For Quick Alerts
ALLOW NOTIFICATIONS  
For Daily Alerts

ನಿಮ್ಮ ಮನೆಯಲ್ಲಿ ಎಷ್ಟು ಚಿನ್ನ ಸಂಗ್ರಹಿಸಬಹುದು ಗೊತ್ತಾ?

|

ಚಿನ್ನ ಭಾರತದಲ್ಲಿ ಅತೀ ಅಮೂಲ್ಯವಾದ ಲೋಹವಾಗಿದೆ. ಭಾರತದಲ್ಲಿ ಚಿನ್ನವು ಸಂಪ್ರದಾಯ, ಸಂಸ್ಕೃತಿ, ಪ್ರೀತಿ, ಭಾವನೆಯ ಪ್ರತೀಕವಾಗಿದೆ. ದೇಶದಲ್ಲಿ ಹೆಚ್ಚಿನ ಮನೆಯಲ್ಲಿ ಚಿನ್ನದ ಆಭರಣಗಳನ್ನು ಸಂಗ್ರಹಿಸಲಾಗುತ್ತದೆ. ಮದುವೆ, ಸಮಾರಂಭಗಳಲ್ಲಿ ತಮ್ಮನ್ನು ತಾವು ಶೃಂಗರಿಸಿಕೊಳ್ಳಲು ಚಿನ್ನದ ಆಭರಣಗಳನ್ನು ಸಂಗ್ರಹ ಮಾಡಿ ಇರಿಸಿಕೊಳ್ಳಲಾಗುತ್ತದೆ. ಆದರೆ ನಾವು ಎಷ್ಟು ಚಿನ್ನವನ್ನು ಕಾನೂನುಬದ್ಧವಾಗಿ ಸಂಗ್ರಹ ಮಾಡಬಹುದು ಎಂಬ ಬಗ್ಗೆ ಹಲವಾರು ಮಂದಿಗೆ ಅನುಮಾನಗಳಿವೆ.

 

ಈ ಎಲ್ಲಾ ಸಂಶಯಗಳಿಗೆ ತೆರೆ ಎಳೆಯಲು ಸಿಬಿಡಿಟಿ 2016ರ ಡಿಸೆಂಬರ್ 1ರಂದೇ ಸ್ಪಷ್ಟೀಕರಣವನ್ನು ನೀಡಿದೆ. ಐಟಿ ದಾಳಿ ಸಂದರ್ಭದಲ್ಲಿ ಚಿನ್ನದ ಆಭರಗಳನ್ನು ವಶಕ್ಕೆ ಪಡೆಯುವ ವಿಚಾರದಲ್ಲಿ ಈ ಸುತ್ತೋಲೆಯನ್ನು ಹೊರಡಿಸಲಾಗಿದೆ. ಇದನ್ನು 1994ರ ಮೇ 11ರಲ್ಲಿಯೇ ಹೊರಡಿಸಲಾಗಿದೆ.

ಚಿನ್ನದ ಮೇಲೆ 500 ರು ಹೂಡಿಕೆ ಮಾಡಿ, ರಿಯಾಯಿತಿ ಗಳಿಸಿ

ಆದರೆ ಈವರೆಗೂ ಹಲವಾರು ಮಂದಿಗೆ ನಾವು ನಮ್ಮ ಮನೆಯಲ್ಲಿ ಎಷ್ಟು ಚಿನ್ನದ ಆಭರಣಗಳನ್ನು ಹೊಂದುವುದು ಕಾನೂನು ಬದ್ಧವಾಗಿದೆ ಹಾಗೂ ನಾವು ಅಧಿಕ ಚಿನ್ನವನ್ನು ಮನೆಯಲ್ಲಿ ಇರಿಸಿಕೊಳ್ಳುವುದು ಕಾನೂನು ಬಾಹಿರವೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಈ ಬಗ್ಗೆ ಇಲ್ಲಿ ನಾವು ವಿವರಣೆ ನೀಡಿದ್ದೇವೆ. ಮುಂದೆ ಓದಿ....

 ಚಿನ್ನ ಸಂಗ್ರಹಣೆ ಗರಿಷ್ಠ ಮಿತಿ ಇದೆಯೇ?

