ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ನಿಯಮವನ್ನು ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪದಲ್ಲಿ ಮುಕೇಶ್ ಅಂಬಾನಿ, ಅನಿಲ್ ಅಂಬಾನಿ ಮತ್ತು ಇತರ ಘಟಕಗಳಿಗೆ ಸೆಬಿಯು 25 ಕೋಟಿ ರೂಪಾಯಿ ದಂಡ ವಿಧಿಸಿದೆ. ಈ ಆದೇಶವನ್ನು ಸೆಕ್ಯುರಿಟೀಸ್ ಅಪೆಲೇಟ್ ಟ್ರಿಬ್ಯೂನಲ್ (ಎಸ್‌ಎಟಿ) ಶುಕ್ರವಾರ ರದ್ದುಗೊಳಿಸಿದೆ. ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ನಿರ್ದೇಶನದ ವಿರುದ್ಧ ಅಂಬಾನಿ ಸಂಸ್ಥೆಗಳು ಮೇಲ್ಮನವಿ ಸಲ್ಲಿಸಿದ ಬಳಿಕ ಈ ಕ್ರಮವನ್ನು ಕೈಗೊಳ್ಳಲಾಗಿದೆ.
"ಅರ್ಜಿದಾರರು ಎಸ್‌ಎಎಸ್‌ಟಿ (ಷೇರುಗಳು ಮತ್ತು ಸ್ವಾಧೀನಗಳ ಗಣನೀಯ ಸ್ವಾಧೀನ) ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಮೇಲ್ಮನವಿದಾರರ ಮೇಲೆ ದಂಡವನ್ನು ವಿಧಿಸುವ ಯಾವುದೇ ಕಾನೂನು ಅಧಿಕಾರವಿಲ್ಲ. ಆದ್ದರಿಂದಾಗಿ ಸೆಬಿ ಆದೇಶವನ್ನು ನಾವು ಉಳಿಸಿಕೊಳ್ಳಲು ಸಾಧ್ಯವಿಲ್ಲ, ನಾವದನ್ನು ರದ್ದುಗೊಳಿಸುತ್ತೇವೆ," ಎಂದು ಎಸ್‌ಎಟಿ ತನ್ನ 124 ಪುಟಗಳ ಆದೇಶದಲ್ಲಿ ಹೇಳಿದೆ.

ಈ ಪ್ರಕರಣದಲ್ಲಿ ಸ್ವಾಧೀನ ನಿಯಮಗಳನ್ನು ಅನುಸರಿಸಲು ವಿಫಲವಾಗಿದೆ ಎಂದು ಆರೋಪ ಮಾಡಲಾಗಿದೆ. ಸೆಬಿಯ ಆದೇಶದ ನಂತರದ ದಂಡದ ಮೊತ್ತವನ್ನು ಮೇಲ್ಮನವಿದಾರರು ಡೆಪಾಸಿಟ್ ಮಾಡಿದ್ದಾರೆ ಎಂದು ಎಸ್‌ಎಟಿ ಪರಿಶೀಲನೆಯ ವೇಳೆ ತಿಳಿದುಬಂದಿದೆ. 25 ಕೋಟಿ ರೂಪಾಯಿ ಮೊತ್ತವನ್ನು ನಾಲ್ಕು ವಾರಗಳಲ್ಲಿ ಮರುಪಾವತಿ ಮಾಡುವಂತೆ ಮಾರುಕಟ್ಟೆ ನಿಯಂತ್ರಕರಿಗೆ ನಿರ್ದೇಶನ ನೀಡಿದೆ.
2000 ರ ಹಿಂದಿನ ರಿಲಯನ್ಸ್ ಇಂಡಸ್ಟ್ರೀಸ್ ಪ್ರಕರಣದಲ್ಲಿ ಸ್ವಾಧೀನದ ಮಾನದಂಡಗಳನ್ನು ಅನುಸರಿಸದಿದ್ದಕ್ಕಾಗಿ ಸೆಬಿ 2021 ರ ಏಪ್ರಿಲ್‌ನಲ್ಲಿ ಮುಕೇಶ್ ಅಂಬಾನಿ, ಅನಿಲ್ ಅಂಬಾನಿ, ನೀತಾ ಅಂಬಾನಿ, ಟೀನಾ ಅಂಬಾನಿ ಮತ್ತು ಇತರ ಘಟಕಗಳ ಮೇಲೆ ಒಟ್ಟು 25 ಕೋಟಿ ರೂಪಾಯಿ ದಂಡವನ್ನು ವಿಧಿಸಿತ್ತು.
