆ ನೀವು ಬ್ರಾಂಚ್‌ಗೆ ಭೇಟಿ ನೀಡಿ ನಿಮ್ಮ ಪಾಸ್‌ವರ್ಡ್ ಅನ್ನು ರಿಸೆಟ್ ಮಾಡಿಕೊಳ್ಳಬಹುದು.
ಪ್ರೊಫೈಲ್ ಪಾಸ್‌ವರ್ಡ್ ರಿಸೆಟ್ ಮಾಡುವುದು ಹೇಗೆ?
ನೀವು ಮೊದಲ ಬಾರಿಗೆ ಲಾಗಿನ್ ಆಗುವ ಸುಳಿವಿನ ಪ್ರಶ್ನೆ ಅಥವಾ ಉತ್ತರವನ್ನು ಸೆಟ್ ಮಾಡಿದ್ದರೆ ಅದನ್ನು ಬಳಕೆ ಮಾಡಿಕೊಂಡು ಲಾಗಿನ್ ಆಗಬಹುದು ಎಂದು ಎಸ್‌ಬಿಐ ವೆಬ್‌ಸೈಟ್ ಹೇಳುತ್ತದೆ. ಸುಳಿವು ಪ್ರಶ್ನೆಯನ್ನು ಬಳಕೆ ಮಾಡಿ ರಿಸೆಟ್ ಮಾಡುವುದು ಹೇಗೆ ಎಂಬುವುದು ಈ ಕೆಳಗಿದೆ...
ಹಂತ 1: ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ, Forgot Profile Password ಅನ್ನು ಕ್ಲಿಕ್ ಮಾಡಿ
ಹಂತ 2: ಹೊಸ ಪುಟ ತೆರೆಯಲಿದೆ ಅಲ್ಲಿ ಮೂರು ಆಯ್ಕೆಗಳು ಇರಲಿದೆ
• Using Hint Question Answer (ಸುಳಿವು ಪ್ರಶ್ನೋತರ ಬಳಕೆ)
• By Visiting Branch (ಬ್ರಾಂಚ್‌ಗೆ ಭೇಟಿ)
• Approval through ATM Debit Card (ಎಟಿಎಂ ಕಾರ್ಡ್ ಮೂಲಕ)
ಹಂತ 3: Using Hint Question Answer (ಸುಳಿವು ಪ್ರಶ್ನೋತರ ಬಳಕೆ) ಆಯ್ಕೆ ಮಾಡಿ
ಹಂತ 4: ಸುಳಿವು ಪ್ರಶ್ನೆಗಳಿಗೆ ಉತ್ತರವನ್ನು ನಮೂದಿಸಿ
ಹಂತ 5: Submit ಕ್ಲಿಕ್ ಮಾಡಿದರೆ, ಹೊಸ ಪಾಸ್‌ವರ್ಡ್ ಸೆಟ್ ಮಾಡುವ ಆಯ್ಕೆ ಲಭ್ಯವಾಗಲಿದೆ
ಹಂತ 6: ಹೊಸ ಪಾಸ್‌ವರ್ಡ್ ಅನ್ನು ನಮೂದಿಸಿ (ನಿಮ್ಮ ಪಾಸ್‌ವರ್ಡ್ ಸ್ಮಾಲ್, ಬಿಗ್ ಲೆಟರ್‌ನಲ್ಲಿ ಇರಬೇಕು. ಸಂಖ್ಯೆ ಹಾಗೂ ವಿಶೇಷ ಅಂಕಿಗಳು ಇರಬೇಕು)
ಹಂತ 7: ಹೊಸ ಪಾಸ್‌ವರ್ಡ್ ಅನ್ನು ಮತ್ತೆ ನಮೂದಿಸಿದರೆ ಪಾಸ್‌ವರ್ಡ್ ರಿಸೆಟ್ ಆಗಲಿದೆ.
ನಿಮಗೆ ಅದಕ್ಕಾಗಿ ಹೊಸ ಪುಟ ತೆರೆಯಲಿದೆ. ಅಲ್ಲಿ ನೀವು ಪಾಸ್‌ವರ್ಡ್ ಅನ್ನು ಹಾಕಬೇಕಾಗುತ್ತದೆ.


Click it and Unblock the Notifications