ಚಿನ್ನ ಸಂಗ್ರಹಣೆ ಗರಿಷ್ಠ ಮಿತಿ ಇದೆಯೇ?

ಆದಾಯ ತೆರಿಗೆ ಇಲಾಖೆಯು ತೆರಿಗೆ ವಂಚನೆ ಸಂಬಂಧಿಸಿ ದಾಳಿ ನಡೆಸಿದ ಸಂದರ್ಭದಲ್ಲಿ ಎಷ್ಟು ಚಿನ್ನವನ್ನು ವಶಕ್ಕೆ ಪಡೆಯಬಹುದು ಎಂಬ ಬಗ್ಗೆ ಸ್ಪಷ್ಟತೆಯನ್ನು ನೀಡಿದೆ. ಆದರೆ ಎಲ್ಲಿಯೂ ಕೂಡಾ ನಾವು ಎಷ್ಟು ಚಿನ್ನದ ಆಭರಣಗಳನ್ನು ಹೊಂದಬಹುದು ಎಂಬ ಬಗ್ಗೆ ಸ್ಪಷ್ಟತೆಯನ್ನು ನೀಡಿಲ್ಲ. ಮಿತಿಗಿಂತ ಅಧಿಕ ಚಿನ್ನದ ಆಭರಣವನ್ನು ನೀವು ಹೊಂದಿರಬಹುದು. ಆದರೆ ಅದರ ಮೂಲದ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ನಿಮ್ಮಲ್ಲಿರುವ ಚಿನ್ನವು ಪಿತ್ರಾರ್ಜಿತ ಆಸ್ತಿಯಾಗಿದ್ದರೆ, ಅದಕ್ಕೆ ಯಾವುದೇ ಗರಿಷ್ಠ ಮಿತಿಯಿಲ್ಲ.

 ಸಂಪತ್ತಿನ ಮೇಲೆ ತೆರಿಗೆ?

ಸಂಪತ್ತಿನ ಮೇಲೆ ತೆರಿಗೆ?

ನಿಮ್ಮ ಐಟಿಆರ್‌ನಲ್ಲಿ ನಿಮ್ಮಲ್ಲಿರುವ ಚಿನ್ನದ ಬಗ್ಗೆ ಮಾಹಿತಿ ಉಲ್ಲೇಖ ಮಾಡಬೇಕು. ನೀವು ಚಿನ್ನವನ್ನು ಖರೀದಿ ಮಾಡಿದ ಬಳಿಕ ಅದರ ರಶೀದಿಯನ್ನು ಹೊಂದಿರುವುದು ಮುಖ್ಯವಾಗಿದೆ. ಇದು ನೀವು ಚಿನ್ನವನ್ನು ಬದಲಾವಣೆ ಮಾಡುವ ಸಂದರ್ಭದಲ್ಲೂ ನಿಮಗೆ ಸಹಾಯಕವಾಗಿದೆ. ಇದು ನಿಮ್ಮ ಚಿನ್ನವು ಪಿತ್ರಾರ್ಜಿತ ಆಸ್ತಿಯಾಗಿದ್ದರೆ ಸಾಕ್ಷಿಗೆ ರಶೀದಿಯು ಸಹಾಯಕವಾಗಲಿದೆ. ಸಂಪತ್ತಿನ ಮೇಲಿನ ತೆರಿಗೆಯನ್ನು ನಿಲ್ಲಿಸಲಾಗಿದೆ. ಆದರೆ ರೂಪಾಯಿ 30 ಲಕ್ಷಕ್ಕಿಂತ ಅಧಿಕ ಸಂಪತ್ತಿನ ಮೇಲೆ 2015ರ ಮಾರ್ಚ್ 31ರಿಂದ ಸಂಪತ್ತಿನ ಮೇಲೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ.

 ಚಿನ್ನದ ಮೂಲವನ್ನು ನೀವು ವಿವರಿಸಲು ಸಾಧ್ಯವಾಗದಿದ್ದರೆ...?
 

ಚಿನ್ನದ ಮೂಲವನ್ನು ನೀವು ವಿವರಿಸಲು ಸಾಧ್ಯವಾಗದಿದ್ದರೆ...?

