ಕ್ರೆಡಿಟ್ ಸ್ಕೋರ್ ಬಗ್ಗೆ ಸಾಕಷ್ಟು ಕೇಳಿರುತ್ತೀರಿ. ನಮ್ಮ ಸಾಲದ ಯೋಗ್ಯತೆಗೆ ಮಾನದಂಡ ಅದು. ಅಂದರೆ ಸಾಲ ಪಡೆಯಲು ನಾವು ಎಷ್ಟು ಅರ್ಹರಿದ್ದೇವೆ ಎಂದು ಕೊಡಲಾಗುವ ರೇಟಿಂಗ್. ನಮ್ಮ ಕ್ರೆಡಿಟ್ ಕಾರ್ಡ್ ಅನ್ನು ಹೇಗೆಲ್ಲಾ ಬಳಸಿದ್ದೇವೆ, ಎಷ್ಟು ವ್ಯಯಿಸಿದ್ದೇವೆ, ಸರಿಯಾದ ಸಮಯಕ್ಕೆ ಬಿಲ್ ಪಾವತಿಸುತ್ತೇವಾ ಇತ್ಯಾದಿ ಎಲ್ಲಾ ಅಂಶಗಳು ಕ್ರೆಡಿಟ್ ಸ್ಕೋರ್ ಮೇಲೆ ಪ್ರಭಾವ ಬೀರುತ್ತವೆ. ನಮ್ಮ ಕ್ರೆಡಿಟ್ ಸ್ಕೋರ್ ಪಡೆಯಲು ಹಲವು ವಿಧಾನಗಳಿವೆ. ಪೇಟಿಎಂನಂತಹ ಪೇಮೆಂಟ್ ಆ್ಯಪ್‌ಗಳ ಮೂಲಕವೂ ಕ್ರೆಡಿಟ್ ಸ್ಕೋರ್ ಪರೀಕ್ಷಿಸಬಹುದು. ಈಗ ಈ ಸೌಲಭ್ಯ ವಾಟ್ಸಾಪ್‌ನಲ್ಲೂ ಲಭ್ಯ ಇದೆ.
ಎಕ್ಸ್‌ಪೀರಿಯನ್ ಇಂಡಿಯಾ ನೀಡುವ ಕ್ರೆಡಿಟ್ ಸ್ಕೋರ್ ಅನ್ನು ವಾಟ್ಸಾಪ್‌ನಲ್ಲಿ ನೀವು ಉಚಿತವಾಗಿ ಪಡೆಯಬಹುದು. ಸಿಬಿಲ್, ಎಕ್ಸ್‌ಪೀರಿಯಾದಂಥ ಕೆಲವೇ ಕೆಲ ಏಜೆನ್ಸಿಗಳಿಗೆ ಮಾತ್ರ ಕ್ರೆಡಿಟ್ ರೇಟಿಂಗ್ ಕೊಡುವ ಅವಕಾಶ ಇರುತ್ತದೆ. ಎಕ್‌ಪೀರಿಯಾ ನಮ್ಮ ದೇಶದಲ್ಲಿ ಸ್ಥಾಪಿತವಾದ ಮೊದಲ ಕ್ರೆಡಿಟ್ ಬ್ಯೂರೋ ಆಗಿದೆ.
ಮೊನ್ನೆಯಷ್ಟೇ ಎಕ್ಸ್‌ಪೀರಿಯನ್ ಇಂಡಿಯಾ ಸಂಸ್ಥೆ ಪ್ರಕಟಣೆ ಹೊರಡಿಸಿ, ವಾಟ್ಸಾಪ್‌ನಲ್ಲಿ ಕ್ರೆಡಿಟ್ ಸ್ಕೋರ್ ಅನ್ನು ಉಚಿತವಾಗಿ ನೀಡುತ್ತಿರುವುದಾಗಿ ಹೇಳಿದೆ. ವಾಟ್ಸಾಪ್‌ನಲ್ಲಿ ಇಂಥ ಸೇವೆಯನ್ನು ನೀಡುತ್ತಿರುವ ಮೊದಲ ಕ್ರೆಡಿಟ್ ಬ್ಯೂರೋ ಅದಾಗಿದೆ.