ಆರ್‌ಐಎಲ್ ಪ್ರವರ್ತಕರು ಮತ್ತು ಕನ್ಸರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗಳು (ಪಿಎಸಿ) 2000 ರಲ್ಲಿ ಕಂಪನಿಯಲ್ಲಿ ಶೇಕಡ 5 ಕ್ಕಿಂತ ಹೆಚ್ಚು ಷೇರುಗಳನ್ನು ಸ್ವಾಧೀನಪಡಿಸಿಕೊಂಡಿರುವುದನ್ನು ಬಹಿರಂಗಪಡಿಸಲು ವಿಫಲರಾಗಿದ್ದಾರೆ ಎಂದು ಸೆಬಿ ಆದೇಶವು ಹೇಳಿತ್ತು. ಇನ್ನು ಮುಕೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ತಮ್ಮ ತಂದೆ ನಿರ್ಮಿಸಿದ ವ್ಯಾಪಾರಂ ಸಾಮ್ರಾಜ್ಯವನ್ನು
ಆರ್‌ಐಎಲ್ ಪ್ರವರ್ತಕರು ಮತ್ತು ಕನ್ಸರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗಳು (ಪಿಎಸಿ) 2000 ರಲ್ಲಿ ಕಂಪನಿಯಲ್ಲಿ ಶೇಕಡಾ 5 ಕ್ಕಿಂತ ಹೆಚ್ಚು ಷೇರುಗಳನ್ನು ಸ್ವಾಧೀನಪಡಿಸಿಕೊಂಡಿರುವುದನ್ನು ಬಹಿರಂಗಪಡಿಸಲು ವಿಫಲರಾಗಿದ್ದಾರೆ ಎಂದು ಸೆಬಿ ಆದೇಶವು ಹೇಳಿತ್ತು. ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ತಮ್ಮ ತಂದೆ ಧೀರೂಭಾಯಿ ಅಂಬಾನಿ ನಿರ್ಮಿಸಿದ ವ್ಯಾಪಾರ ಸಾಮ್ರಾಜ್ಯವನ್ನು ಈಗಾಗಲೇ ಹಂಚಿಕೊಂಡಿದ್ದಾರೆ.
ಶೇಕಡ 6.83 ರಷ್ಟು ಪಾಲನ್ನು ಆರ್‌ಐಎಲ್ ಪ್ರವರ್ತಕರು ಮತ್ತು ಪಿಎಸಿಗಳು ಸ್ವಾಧೀನಪಡಿಸಿಕೊಂಡಿವೆ ಎಂದು ಸೆಬಿ ಗಮನಿಸಿದೆ. ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಸಾರ್ವಜನಿಕ ಘೋಷಣೆ ಮಾಡುವ ಜವಾಬ್ದಾರಿಯು ಜನವರಿ 7, 2000 ರಂದು ಹುಟ್ಟಿಕೊಂಡಿದೆ. ಜನವರಿ 1994 ರಲ್ಲಿ ನೀಡಲಾದ ವಾರಂಟ್‌ಗಳ ಅನುಷ್ಠಾನದ ಮೇಲೆ ಪಿಎಸಿಗಳುಗೆ ಆರ್‌ಐಎಲ್ ಈಕ್ವಿಟಿ ಷೇರುಗಳನ್ನು ಹಂಚಿಕೆ ಮಾಡಿದ ದಿನಾಂಕ ಇದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಪ್ರವರ್ತಕರು ಮತ್ತು ಪಿಎಸಿಗಳು ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಯಾವುದೇ ಸಾರ್ವಜನಿಕ ಪ್ರಕಟಣೆಯನ್ನು ಮಾಡಿಲ್ಲ ಎಂದು ಸೆಬಿ ಗಮನಿಸಿದೆ. ಈ ಕಾರಣದಿಂದಾಗಿ ನಿಯಮವನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲು ಮಾಡಿದ್ದಾರೆ.


Click it and Unblock the Notifications