ಸುತ್ತೋಲೆಯ ಪ್ರಕಾರ ವಿವಾಹಿತ ಮಹಿಳೆಯು ಸುಮಾರು 500 ಗ್ರಾಂ ಚಿನ್ನವನ್ನು ಹೊಂದಲು ಅವಕಾಶವಿದೆ. ಅದುವೇ ಅವಿವಾಹಿತ ಮಹಿಳೆಯಾದರೆ ಸುಮಾರು 250 ಗ್ರಾಂ ಚಿನ್ನವನ್ನು ಹೊಂದಬಹುದಾಗಿದೆ. ಒಂದು ಕುಟುಂಬದ ಪುರುಷರು ಸುಮಾರು ನೂರು ಗ್ರಾಂ ಚಿನ್ನದ ಆಭರಣವನ್ನು ಹೊಂದಬಹುದಾಗಿದೆ. ಈ ಮಿತಿಯು ನಮ್ಮ ಪಿತ್ರಾರ್ಜಿತ ಹಾಗೂ ನಾವೇ ಖರೀದಿ ಮಾಡಿದ ಚಿನ್ನದ ಒಟ್ಟು ಮಿತಿಯಾಗಿದೆ. ಆದರೆ ಚಿನ್ನದ ಬಾರ್, ಕಾಯಿನ್‌ಗಳು ಈ ಮಿತಿಯಲ್ಲಿ ಒಳಗೊಳ್ಳುವುದಿಲ್ಲ. ಚಿನ್ನದ ನಾಣ್ಯ ಅಥವಾ ಬಾರ್‌ಗಳನ್ನು ಹೊಂದಿದ್ದರೆ ಅದನ್ನು ಕೂಡಲೇ ವಶಕ್ಕೆ ಪಡೆಯುವ ಅವಕಾಶವಿದೆ. ಮಿತಿಗಿಂತ ಅಧಿಕ ಚಿನ್ನವಿದ್ದರೆ ನೀವು ಅದರ ಮೂಲವನ್ನು ವಿವರಿಸಬಹುದು. ನಿಮ್ಮ ಸ್ನೇಹಿತರದ್ದು ಆಗಿದ್ದರೆ ಅದನ್ನು ಕೂಡಾ ನೀವು ರಶೀದಿ ಮೂಲಕ ಸಾಬೀತುಪಡಿಸಿಕೊಳ್ಳಬಹುದು.

 ಒಂದು ಕುಟುಂಬದಲ್ಲಿ ಎಷ್ಟು ಚಿನ್ನವಿರಬಹುದು?

ಒಂದು ಕುಟುಂಬದಲ್ಲಿ ಎಷ್ಟು ಚಿನ್ನವಿರಬಹುದು?

ಮನೆಯಲ್ಲಿ ನಾಲ್ಕು ಮಂದಿ ಇದ್ದಾರೆ ಎಂದುಕೊಳ್ಳಿ. ಮದುವೆಯಾದ ಮಹಿಳೆ, ಅವಿವಾಹಿತ ಮಹಿಳೆ, ವಿವಾಹಿತ ಪುರುಷ ಮತ್ತು ಅವಿವಾಹಿತ ಪುರುಷ ಒಂದು ಕುಟುಂಬದಲ್ಲಿ ಇದ್ದಾರೆ ಎಂದುಕೊಳ್ಳೋಣ. ಈ ಸಂದರ್ಭದಲ್ಲಿ ವಿವಾಹಿತ ಮಹಿಳೆ 500 ಗ್ರಾಂ, ಅವಿವಾಹಿತ ಮಹಿಳೆ 250 ಗ್ರಾಂ, ವಿವಾಹಿತ ಪುರುಷ 100 ಗ್ರಾಂ, ಅವಿವಾಹಿತ ಪುರುಷ 100 ಗ್ರಾಂ, ಒಟ್ಟಾಗಿ 950 ಗ್ರಾಂ ಚಿನ್ನವನ್ನು ಹೊಂದಬಹುದಾಗಿದೆ.

English summary

Gold Storage Limit: How much gold you can keep at home; Explained in Kannada

Gold storage limit in India as per Income Tax act 1961: Here we explain How much gold you can keep at home in Kannada.
Story first published: Friday, June 24, 2022, 18:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X