ಜನರು ಯಾವಾಗ ಬೇಕಾದರೂ ಬಹಳ ಕ್ಷಿಪ್ರವಾಗಿ ಎಕ್ಸ್‌ಪೀರಿಯನ್‌ನ ಕ್ರೆಡಿಟ್ ರಿಪೋರ್ಟ್ ಅನ್ನು ಪಡೆಯುವ ಸೌಲಭ್ಯ ಒದಗಿಸಲಾಗಿದೆ. ಗ್ರಾಹಕರು ಕ್ರೆಡಿಟ್ ರಿಪೋರ್ಟ್ ಬಳಸಿಕೊಂಡು ತಮ್ಮ ಹಣಕಾಸು ವ್ಯವಸ್ಥೆಯಲ್ಲಿನ ವ್ಯತ್ಯಯ ಇತ್ಯಾದಿಯನ್ನು ಬೇಗ ಗುರುತಿಸಿ ಕ್ರೆಡಿಟ್ ಸ್ಕೋರ್ ಹೆಚ್ಚಿಸಬಹುದು ಎಂದು ಎಕ್ಸ್‌ಪೀರಿಯನ್ ಇಂಡಿಯಾ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ವಾಟ್ಸಾಪ್‌ನಲ್ಲಿ ಕ್ರೆಡಿಟ್ ಸ್ಕೋರ್ ಪರೀಕ್ಷಿಸುವ ವಿಧಾನ:
* ಫೋನ್‌ನಲ್ಲಿ ವಾಟ್ಸಾಪ್ ಓಪನ್ ಮಾಡಿ
* 9920035444 ಈ ನಂಬರ್ ಅನ್ನು ಸೇವ್ ಮಾಡಿಕೊಳ್ಳಿ
* ಈ ನಂಬರ್‌ಗೆ ಇಂಗ್ಲೀಷ್‌ನಲ್ಲಿ 'Hey' ಎಂದು ಟೈಪಿಸಿ ಸಂದೇಶ ಕಳುಹಿಸಿ
* ನಿಮ್ಮ ಹೆಸರು, ಇ ಮೇಲ್ ಐಡಿ, ಫೋನ್ ನಂಬರ್ ಇತ್ಯಾದಿ ಕೇಳಲಾಗುವ ವಿವರವನ್ನು ಕಳುಹಿಸಿ.
* ನಂತರ ಕೂಡಲೇ ನಿಮಗೆ ವಾಟ್ಸಾಪ್‌ನಲ್ಲೇ ಎಕ್ಸ್‌ಪೀರಿಯನ್ ಕ್ರೆಡಿಟ್ ಸ್ಕೋರ್ ಸಿಗುತ್ತದೆ.
* ನಿಮ್ಮ ಇ ಮೇಲ್ ಐಡಿಗೆ ಪಾಸ್‌ವರ್ಡ್‌ಯುಕ್ತ ಕ್ರೆಡಿಟ್ ಕಾರ್ಡ್ ರಿಪೋರ್ಟ್ ಅನ್ನೂ ಪಡೆಯಬಹುದು.
ವಾಟ್ಸಾಪ್‌ನ ಬಳಕೆದಾರರಲ್ಲಿ ಹೆಚ್ಚಿನವರು ಭಾರತೀಯರೇ. ಭಾರತದಲ್ಲಿ ವಾಟ್ಸಾಪ್ ಬಳಸುತ್ತಿರುವವರ ಸಂಖ್ಯೆ ೪೮ ಕೋಟಿಗೂ ಹೆಚ್ಚು. ಹೀಗಾಗಿ, ಎಕ್ಸ್‌ಪೀರಿಯನ್‌ನ ಕ್ರೆಡಿಟ್ ಸ್ಕೋರ್ ಸೇವೆ ಬಹಳ ಮಂದಿಗೆ ಕೈಗೆಟುಕಲು ಸಹಾಯವಾಗಬಲ್ಲುದು.

ಒಳ್ಳೆಯ ಕ್ರೆಡಿಟ್ ಸ್ಕೋರ್ ಇದ್ದರೆ ಬ್ಯಾಂಕ್ ಲೋನ್‌ಗಳು ಸುಲಭವಾಗಿ ಸಿಗುತ್ತವೆ. ಹೆಚ್ಚು ಕ್ರೆಡಿಟ್ ಲಿಮಿಟ್ ಇರುವ ಕ್ರೆಡಿಟ್ ಕಾರ್ಡ್ ಅನ್ನು ಪಡೆಯಬಹುದು. ಅಥವಾ ನಿಮ್ಮ ಈಗಿರುವ ಕ್ರೆಡಿಟ್ ಕಾರ್ಡ್‌ನ ಲಿಮಿಟ್ ಅನ್ನು ಹೆಚ್ಚಿಸಲೂ ಬಹುದು. ಕೆಲ ತಿಂಗಳಿಗೊಮ್ಮೆ ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸುತ್ತಿದ್ದರೆ ಕೆಲ ಹಣಕಾಸು ತಪ್ಪುಗಳನ್ನು ತಿದ್ದಿಕೊಳ್ಳಲು ಅನುಕೂಲವಾಗಬಹುದು.
ಇದೇ ವೇಳೆ ವಾಟ್ಸಾಪ್‌ನಲ್ಲಿ ಪೇಮೆಂಟ್ ವ್ಯವಸ್ಥೆಯನ್ನೂ ವರ್ಷದ ಹಿಂದೆ ಅಳವಡಿಸಲಾಗಿತ್ತು. ಆದರೆ, ವಾಟ್ಸಾಪ್ ಬಳಕೆದಾರರು ಪೇಮೆಂಟ್ ಸೌಲಭ್ಯ ಬಳಸಿಕೊಳ್ಳುತ್ತಿರುವುದು ಕಡಿಮೆಯೇ.
More From GoodReturns

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?



Click it and Unblock the Notifications